ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೪೩

ಮೆನ್ನನೆಂದ:
“ಸಮುದಾಯಕ್ಕೆ ನಿವೇದಿಸುವಂಥಾದ್ದು ಏನಾದರೂ ಇದ್ದರೆ ಹೇಳಿಬಿಡಿ.”
"ಬೇಗನೆ ! ಬೇಗನೆ ! ” ಎಂದು ಖ್ನೆಮ್ ಹೊಟೆಪ್ ಅವಸರಪಡಿಸಿದ.
ಚುಚ್ಚುತ್ತಿದ್ದ ರಣಬಿಸಿಲು ನೆರಳೆನ್ನು ವಂತೆ ಜನ ನೀರವವಾಗಿ ನಿಂತರು.
ಹಿರಿಯರ ಸಮಿತಿಯ ಹಿರಿಯ ಸದಸ್ಯ ಸೆಮನೆಂದ :
“ಬಂಧುಗಳೇ, ನಮ್ಮ ನಾಯಕರು ತಮ್ಮ ಜನರಿಗೆ ಹಿತವಾಗಬೇಕು
ಅನ್ನೋ ಬಯಕೆಯಿಂದ ಪೆರೋನ ಅಮಂತ್ರಣ ಸ್ವೀಕರಿಸಿ ರಾಜಧಾನಿಗೆ
ಹೋದ್ರು. 'ನಮ್ಮದು ಋಜು ಮಾರ್ಗ. ಈವರೆಗೂ ಅಷ್ಟೆ. ಮುಂದೆಯೂ
ಅಷ್ಟೆ. ನಮ್ಮ ಮಾಟ್ ನಮ್ಮನ್ನು ಕಾಯ್ದದೆ. ಹೋಗಿ ಬತ್ತೇನೆ' ಅಂದು
ಅಲ್ಲಿ ಅರಮನೆ ಗುರುಮನೆಗಳ ನಡುವೆ ಚೌಕಮಣೆ ಆಟ ನಡೆದಿತ್ತು. ಆ ಜನ
ನಮ್ಮ ನಾಯಕರಿಗೆ ನಂಬಿಕೆ ದ್ರೋಹ ಮಾಡಿದ್ರು. ತಮ್ಮ ಆಟದ ಕಾಯಿ
ಯಾಗಿ ನಮ್ಮ ನಾಯಕರನ್ನು ಬಳಸಿದ್ರು. ಮೋಸ! ವಂಚನೆ ! ನಮ್ಮ
ನಾಯಕರನ್ನು ಮುಗಿಸಿಯೇ ಬಿಟ್ಟು, ದೊಡ್ಡ ಮನುಷ್ಯ, ಬಹಳ ದೊಡ್ಡ
ಮನುಷ್ಯ. ಇಂಥವನೇ ಇನ್ನೊಬ್ಬ ಈ ಐಗುಪ್ತದ ನೆಲದ ಮೇಲೆ ಮತ್ತೆ
ಯಾವಾಗ ನಡೀತಾನೊ ? (ಧ್ವನಿ ಕುಸಿಯತೊಡಗಿತು.) ನಾಯಕರು ಆಡಿದ
ಮಾತನೇ ಹಿರಿಯ ಸಮಿತಿ ಪುನಃ ಹೇಳದೆ. 'ನಮ್ಮದು ಋಜುಮಾರ್ಗ.
ಈವರೆಗೂ ಅಷ್ಟೆ. ಮುಂದೆಯೂ ಅಷ್ಟೆ. ನಮ್ಮ ಮಾಮ್ ನಮ್ಮನು
ಕಾಯ್ತದೆ.' ಅಂತ್ಯಕ್ರಿಯೆ ಮುಗಿದ ಮೇಲೆ ಸಾವಿನ ಊಟ, ರಾತ್ರೆ ಹಿರಿಯರ
ಸಮಿತಿ ಸಭೆ ಸೇರಿ, ನಮ್ಮ ಪ್ರಾಂತಕ್ಕೆ ಸಂಬಂಧಿಸಿ ಮುಂದಿನ ಕಾರ್ಯವಿಧಾನ
ಏನು ಅಂತ ನಿರ್ಧರಿಸ್ತದೆ....ಇಷ್ಟೆ, ಇಷ್ಟೆ....”
ಉಮ್ಮಳವನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿ ಸೆಮ ಸ್ನೊಫ್ರು
ವಿಗೆಂದ :
“ನೀನು ಏನಾದರೂ ಹೇಳು.”
ನೆರೆದಿದ್ದ ಎಲ್ಲರೆಡೆಗೆ ಸೊಫ್ರು, ದೃಷ್ಟಿ ಬೀರಿದ. ಬಾಯಿ ತೆರೆದ ಮಾತು
ಹೊರಡಲಿಲ್ಲ. ಉಗುಳು ನುಂಗಿದ. ಮತ್ತೊಮ್ಮೆ ಬಾಯಿತೆರೆದು, ಪದಗಳನ್ನು
ರೂಪಿಸುತ್ತ ಹೊರಕ್ಕೆ ತಳ್ಳಿದ.
“ಅಬು ಯಾತ್ರೆಯಿಂದ...ವಾಪಸಾದ ರಾತ್ರೆ......ಮೆನೆಪ್ ಟಾಗೆ