ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ತಿಂಡಿ. ಬರಿದಾದಂತೆ,ದಾಸಿಯರು ಓಂದು ತಂಡ ತಟ್ಟೆಗಳನ್ನು ಅವರಿಂದ ಪಡೆದುಕೊಂಡಿತು. ಇನ್ನೊಂದು ತಂಡ, ಮತ್ತೆ ತುಂಬಿದ ತಟ್ಟೆಗಳನ್ನು ತಂದಿತು. ಬರಿದು ಬಟ್ಟಲುಗಳಿಗೆ ಮತ್ತೆ ಪೇಯ. ದಾಸಿಯರ ಅಂಗಾಂಗಗಳ ಮೇಲೆ ನಿರ್ಲಿಪ್ತ ನೋಟ ಬೀರುತ್ತ ಟೆಹುಟ ಮೌನವಾಗಿದ್ದ. (ರಾತ್ರೆ ಊಟದ ವೇಳೆ ಮುಖ ತೋರಿಸಿ ಮಾಯವಾಗಿದ್ದಳು ದಾಸಿ, ಸುಂದರಿ, ಇವತ್ತು ಅವಳು ಹೊರಗೆ ಬಂದೇ ಇಲ್ಲ.) ಗೇಬುವಿಗೆ ಮಾತನಾಡುವ ಧೆ ರ್ಯವಾಗಲಿಲ್ಲ. ಉಳಿದವರೂ ಏನನ್ನೂ ಹೇಳಲಿಲ್ಲ. ಉಪಾಹಾರ ಮುಗಿದು ಎರಡನೆಯ ಬಾರಿ ಸುರೆ ಹೀರುತ್ತ ಟೆಹುಟ ಕೇಳಿದ: " ఎల్లి ನಿಮ್ಮ ದೇವಸೇವಕ  ? ಕಾಣಿಸಲೇ ఇల్ల." ಸಿನುಹೆ ಉದ್ವೇಗದ ಧ್ವನಿಯಲ್ಲಿ ಗಟ್ಟಿಯಾಗಿ ಅಂದ : (ನನ್ನ, ಮನೇಲಿದ್ದಾರೆ. ನನ್ನ ಹೆಂಡತಿಗೆ ಸಕತ್ ಕಾಯಿಲೆ." ಹೆಂಡತಿಗೆ ಸಕತ್ ಕಾಯಿಲೆಯಾದರೂ ಭೇಟಿಗೆ ಬಂದಿರಲ್ಲ ! ನಿಮ್ಮ ನಿಷ್ಠೆಗೆ ಮೆಚ್ಚಿದೆ ." ಸಿನ್ಯುಹೆ ಹಲ್ಲು ಗಿಂಜಿದ.ಪ್ರಶಂಸೆ ಹಿತಕಾರವಾಗಿತ್ತು.ಆದರೆ ಓಳ ಗೇನೋ ಕುಟುಕಿತು ಮನೆಯಲ್ಲಿ ಹೆಂಡತಿಯ ಅವಸ್ಥೆ ಏನಾಗಿದಿಯೋ? ಟಿಹುಟಿ ತಿನಿಯುವ ನೋಟದಿಂದ ಗೇಬುವನ್ನು.ನೋಡಿ ಗುಡುಗಿದ : ರಾಜಗೃಹದ ಶಸ್ಲಾಗಾರದಲ್ಲಿ ಬಿಲ್ಲು ಬಾಣ ಇಲ್ಲ ?” ಇವೆಯಲ್ಲ?" ಎಂದ ಗೇಬು. ಹಾಗಾದರೆ ನಿಮ್ಮ ಕಾವಲು ಭಟರನ್ನು ಯಾಕೆ ಸಜ್ಜು ಗೊಳಿಸಿಲ್ಲ?" “ ಕ್ಷಮಿಸಿ. ನಮ್ಮಲ್ಲಿ ಬಿಲಾಳುಗಳ ತುಕಡಿ ಇಲ್ಲ, ನಿಮಗೆ ಗೊತ್ತಿದೆ. ದಂಡು ಇರೋದು ರಾಜಧಾನಿಯಲ್ಲಿ, ನಾವು ಬಿಲ್ಲು ಬಾಣ ಬಳಸೋದು ಬೇಟೆಯ ಸಂದರ್ಭಗಳಲ್ಲಿ ಮಾತ್ರ.” ಗೇಬುವಿನ ಧ್ವನಿಯೂ ಸಾಕಷ್ಟು ಗಟ್ಟಿಯಾಗಿತ್ತು. ಆ ದಿನ ನಡೆದು ದಕ್ಕೆಲ್ಲ ತಾನೇ ಹೊಣೆಗಾರ ಎಂದು ಒಪ್ಪಲು ಅವನು ಸಿದ್ಧನಿರಲಿಲ್ಲ.