ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುರಾತತ್ತ್ವಶೋಧಕನಿಗೆ ಸೇರಿದ್ದು. ಅನಂತರ ಲಂಡನ್ನಿಗೆ ಬ್ರಿಟಿಷ್ ಮ್ಯೂಸಿಯಂ ಅಧಿಕಾರಿಗಳೊ ಪೆನ್‍ಸಿಲ್ವೇನಿಯ ವಿಶ್ವವಿದ್ಯಾನಿಲಯದ ಅಧಿಕಾರಿಗಳೊ ಆರ್‍ನಲ್ಲಿ ಶೋಧ ನಡೆಸಿದರು .೧೯೨೨ರಿಂದ ೧೨ ವರ್ಷಗಳ ಕಾಲ ಸತತವಾಗಿ ಕೆಲಸಮಾಡಿ ಆರ್ ನಗರದ ಅವಶೆಷಗಳನ್ನು ಬಹುವಾಗಿ ಹೊರತೆಗೆದ ಕೀರ್ತಿ ಸರ್ ಲಿಯೋನಾರ್ಡ್ ವೂಲಿ ಎಂಬ ಪ್ರಾಕ್ತನಶಾಸ್ತ್ರಜ್ೞ್ನಿಗೆ ಸೇರಬೇಕು. ಈಗ ನಡೆಸಿದ ಉತ್ಖನನಗಳಿಂದ ಆರ್ ನಗರದ ಸಂಪೂರ್ಣ ಚರಿತ್ರೆ ಬೆಳಕಿಗೆ ಬಂದಿದೆ. ಈ ನಗರಕ್ಕೆ ಸಮೀಪದಲ್ಲಿರುವ ಉಬಾಯ್ದ್ ನಲ್ಲಿ ದೊರಕಿರುವ ಅವಶೆಷಗಳೇ ಇಲ್ಲಿನ ಪ್ರಾಚೀನತಮ ನಾಗರಿಕತೆಯ ಕುರುಹುಗಳು. ಮಣ್ಣಿನ ಮಡಕೆಯ ಹೋಲಿಕೆಗಳ್ಳಿಂದ ಇಲ್ಲಿನ ನಾಗರೀಕತೆ ಇರಾನಿಗೆ ಸಂಭಂದಿಸಿತ್ತೆಂದು ಹೇಳಬಹುದು. ಉಬಾಯ್ದ್ ಸಂಸ್ಕ್ರತಿಯ ಅನಂತರ ಸುಮೇರಿಯ ಸಂಸ್ಕ್ರತಿ ಬೇರೊರುವುದಕ್ಕೆ ಮೊದಲ ಈ ಎರಡು ವಿಭಿನ್ನ ಸಂಸ್ಕ್ರತಿಯ ಜನಗಳು ಅಲ್ಲಿ ವಾಸವಾಗಿದ್ದರಂದು ಉರುಕ್‍ನಲ್ಲಿ ದೊರಕಿರುವ ಅವಶೆಷಗಳಿಂದಲೊ ಜಂಡೆಟ್‍ನಾಸ್ರ್ ಎಂಬಲ್ಲಿ ದೊರಕಿರುವ ಅವಶೆಷಗಳಿಂದಲೊ ತಿಳಿದು ಬರುತ್ತದೆ.ಈ ಸಂಸ್ಕ್ರತಿಯ ಕಾಲವನ್ನು ಪ್ರ.ಶ.ಪೊ.೪೪೦೦-೩೦೦೦ ಎಂದು ನಿರ್ಧರಿಸಬಹುದು.ಇವುಗಳ ಅನಂತರ ಆರ್ ನಗರದ ರಾಜವಂಶದ ಸ್ಥಾಪಕ ಮೆಸ್-ಅನ್ನಿ ಪದ್ದನೆಂದು ತಿಳಿಯುತ್ತೆವೆ. ಈ ವಂಶದ ಅನೇಕ ರಾಜರುಗಳ ನೇತ್ರತ್ವದಲ್ಲಿ ಆರ್ ನಗರ ಸರ್ವತೋಮುಖವಾದ ಪ್ರಗತಿಯನ್ನು ಸಾಧಿಸಿ ಸುಮೇರಿಯ ಸಂಸ್ಕ್ರತಿ ಪ್ರಸಿಧ್ಹವಾಗಲು ಸಹಾಯ ಮಾದಿತು. ಈ ಕಾಲದಲ್ಲಿ ರಾಜವಂಶ ಬೆರೊರಿದಂತೆ ನ್ಯಾಯಾಂಗ ವಿಶೆಷವಾಗಿ ಬೆಳೆಯಿತು. ರಾಜತ್ವದ ಜೊತೆಯಲ್ಲಿ ಮತೀಯ ಧರ್ಮಗಳೊ ಬೆಳೆದವು. ಇದರಿಂದ ದೇವತೆಗಳ ಸಮೂಹವೊಂದು ರಚಿತವಾಯೊತು. ದೆವತೆಗಳಿಗೆ ದೆವಾಲಯವನ್ನು ಕಟ್ಟುವ ಕಾರ್ಯಕ್ಕೆ ಹೆಚ್ಚಾಗಿ ಪ್ರೋತ್ಸಾಹ ಸಿತ್ತಿ, ವಾಸ್ತು ಮತ್ತು ಶಿಲ್ಪಕಲೆಗಳು ಉಚ್ಘ್ರಯ ಸ್ಥಿಯನ್ನು ಮುಟ್ಟಿದವು. ಇವುಗಳನ್ನು ಕಾಪಾಡಿಕೊಂಡು ಬರಲು ಮತ್ತು ಶತ್ರುಗಳನ್ನು ಸೋಲಿಸಲು ಸುಭದ್ರ ಸೈನ್ಯದ ವ್ಯವಸ್ಥೆ ರೊಡಿಗೆ ಬಂದಿತು. ಈ ಎಲ್ಲ ಪ್ರಗತಿಗಳಿಂದ ಸಾಮಾನ್ಯ ಗನಗಳ ಜೀವನ ಸುಖಮಯವಾಗುವಂತೆ ಆಯಿತು. ಇದ್ದಕೆ ಉದಾಹರಣೆಯಾಗಿ ಮೊದಲನಯ ರಾಜವಂಶದ ಗೋರಿಗಳನ್ನು ನೋಡಬಹುದು, ಅಗೆದ ಈ ಗೋರಿಗಳು ವಿಶಾಲವಾಗಿದ್ದು ಬಹು ಬೆಲೆಬಾಳುವ