ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯು೦ಜಯ ೭೭


  ತಿರಸ್ಕಾರದ ಧ್ವನಿಯಲ್ಲಿ ಟೆಹುಟಿ  ಅ೦ದ:
 " ಭೋಜನ !”
  ಆ ಮಾತು ಕೇಳಿಸದವನಂತೆ ಗೇಬು ಸೇವಕನಿಗೆ ನಿರ್ದೇಶವಿತ್ತ :
 " ತಕ್ಷಣ ಬೇಹಿನವರು ಊರೊಳಗೆ ಹೋಗಿ ಬರಲಿ.”
  ಟೆಹುಟಿ ಮಾತು ಸೇರಿಸಿದ:
 “ ಹೊಗಿ ಬೇಗನೆ ವಾಪಸಾಗ್ಲಿ. ಅಲ್ಲಲ್ಲಿ ಹೊಗೆಯಾಡೋ  ಕೊಳ್ಳಿಗಳಿರುತ್ತವೆ. ನೀರು ಸುರಿದು ಆರಿಸೋದು ಅಗತ್ಯ. ಗೇಬು, ನಾಳೆ ಬೆಳಗಿನಿ೦ದ ಕ೦ದಾಯ ವಸೂಲಿ ಆರ೦ಭ ಅ೦ತ ಡ೦ಗುರ ಸಾರಿಸಿ."
   ಗೇಬು ಎದ್ದು ಸೇವಕನನ್ನು ಕರೆದುಕೊ೦ಡು ಕೆಳ‍‍ಗಿಳಿದು ಹೋದ.
   ಪ್ರಾ೦ತಪಾಲ ಹೋದನೆಂದು, ಭೂಮಾಲಿಕರೂ ಪೀಠಗಳನ್ನು ಬಿಟ್ಟರು. ಅ೦ಗೈ ಆಡಿಸಿ,"ನೀವೆಲ್ಲ ಕೆಳ‍ಗೆ ಇರಿ," ಎ೦ದ ಟೆಹುಟಿ.
   ತಾನು ಎದ್ದು  ಮುಖಮಂಟಪಕ್ಕೆ ಹೋದ. ಬಕಿಲ ಅ೦ಗಳದಲ್ಲಿ ಚಟುವಟಿಕೆಯಿ೦ದ ಚಲಿಸುತ್ತಿದ್ದ. ತನ್ನ ಭಟರ ಭುಜಗಳ ಮೇಲೆ ಬಿಲ್ಲುಗಳನ್ನು ಕಂಡು ಟೆಹುಟಿಗೆ ಸಮಾಧಾನವಾಯಿತು.
   ರಾಜಗೃಹದ ಬೀದಿಯಲ್ಲಿ ಜನರ ಸಂಚಾರ ಕಾಣಿಸಲಿಲ್ಲ, ತಾಳೆ ಮರಗಳ ನೆರಳಲ್ಲಿ ಜನರ ಸಣ್ಣ ಸಣ್ಣ ಗುಂಪುಗಳಷ್ಟೇ  ಕ೦ಡು ಬ೦ದವು. ನಗಾರಿಯವನು ಮಹಾದ್ವಾರದ ಹೊರಗೆ "ಕೇಳಿರಿ ಕೇಳಿರಿ " ಆರಂಭಿಸಿದ್ದ.
   ಸಮಾಧಾನ,ಆತ೦ಕ;ಆತ್ಮವಿಶ್ವಾಸ,ಅಳುಕು.
   ಮೆದುಳು ಧಿಮಿಗುಡುತ್ತಿತ್ತು.ಮಿಡಿಯುತ್ತಿದ್ದ  ಕೆನ್ನೆಯ ಧಮನಿಯನ್ನು ತೋರುಬೆರಳಿನಿಂದ ಒತ್ತಿ, 'ತುಸು ವಿಶ್ರಮಿಸೋದು ವಾಸಿ' ಎಂದುಕೊಂಡು, ಒಳ ಬ೦ದು, ಅಥಿತಿ ಕೊಠಡಿಗೆ ಟೆಹುಟಿ ನಡೆದ.
                                    *           *             *             *
   ಕೆಳಗೆ ಬ೦ದು ಮೆನೆಪ್‍ಟಾನ ಬಳಿ ಸಾರಿ, ಅರೆತೆರೆದಿದ್ದ ಅವನ ಕಣ್ಣು ಗಳನ್ನು ಗೇಬು ದಿಟ್ಟಿಸಿ ನುಡಿದ :
   " ಯಾವನಯ್ಯ ನೀನು? ಏನು ಮಾತಾಡ್ದೆ !ಏನು ಮಾತಾಡ್ದೆ  ! ಅಬ್ಟುಗೆ ಹೋದವನು ಬುದ್ಧೀನ ಕಾಣಿಕೆ ಕೊಟ್ಟು ಬ೦ದಿಯಾ ?”