ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೫೪೯ “ಅಂಥ ನಾಗರಿಕತೆಗೆ ರೋಸಿ, ಸುಲಿಗೆಗೆ ಒಪ್ಪದೆ, ನಾವು-ದಲಿತರು ಸೆಟೆದು ನಿಂತಿದ್ದೇವೆ. ಎಲ್ಲರೂ ನೆಮ್ಮದಿಯಿಂದ ಬಾಳುವ ಹೊಸ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಇಷ್ಟುಕಾಲ, ಕುರಿಗಳಾಗಿ ಕಟುಕನ ಕತ್ತಿಗೆ ತಲೆಯೊಡ್ಡಿದು ಸಾಲದೆ? ಆಡಳಿತದ ಒರಳಿನ ಕೆಳಕ್ಕೆ ಪುಡಿಪುಡಿಯಾದದ್ದು ಸಾಲದೆ? ದೇವರ ಹೆಸರಿನಲ್ಲಿ ಅರ್ಚಕರ ಮುಷ್ಟಿಯೊಳಗೆ ಹಿಪ್ಪೆಯಾದದ್ದು ಸಾಲದೆ?"

ನ್ಯಾಯಮೂರ್ತಿ ಅರಚಿದ : “ನಿಲ್ಲಿಸು! ನಿಲ್ಲಿಸು! ವೇಳೆಯಾಯ್ತು!” ನ್ಯಾಯಸ್ಥಾನದಲ್ಲಿ ಕಲರವ. ಮತ್ತೆ ಆಮೆರಬ್ ಕೂಗಿ ನುಡಿದ : “ಸದ್ದು ! ಸದ್ದು !” ಮೆನೆಪ್ ಟಾ (ಸ್ವರ ತಗ್ಗಿಸಿ ನಿಧಾನವಾಗಿ) : “ಆಯಿತು. ಕೊನೇ ಮಾತು. ಇಷ್ಟು ದಿನ ನಿಮ್ಮ ಚೌಕಮಣೆ ಆಟದಲ್ಲಿ ಕಾಯಿಯಾಗಿದ್ದೆ, ಈಗ ನೀವೆಲ್ಲ ಒಂದಾಗಿದ್ದೀರಿ. ಸದ್ಯಕ್ಕೆ ಆಟ ಮುಗಿದಿದೆ. ಕಾಯಿಯಾಗಿದ್ದ ನನ್ನ ಅಗತ್ಯ ನಿಮಗಿಲ್ಲ.ಸ್ನೊಫ್ರು, ಸೆಬೆಕ್ಖು ನಮ್ಮ ಪ್ರಾಂತದ ಹಿರಿಯ ಸಮಿತಿ ಸದಸ್ಯರು, ಖ್ನೆಮ್ ಹೆಟಾಪ್–ಎಲ್ಲರ ದೃಷ್ಟಿಯಲ್ಲಿ ನಾನೊಬ್ಬ ಶಾಂತ ಸ್ವಭಾವದ ನಾಯಕ.ಬಟಾ ಕೇಳಿದ ಒಂದು ಪ್ರಶ್ನೆ ಇದು- 'ಅಣ್ಣ ನಿನಗೆ ಸಿಟ್ಟು ಬರೋದು ಯಾವತ್ತು ? (ಬಹಳ ಮೆಲ್ಲನೆ) ಯಾವತ್ತು ? ಯಾವತ್ತು (ಕ್ರಮೇಣ ಧ್ವని ಏರಿಸುತ್ತ) ಮಹಾ ಪ್ರಭುಗಳೇ, ಮಹಾ ಅರ್ಚಕರೇ, ಅಮಾತ್ಯರೇ, ಪ್ರತಿಷ್ಠಿತರೇ ! ಕಿವಿಕೊಟ್ಟು ಕೇಳಿ! ನಮಗೆ -ಜನರಿಗೆ-ಸಿಟ್ಟುಬಂದಾಗ ಅದು ಮಹಾಪೂರವಾಗ್ರದೆ. ಅದರಲ್ಲಿ ನೀವೆಲ್ಲ ಕೊಚ್ಚಿಹೋಗ್ತೀರಿ! ಮಹಾಪೂರ ಇಳಿದಾಗ ಕಂಡುಬರೋ ಜಗತ್ತು ಹೊಸದು -ಹೊಚ್ಚ ಹೊಸದು ! ಆ ನೂತನ ಸೃಷ್ಟಿ ನಿರಾತಂಕವಾಗಿ ಆಗಲಿ ಆಂತ-ಇಗೋ—ರಾನನ್ನು ಪ್ ಟಾನನ್ನು ಅವನ ನನ್ನು ಅನನ್ಯ ಭಾವದಿಂದ ನಾನು ಪ್ರಾರ್ಥಿಸ್ತೇನೆ....” ಮಾತು ಮುಗಿಸಿದ ಮೆನೆಪ್ ಟಾ ಮಂಡಿಯೂರಿದ, ತಲೆ ಬಗ್ಗಿಸಿದ,