ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಮೃತ್ಯುಂಜಯ

ಭೂಮಾಲಿಕರ ಆಳುಗಳೂ ಮೂಲೆಗಳಲ್ಲಿ ಗುಂಪು ಗುಂಪಾದರು. ಮತ್ತೆಯೂ
ಕೆಲವರು ಮಹಾದ್ವಾರವನ್ನು ದಾಟಿ ಬಂದು ಅಂಗಣಕ್ಕಿಳಿದು ಪ್ರಾಕಾರಕ್ಕೆ
ಒರಗಿ ನಿಂತರು.
ಅಲ್ಲಿ ಇಲ್ಲಿ ಗುಸು ಗುಸು ಮಾತು ಗರಿಗೆದರಿತೆಂದು, ವೇದಿಕೆಯ ಹಿಂಬದಿ
ಯಲ್ಲಿದ್ದ ಕರಿಯ ಭಟನೊಬ್ಬ ಗುಡುಗಿದ.
" ಶಬ್ದ ! ಶಬ್ದ !"
ಇಪ್ಯುವರ್ ವರ್ಷ___ದಿನಗಳನ್ನು ನಮೂದಿಸಿ, ಸಭೆ ಆರಂಭವಾಯಿತು
___ಎಂದು ಬರೆದುಕೊಂಡ. ನೆಲೆಸಿದ ನೀರವತೆಯಲ್ಲಿ ಲೆಕ್ಕಣಿಕೆಯ ಕರಕರ
ಸಪ್ಪಳವಷ್ಟೇ ಕೇಳಿಸಿತು.
ಟೆಹುಟಿ ತುಟಿಗಳನ್ನು ಬಿಗಿದೊತ್ತಿ, ಕಣ್ಣು ಮುಚ್ಚಿ, ಕ್ಷಣಕಾಲ
ಹಾಗೆಯೇ ಇದ್ದು ಕಣ್ಣು ತೆರೆದು ನೆರೆದವರನ್ನು ಉದ್ದೇಶಿಸಿ ನುಡಿದ :
" ನಮ್ಮನ್ನಾಳುವ ಪೆರೋ ದೊರೆಯ ಆಯುರಾರೋಗ್ಯ ವರ್ಧಿಸಲಿ !
ಒಳ್ಳೇದು....ನೀರಾನೆ ಪ್ರಾಂತದ ಮುಖ್ಯ ಪಟ್ಟಣದ ಪ್ರತಿಷ್ಠಿತರೆಲ್ಲ ನೆರೆದಿದ್ದೀರಿ
...ಸಂತೋಷ."
ಮಾತು ನಿಂತಿತು. ಮೌನ. ಕಂದಾಯ ಅಧಿಕಾರಿ ಮುಂದೇನು
ಹೇಳುವನೋ ಎಂದು ಎಲ್ಲರಿಗೂ ಕುತೂಹಲ ಮಹಾದ್ವಾರದಲ್ಲಿ ನೂಕು
ನುಗ್ಗಲು. ಒಳಗೆ ಬರಲು ಜನರು ಯತ್ನಿಸುತ್ತಿದ್ದರು. ದ್ವಾರಪಾಲಕರಾಗಿ
ನಿಂತಿದ್ದ ಕರಿಯ ಭಟರು ಗದೆ ಎತ್ತಿ, " ನಿಲ್ಲಿ ! ನಿಲ್ಲಿ !" ಎಂದು ತಡೆಯು
ತ್ತಿದ್ದರು. ಗೇಬುವಿನ ಕಾವಲು ಭಟರೂ ನಾಲ್ಕಾರು ಜನ ಅಲ್ಲಿಗೆ ಧಾವಿಸಿ
ದರು. ಸಭಿಕರ ದೃಷ್ಟಿ ಅತ್ತ ಸರಿಯಿತು. ಅಲ್ಲಿಂದ ವೇದಿಕೆಯ ಕಡೆಗೆ
ಹೊರಳಿತು.
ಟೆಹುಟಿ ಎಂದ :
"ಬಿಡಿ . ಒಳಗೆ ಬರಲಿ."
ಆ ಮಾತನ್ನು ಗೇಬು ಪುನರುಚ್ಚರಿಸಿದ.
ಅಂಗಳ ನೂರಾರು ಜನರಿಂದ ತುಂಬಿತು.
ಟೆಹುಟಿ ಪರೀಕ್ಷ ನೋಟದಿಂದ ಅವರ ಮುಖಗಳನ್ನು ನೋಡಿದ.
(ಯಾರು ಈ ಬಡಪಾಯಿಗಳ ಮುಖಂಡ ?) ಪಾದಗಳ ತುಳಿತದ ಸದ್ದು
ಅಡಗಿ ಮತ್ತೆ ಮೌನ ನೆಲೆಸಿತು.