ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೫೧

ಒಂದೊಂದಾಗಿ ಎಳೆದು ತೆಗೆದ. ಗರಗರ ಸದ್ದು. ಕೊನೆಯ ಉಸಿರು. ಕಣ್ಣು
ಗಳಲ್ಲಿ ಮಾತ್ರ ತಿರಸ್ಕಾರ. ಬಕಿಲ ಆತನಿಗೆ ಒದೆದ.
ನುಟ್ಮೋಸ್ ಅಂದ :
"ಇನ್ನು ಉಳಿದವನು ಔಟ. ಅವನ ಕೆಳಗೂ ಐವತ್ತು ಯೋಧರು
ಇದ್ದಾರೆ. ಅನಂತರ ದಳಪತಿ. ಅವರು ಇಷ್ಟರಲ್ಲೇ ಬರಬಹುದು.”
ಬಕಿಲ ಯೋಧರಿಗೆ ಆಜ್ಞಾಪಿಸಿದ:
“ಸಾಲಾಗಿ ನಿಂತು ಸಿದ್ಧರಾಗಿ.”
ಕೊನೆಯ ದೊಣಿಯಲ್ಲಿದ್ದವರಿಗೆ ಅವನೆಂದ :
“ಹೇರು ಇಳಿಸಿ. ಕೈದಿಗಳಿಗೆ ಬಲೆ ಹೊದಿಸಿ. ಮಹಾ ಅರ್ಚಕರ
ಪೀಠ ಪಲ್ಲಕಿಯನ್ನು ಕಟ್ಟೆಯ ಮೇಲಿಡಿ. ದಕ್ಷಿಣ ದಿಕ್ಕಿನಿಂದ ಯಾರೂ ಓಡಿ
ಹೋಗದ ಹಾಗೆ ನೋಡೋದು ನಿಮ್ಮ ಜವಾಬ್ದಾರಿ.”
ದೇವತಾ ಮೂರ್ತಿಯ ಮರೆಯಲ್ಲಿದ್ದ ಹೇಪಾಟ್ ಈಗ ತುಸು ಎದುರಿಗೆ
ಬಂದ. ಅವನಿಗೆ ಅನಿಸಿತು : ಈ ಯುದ್ಧದ ಪರಿಶ್ರಮವನ್ನು ದಂಡನಾಯಕ
ರಿಗೆ ಬಿಡಬೇಕು. ಹಟಕ್ಕೋಸ್ಕರ ಬಂದದ್ದಾಯಿತು. ತಾನು ಎಂಥ ಧೀರ
ಎನ್ನುವುದು ಪೆರೋಗೆ ತಿಳಿಯಲಿ. ಧರ್ಮಗುರುವಿನ ಶಕ್ತಿ ಎಷ್ಟೆಂಬುದರ
ಅರಿವು ಆ ಅಮಾತ್ಯನಿಗೂ ಆಗಲಿ. ಆದರೆ ತಾನು ಜತನದಿಂದಿರಬೇಕು.
ಹಾಯಿಕಂಬಕ್ಕೆ ನೆಟ್ಟ ಬಾಣ ತಲೆಗೆ ತಗಲಿದ್ದರೊ ?
ಇನೇನಿ ಬಂದು ನಿವೇದಿಸಿದ :
“ಯಾವ ಭಯವೂ ಇಲ್ಲ. ಪ್ಟಾ ಮಹಾದೇವನೆದುರು ಎಲ್ಲ ಜನರೂ
ಮಂಡಿಯೂರ್ತಾರೆ. ತಾವು ಸ್ವಲ್ಪ ಹೊತ್ತು ಛಾವಣಿಯ ಮರೆಯಲ್ಲಿ
ವಿಶ್ರಾಂತಿ ಪಡೆಯುವುದು ಮೇಲು.”
ಇನೇನಿ ಹೇಳದೇ ಇದ್ದರೂ ಹೇಪಾಟ್ ಛಾವಣಿಯ ಒಳಗೆ ಆಶ್ರಯ
ಪಡೆಯುತ್ತಿದ್ದ. ಅವನೇ ನಿವೇದಿಸಿದ್ದರಿಂದ ಆಭಾಸವೆನಿಸುವುದು ತಪ್ಪಿತು.
ಹಿಂದಿನ ಸಲ ಬಕಿಲ ಬಂದಿದ್ದಾಗ ದೋಣಿಕಟ್ಟೆಯಲ್ಲಿ ಶಿಲಾಪೀಠವಿರಲಿಲ್ಲ.
ಆದರೆ ಮೇಲೆ ಲಾಂಛನ ಇರಲಿಲ್ಲ. ಅದನ್ನು ಮಹಾ ಅರ್ಚಕನಿಗೆ ಆತ ಅರಿಕೆ
ಮಾಡಿದ. ನುಟ್ಮೋಸ್ "ಇದು ಮೇರೆ ಇಲ್ಲದ ಅಹಂಕಾರ,” ಎಂದ