ಈ ಪುಟವನ್ನು ಪ್ರಕಟಿಸಲಾಗಿದೆ

೬೪೬

ಮೃತ್ಯುಂಜಯ

ನೆಖೆನ್ ಲೇಪಿತ ಶವದ ಬಳಿ ಮಂಡಿಯೂರಿ ಶಿರಸ್ಸು, ಕಿವಿ, ಕಣ್ಣು,
ಮೂಗು, ಬಾಯಿ, ಕತ್ತು, ವಕ್ಷಸ್ಥಲ, ಬಾಹುಗಳು, ಹೊಟ್ಟೆ, ಕಟ, ತೊಡೆ,
ಮಣಿಗಂಟು ಮೊಣಕಾಲಿನ ಪಾದಗಳು ಎಲ್ಲವನ್ನೂ ತಡವಿ ನೋಡಿದ.
ಗೋರಿಯೊಳಗೆ ಕಳುಹಲು ಸಿದ್ದತೆಯೆಂದು ಮುಚ್ಚಳವಿಲ್ಲದ ಶವಪೆಟ್ಟಿಗೆ
ಯನ್ನು ಎದ್ದು ನಿಲ್ಲಿಸಿದರು. ಮೆನೆಸ್ಟಾ ಜೀವ ತಳೆದು ನಿಂತಂತೆ ಭಾಸ
ವಾಯಿತು. “ಓ ಮೆನೆಪ್‌ಟಾ ಓ ಮೆನೆಪ್‌ಟಾ !” ಎಂದರು ಜನ. ಶೋಕಾ
ಲಾಪನೆಯಲ್ಲಿ, ಜಯಕಾರ.
ಹುಡುಗ ಆಗಲೇ ತಂದಿದ್ದ ಕೊಳಲನ್ನು ಕೈಯಲ್ಲಿ ಹಿಡಿದುಕೊಂಡಿದ್ದ
ಬಟಾ ಮೆನ್ನನ ಬಳಿಗೆ ಬಂದು, “ ಮೆನ್ನಯ್ಯ, ನಾಯಕರಿಗೆ ಪ್ರಿಯವಾಗಿದ್ದ
ಒಂದು ಹಾಡು ಬಾರಿಸ್ತೇನೆ__ಆಮೇಲೆ__” ಎಂದ.
"ಹೂಂ ಅಣ್ಣ.”
'ಬೇಗ' ಎನ್ನುವ ಪದ ಚೈಮ್‌ಹೊಟೆಪನ ಗಂಟಲಿನಿಂದ ಹೊರಬರಲೇ ಇಲ್ಲ
ಕೊಳಲನ್ನು ಬಾಯಿಗಿರಿಸಿ, ಧ್ವನಿ ಹೊರಡಿಸಿ, ಸ್ವರಗಳನ್ನು ಪರೀಕ್ಷಿಸಿ
ಬಟಾ ಬಾರಿಸಿದ :
“ನನ್ನ ನಲ್ಲೆಯ ಒಲವು ನಲಿದಿದೆ
ನದಿಯ ತಟದಲ್ಲಿ
ಕ್ರೂರ ಮೊಸಳೆಯು ಅವಿತು ಕುಳಿತಿದೆ
ನೆರಳ ಮರೆಯಲ್ಲಿ
ಹೆದರೆ ನಾ ಬೆದರೆ ನಾ
ನೀರಿಗಿಳಿದು ಈಸುವೆ
ನದಿಯಲಿ ನಾ ಧೀರ ಬಲು ಧೀರ
ಪಾದಕದು ನೀರಲ್ಲ__ನೆಲ
ಅವಳೊಲವೇ ನನ್ನ ಬಲ
ನಲ್ಲೆಯ ಕಂಡರೆ ನನಗೆ ಮುದ
ಬರಸೆಳೆಯಲು ನಾ ಸಿದ್ದ