ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೦೭

ಬಣ್ಣಿಸಿದ.
"ನಾನು ಮತ್ತೆ ಮತ್ತೆ ಹೇಳೇನೆ: ವಿಚಾರಣೆಯಾದದ್ದು ನಾಯಕರ
ದಲ್ಲ. ಪೆರೋ__ಮಹಾಅರ್ಚಕ_ಅಮಾತ್ಯರದು, ತೀರ್ಪು ಕೊಟ್ಟದ್ದು
ಮೆನೆಪ್‌ಟಾ ಅಣ್ಣ, ಅವರಲ್ಲ....”
ವಿಚಾರಣೆಯಲ್ಲಿ ಭಾಗವಹಿಸಿದ್ದ ಒಬ್ಬೊಬ್ಬರ ಪಾತ್ರವನ್ನೂ ಮೆನ್ನ
ಅಭಿನಯಿಸಿದ. ಅವನು ನ್ಯಾಯಮೂರ್ತಿಯಾದ." ನ್ಯಾಯಮೂರ್ತಿಯತ್ತ
ಬೊಟ್ಟು ಮಾಡಿ ಘೋರ ಆರೋಪ ಹೊರಿಸಿದ ಮೆನೆಪೇಟಾ ಆದ.
ರಾಮೆರಿಪ್ಟಾ ಮೊದಲ್ಗೊಂಡು ಪ್ರತಿಯೊಬ್ಬರೂ ಮೆನ್ನ ಹೇಳಿದ
ಮಾತುಗಳನ್ನು ಕಿವಿಗೊಟ್ಟು ಕೇಳಿದರು. ಅವರ ಪಾಲಿಗೆ ಮೆನೆಪ್‌ಟಾ ಮರಳಿ
ಜೀವ ತಳೆದು ಬಂದ....
....ಹಾಯಿಗಂಬದ ಬಳಿ ನಿಂತಿದ್ದ ಬಟಾನ ಗುರುತು ಹಿಡಿದು, ಮೇಲಿನಿಂದ
ಬರುತ್ತಿದ್ದ ದೋಣಿಯಲ್ಲಿದ್ದ ಯಾರೋ ಕೂಗಿ ಕರೆದರು :
" ಬಟಾ ! ಬಟಾ ! ಓ ಬಟಾ ! ”
ಆ ದೋಣಿಯಿಂದ ದೂರ ಸರಿಯಲು ಬಟಾನ ಅಂಬಿಗರು ಮಾಡಿದ
ಯತ್ನ ವಿಫಲವಾಯಿತು. ಆ ದೋಣಿಯೇ ಹತ್ತಿರ ಬರತೊಡಗಿತು.
ಬಟಾನಿಗೆ, ಇದು ಪರಿಚಿತ ಧ್ವನಿ__ ಎನಿಸಿತು, ಆ ದೋಣಿಯಲ್ಲಿ ನಿಂತು
ಕೈ ಬೀಸುತ್ತಿದ್ದವನನ್ನು ನೋಡಿದ. ಹಿಂದೆ ನೀರಾನೆ ಪ್ರಾಂತಕ್ಕೆ ತನ್ನ
ಸಂದೇಶವನ್ನು ತಲಪಿಸಿದ್ದ ದೋಣಿಕಾರ,
" ಬಟಾ ತನ್ನ ಅಂಬಿಗರಿಗೆ ಹುಟ್ಟು ಹಾಕುವುದನ್ನು ನಿಲ್ಲಿಸುವಂತೆ ಸನ್ನೆ
ಮಾಡಿದ. ಆ ದೋಣಿ ಹತ್ತಿರಕ್ಕೆ ಬಂತು. ಸ೧.
ಅದರ ದೋಣಿಕಾರ ಕೂಗಿ ಹೇಳಿದ :
"ಬಟಾ ! ಸಂದೇಶ ತಲಪಿಸಿದ್ದೇನೆ. ಖಿನವ ಬಾಕಿ ಇದೆ....”
('ಇವನಿಗೆ ತಿಳೀದು. ಅದಾದ ಮೇಲೆ ನಾನು ಅಲ್ಲಿಗೆ ಹೋಗಿ ಬಂದೆ.)
ಇವನು ಮೌನವಾಗಿದ್ದಾನಲ್ಲಾ ಎಂದು ದೋಣಿಕಾರ ಮತ್ತೆ ನುಡಿದ :
“ ನನ್ನ ಗುರುತು ಸಿಕ್ತಾ ? ನಿಮ್ಮ ನಾಯಕರು ವಾಪಸ್ಸು ಬಂದರಾ ?”
ಬಟಾ ಈಗಲೂ ಸುಮ್ಮನಿದ್ದ. ಆದರೆ, ಮುಖ ಕೆಳಕ್ಕೆ ನೋಡಿತು. ಆ
ದೋಣಿಕಾರನ ನೋಟ ಬಟಾನ ದೃಷ್ಟಿಯನ್ನು ಹಿಂಬಾಲಿಸಿತು, ರಕ್ಷಿತ ಶವ