ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ . ಖೈಮ ಹೊಟೆಪ್ ಹೊಡೆದದ್ದು ಎಂಬುದನ್ನು ಅಳಿಸಲು ಬಕಿಲ ಆಜ್ಞೆ ಇತ್ತ, ಸಿಂಹದ ಹೆಸರು ಬಕಿಲನೇ, ಯಾಕಿರಬಾರದು ? ಉದ್ಯಾನ ದಿಂದ ಬಗೆ ಬಗೆಯ ಹೂಗಳನ್ನು ಕಿತ್ತು ತಂದು ಹಾರಕಟ್ಟ ಸಿಂಹದ ಕೊರಳಿಗೆ ಹಾಕಲು ಆದೇಶವಿತ್ತ. ಮೇಲುಮಾಲಿಗೆಯ ಮುಖಮಂಟಪದ ತೊಲೆಗೆ ತೂಗಿಕೊಂಡು ಜೇನು ಗಳು ಕಟ್ಟಿದತೊಟ್ಟ ಇಳಿಮುಖವಾಗಿ ದೊಡ್ಡದಾಗಿ ಬೆಳೆದಿತ್ತು.ಜೇನು ಹಿಂಡು ವುದರಲ್ಲಿ ನಿಷ್ಣಾತನಾದ ಯೋಧನೊಬ್ಬ; ಸಣ್ಣರಂಧ್ರದ ಬಲೆ ತಂದು ತೊಟ್ಟಿಗೆ ಸುತ್ತಿ, ಇಡೀ ತೊಟ್ಟಿಯನ್ನು ಕಿತ್ತು ತೆಗೆದು, ನೋಣಗಳನ್ನು ಸಾಯಿಸಿ ಜೇನನ್ನು ಹಿಂಡಿ, బిసి ಆರುವುದಕ್ಕೆ ಮುನ್ನವೆ ಬಟ್ಟಲಲ್ಲಿ ಬಕಿಲನಿಗೆ ತಂದು ಕೊಟ್ಟಿ, ಬಾಯಿ ಚಪ್ಪರಿಸುತ್ತ ಚಪ್ಪರಿಸುತ್ತ ಬಕಿಲ ಅದನ್ನು ಕುಡಿದ, ಬೇಗನೆ ಮತ್ತೇರಿತು .

  • * * * *

ಹೇಷಾಟ್ ತನ್ನ ಪರಿವಾರದೊಡನೆ ಮಂದಿರ ತಲಪುವ ವೇಳೆಗೆ ರಾ ಪಶ್ಚಿಮ ದಿಗಂತದಾಚೆಗೆ ಮರೆಯಾಗುವ ಸಿದ್ದತೆಯಲ್ಲಿದ್ದ.ಮಹಾ ಅರ್ಚಕ ಬೇಗನೆ ಪವಿತ್ರ ಕೊಳದಲ್ಲಿ ಮಿಂದು ಸಂಜೆಯ ಪ್ರಾರ್ಥನೆ ಸಲ್ಲಿಸಿ ರಾನನ್ನು ಬೀಳ್ಕೊಟ್ಟ. ಕಿರಿಯ ದೇವಸೇವಕರು ದುಡಿದರು, ಸೈನಿಕರು ನೆರವಾದರು. ರಾಜಗೃಹ ದಿಂದ ಎಣ್ಣೆ ಹೇರಳವಾಗಿ ಬಂತು. ದೀಪಾಲಂಕಾರದಿಂದ ದೇಗುಲ ಝಗ ಝಗಿಸಿತು. [ ಮಡಿದಿದ್ದ ಯೋಧರನ್ನಾಗಲೇ ಹಗ್ಗಕಟ್ಟ ಗೋರಿಪ್ರದೇಶಕ್ಕೆ ಎಳೆದು ಎಸೆದಿದ್ದರು -ತೋಳ ನರಿಗಳಿಗೆ ಆಹಾರವಾಗಲೆಂದು.. ] ಮೆನೆಪಟಾನ ಕಳೇಬರವನ್ನು ಹುಡುಕುತ್ತಿದ್ದವರಿಗೆ ಅಪೆಟ್ ಅಂದ : “ ನನ್ನನ್ನು ಬಂಧನದಲ್ಲಿರಿಸಿದ್ರಿಂದ ಏನೂ ತಿಳೀದೇ ಹೋಯಿತು ಗೋರಿ ಪ್ರದೇಶಕ್ಕಂತೂ ಅವರ ಮೆರವಣಿಗೆ ಬರಲಿಲ್ಲ. ಎಲ್ಲೋ ಕೇರಿ ಮಧ್ಯ ದಲ್ಲೇ ಮಾಡಿರಬೇಕು.”