ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೦

                                    ಮೃತ್ಯುಂಜಯ
ಯಾಕಿಷ್ಟು ತಡ ?   ಇಲ್ಲಿಗೆ   ಕರೆಸಿದರಂತಲ್ಲ ?      ಅತಿಥಿಗೃ ಹದಲ್ಲೆಯೋ   ಕಾರಾ   ಗೃಹದಲ್ಲೆಯೋ              ಇಟ್ಟರಂತಲ್ಲ?  ಯಾರೋ   ಅಂದಿದ್ದರು:    “ಅವನು   ಸಜ್ಜನ.”     ಹಾಗಾದರೆ  ಸಜ್ಜ ನನ     ವಿಚಾರಣೆ....
    ಇನ್ನೂ    ಕೆಲವರೆಂದರು   “ನಾವು  ಇವತ್ತು   ದುಡಿಯದಿದ್ದರೂ   ಅಮಾತ್ಯರು   ದುಡೀತಾರೆ .  ಅಧಿಕಾರಿಗಳೂ      ಕೂದ .  ಆಳುವವರಿಗೆ   ವಿಶ್ರಾಂತಿಯೆ  ಇಲ್ಲಾ."
    ಅರಮನೆಯ    ಆವರಣದಲ್ಲಿ   ಡಂಗುರದ    ಸದ್ದಿಲ್ಲ .    ಆದರೆ   ಸೇವಕ  ಸೇವಕಿ   ಯರೆಲ್ಲ  ಬಲ್ಲರು. ಅವರಿಗೆ ಮೆನೆಪ್ಟಾ  “ಬಡಜನರ   ದೊಡ್ಡ  ನಾಯಕ .”  ನ್ಯಾಯಸ್ಥಾನದಲ್ಲಿ  ಪ್ರೇಕ್ಷಕರಾಗುವ   ಸ್ವಾತಂತ್ರ್ಯ  ಆವರಿಗಿದೆ .  ಜಜ್ ಮಂಖನ     ವಿಚಾರಣೆಯಾದಾಗ  ಸರದಿಯಲ್ಲಿ  ತಂಡ   ತಂಡಗಳಾಗಿ   ಹೋಗಿ   ನೋಡಿದ್ದರು .  ಈ   ದಿನವೂ ಹೋಗಬಹುದು .  ಆದರೆ  ಉತ್ಸವದ   ಮಾರನೆಯ   ದಿನ   ಕೆಲಸವೇನು   ಕಡಿಮೆಯೆ?  ತಿಕ್ಕುವ,ತೊಳೆಯುವ, ದುಡಿಮೆ.

ಸಹಸ್ರಾರು ಜನ ಇದ್ದರೂ ಸಾಲದು . ಸಾಧ್ಯವಾದರೆ ಅಪರಾಹ್ನ ಇಣಿಕಿ ನೋಡಿ ಬರಬೇಕು.

     ನಾಯಸ್ಥಾನದ     ಏರ್ಪಾಟಿನ    ಉಸ್ತುವಾರಿ   ಹಿರಿಯ    ಲಿಪಿಕಾರ    ಸೆನೆಬ್   ನದು.   ಅಮಾತ್ಯ   ನಿತ್ಯದ ಕಾರ್ಯ     ನಿರ್ವಹಿಸುವ     ಸಭಾಭವನ    ನ್ಯಾಯದ    ಆಸ್ಥನವಾಗಿ    ಮಾರ್ಪಟ್ಟಿತು .  ಈ   ದಿನ   ಆಮೆರಬ್  ನದು   ನ್ಯಾಯಮೂರ್ತಿಯ   ಪಾತ್ರ ,  ಮಹಾ   ಅರ್ಚಕ   ನಾಯಸ್ಥಾನಕ್ಕೆ   ಬಂದ    ಕುಳಿತುಕೊಳ್ಳುವರೆಂದು   ಕೇಳಿ ಸೆನೆಬ್ಗೆ     ಪರಮಾಶ್ಚರ್ಯ .    ಅಂಥದು   ಹಿಂದೆಂದೂ   ನಡೆದಿರಲಿಲ್ಲ .  ಅಮಾತ್ಯರಿಂದ    ತುಸು    ದೂರದಲ್ಲಿದ್ದ ಅವರಿಗೆ      ವಿಶೇಷ    ಪೀಠವ್ಯವಸ್ಥೆ .  ಚಿರತೆಯ   ತುಣುಕು   ಚರ್ಮ    ಅದಕ್ಕೆ .    .....ಜಜ್  ಮಂಖ್ ನ ವಿಚಾರಣೆಯಂದು      ಪೆರೋ    ಪರಿವಾರ   ಬಂದಿತ್ತು .  ಅವರು   ದೂರದ   ವೇದಿಕೆಯ    ಮೇಲಿನಿಂದ     ಪ್ರೇಕ್ಷಕರು.  ಇವತ್ತೂ   ಬಂದಾರು .     ಪರದೆ    ಇಳಿಬಿಡಲು    ಸೆನೆಬ್    ಆಜ್ಞಾಪಿಸಿದ .    ಪಾರ    ದರ್ಶಕ, ಸಭಾಭವನದಲ್ಲಿ    ಕುಳಿತಿದ್ದರೂ    ಅವರು    ಬೇರೆಯೇ    ಎನ್ನುವ     ಭಾವನೆ .    ಔತಣದಲ್ಲಿ     ಮೆನೆಪ್   ಟಾಗೆ ಕೊಟ್ಟ    ಉಡುಗೊರೆಯ    ನೆನಪಾಗುತ್ತಿದೆ    ಸೆನೆಬಗೆ .    (ಛೆ !  ಛೆ !  ಈ  ನೆನಪು  ಸರಿಯಲ್ಲ ,   ನನಗೂ  ಅದಕ್ಕೂ ಯಾವ   ಸಂಬಂಧವೂ   ಇಲ್ಲ..?)   “ಕಟಾಂಜನ   ತಂದಿಡಿರೋ  ಮರದ   ಕಟಾಂಜನ ,   ಮೂಲೆಯಲ್ಲಿ.        ಅಪರಾಧಿಗಾಗಿ .   ಅಲ್ಲ ,    ಆರೋಪಿಗಾಗಿ ."