ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

          ಇನೇನಿಯ ಏರುದನಿ ನ್ಯಾಯಸ್ಥಾನದ ಗೋಡೆಗೆ ಅಪ್ಪಳಿಸಿತು:
          " ಇದು ಕೇಳುವ ಕಿವಿಗಳು ಕಿವುಡಾಗುವಷ್ಟು ಕೆಟ್ಟ ಸುದ್ದಿ ; ಮಾಡಿದ ಕೈಗಳು ತಾವೆ ಕಡಿದು ಬೀಳುವಷ್ಟು ದುಷ್ಟ ಕೆಲಸ. ಬಂಡಾಯ ಹೂಡಿದ ಮಾರನೆಯ ದಿನವೇ ಈತ ತನ್ನ ಸಂಗಡಿಗರೊಡನೆ ದೇವಮಂದಿರಕ್ಕೆ ನುಗ್ಗಿ ದುಂಡಾವೃತ್ತಿ ನಡೆಸಿದ. ನೆರೆದ ಜನರ ಎದುರಲ್ಲಿ ಅರ್ಚಕ ಅಪೆಟ್ ನನ್ನು ಥಳಿಸಿದ. ಇಲ್ಲಿರುವ ಮಾನ್ಯ ಭೂಮಾಲಿಕರು ಸೆತೆಕ್ ನಖ್ತ್ ಮತ್ತು ಸೆನ್ ಉಸರ್ಟ್ ಇದಕ್ಕೆ ಸಾಕ್ಷಿ, ಮಂದಿರದ ಮೂರ್ತಿ ದೇವರಲ್ಲ, ನಾನೇ ದೇವರು. ನನಗೇ ಪೂಜೆ ಸಲ್ಲಿಸಿ.....ಎಂದ .ದೇವಮಂದಿರದ  ಉಗ್ರಾಣವನ್ನು ಹೊಕ್ಕು  ಭಕ್ತಾದಿಗಳು ನೀಡಿದ ದವಸಧಾನ್ಯ ಮತ್ತಿತರ ಕಾಣಿಕೆಗಳನ್ನುವಶಪಡಿಸಿಕೊಂಡ. ಬಂಗಾರದ ತಟ್ಟೆಗಳನ್ನು ದೋಚಿದ. ಶಿರಚ್ಛೇದನ ಮಾಡಿ ಸ್ಮಾರಕ ಕಂಬಕ್ಕೆ ತೂಗುಹಾಕ್ತೇನೆ-ಅಂತ ಅಪೆಟ್ ನನ್ನು ಹೆದರಿಸಿದ. ಮಹಾಪ್ರಭು-ಮಹಾ ಅರ್ಚಕರು-ಭೂಮಾಲಿಕರು ಒಟ್ಟಾಗಿ ಐಗುಪ್ತವನ್ನು ಹರಿದು ತಿನ್ತಿದ್ದಾರೆ -ಅಂತ ಕೂಗಾಡಿದ. ಇವನು ಮಾಡಿರುವುದು ದೈವದ್ರೋಹ.ಈತ ಮನುಷ್ಯ ನಲ್ಲ-ಸಾರಿ ಸಾರಿ ಹೇಳ್ತೇನೆ ಇವನು ಸೆತ್! ಇವನು ಸೆತ್!”
           ಮಹಾ ಅರ್ಚಕ ಮೆಚ್ಚುಗೆ ಸೂಚಿಸುವನೇನೋ ಎಂದು ಇನೇನಿ ಅತ್ತ ನೋಡಿದ.. ಹೆಪಾಟ್ ನ  ತುಟಿಗಳು ಕಿರುನಗೆ ಬೀರಿದಂತೆ ಕಂಡಿತು.
           (ಪೆರೋಗೆ ಪೂರ್ತಿ ಎಚ್ಚರ, ದಾಸಿಯರ ಚಾಮರ ಸೇವೆಗೆ ಆತ ಎದೆಯೊಡ್ಡಿದ.)
           ಹೊರಗೆ ಬಿಸಿಲು. ಗದ್ದಲ. ಇವತ್ತು ಅರಮನೆಯ ಮಹಾದ್ವಾರವನ್ನೂ ಪ್ರಾಕಾರದ ಪಾರ್ಶ್ವದ್ವಾರಗಳನ್ನೂ ತೆರೆಯ ಬಾರದಿತ್ತು ಎನಿಸಿತು ಅಮಾತ್ಯನಿಗೆ. ಇಷ್ಟು ಹೊತ್ತಿನಿಂದ ಕೇಳುತ್ತ ನಿಂತಿದ್ದಾನೆ. ತುಟಿ ಪಿಟ್ಟೆಂದಿಲ್ಲವಲ್ಲ. ಮುಖದ ಮೇಲೆ ಯಾವ ಭಾವನೆಯೂ ಇಲ್ಲ. ತನ್ನೊಡನೆ ಭೇಟಿ, ಪೆರೋದರ್ಶನ, ಬಳಿಕ ಔತಣ-ಆಗ ಹೇಗಿದ್ದನೋ ಈಗಲೂ ಹಾಗೆಯೇ ಇರುವನಲ್ಲ. ವಿಚಿತ್ರ ಪ್ರಾಣಿ, ಅಥವಾ, ಇನ್ನು ಉಳಿಗಾಲವಿಲ್ಲ ಎಂದು ಮನವರಿಕೆಯಾಗಿ ತಣ್ಣಗಾಗಿರುವನೋ ? ಇವನನ್ನೊಮ್ಮೆ  ಪ್ರಶ್ನಿಸಿ ತೀರ್ಪು ಕೊಟ್ಟುಬಿಡಬಹುದು.ಅದು ಒಂದು ವಾಕ್ಯದಲ್ಲಿ ಅದನ್ನು ಮುಗಿಸುವಂತಿಲ್ಲವಲ್ಲ....ಅದು ದೀರ್ಘವಾಗಿರಬೇಕು.ತೂಕದ ಪದಗಳಿಂದ ಕೂಡಿರಬೇಕು . ಗೋರಿ ದರೋಡೆಗಾರ ಜಜ್ ಮಂಖನ