ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ರವರೂಪ ಲೋಹದ ಒತ್ತಡದ ಪ್ರಭಾವದಿಂದ ಮೇಲಿನ ಪೆಟ್ಟಿಗೆ ಅದರ ಜಾಗದಿಂದ ಸರಿಯುವುದನ್ನು ತಪ್ಪಿಸುವುದಕ್ಕಾಗಿ, ಅದರ ಮೇಲೆ ಭಾರ ಹೊರಿಸಬೇಕು. ಇದಾದ ಅನಂತರ ಅಚ್ಚು ಎರಕ ಹೊಯ್ಯಲು ಸಿದ್ಧವಾಗುತ್ತದೆ. ಅಚ್ಚು ಹಾಕಲು ಉಪಯೋಗಿಸುವ ಮರಳು ವಿಶೇಷ ಬಗೆಯದಾಗಿರುತ್ತದೆ. ಅದರಲ್ಲಿ ಮುಖ್ಯವಾಗಿ ನದೀ ಮರಳು, ಜೇಡಿಮಣ್ಣು ಮತ್ತು ನೀರು ಇರುತ್ತವೆ. ಈ ಮರಳಿಗೆ ಶಾಖ ಮತ್ತು ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯಿದೆ. ಅಲ್ಲದೆ ನದೀ ಮರಳಿನ ಕಣಗಳನ್ನು ಒಂದಕ್ಕೊಂದು ಅಂಟಿಸಿ, ಘಟ್ಟಿಸಿದಾಗ ಯಾವ ರೂಪದಲ್ಲಾದರೂ ನಿಲ್ಲುವ ಗುಣವನ್ನು ಮರಳಿಗೆ ಕೊಡುವ ಶಕ್ತಿಯೂ ಇದೆ. ಮಣ್ಣಿನ ಅಂಟುಗುಣ ಕಾರ್ಯರೂಪಕ್ಕೆ ಬರುವುದು ನೀರು ಸೇರಿದಾಗ ಮಾತ್ರ. ಆದರೆ ನೀರು ಹೆಚ್ಚಾದರೆ ಎರಕದಲ್ಲಿ ದೋಷಗಳುಂಟಾಗುತ್ತವೆ. ಅತಿಸೂಕ್ಷ್ಮವಾದ ವಸ್ತುಗಳನ್ನು ಎರಕ ಹೊಯ್ಯಲು ಮತ್ತು ಎರಕದ ಮೈ ಬಹಳ ನುಣುಪಾಗಿರಬೇಕಾದ ಮರಳಿಗೆ ಬದಲು ಬೇರೆ ವಸ್ತುಗಳನ್ನು ಎರಕ ಹೊಯ್ಯಲು ಉಪಯೋಗಿ ಸುತ್ತಾರೆ. ಷೆಲ್ ಎರಕದಲ್ಲಿ (ಷೆಲ್ ಮೌಲ್ಡಿಂಗ್) ರಾಳಗಳನ್ನು, ಲಾಸ್ಟ್‍ವ್ಯಾಕ್ಸ್ ವಿಧಾನದಲ್ಲಿ ಮೇಣವನ್ನು, ಪ್ಲಾಸ್ಟರ್ ಎರಕದಲ್ಲಿ ಪ್ಲಾಸ್ಟರ್ ಆಫ಼್ ಪ್ಯಾರಿಸ್ಸನ್ನು ಮತ್ತು ಛಾಪ ಎರಕದ ಪದ್ಧತಿಯಲ್ಲಿ (ಡೈಕ್ಯಾಸ್ಟಿಂಗ್) ಲೋಹದ ಅಚ್ಚುಗಳನ್ನೂ ಉಪಯೋಗಿಸುತ್ತಾರೆ. (ವೈ.ವಿ.ಆರ್.) ಅಚ್ಚುಕೂಟ : ನೋಡಿ - ಮುದ್ರಣಾಲಯ ಅಚ್ಚುಮೊಳೆ : ಯಾವುದೇ ಭಾಷೆಯ ಅಕ್ಷರ, ಅಂಕಿ, ಸಂಕೇತ ಗಳನ್ನು ಕಾಗದದ ಮೇಲೆ ಮುದ್ರಿಸಲು ವಿಶೇಷ ರೀತಿಯಲ್ಲಿ ತಯಾರಿಸ ಲಾಗಿರುವ ಮೊಳೆಗಳಿಗೆ ಈ ಹೆಸರಿದೆ. ಇವನ್ನು ತಯಾರಿಸಲು ಪ್ರತಿ ಅಕ್ಷರ ಅಥವಾ ಚಿಹ್ನೆಗೂ ಪ್ರತ್ಯೇಕ ಮಾತೃಕೆಯನ್ನು (ಮ್ಯಾಟ್ರಿಕ್ಸ್) ಮೊದಲು ತಯಾರಿಸಿಕೊಂಡು ಅನಂತರ ಸೀಸ, ತವರ ಮತ್ತು ಆಂಟಿಮೊನಿ ಲೋಹಗಳಿಂದ ಸೂಕ್ತ ಮಿಶ್ರಣವನ್ನು ತಯಾರಿಸಿ ಮಾತೃಕೆಗಳಲ್ಲಿ ತುಂಬಿ ಮೊಳೆಯನ್ನು ಎರಕ ಹೊಯ್ಯುವರು. ಕೆಲವು ವೇಳೆ ಈ ಮಿಶ್ರ ಲೋಹದಲ್ಲಿ ತಾಮ್ರ ಮತ್ತು ನಿಕ್ಕಲ್‍ಗಳೂ ಸೇರಿರುತ್ತವೆ. ಅಚ್ಚುಮೊಳೆಗಳು ಸಮಕೋನಾಕಾರದಲ್ಲಿದ್ದು, 23317ಮಿಮೀ ಎತ್ತರ ಇರುತ್ತದೆ. ಇವುಗಳ ಅಗಲ ಮತ್ತು ದಪ್ಪವನ್ನು ಅಂತಾರಾಷ್ಟ್ರೀಯ ಮುದ್ರಣ ಸಂಘದ ನಿಯಮವನ್ನನುಸರಿಸಿ ನಿಗದಿ ಮಾಡಲಾಗಿದೆ. (ನೋಡಿ- ಮುದ್ರಣ ಕಲೆ) (ಎಂ.ಎ.ಎಸ್.) ಅಚ್ಚುಮೊಳೆ ಎರಕಹೊಯ್ಯುವ ಯಂತ್ರಗಳು : ಪೂರ್ವಕಾಲದಲ್ಲಿ ಬಿಡಿ ಅಚ್ಚುಮೊಳೆಗಳನ್ನು ತಯಾರಿಸಲು ಕೈಯಿಂದಲೇ ಆಯಾ ಮಾತೃಕೆಯನ್ನು ಒಂದು ಗೊತ್ತಾದ ಅಳತೆಯ ಆಕಾರದ ಮೂಸೆಗೆ (ಮೌಲ್ಡ್) ಜೋಡಿಸಿ ಕಾದ ಸೀಸವನ್ನು ಹೊಯ್ದು ದಿನಕ್ಕೆ 10-12 ಪೌಂಡುಗಳಷ್ಟನ್ನು ತಯಾರಿಸುತ್ತಿದ್ದರು. ಈಗ ಅನೇಕ ಸಂಸ್ಥೆಯವರು ಪ್ರತಿ ಅಚ್ಚುಮೊಳೆಗೆ ವಿಶೇಷ ರೀತಿಯ ಮಾತೃಕೆಯನ್ನು ತಯಾರಿಸಿ ತಮ್ಮ ಸಂಸ್ಥೆಯಲ್ಲಿ ನಿರ್ಮಿಸಲ್ಪಟ್ಟ ಎರಕ ಹೊಯ್ಯುವ ಯಂತ್ರದಲ್ಲಿ ಗಂಟೆಗೆ 8-10 ಪೌಂಡುಗಳಷ್ಟು ತಯಾರಿಸು ತ್ತಾರೆ. ಥಾಮ್‍ಸನ್ ಕಂಪನಿ, ಮಾನೋಟೈಪ್ ಸಂಸ್ಥೆಯವರ ಸೂಪರ್ ಕ್ಯಾಸ್ಟರ್ ಯಂತ್ರದಲ್ಲಿ ಟೈಪುಗಳಲ್ಲದೆ, ಅಚ್ಚುಮೊಳೆ ಜೋಡಣೆಗೆ (ಕಂಪೋಸಿಂಗ್) ಬೇಕಾಗುವ ಅನೇಕ ಸಾಮಗ್ರಿಗಳನ್ನೂ ತಯಾರಿಸಲು ಸಾಧ್ಯ. (ಎಂ.ಎ.ಎಸ್.) ಅಚ್ಚುಮೊಳೆಗಳ ಸಂಯೋಜಕ : ಬಿಡಿ ಅಚ್ಚಿನ ಮೊಳೆಗಳನ್ನು ಆವಶ್ಯಕತೆಗನುಗುಣ ವಾಗಿ ಅಳತೆಯ ಕ್ರಮಾನುಸಾರ ಒಂದೊಂದು ಪದವಾಗಿ ಜೋಡಿಸಿ ಅವುಗಳನ್ನು ಪ್ರತ್ಯೇಕ ಪುಟಗಳಾಗುವಂತೆ ವಿಭಾಗಿಸಿ ವಿನ್ಯಾಸಗೊಳಿಸುವ ಕುಶಲ ಕೆಲಸಗಾರ, ಕೈ ಬರೆಹದ ಪ್ರತಿಯ ಆಧಾರದ ಮೇಲೆ ಅಚ್ಚಿನ ಪುಟವನ್ನು ಸಿದ್ಧಗೊಳಿಸುವವನು. ಒಂದೊಂದು ಭಾಷೆಯಲ್ಲಿಯೂ ಮುದ್ರಣಕ್ಕೆ ಆವಶ್ಯಕವಾದ ಅಚ್ಚುಮೊಳೆಗಳ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ. ಇಂಗ್ಲಿಷ್ ಮುದ್ರಣಕ್ಕೆ ಸುಮಾರು 154 ತರಹದ ಮೊಳೆಗಳು ರೋಮನ್ ಲಿಪಿಯಲ್ಲಿಯೂ 90 ತರಹದ ಮೊಳೆಗಳು ಓರೆ (ಇಟಾಲಿಕ್) ಲಿಪಿಯಲ್ಲಿಯೂ ಬೇಕಾಗುತ್ತವೆ. ಹಾಗೆಯೇ ಕನ್ನಡ ಮುದ್ರಣಕ್ಕೆ ಸುಮಾರು 255 ಮೊಳೆಗಳು ಬೇಕು. ದೇವನಾಗಿರಿ ಲಿಪಿಯಲ್ಲಿ ಮುದ್ರಿಸುವುದಕ್ಕೆ 338 ಮೊಳೆಗಳು ಬೇಕಾಗುತ್ತವೆ. ಒಂದೊಂದು ಭಾಷೆಯ ಮುದ್ರಣಕ್ಕೆ ಬೇಕಾಗುವ ಅಚ್ಚುಮೊಳೆಗಳನ್ನು ಅನೇಕ ಖಾನೆಗಳುಳ್ಳ ಎರಡು ಮರದ ತಟ್ಟೆ (ಟೈಪ್ ಕೇಸ್) ಗಳಲ್ಲಿ ತುಂಬಿಡಬೇಕು. ಇದರಲ್ಲಿಯೂ ಹೆಚ್ಚಾಗಿ ಬಳಕೆಯಲ್ಲಿರುವ ಅಚ್ಚುಮೊಳೆಗಳನ್ನು ಅಚ್ಚುಮೊಳೆ ಸಂಯೋಜಕನ ಕೈಗೆ ಹತ್ತಿರವಿರುವಂತೆ ಮರದ ತಟ್ಟೆಯ ಮಧ್ಯದಲ್ಲಿಯೂ ಕಡಿಮೆ ಬಳಕೆಯಲ್ಲಿರುವ ಅಚ್ಚು ಮೊಳೆಗಳನ್ನು ತಟ್ಟೆಯ ಅಂಚಿನಲ್ಲಿರುವ ಖಾನೆಗಳಲ್ಲಿಯೂ ಇಡಬೇಕು. ತಟ್ಟೆಗಳನ್ನು ಸುಮಾರು 31/2 |-4' ಎತ್ತರದ ಮರದ ಚೌಕಟ್ಟಿನ (ಫ್ರೇಮ್) ಮೇಲೆ ಇಡಬೇಕು. ಕೆಳಗಿನ ತಟ್ಟೆಯನ್ನು (ಲೋಯರ್ ಕೇಸ್) ಸಮತಳವಾಗಿಯೂ ಮೇಲಿನ ತಟ್ಟೆಯನ್ನು (ಅಪ್ಪರ್ ಕೇಸ್) ಸ್ವಲ್ಪ ಇಳಿಜಾರಾಗಿಯೂ ಇಡಬೇಕು. ಸಂಯೋಜಕ