ಈ ಪುಟವನ್ನು ಪರಿಶೀಲಿಸಲಾಗಿದೆ

೬೨೮

ಮೃತ್ಯುಂಜಯ

ಕೇಳಿಯ ಕೇಳಿಸದಂತಿದ್ದ ಧ್ವನಿಯಲ್ಲಿ ಅವಳೆಂದಳು:
“ಏನಾಯ್ತು ? ನಾನೆಲ್ಲಿದ್ದೇನೆ ? ಬಂದರಾ ?”
ಬಿಸುಸುಯ್ಯುತ್ತ ನೆಜಮುಟ್ ಅಂದಳು :
“ಏಳಬೇಡ. ಹಾಗೇ ಮಲಗಿರು. ಇನ್ನೇನು ಕರಕೊಂಡು ಬತ್ತಾರೆ.”
“ರಾಮೆರಿ....”
ಒಂದು ಹೆಜ್ಜೆ ಹತ್ತಿರ ಸರಿದು ರಾಮರಿಪ್ಟಾನೆಂದ :
“ಇಲ್ಲಿದ್ದೇನೆ ಅಮ್ಮ....”
ಮೆಲ್ಲಮೆಲ್ಲನೆ ಕಳೆದ ಅಸಹನೀಯ ಕ್ಷಣಗಳು....
ಧ್ವನಿ ಕೇಳಿಸತೊಡಗಿತು:
“ ಓ ಒಸೈರಿಸ್, ಓ ಒಸೈರಿಸ್........ ಓ ಮೆನೆಪ್ ಟಾ, ಓ
ಮೆನೆಪ್‌ಟಾ....”
ಶೋಕಾಲಾಪನೆ ಬರಬರುತ್ತ ಬಲಗೊಂಡಿತು.
ನೆಫಿಸಳನ್ನು ನೋಡುತ್ತಿದ್ದ ನೆಫರುರಾ, ಅಕ್ಕನಿಗೆ ಮತ್ತೆ ಪ್ರಜ್ಞೆ
ತಪ್ಪಿದೆ,” ಎಂದಳು, ನೆಜಮುಟ್ ನೆಲದ ಮೇಲಿರಿಸಿದ್ದ ಈರುಳ್ಳಿಯನ್ನು
ಅಹೂರಾ ಎತ್ತಿಕೊಂಡು ನೆಫಿಸಳ ಮೂಗಿನ ಬಳಿ ಆಡಿಸಿದಳು,
ಪ್ರಜ್ಞೆ ಮರಳಿ, ಹೊರಗಿನಿಂದ ಬರುತ್ತಿದ್ದ ಶೋಕಾಲಾಪನೆ ಕಿವಿಗಳನ್ನು
ಹೊಕ್ಕಂತೆ, ನೆಫಿಸ್ ಕಣ್ಣುಗಳನ್ನು ಅಗಲವಾಗಿ ತೆರೆದಳು. ಎದ್ದು ಕುಳಿತು
ಕೊಳ್ಳಲು ನೆಜಮುಟ್ ಮತ್ತು ಅಹೂರಾ ಅವಳಿಗೆ ನೆರವಾದರು. ನಡುವಸ್ತ್ರ
ಬಿಚ್ಚಿ ಹೋಗಿತ್ತು. ನೆಫರುರಾ ಅದನ್ನು ಸರಿಪಡಿಸಿದಳು.
ರಾಮೆರಿಪ್ಟಾ ಬಂದು ತಾಯಿಯ ಬೆನ್ನು ಹಿಂದೆ ನಿಂತ.
....ಜನಜಂಗುಳಿ ಮನೆ ಬಾಗಿಲಿಗೆ ಬಂತು. ಬಿಕ್ಕಳಿಸುವ ದುಃಖವೂ
ಇತ್ತು ನಾಮೋಚ್ಛಾರದೊಂದಿಗೆ. ಒಮ್ಮೆಲೆ ಮೌನ. ಸ್ನೊಫ್ರು ನೀಡುತ್ತಿದ್ದ
ನಿರ್ದೆಶಗಳನ್ನು ಪುನರುಚ್ಚರಿಸುತ್ತಿದ್ದ ಖ್ನೆಮ್ ಹೊಟೆಪನ ಧ್ವನಿ.
ಸ್ನೊಫ್ರು ಒಳಗೆ ಬಂದ. ನೆಲ ನೋಡುತ್ತ ಕುಳಿತಿದ್ದ ನೆಫಿಸಳನ್ನು ,
ಅವಳನ್ನು ಹಿಡಿದುಕೊಂಡಿದ್ದ ನೆಜಮುಟ್ ಅಹೂರಾರನ್ನು , ನಿಂತಿದ್ದ ಅನ್ನು
ವಿನ ವಿಧವೆ, ನೆಫರುರಾ, ರಾಮೆರಿಪ್ಟಾರನ್ನು ದಿಟ್ಟಿಸಿದ. ನೀಳ ಉಸಿರುಗಳ
ನಡುವೆ ನಿಧಾನವಾಗಿ ಅವನೆಂದ: