ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ೭೩

ತನ್ನ ದೃಷ್ಟಿಯನ್ನು ಕದಲಿಸಲಿಲ್ಲ. ಸಿನ್ಯುಹೆ ಅವರೆಲ್ಲರ ಮುಖ ನೋಡಿದ. ಉಳಿದವರು ಬಕಿಲನ ಚಲನ ವಲನಗಳನ್ನು ದಿಟ್ಟಿಸಿದರು.

  • * * *

ಮಹಡಿಯ ಮೇಲಿದ್ದ ಟೆಹುಟಿ ಜಲಬಾಧೆ ತೀರಿಸಿಕೊಂಡು ಬಂದ. (ಗೇಬುವೂ ಅವನನ್ನು ಅನುಕರಿಸಿದ.) ಆತ ಮಹಡಿಯ ಬಾಗಿಲಿ೦ದ ಹೊರಬಿದ್ದು, ಮುಖಮ೦ಟಪದಲ್ಲಿ ನಿ೦ತ. ಹೊರಗೆ ಬಿಸಿಲಿನ ಪ್ರಖರತೆ ಕಡಿಮೆಯಾಗಿರಲಿಲ್ಲ. ಕುಯಿಲು ಮುಗಿದ ಹೊಲ ಗಳು ಭಣಗುಡುತ್ತಿದ್ಡುವು. ಊರು ಕುದಿಯುತ್ತಿತ್ತು. (ಎಲ್ಲಿರಬಹುದು, ಚೆದರಿದ ಜನ?) ರಾಜಗೃಹದವರೆಗಿನ ಬೀದಿಯಲ್ಲಿ ಜನ ಹೋಗುತ್ತಿದ್ದರು, ಬರುತ್ತಿದರು. (ಅವರನ್ನೆಲ್ಲ ಬಾಗಿಲ ಕಿ೦ಡಿಯಿ೦ದ ನೋಡುತ್ತಲಿದ್ದ ಬಕಿಲನ ಬೆನ್ನು ಟೆಹುಟಿಗೆ ಕಾಣಿಸುತ್ತಿತ್ತು.) ಕೆಲ ತಾಳೆ ಮರಗಳ ಕೆಳಗೆ ಬಡಜನರು ಗು೦ಪು ಕೂಡಿದ್ದರು. ತಾನು ಚೆನ್ನಾಗಿ ಮಾತನಾಡಿದೆ, ಪರಿಣಾಮಕಾರಿ ಯಾಗಿ. ఆ ಮುಖ೦ಡ ಬಾಯಿ ಬಿಡದೇ ಇದ್ದಿದ್ದರೆ, ಎಲ್ಲ ಸುಸೂತ್ರವಾಗಿ ನಡೆದು ಹೋಗುತ್ತಿತ್ತು. ಕಂದಾಯ ವಸೂಲಿ ಕೂಡಾ. ಈಗಾದರೂ ಏನಾಯಿತು? ಹೆದರಿರಬೇಕು ಆ ಜನ. ಹೆದರಿಲ್ಲವಾದರೆ ಇನ್ನಷ್ಟು ಚುರುಕು ಮುಟ್ಟಿಸಿದರಾಯಿತು. ಬೇಸರವೆನಿಸಿ ಟಿಹುಟಿ ನಿಟ್ಟುಸಿರು ಬಿಟ್ಟ. ಅವನಿಗೆ ಸ್ಪಷ್ಟವಾಗಿತ್ತು. ಗೇಬುವಿನ ಆಡಳಿತ ಶಿಥಿಲವಾದುದೇ ಇಲ್ಲಿನ ವಿಕ್ಷಿಪ್ತ ಪರಿಸ್ಥಿತಿಗೆ ಕಾರಣ....... ಗೇಬುವನ್ನು ದೂರುವುದೇನೋ ಸರಿ. ಆದರೆ, ವಾಸ್ತವವಾಗಿ, ಇದು ರಾಜ ಧಾನಿಯಲ್ಲಿ ಕಂಡು ಬರುತ್ತಿರುವ ಶೈಥಿಲ್ಯದ ಪಡಿನೆಳಲೇ ಅಲ್ಲವೆ? ದೃಷ್ಟಿ ಎಡಕ್ಕೆ ಹೊರಳಿತು, ದೂರಕ್ಕೆ. ಅಲ್ಲಿ ಕಾಣಿಸಿತು. ನದಿಯ ನೀಲ ಜಲ. ದಂಡೆಯಾಚೆಗೆ, ಹೊಲಗಳ ಆ ಕಡೆ, ದೃಷ್ಟಿ ಚಾಚುವ ವರೆಗೂ ಮರಳ ರಾಶಿ. ಈತನನ್ನು __ಮೆನೆಪ್‌‍ಟಾ ಅಲ್ಲವೆ ಹೆಸರು?__ ಬಂಧನದಲ್ಲಿಟ್ಟು ಕಂದಾಯ ವಸೂಲಿ ನಡೆಸಬೇಕು. ಇವತ್ತಿನ ಮಟ್ಟಿಗೆ ವಸೂಲಿಯನ್ನು ಮುಂದಕ್ಕೆ ಹಾಕಿದರೆ? ಹಾಕುವುದೇ ಲೇಸು. ಇಡೀ ರಾತ್ರೆ ಕೈದಿಯನ್ನು