ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೫೭

ಮುಂದೆ ಬಂದವನು ಸಂಭಾವಿತನಂತೆ ಕಂಡ. ಮುಂದೆ ಅಂದರೆ ನಾಲ್ಕು
ಹೆಜ್ಜೆ, ಅಷ್ಟೆ. ನಿಂತುದು ಅಂಗಳದಲ್ಲೇ.
ತಾನು ಮಾತನಾಡುತ್ತಿದ್ದಾಗ ಜನರೆಡೆಗೆ ಆಗಾಗ್ಗೆ ನೋಡುತ್ತಿದ್ದ
ಟೆಹುಟಿ ಈ ವ್ಯಕ್ತಿಯೇ ಆ ಜನರ ಮುಖಂಡನಿರಲೂ ಬಹುದು ಎಂದು ಊಹಿ
ಸಿದ್ದ. ಊಹೆ ನಿಜವಾಗಿತ್ತು. ಅವನು ನುಡಿದ :
"ಅಲ್ಲೇ ಯಾಕೆ ನಿಂತೆ ? ಒಳಗೆ ಬಾ."
ಸ್ನೊಫ್ರು, ಬಟಾ, ಸೆಬೆಕ್ಖು ಎಲ್ಲರೂ "ಒಳಗೆ ಹೋಗು ಮೆನೆಪ್ಟಾ,"
ಎಂದರು.
ಮೆನೆಪ್ಟಾ ನಸುನಕ್ಕು ಸಭಾಮಂದಿರವನ್ನು ಪ್ರವೇಶಿಸಿ, ವೇದಿಕೆಗೆ
ನಮಿಸಿ, ಹೊರಗಿನ ಸಂಗಡಿಗರೂ ಒಳಗಿನ ಅಧಿಕಾರಿಗಳೂ ತನಗೆ ಕಾಣಿಸುವ
ಕಡೆ ನಿಂತ.

****

ಮೆನೆಪ್ಟಾ ಬೆಳಗ್ಗೆ ಎದ್ದವನೇ ನೆಫಿಸ್ಗೆ ಹೇಳಿದ್ದ :
"ಕಂದಾಯ ಅಧಿಕಾರಿಗೆ ಮನವಿ ಸಲ್ಲಿಸೋದಕ್ಕೆ ಇವತ್ತು ರಾಜ
ಗೃಹಕ್ಕೆ ಹೋಗ್ಬೇಕು. ನಾನೇ ಮುಂದೆ ಇರ್ಬೇಕಂತೆ. 'ನೀನು ಯೋಚಿಸಿ
ಮಾತಾಡ್ತೀಯಾ, ಚೆನ್ನಾಗಿ ವಾದಿಸ್ತೀಯಾ' ಅಂದ ಸ್ನೊಫ್ರು."
ನೆಫಿಸ್ ಸುಮ್ಮನಿದ್ದಳು.
ತಂದೆ ಹೇಳಿದುದನ್ನು ಕೇಳಿಸಿಕೊಂಡ ರಾಮೆರಿಪ್ಟಾ, "ನಾನೂ
ಬರ್ತೇನೆ ಅಪ್ಪ," ಎಂದ.
"ನಾನೇನು ತಪ್ಪು ಮಾಡಿದ್ದೇನೆ ?"
___ಗೊಗ್ಗರ ಗಂಟಲಲ್ಲಿ ನೆಫಿಸ್ ಕೇಳಿದಳು.
ಮೆನೆಪ್ಟಾ ರಮಿಸುವ ಧ್ವನಿಯಲ್ಲಿ ಅಂದ:
"ಹೆಂಗಸರು ಯಾರೂ ರಾಜಗೃಹಕ್ಕೆ ಬರೋದು ಬೇಡ ಅನಿಸ್ತದೆ.
ಕಂದಾಯ ವಸೂಲಿ ನಡೀತಿರುವಾಗ ಮನೆಗೆ ಬೀಗ ಹಾಕ್ಬಾರ್ದು."
ನೆಫಿಸ್ ಮುಖ ಪಕ್ಕಕ್ಕೆ ಸರಿಸಿ ಬಿಕ್ಕಿದಳು. ರಾಮೆರಿಪ್ಟಾ ಅವಳ
ಮಗ್ಗುಲಿಗೆ ಧಾವಿಸಿದ.
"ಏನಾಯ್ತಮ್ಮ ?"