ಈ ಪುಟವನ್ನು ಪರಿಶೀಲಿಸಲಾಗಿದೆ

ಅದಿರು ೨೫೫

ಅದಿರು ನಿಕ್ಷೇಪಗಳಲ್ಲಿ ಇರಬಹುದಾದ ಹೆಚ್ಚು ಅನುಪಯುಕ್ತ ಶಿಲಾ ಮಿಶ್ರಣಗಳಿಂದಾಗಿ ಅಥವಾ ಉಪಯುಕ್ತ ಖನಿಜಗಳು ಕಡಿಮೆ ಪ್ರಮಾಣದಲ್ಲಿ ಇದ್ದಾಗ,ಅಂತಹ ಕೆಲವು ಅದಿರು ನಿಕ್ಷೇಪಗಳು,ಸದ್ಯದ ಮಾರುಕಟ್ಟೆಯಲ್ಲಿ ಆರ್ಥಕವಾಗಿ ಲಾಭ ಗಳಿಸಲಾಗದ ಗುಣಮಟ್ಟದಲ್ಲಿ ಇದ್ದರೆ,ಅವುಗಳನ್ನು ಪ್ರೋಟೋರ್ ಎನ್ನುತ್ತಾರೆ. 
     ಒಟ್ಟಾರೆ,ನ್ಯೆಸರ್ಗಿಕವಾಗಿ ದೊರೆಯುವ, ಆರ್ಥಿಕವಾಗಿ ಉಪಯುಕ್ತವಾದ ಎಲ್ಲ ಖನಿಜಗಳನ್ನು ಅದಿರು ಎಂದು ಕರೆಯಬಹುದು.ಇವುಗಳನ್ನು ಅವುಗಳ ಉಪಯೋಗಗಳ ಮೇಲೆ ಈ ಕೆಳಕಂಡಂತೆ ವರ್ಗಿಕರಿಸಬಹುದು:
 ೧. ಲೋಹ ಖನಿಜಗಳು 
     ಅ)ಕಬ್ಬಿಣ ಲೋಹವುಳ್ಳ ಖನಿಜಗಳು. ಉದಾ: ಕಬ್ಬಿಣದ ಅದಿರು
     ಆ)ಕಬ್ಬಿಣ-ಮಿಶ್ರಲೋಹವುಳ್ಳ ಖನಿಜಗಳು. ಉದಾ:  ಮ್ಯಾಂಗನೀಸ್, ವೆನೇಡಿಯಂ,ಕ್ರೋಮಿಯಂ,ಟಂಗ್‍ಸ್ಟನ್ ಇತ್ಯಾದಿ
     ಇ)ಕಬ್ಬಿಣವಿಲ್ಲದ ಲೋಹ  ಖನಿಜಗಳು. ಉದಾ:ತಾಮ್ರ,ಬಾಕ್ಸೈಟ್,ಸತು,ತವರ,ಸೀಸ 
     ಈ)ಅಮೂಲ್ಯ ಲೋಹದ ಖನಿಜಗಳು. ಉದಾ: ಚಿನ್ನ ಮತ್ತು ಪ್ಲಾಟಿನಂ 
 ೨. ಅಲೋಹ ಖನಿಜಗಳು 
     ಅ)ರಾಸಾಯನಿಕ ಖನಿಜಗಳು: ಉದಾ: ಸಲ್ಪುರ್,ನೈಟ್ರೆಟ್,ಪೊಟ್ಯಾಷ್,ಪಾಸ್ಫಟ್,ಉಪ್ಪು
     ಆ)ಕಟ್ಟಡ ನಿರ್ಮಾಣದ ಖನಿಜಗಳು: ಉದಾ:ಮರುಳು,ಜೇಡಿ
     ಇ)ಅಮೂಲ್ಯ ವಸ್ತು: ಉದಾ:ವಜ್ರ,ಚಿನ್ನ,ಬೆಳ್ಳಿ ಇತ್ಯಾದಿ  
     ಈ)ಇತರ ಖನಿಜಗಳು; ಉದಾ:ಅಭ್ರಕ,ಗ್ರಾಫೈಟ್,ಕಲ್ನಾರು ಇತ್ಯಾದಿ
 ೩. ಇಂಧನ ಖನಿಜಗಳು: ಕಲ್ಲಿದ್ದಲು, ಪೆಟ್ರೋಲಿಯಂ, ಸ್ವಾಭಾವಿಕ ಅನಿಲ ಇತ್ಯಾದಿ.
    ಅದಿರು ನಿಕ್ಷೇಪಗಳ ಉತ್ಪತ್ತಿ: ಖನಿಜಗಳು ಶಿಲೆಗಳಲ್ಲಿ ಆರ್ಥಿಕವಾಗಿ ಬೇರ್ಪಡಿಸುವಷ್ಟು ಪ್ರಮಾಣದಲ್ಲಿ ಸಂಗ್ರಹಿತವಾಗಿದ್ದರೆ,ಅವು ಒತ್ತಾಗಿರುವ ಮಡಿಗಳಲ್ಲಿಯೂ ರೇಖೆಗಳಲ್ಲಿಯೂ ಪಟ್ಟಿಗಳಲ್ಲಿಯೂ ಮಸೂರ ಆಕೃತಿಗಳಲ್ಲಿ ಶೇಖರಣೆಯಾಗಿದ್ದಲ್ಲಿ,ಅವು ಕಾರ್ಯ ಸಾಧಕ ನಿಕ್ಷೇಪಗಳಾಗುತ್ತವೆ.ಅದಿರು ನಿಕ್ಷೇಪಗಳ  ಉತ್ಪತ್ತಿಯಲ್ಲಿ ಅನೇಕ ವಿಧಗಳಿವೆ. ಒಂದೊಂದು  ನಿಕ್ಷೇಪವೂ ಒಂದೊಂದು ವಿಧದಿಂದ ಜನಿಸಿರಬಹುದು. ಅಲ್ಲದೆ, ಒಂದೇ  ನಿಕ್ಷೇಪವೂ ಅನೇಕ ವಿಧಗಳಿಂದಲೂ ಉತ್ಪತ್ತಿಯಾಗಬಹುದು. ಅದಿರು ನಿಕ್ಷೇಪಗಳ  ರಚನೆಯಲ್ಲಿ ಜಲ ಪ್ರಮುಖ ಪಾತ್ರ ವಹಿಸುತ್ತದೆ. ಜಲದ ಜೊತೆಗೆ ಉಷ್ಣಾಂಶ ಮತ್ತು ಒತ್ತಡವೂ ಸಹಕಾರಿಗಳಾಗುತ್ತವೆ. ಅದಿರು ನಿಕ್ಷೇಪ ರಚನೆಗೆ ಕಾರಣವಾದ ಜಲ (ನೀರಿನ) ಆವಿಯಾಗಿರಬಹುದು;ನೆಲದಾಳದ ಶಿಲಾಪಾಕದಿಂದ ಹೂರಬಂದ ಬಿಸಿ ನೀರಾಗಿರಬಹುದು; ನೆಲದಾಳದಲ್ಲಿರುವ ಬೇರೆ ಬೇರೆ ಉಷ್ಣಾಂಶಗಳಿರುವ ಅಂತರ್ಜಲವಾಗಿರಬಹುದು; ಇಲ್ಲವೆ ನದಿ,ಸರೊವರ,ಸಮುದ್ರಗಳ  ನೀರಾಗಿರಬಹುದು. ಜಲ,ಉಷ್ಣಾಂಶ,ಒತ್ತಡಗಳಲ್ಲದೆ ಶಿಲಾಪಾಕ,ಅನಿಲಗಳು,ನೀರಾವಿ,ದ್ರಾವಕ ಧಾತುಗಳು,ಸ್ಥಳೀಯ ಶಿಲೆ ಇವುಗಳು ಅದಿರು  ನಿಕ್ಷೇಪಗಳ ರಚನೆಯಲ್ಲಿ ಪಾಲ್ಗೊಳ್ಳುವುವು.

ಯಾವ ಖನಿಜದ ಆದಿರಾಗಲೀ ವಿವಿಧ ಪ್ರವ್ರುತ್ತಿಗಲಿಂದ,ವಿವಿಧ ಆಕ್ರುತಿಯ ನಿಕ್ಷೇಪಗಳಾಗಿ ರಚಿತವಾಗಬಹುದು. ಉದಾ: ಕಬ್ಬಿಣದ ಅದಿರು ನಿಕ್ಷೇಪವು ಶಿಲಾಪಾಕ ಲೋಹ ಧಾತು ಸಂಗ್ರಹಣ (ಮ್ಯಾಗ್ ಮ್ಯಾಟಿಕ್ ಸೆಗ್ರಿಗೇಷನ್); ರೂಪಾಂತರ (ಮೆಟಮಾರ್ಫಿಸಮ್); ವಿನಿಮಯ (ರೀಪ್ಲೇಸ್ ಮೆಂಟ್) ರಚನಾಕ್ರಮ ಪ್ರಸ್ತರೀಕರಣ (ಸೆಡಿಮೆಂಟೇಷನ್) ಮುಂತಾದ ಯಾವ ವಿಧಾನಗಳಿಂದಾದರೊ ಉತ್ಪತ್ತಿಯಾಗಬಹುದು. ಹೀಗೆ ಉಗೆಮಿಸಿದ ನಿಕ್ಷೇಪಗಳ ಆಕ್ರುಗಳೂ ಬೇರೆ ಬೇರೆಯಾಗಿರುವುದು.ಆರ್ಥಿಕ ದೃಷ್ಟಿಯಿಂದ ಯಾವ ಖನಿಜ ನಿಕ್ಷೇಪವಾಗಲೀ ಯಾವ ವಿಧಾನದಿಂದ ಉತ್ಪತ್ತಿಯಾಗಿದೆ ಯೆಂದು ತಿಳಿಯುವುದು ಅಗತ್ಯ ಖನಿಜ ನಿಕ್ಷೇಪದ ಉತ್ಪತ್ತಿಯ ನಿಕ್ಷ್ಶೆಯು ಅದರ ಆಳ ಮತ್ತು ಅಗಲದ ವಿಸ್ತಾರವನ್ನು ಊಹಿಸಲು ಸಹಕಾರಿಯಾಗುವುದು. ಅಲ್ಲದೆ ಆ ನಿಕ್ಷೇಪದ ಪರಿಮಾಣವನ್ನೂ ತಿಳಿಯಲು ಅನುಕೂಲವಾಗುವುದು. ಖನಿಜ ನಿಕ್ಷೇಪಗಳು ಯಾವ ರೀತಿಯಲ್ಲಿ ಉತ್ಪತ್ತಿಯಾಗಿದ್ದರೂ ಅನುಪಯುಕ್ತ ವಸ್ತುಗಳು ವಿವಿಧ ಪ್ರಮಾಣಗಳಲ್ಲಿ ಮಿಶ್ರವಾಗಿರುತ್ತವೆ. ಲೋಹ ನಿಕ್ಷೇಪಗಳಲ್ಲಿ ಉಪಯುಕ್ತ ಲೋಹದೂಡನೆ ಲೋಹೇತರ ಖನಿಜಗಳೂ ಸ್ಥಳೀಯ ಶಿಲಾ ಚೂರುಗಳೂ ಕೂಡಿರುವುದಲ್ಲದೆ , ಕೆಲವು ಸಂದರ್ಭಗಳಲ್ಲಿ ಉಪಯೋಗವಿಲ್ಲದ ಲೋಹ ಖನಿಜಗಳೂ ಇರುವುದುಂಟು. ಆದಿರಿನೊಡನೆ ಬೆರೆತಿರುವ ಅಂತಹ ಅನುಪಯುಕ್ತ ಪದಾರ್ಥಗಳ ಒಂದುಗೂದಿರುವಿಕೆಗೆ ಗ್ಯಾಂಗ್ ಎಂದು ಹೆಸರು. ಲೋಹೇತರ ಖನಿಜ ನಿಕ್ಷೇಪಗಳಲ್ಲಿ ಉಪಯುಕ್ತ ಖನಿಜಗಳೊಡನೆ ಕೊಡಿರುವ ಉಪಯೋಗವಿಲ್ಲದ ಪದಾರ್ಥಗಳನ್ನು ಅನುಪಯುಕ್ತ ವಸ್ತುಗಳು ಎಂದು ಮಾತ್ರ ಕರೆಯುವರು.


ಅದಿರು  ನಿಕ್ಷೇಪಗಳ ಎಂಗಡನೆ : ಸ್ಥೂಲವಾಗಿ ನಿಕ್ಷೇಪಗಳನ್ನು ಎರಡು ವಿಭಾಗಗಳಾಗಿ             ವಿರಿಗಡಿಸಬಹುದು:                                                                                                                                                  ೧: ಸ್ಥಳೀಯ ಶಿಲೆಗಳ ಸಹಜನಿತ ನಿಕ್ಷೇಪಗಳು (ಸಿನ್ ಜೆನೆಟಿಕ್)                        
 ೨: ಸ್ಥಳೀಯ ಶಿಲೆಗಳು ರೂಪುಗೂಂಡ ಅನಂತರ  ಸಂಗ್ರಹವಾದ ನಿಕ್ಷೇಪಗಳು (ಎಪಿಜೆನೆಟಿಕ್).
 ಮೂದಲನೆಯ ಗುಂಪಿಗೆ  ಸೇರಿದ ನಿಕ್ಷೇಪಗಳಿಗೆ ಮೊಲಜನಿತ (ಪ್ರೈಮರಿ) , ಸಹಜನಿತ (ಸಿನ್ ಜೆನೆಟಿಕ್)  ಅಥವಾ ಗರ್ಭಜನಿತ (ಹೈಪೂಜೆನೆಟಿಕ್)
ನಿಕ್ಷೇಪಗಳೆಂದು ಹೆಸರು.  ಎರಡನೆಯ  ಗುಂಪಿಗೆ  ಸೇರಿದ   ನಿಕ್ಷೇಪಗಳಿಗೆ ಪುನರ್ಭವಿತ  (ಸೆಕೆಂಡರಿ), ಉಪರಿಜನಿತ  (ಎಪಿಜೆನೆಟಿಕ್) ಅಥವಾ  ಬಾಹ್ಯಜನಿತ     ನಿಕ್ಷೇಪಗಳೆಂದು ಹೆಸರು.
      ಪ್ರಕೃತಿಯ   ಮೂಲ  ವಸ್ತುಗಳು :   ಖನಿಜಗಳಲ್ಲಿ  ಒಂದು  ಅಥವಾ  ಹಚ್ಚು  ಮೂಲ  ವಸ್ತುಗಳು  ರಾಸಾಯನಿಕ  ಸಂಯೋಜನೆಯಲ್ಲಿರುವುವು.  ಇರುವರೆಗಿನ  ಪರಿಶೋದನೆಗಳಿಂದ  ಪ್ರಕೃತಿಯಲ್ಲಿ  ಒಟ್ಟು  ೯೮  ಆಂತಹ  ಮೂಲ     ವಸ್ತುಗಳಿವೆಯೆಂದು  ತಿಳಿದುಬಂದಿದೆ.   ಅವುಗಳನ್ನು  ಲೋಹ  ಮೂಲವಸ್ತು  (ಧಾತು)  ಮತ್ತು  ಲೋಹೆತರ  ಮೂಲವಸ್ತುಗಳಿಗೂ   ಭೌತಲಕ್ಶಣಗಳಲ್ಲಿ  ಕೆಲವು  ವ್ಯತ್ಯಾಸಗಲಿವೆ ,  ಲೋಹ  ಮೂಲಧಾತುಗಳ  ಹೊಳಪು,  ಮೆದುವು ,  ಉಶ್ನ  ಮತ್ತು  ವಿದ್ಯುದ್ವಾಹಕತೆ-ಮುಂತಾದ  ಲಕ್ಶಣಗಳು  ಲೋಹೇತರ ಮೂಲ ವಸ್ತುಗಳಲ್ಲಿಲ. ಅಲ್ಲದೆ ಲೊಹಗಳನ್ನು ತಗಡಾಗಿ ಬಡಿಯಬಹುದು; ತ೦ತಿಯಾಗಿ ಎಳೆಯ ಬಹುದು. ಲೋಹೇತರ ಮೂಲವಸ್ತುಗಳಲ್ಲಿ  ಇವು ಸಾಧ್ಯವಿಲ್ಲ. ಆದರೂ ಈ ಎರಡು ವರ್ಗಗಳಿಗೂ  ಖಚಿತವಾದ   ಎಲ್ಲೆ  ಇಲ್ಲ ಅರ್ಸೆನಿಕ್, ಆಂಟಿಮನಿ    ಮುಂತಾದ  ಕೆಲವು  ಮೂಲಧಾತುಗಳಲ್ಲಿ  ಎರಡು  ಗುಂಪಿನ  ಲಕ್ಶಣಗಳೂ  ಇವೆ.
       ಲೋಹ  ಮೂಲವಸ್ತುಗಳಲ್ಲಿ  ತಾಮ್ರ  ,  ಬೆಳ್ಲಿ  ,  ಚಿನ್ನ  ಮತ್ತು  ಪ್ಲಾಟಿನಂ   ಗುಂಪಿನ  ಮೂಲವಸ್ತುಗಳು  ಹೆಚ್ಚಿನ  ಪ್ರಮಾಣದಲ್ಲಿ  ಗಣಿಗಾರಿಕೆಯಿಂದ  ತೆಗೆಯಲಾಗುತ್ತಿದೆ.  ಆದರೆ  ಚಿನ್ನ  ಮತ್ತು  ಪ್ಲಾಟಿನಂ   ಗುಂಪಿನ  ಮೂಲವಸ್ತುಗಳು   ನಿಸರ್ಗದಲ್ಲಿ  ಬಹಳ  ವಿರಳವಿದ್ದು,  ಅತಿ  ಸಣ್ಣ    ಪ್ರಮಾಣದಲ್ಲಿ   ದೊರಕಿದರೊ  ಗಣಿಗಾರಿಕೆಯಿಂದ  ತೆಗೆಯಲಾಗುತ್ತಿದೆ.  
         ಚಿನ್ನ   ಮೂಲವಸ್ತುವು  ಸಣ್ಣ   ಕಣಗಳಾಗಿ  ಅಥವಾ  ಬಂಗಾರ  ಹೊಂದಿರುವ  ಗಟ್ಟಿ  (ಒರಟುಗಟ್ಟಿ) ನಗೆಟ್ ಗಳಂತೆ  ದೊರೆಯುತ್ತದೆ.    ಅಗ್ನಿಶಿಲೆಗಳಲ್ಲಿ,  ರೊಪಾಂತರ  ಶಿಲೆಗಳಲ್ಲಿಯೂ  ಚಿನ್ನವು   ದೊರೆಯುತ್ತದೆ.  ಜಲಗಾರರು   ಚಿನ್ನದ   ಕಣಗಳನ್ನು   ಜಲಜಾನುವಿಕೆಯಿಂದ  ಸಂಗ್ರಹಿಸುತ್ತಾರೆ.
        ಒಂದು   ಅದಿರಿನ   ನಿಕ್ಷೇಪದಲ್ಲಿ  (ಒರ್  ಡಿಪಾಸಿಟ್)  ಲೋಹ  ಆದಿರನ್ನು  ಗಣಿಗಾರಿಕೆ  ಯಿಂದ  ತೆಗೆದು , ಆದರ  ಮೂಲ  ಲೋಹಧಾತ್ತುವನ್ನು  ಲಾಭದಾಯಕವಾಗಿ  ಬೇರ್ಪಡಿಸಲಾಗುವುದೇ   ಎನ್ನುವುದನ್ನು  ಮುಖ್ಯವಾಗಿ  ಆದಿರಿನ  ದರ್ಜೆಯಿಂದಲೂ  ಆದರ  ಪ್ರಮಾಣದಿಂದಲೂ  ನಿರ್ದರಿಸಲಾಗುವುದು. ಇಂದಿನ  ಪರಿಸ್ಥಿತಿಯಲ್ಲಿ  ಸಾದಾರಣವಾಗಿ ಆದಿರುಗಲನ್ನು  ಗಣಿಗಾರಿಕೆ  ಲಾಭದಾಯಕವಾಗಿ   ಪಡೆಯುವುದಕ್ಕೆ  ಅವುಗಳಲ್ಲಿರಬೇಕಾದ  ಲೋಹ  ಕನಿಶ್ಟಾಂಶವನ್ನು  ಕೆಳಗೆ ತಿಳಿಸಿದೆ:
      ಈ   ಲೋಹ    ಪ್ರಮಾಣಗಳು  ಪ್ರತಿ  ಲೋಹಕ್ಕೂ  ಎಲ್ಲಿ  ಸಂದರ್ಭಗಳಿಲ್ಲಿಯೂ  ಅನ್ವಯಿಸುವುದಿಲ್ಲ .  ಏಕೆಂದರೆ,  ಗಣಿ  ಕಾರ್ಯಾಗತವಾಗುವುದರಲ್ಲಿ   ನಿಕ್ಷೇಪದ  ಪ್ರಮಾಣ, ಆದಕ್ಕಿರುವ  ಸುಗಮ  ಪ್ರವೇಶ ,  ಆದಿರನ್ನು  ಉಪಯೋಗಕ್ಕೆ   ತರಲು  ಇರುವ  ಸುಲಭ  ವಿಧಾನಗಳು  ಆದಿರಿನೊಡನೆ  ಬೆರೆತಿರುವ  ಬೆಲೆಯುಳ್ಳ   ಉಪಪದಾರ್ಥಗಳು  ಮತ್ತು  ಅವುಗಳ  ಪ್ರಮಾಣ  ಮುಂತಾದ  ವಿಷಯಗಳನ್ನು  ಗಣನೆಗೆ  ತೆಗೆದುಕೊಳ್ಳಬೇಕಾಗುತ್ತದ
    ಮೂಲ  ಅಥವಾ ಸಹಾಜನಿತ ನಿಕ್ಷೇಪಗಳು  :  ಸಹಾಜನಿತ ನಿಕ್ಷೇಪಗಳು  ಸಾಧಾರಣವಾಗಿ  ಅಗ್ನಿಶಿಲೆಗಳಲ್ಲಿಯೇ  ಹೆಚ್ಚಾಗಿರುವುದು;  ಆದರೂ   ಜಲಜಶಿಲೆಗಳಲ್ಲಿಯೂ  ಇರಬಹುದು.   ಅಗ್ನಿಶಿಲೆಗಳಲ್ಲಿ  ಆಂತಹ  ನಿಕ್ಷೇಪಗಳು  ಅನೇಕ  ರೀತಿಯಲ್ಲಿ   ಜನಿಸುತ್ತವೆ.  ಅವು  ಶಿಲಾಪಾಕವು (ಮ್ಯಾಗ್ಮ )  ಘನೀಭವಿಸುವಾಗ  ಮೂಲ  ಧಾತುಗಳ  ಸಂಗ್ರೆಹದಿಂದಲೂ  (ಮ್ಯಾಗ್ ಮ್ಯಾಟಿಕ್     ಸೆಗ್ರಿಗೇಷನ್) ; ಆವಿ  ಮತ್ತು  ಹವೆಯ ರೂಪದಲ್ಲಿರುವ  ಆನಿಲಗಳ  ಪ್ರಕ್ರಿಯೆಗಳಿಂದಲೂ  ಶಿಲಾರಸ  ಜಲದಲ್ಲಿ ಮೂಲ ಧಾತುಗಳ  ಅವಿಕ್ಶೆಪನದಿಂದಲೂ  ಮತ್ತು  ಆ   ಮೂಲವಸ್ತುಗಳು   ಇಕ್ಕೆಡೆಗಳಲ್ಲಿಯೂ  ಸ್ಥಳೀಯ  ಶಿಲೆಗಳೊದನೆ  ಬೆರೆತು  ರಾಸಾಯನಿಕ  ಪ್ರತಿಕ್ರಿಯೆಗಳನ್ನುಂಟು  ಮಾಡುವುದರಿಂದಲೂ     ಉತ್ಪತ್ತಿಯಾಗುತ್ತವೆ.

ಶಿಲಾಪಾಕ ಮೂಲ ಧಾತು ಸಂಗ್ರೆಹ ಎಂದರೆ ಶಿಲಾದ್ರವವು ದೀರ್ಘಕಾಲ ನಿದಾನವಾಗಿ ಆರಿ, ಘನೀಭವಿಸುವ ಕಾರ್ಯಾಗತಿಯಲ್ಲಿ ಮೊಟ್ಟಮೊದಲು ಆದಿರು ಖನಿಜಗಳು ಹರಳುಗಳಾಗಿ ಬೇರ್ಪಟ್ಟು , ಶಿಲಾರಸಕ್ಕಿಂತ ಭಾರವಾಗಿರುವುದರಿಂದ ದ್ರವದ ತಳದಲ್ಲಿ ಶೇಖರವಾಗುವ ವಿದಾನ. ಈ ರೀತಿಯಲ್ಲಿ ಕೆಲವು ಮ್ಯಾಗ್ನಟೈಟ್ (ಆಯಸ್ಕಾಂತ ಅಥವಾ ಸೂಜಿಗಲ್ಲು), ಕ್ರೋಮೈಟ್ ಮತ್ತು ಸಲ್ಫ಼ಿಡ್ ಆದಿರುಗಳು ಜನಿಸುವವುವು , ಶಿಲಾಪಾಕವು ಆರುವಾಗ, ಆದರಲ್ಲಿಯೂ ಕೊನೆಯಲ್ಲಿ ಯಥೇಚ್ಚವಾಗಿ ಲೋಹಸಂಯೋಜಿತ ಆವಿ ಮತ್ತು ಆನಿಲಗಳು ಹೊರಸೂಸುತ್ತವೆ. ಈ ಆವಿ ಆನಿಲಗಳು ತಣ್ಣಗಿರುವ ಮೇಲ್ಭಾಗ,