ಈ ಪುಟವನ್ನು ಪರಿಶೀಲಿಸಲಾಗಿದೆ

೬೯೪

ಮೃತ್ಯುಂಜಯ

ಆನಂದೋದ್ವೇಗದಿಂದ ಒದ್ದೆಯಾದ ಕಣ್ಣುಗಳನ್ನು ಸೆತ್ನಾ ಒರೆಸಿ
ಕೊಂಡ,
“ಒಂದು ತಿಂಗಳಾಯ್ತು ಊರು ಬಿಟ್ಟು, ಭಿಕ್ಷೆ ಬೇಡಲಿಲ್ಲ. ಅಲ್ಲಿ ಇಲ್ಲಿ
ಸಣ್ಣ ಪುಟ್ಟ ಕೆಲಸ ಮಾಡ್ಕೊಟ್ಟು ರೊಟ್ಟಿ ಸಂಪಾದಿಸ್ತಾ ಸೈನೆ ತಲಪಿದೆ.
ನೀರಾನೆ ಪ್ರಾಂತದವನೂ೦ತ ಯಾರಿಗೂ ಹೇಳಲಿಲ್ಲ. ನಮ್ಮಲ್ಲಿ ನಡೆದದ್ದು
ಐಗುಪ್ತದಲ್ಲಿ ಈಗ ಎಲ್ಲರಿಗೂ ಗೊತ್ತು. ಒಂದು ರಾತ್ರೆ ದೋಣಿಕಾರರ ಜತೆ
ಮಾತಾಡ್ತಿದ್ದಾಗ, ಎಡ ಕಾಲುವೇಲಿ ಒಂದು ಹಳ್ಳಿಲಿ ಯಾವುದೋ ಪರದೇಶಿ
ಕುಟುಂಬ ಒಂದು ದೋಣಿ ಕೊಟ್ಟು ಎರಡು ಕತ್ತೆ ಕೊಡೂಂತ ತಿಳೀತು.
ಮರದ ಸೂಕ್ಷಬಿಟ್ಟು ಇನ್ನೇನು ಗೊತ್ತಾಗದೆ, ನನ್ನ ಈ ತಲೆಗೆ ? ಆದರೂ
ಯೋಜೆ ಮಾಡಿ, ಆ ಕುಟುಂಬ ನಮ್ಮ ಕಡೇದೇ ಇರಬೇಕು ಅನ್ನೋ
ತೀರ್ಮಾನಕ್ಕೆ ಬಂದೆ. ಆ ದಾರಿ ಹಿಡ್ಡೆ. ದಾರಿ ತಪ್ಪು. ಆದರೂ ಬಿಡಲಿಲ್ಲ.
ಸಿಕ್ಕಿದ್ರೆ. ದೇವಾದಿಗಳಿಗೆಲ್ಲ ನಾನು ಧನ್ಯವಾದ ಅರ್ಪಿಸ್ಟೇಕು.”
"ಖಿವನ ಹರಿಸದೆ ಅದೆಂಥ ಧನ್ಯವಾದ ? ಆದರೆ ಅದಕ್ಕೆ ಆರು ತಿಂಗ,
ಳಾದರೂ ಕಾಯ್ಕೆಕು. ಬೀಜ ಬಿತ್ತಿ, ಯವ ಬೆಳೆಸಿ, ಧಾನ್ಯ ಅರೆದು,
ಭಟ್ಟಿ ಇಳಿಸಬೇಕಲ್ಲ !” ಎಂದ ಬಟಾ.
ರಾಮೆರಿಪ್ಟಾನೆಂದ :
"ಅಷ್ಟು ಹೊತ್ತಿಗೆ ಬಿವನದ ರುಚಿಯೇ ಮರೆತು ಹೋಗ್ಯದೆ ಬಟಾ
ಮಾವನಿಗೆ !”
"ನೀನಿದೀಯಲ್ಲ ಅಳಿಯ__ಶುರು ಮಾಡುವೆಯಂತೆ.” ಆಡಿ
ನೆಜಮುಟ್ ಕೇಳಿದಳು :

  • **

“ಊರಿನ ಕಥೆ ಹೇಳು.”
ಮಹಾ ಅರ್ಚಕನ ಆಜ್ಞೆಯಂತೆ ಬಕಿಲ ಒಟ್ಟು ಹತ್ತು ಸಹಸ್ರ ಜನರನ್ನು
ಸೆರೆಹಿಡಿದ. ಕಣ್ಣಿಗೆ ಬಿದ್ದ ದೋಣಿಗಳನ್ನೆಲ್ಲ ವಶಪಡಿಸಿಕೊಂಡು ಅವುಗಳಲ್ಲಿ
ಬಂದಿಗಳನ್ನು ಮೆಂಫಿಸಿಗೆ ಸಾಗಿಸಿದ್ರು. ಇವರಲ್ಲಿ ಎರಡು ಸಹಸ್ರ ಮಕ್ಕಳು.