ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೫೫೯



ರಾಮೆರಿಪ್ಟಾ ಅಂದುಕೊಂಡ :'ಇಲ್ಲಿ ಕಂಬ ಇಲ್ಲ.ಎಲ್ಲಿ ನಿಲ್ಲಿಸ್ತಾರೆ
ತಂದೇನ ? ಆ ಕಟ್ಟೆಯ ಮೇಲೆ ? ದಿಮ್ಮಿ ? ವಿಚಿತ್ರವಾಗಿದೆಯಲ್ಲ ?'
ಬಟಾನ ಹತ್ತಿರ ಬಂದು ಅಹೂರಾ ಕಾತರಳಾಗಿ ಅಂದಳು :
“ಅಣ್ಣ ! ಇದು ವಧಸ್ಥಾನ !”
"ಹೌದು ಅಹೂರಾ."
__ಗವಿಯಿಂದ ಬಂದ ಭಾರವಾದ ಸ್ವರ.
(ರಾಮೆರಿಪ್ಟಾಗೆ ಅರ್ಥವಾಯಿತು. ಒಂದು ವರ್ಷದ ಹಿಂದೆ ಈಸಲು
ಹೋಗಿದ್ದಾಗ ನದಿಯ ಸುಳಿ ಅವನನ್ನು ಒಳಕ್ಕೆ ಎಳೆಯಿತು. ಈಗ ಅದೇ
ಭಾವನೆ. ಅವನು ತಲೆ ಎತ್ತಿ ಬಟಾ, ಮೆನ್ನ, ಅಹೂರಾರ ಮುಖಗಳನ್ನು
ನೋಡಿದ.)
ಗದ್ಗದಿತಳಾಗಿ ಅಹೂರಾ ಕೇಳಿದಳು ;
“ಅಣ್ಣ, ಏನು ಮಾಡೋಣ ಈಗ ? ಏನು ಮಾಡೋಣ?"
ಚೀರುವ ಮೆದುಳು. ಬವಳಿ. ಬಟಾನ ಒಳಗಿಂದ ಪ್ರಶ್ನೆ ತುಡಿ
ಯುತ್ತಿತ್ತು :
'ಏನು ಮಾಡ್ಲಿ ? ನಾನೇನು ಮಾಡ್ಲಿ ?'
ಅಷ್ಟರಲ್ಲೇ ಬಯಲಿನಾಚೆಗಿನ ಕತ್ತಲಿನಿಂದ ಮೂರು ನಡುವಸ್ತ್ರಗಳ
ಮಸುಕು ಬಿಳಿ ಕಾಣಿಸಿತು. ಹತ್ತಿರ ಬರತೊಡಗಿದ ವ್ಯಕ್ತಿಗಳು.
ದಟ್ಟ ಕತ್ತಲೆಯಲ್ಲಿ ಒಂದೆರಡು ನಕ್ಷತ್ರ? ಅರ್ಥವಿಲ್ಲದಿದ್ದರೂ ಆಸೆ
ಆಸೆಯೇ.ಮೆನ್ನ ಅಂದ :
"ಔಟ,ಬೆಕ್.ಶೀಬಾ ಪಾರುಮಾಡಿಸಿ ಇಲ್ಲಿಗೆ ಕರೆತಂದಿದ್ದಾಳೆ....”
ಬಟಾ, ಅಹೂರಾ ಮತ್ತಿತರರು ಬೆಳಕಿಗೆ ಬೆನ್ನು ಮಾಡಿ ಬಂದವರನ್ನು
ಇದಿರ್ಗೊಂಡರು.
ಬಿಕ್ಕುತ್ತ ಔಟನೆಂದ :
“ನಾಯಕರ ರಕ್ಷಣೆ ನಮ್ಮಿಂದಾಗಲಿಲ್ಲ,ಬಟಾ ಅಣ್ಣ.ನಾಯಕರಿಗೆ
ಏನಾದರೂ ಆದರೆ ನಾವು ನಮ್ಮ ಕೈಯಿಂದಲೇ ಪ್ರಾಣ ತಗೊಳ್ತೇವೆ.”
(ಕತ್ತಲಲ್ಲಿ, ಅಹೂರಾಳ ಕಂಕುಳಲ್ಲಿದ್ದ ಮಗುವನ್ನೂ ರಾಮೆರಿಪ್ಟಾ
ನನ್ನೂ ನೋಡುತ್ತ ನಿಂತಳು, ತಾಯಿ ಶೀಬಾ.)