ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಮೃತ್ಯು೦ಜಯ

ಸಲ್ಲಿಸೋದು ಅಂದರೇನು ? ಪೆರೋನ ಪ್ರತಿನಿಧಿಯ ಎದುರು ನಿಂತು
ಮಾತನಾಡೋ ಎದೆಗಾರಿಕೆಯ ಈ ಜನಕ್ಕೆ. ಥುಥ್ !"
ಗೇಬು ಕೈತಟ್ಟಿದ. ಮುಖ ತೋರಿಸಿದ ಸೇವಕನಿಗೆ, "ಇನ್ನಷ್ಟು
ರೊಟ್ಟಿ ತಾ ದೊಡ್ಡವರಿಗೆ," ಎ೦ದ.
ಟೆಹುಟಿ ಕಿರುಚಿದ :
"ರೊಟ್ಟಿ ನಿಮ್ಮ ತಲೆ. ಬೇಕು ಅಂದೆನೆ ನಾನು ?"
ಕಕ್ಕಾವಿಕ್ಕಿಯಾಗಿ ನಿ೦ತ ಸೇವಕನೆಡೆ ನೋಡಿ, "ಹೋಗಾಚೆ !"
ಎಂದು ಗೇಬು ಗದರಿದ. ಅವಮಾನದಿಂದ ಮುಖ ಕೆಂಪಡರಿ, ಟೆಹುಟಿಯ
ನೋಟವನ್ನು ಇದಿರಿಸಿ, ಗೇಬು ಅಂದ :
"ಹೀಗೆ ಹೇಳ್ತಿದ್ದೇನೇಂತ ತಪ್ಪು ತಿಳ್ಕೋಬೇಡಿ ಟೆಹುಟಿ. ಸ್ವತಃ
ನಾನೂ ಒಂದು ಮನವಿ ಸಲ್ಲಿಸ್ಬೇಕು ಅಂದ್ಕೊಂಡಿದ್ದೇನೆ."
"ನೀವು ? ನನಗೆ ?"
"ಮಹಾಪ್ರಭುವಿಗೆ"
"ಸದ್ಯಃ ! ಏನು ಸಮಾಚಾರ ?"
"ಪರಿಸ್ಥಿತಿ ಬದಲಾಗಿದೆ...."
"ಕೆಟ್ಟಿದೆ!"
"ಹೌದು, ಕೆಟ್ಟಿದೆ. ಯಾಕೆ ? ಸ್ಥಿತಿಗತಿ ಏನು___ಅ೦ತ ಪ್ರಾಂತ
ಪಾಲನನ್ನು ಯಾರೂ ಕೇಳೋದಿಲ್ಲ."
"ರಾಜಧಾನಿಯಲ್ಲೇ ಬಿಗಿ ಇಲ್ಲ ಎಂದೆ?"
"ಪ್ರವಾಹ ಬಂದ್ಮೇಲೆ ವರ್ಷದ ಫಸಲು ಅಂದಾಜು ಮಾಡೋದಕ್ಕೆ
ಒಮ್ಮೆ, ಕುಯ್ಲು ಆದ್ಮೇಲೆ ಕಂದಾಯ ವಸೂಲಿಗೆ ಒಮ್ಮೆ_ಹೀಗೆ ಎರಡು ಸಲ
ರಾಜಧಾನಿಯಿಂದ ಯಾರಾದರೂ ಬರ್ತಾರೆ."
"ಯಾರಾದರೂ ? ಈ ಸಲ ಬಂದಿರೋದು ನಾನು___ಟೆಹುಟಿ___
ಕಂದಾಯ ಅಧಿಕಾರಿ !"
"....ಬಹಳ ಅಂದರೆ ಮಹಾ ಅರ್ಚಕ ಹೇಪಾಟ್ ದೇವರ ಜತೆ ವರ್ಷ
ಕ್ಕೊಮ್ಮೆ ಬರಬಹುದು."
"ಈಗ ಕ೦ದಾಯದ ಅರ್ಧಾಂಶ ಪೆರೋಗೆ ಅರ್ಧಾಂಶ ಹೇಪಾಟ್ ಗೆ.