ಈ ಪುಟವನ್ನು ಪರಿಶೀಲಿಸಲಾಗಿದೆ

 ಮ್ರುತ್ತ್ಯುಂಜಯ ೫೫೧ ಆಮೆರಬ್ ಕಕರ್ಶವಾಗಿ ನುಡಿದ : "ಅಪರಾಧಿ ಎದ್ದು ನಿಲ್ಲಲಿ !" ಆ ಸ್ಥಾನದಿಂದ ಎಲ್ಲಿಂದಲೋ ಒಂದು ಧ್ವನಿ ಕೇಳಿಸಿತು : “ಹೇಗೂ ಮಂಡಿಯೂರಿದ್ದಾನಲ್ಲ, ಹಾಗೆಯೇ ದಂಡನೆ ವಿಧಿಸಿ.” ಅಮಾತ್ಯನಿಗೆ ವಿಸ್ಮಯ ಏನದು, ಸಮರ್ಥನೆಯೊ, ವಿಡಂಬನೆಯೊ ? ಮೆನೆಪ್ಟಾ ಬಳಲ್ಲಿದ. ಮೆದುಳು, ಮೈ ಎಲ್ಲವೂ ಭಾರ ಎಂಬ ಅನಿಸಿಕೆ:

ಕಣ್ಣು ಮುಚ್ಚಿಯೇ ಇರೋಣ, ಹಾಗೆಯೇ ನಿದ್ದೆ ಬಂದರೆ ಚೆನ್ನು-ಎಂದು ಕೊಂಡ. ಆದರೆ, ಅಪರಾಧಿ ಎದು ನಿಲ್ಲಲಿ! ಇನ್ನೊಂದು ಧ್ವನಿ ಯಾರದೋ ತಿಳಿಯದು. ಪರಿಚಿತ ಎಂಬ ಭಾವನೆ ಛೆ! ತಾನು ಏಳಬೇಕು. ತೋಳುಗಳು ಹಗ್ಗಗಳನ್ನು ಯಾರೋ ಜಗು ಜಗುತ್ತಿರುವರಲ್ಲ?

ಎದ್ದು ನಿಂತ, ಮೆನೆಪ್ಟಾ, ತನ್ನ ಲವಲವಿಕೆ ಕಂಡು ಅವನಿಗೇ ಅಚ್ಚರಿ. 'ಒಳ್ಳೆದು' ಎಂದುಕೊಂಡ. ಉಸಿರೆಳೆದು ಎದೆ ಹಿಗ್ಗಿಸಿದ. ತಲೆ ಎತ್ತಿ ನ್ಯಾಯ ಮೂರ್ತಿ, ಮಹಾಅರ್ಚಕ, ಪೆರೋ ಎಲ್ಲರನ್ನೂ ದಿಟ್ಟಿಸಿದ ಮುಖದಲ್ಲಿ ಪ್ರಭೆ. ತುಟಿಗಳಲ್ಲಿ ಮಂದಹಾಸ. ಆಮೆರೆಬ್ : "ತಾನು ಎಸಗಿದ ಅಕ್ರುತ್ಯವನ್ನು ಪಾಪಿ ಮನಗಾಣುವಂತೆ ಮಾಡುವುದು ಭೀಕರವಾದದ್ದು. ಆದರೆ ಅನಿವಾರ್ಯವೆಂದು, ಅಗತ್ಯವೆಂದು ನ್ಯಾಯಸ್ಥಾನ ಆ ಕೆಲಸ ಮಾಡಿದೆ. ನೀರಾನೆ ಪ್ರಾಂತದ ಈ ಸಾಮಾನ ರೈತ-ದುಡಿಮೆಗಾರ-ಮೆನೆಪ್ಟಾನಿಂದಾಗಿ, ರಾ ದೇವನ ಸೃಷ್ಟಿಯಾದ ಐಗುಪ್ತಕ್ಕೆ-ಅದರ ಹಿರಿಮೆಗೆ-ಕಳಂಕ ತಟ್ಟಿದೆ. ದೇವರೂಪನಾದ ಮಹಾ ಕುರುಬ ಅಪಾರ ದುಃಖಕ್ಕೆ ಗುರಿಯಾಗಿದ್ದಾರೆ. ಈ ದೈವದ್ರೋಹವನ್ನು ಕಂಡು, ಐಗುಪ್ತದ ಧರ್ಮವ್ಯವಹಾರಗಳ ರಕ್ಷಕರಾದ ಮಹಾ ಅರ್ಚಕರು ವ್ಯಥಿತರಾಗಿದ್ದಾರೆ.........." ಅಮೆರೆಬ್ ತಡವರಿಸಿದ. ಮುಂದೇನು ಹೇಳಬೇಕು ತಾನು? ಪದಗಳು ರೂಪುಗೊಳ್ಳುತ್ತಿಲ್ಲ. ಏನೂ ತೋಚುತ್ತಿಲ್ಲ. ಈ ಅಪರಾಧಿಯೊ ? ತನ್ನೆಡೆಗೇ ನೋಡುತ್ತಿದಾನೆ. ತನ್ನ ತೊಳಲಾಟ ಕಂಡು ನಗುತ್ತಿದ್ದಾನೆ. ಆ ಪ್ರೇಕ್ಷಕರಲ್ಲಿ ಗುಸುಗುಸು.....ಪಂಜುಗಳ ಬೆಳಕಿನಲ್ಲಿ ಹೀಗಾಗುತ್ತಿದೆಯೇನೊ, ತಾನು ಮುಗಿಸಬೇಕು, ಬೇಗ ಮುಗಿಸಬೇಕು. ಅದೊಂದೇ ದಾರಿ.......