ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಧ್ರ ಪ್ರದೇಶ

ರತ್ನಗಂಬಳಿ ಜಮಖಾನಗಳು;ಧರ್ಮಾವರಂ,ನಾರಾಯಣ ಪೇಟೆಗಳ ರೇಷ್ಮೆ ಮತ್ತು ಜರೀ ಸೀರೆಗಳು;ಗದ್ವಾಲ್, ಸಿದ್ಧಿಪೇಟೆಗಳ ನೂಲಿನ ಸೀರೆಗಳು,ಬಿದರಿ ಕೆಲಸ,ನಾಜೂಕಿನ ಬಗೆಗಳು,ನರಸಾಪುರದ ಅರಗುಮೆರಗಿನ ವಸ್ತುಗಳು;ಕರೀಂ ನಗರದ ಬೆಳ್ಳಿ ಎಲೆಗಳಿಂದ ಮಾಡಿದ ನಾಜೂಕಿನ ಕೆಲಸ;ನಿರ್ಮಲ,ಕೊಂಡಪಲ್ಲಿ,ನಕ್ಕವಲ್ಲಿ ಮತ್ತು ತಿರುಪತಿಯ ಬಣ್ಣ ಬಣ್ಣದ ಆಟದ ಸಾಮಾನುಗಗಳಿಗೆ ಭಾರತದಲ್ಲೂ ವಿದೇಶದಲ್ಲೂ ಬೇಡಿಕೆ ತೆಂಗಿನ ಹುರಿ ಮಾಡುವುದು,ಚರ್ಮದ ಕೆಲಸಗಳು ಸಾವಿರಾರು ಜನಗಳಿಗೆ ಉದ್ಯೋಗ ಕಲ್ಪಿಸಿವೆ.೩೧ಮಾರ್ಚ್ ೨೦೦೦ರಲ್ಲಿ ರಾಜ್ಯದಲ್ಲಿ ೩೧೧೧ ಬಾರಿಯ ಮತ್ತು ಮಧ್ಯಮ ಕೈಗಾರಿಕೆಗಳಿದ್ದು ೪೩,೩೧೭ ಕೋಟಿ ಬಂಡವಾಳ ಹೂಡಿದ್ದು ೮,೦೨,೮೭೮ ಮಂದಿಗೆ ಉದೋಗ ಲಭಿಸಿತ್ತು.ಜೊತೆಗೆ ೩,೨೯,೪೪೪ ಸಣ್ಣ ಕೈಗಾರಿಕೆಗಳಿದ್ದು ೨೮,೦೯,೪೬೮ ಮಂದಿಗೆ ಉದ್ಯೋಗ ಲಭಿಸಿತ್ತು.

ಸಂಚಾರ ಸೌಲಭ್ಯಗಳು:ರಾಜ್ಯದಲ್ಲಿ ೪,೫೪೪ ಕಿಮೀ ರೈಲುಮಾರ್ಗಗಳಿದ್ದು ಸಿಕಂದ್ರಬಾದ್ ನಗರ ಸೌತ್ ಸೆಂಟ್ರಲ್ ವಲಯದ ಆಡಳಿತಕೇಂದ್ರ ಹೈದರಾಬಾದ್ ಬಳಿ ಇರುವ ಬೇಗಂಪೇಟ್ ವಿಮಾನ ನಿಲ್ದಾಣ ಸಂಚಾರ ಕೇಂದ್ರ,ರಾಜ್ಯದ ಪೂರ್ವ ತೀರದಲ್ಲಿರುವ ವಿಶಾಖಪಟ್ಟಣ,ಕಾಕಿನಾಡ,ಮಚಲಿಪಟ್ಟಣಗಳು ಹಡಗು ನಿಲ್ದಾಣಗಳು,ಮಾರ್ಚ್ ೨೦೦೨ರಲ್ಲಿ ಈ ರಾಜ್ಯದಲ್ಲಿ ೪,೩೬೨ ಕಿ.ಮೀ ರಾಷ್ಟ್ರೀಯ ಹೆದ್ದಾರಿ ೬೦,೪೫೩ ಕಿಮೀ ರಾಜ್ಯ ಹೆದ್ದಾರಿ.೧,೦೦,೮೧೪ ಕಿಮೀ ಪಂಚಾಯಿತಿಗೆ ಸೇರಿದ ಮಾರ್ಗಗಳಿದ್ದವು.ಒಟ್ಟು ೫೦೯೫ ಕಿಮೀ ರೈಲುಮಾರ್ಗದಲ್ಲಿ ೪.೩೬೨ ಕಿಮೀ ಬ್ರಾಡ್ ಗೇಜ್ ೬೮೬ ಕಿಮೀ ಮೀಟರ್ ಗೇಜ್ ಉಳಿದಿದ್ದು ನ್ಯಾರೊಗೇಜ್ ರೈಲುಮಾರ್ಗಗಳಿದ್ದವು.ಹೈದರಬಾದಿನಿಂದ ಭಾರತದ ಮತ್ತು ಪ್ರಪಂಚದ ಮುಖ್ಯನಗರಗಳಿಗೆ ವಿಮಾನ ಸಂಪರ್ಕವಿದೆ.ವಿಶಾಖಪಟ್ಟಣ,ಕಾಕಿನಾಡ,ಮಚಲಿಪಟ್ಟಣ,ಕಾಳಿಂಗಪಟ್ಟಣ,ವಡರೇವು ಮತ್ತು ಕೃಷ್ಣಪಟ್ಟಣ ಇವು ಮುಖ್ಯ ಬಂದರುಗಳು

ಪ್ರೇಕ್ಷಣೀಯ ಸ್ಥಳಗಳು:ಹೈದರಬಾದ್ ಸಂಸ್ಥಾನದ ನಿಜಾಮಕಾಹಿ ಆಡಳಿತ ಕೇಂದ್ರವಾಗಿದ್ದ ಇಲ್ಲಿ ಇಂಡೊ-ಮುಸ್ಲಿಂ ಮತ್ತು ಪಾಶ್ಚಾತ್ಯ ಪರಂಪರೆ ಸಮ್ಮಿಳಿತ ಮಾದರಿಯ ಅನೇಕ ಭವ್ಯ ಕಟ್ಟಡಗಳಿವೆ.ಇವುಗಳಲ್ಲಿ ಚಾರ್ಮಿನಾರ್,ಬಾರಕಮಾನ್,ಬಾದಶಾಹಿ,ಅಷೂರಖಾನಾ,ಮುಷೀರಾಬಾದ್ ಮಸೀದಿ,ಫಲಕ್ ನುಮಾ ಅರಮನೆಗಳು ಪ್ರಖ್ಯಾತವಾಗಿವೆ.ಈಗಿನ ಕಟ್ಟಡಗಳಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯ ಕಟ್ಟಡಗಳು,ಹೈಕೊರ್ಟ್ ಕಟ್ಟಡಗಳು ಭವ್ಯವಾಗಿವೆ.ಹೆಲ್ತ್ ಮ್ಯೂಸಿಯಂ,ಅಜಂತ ಪೆವಿಲಿಯನ್,ಸಾಲಾರ್ ಜಂಗ್ ಮ್ಯೂಸಿಯಂ ಆಕರ್ಷಕ ಸ್ಥಳಗಳು.ಗೋಲ್ಕೊಂಡ ಕೋಟೆ(ಕುತುಬ್ ಷಾಹಿ ಅರಸರ ಕೋಟೆ,ಅರಮನೆಗಳು),ವಾರಂಗಲ್ (ಕಾಕತೀಯ ರಾಜರು ಕಟ್ಟಿಸಿದ ಪ್ರಸಿದ್ಧ ದೇವಾಲಯಗಳು), ಶ್ರೀಶೈಲ(ಮಲ್ಲಿಕಾರ್ಜುನಲಿಂಗ ದೇವಸ್ತಾನ),ತಿರುಪತಿ(ವೆಂಕಟೇಶ್ವರ,ಬಾಲಾಜಿ ದೇವಸ್ತಾನ),ಕಾಳಹಸ್ತಿ,ಸಿಂಹಾಚಲ,ಭದ್ರಾಚಲ,ಲೇಪಾಕ್ಷಿಗಳು ಪ್ರಸಿದ್ಧ ಯಾತ್ರಸ್ತಳಗಳಲ್ಲದೆ ಉತ್ತಮ ಕಲಾಕೃತಿಗಳನ್ನು ಹೊಂದಿವೆ.ಲಕ್ಷಾಂತರ ಯಾತ್ರಾರ್ಥಿಗಳು ಇವನ್ನು ಸಂದರ್ಶಿಸುತ್ತಾರೆ.

ಸಂಸ್ಕೃತಿ:ಆಂಧ್ರದ ಭಾಷೆ ತೆಲಗು,ಬಹು ಮಧುರ.ದಾಕ್ಷಿಣಾತ್ಯ ಸಂಗೀತದ ಶ್ರೀ ತ್ಯಾಗರಾಜರ ಕೀರ್ತನೆಗಳು ತೆಲಗು ಭಾಷೆಯಲ್ಲಿವೆ.ಆಂಧ್ರದ ಪ್ರತಿ ಊರಿನಲ್ಲೂ ದೇವಸ್ಥಾನದ ರಥೋತ್ಸವಗಳು,ರೈತಕೋಟಿ ಏರುವಾಕ ಸುಗ್ಗಿಯ ಸಂಭ್ರಮವನ್ನು ಜನಪದ ನೃತ್ಯಗೀತೆಗಳಿಂದಲೂ ಉತ್ಸಾಹ ಭರಿತ ಸಂಪ್ರದಾಯಗಳಿಂದಲೂ ಆಚರಿಸುತ್ತಾರೆ.ಕೂಚುಪುಡಿ ನೃತ್ಯ,ಭಾಗವತ ಸಂಗೀತ-ಸಾಹಿತ್ಯ ಹರಿಕಥೆಗಳು ಆಂಧ್ರದ ವೈಶಿಷ್ಟ್ಯಗಳು.

ಆಂಧ್ರದ ಪ್ರದೇಶದ ಚರಿತ್ರೆ:ಪುರಾಣ ಗ್ರಂಥಗಳ ಪ್ರಕಾರ ಆಂಧ್ರ ಎಂಬುದು ಜಾತಿ ಇಲ್ಲವೆ ಕುಲಸೂಚಕವಾದ ಪದ.ಐತರೇಯ ಬ್ರಾಹ್ಮಣದಲ್ಲಿ ಆಂಧ್ರದ ಅತ್ಯಂತ ಪ್ರಾಚಿನ ಉಲ್ಲೇಖವನ್ನು ಕಾಣಬಹುದು.ಕಾಲಕ್ರಮದಲ್ಲಿ ಆಂಧ್ರ ಎಂಬ ಪದಕ್ಕೆ ಭೌಗೋಳಿಕ ಅರ್ಥವ್ಯಾಪ್ರಿಯುಂಟಾಗಿ ಆಂಧ್ರರು ವಾಸಮಾಡುವ ದೇಶಕ್ಕೆ ಆಂಧ್ರದೇಶವೆಂಬ ಹೆಸರು ಬಂದಿತು. ಆಂಧ್ರದೇಶ ಅಶೋಕನ ಸಾಮ್ರಾಜ್ಯಕ್ಕೆ ಸೇರಿತ್ತೆಂದು ಹೇಳಲು ಯರ್ರಗುಡಿ,ಅಮರಾವತಿ ಮುಂತಾದ ಕಡೆಗಳಲ್ಲಿ ಸಿಕ್ಕಿರುವ ಅವನ ಶಾಸನಗಳೇ ಆಧಾರವಾಗಿವೆ.ಅವನ ಶಾಸವೊಂದರಲ್ಲಿ ರಥಿಕರು.ಭೋಜಕರು,ಪುಳಿಂದು ಮುಂತಾದವರೊಡನೆ ಆಂಧ್ರದ ಹೆಸರು ಇದೆ.ಆಕಾಲದಲ್ಲಿ ಆಂಧ್ರರು ದಕ್ಷಿಣಾಪಥದ ಮಧ್ಯ ಮತ್ತು ದಕ್ಷಿಣ ಭಾಗಗಳನ್ನು ಆಳುತ್ತಿದ್ದರೆಂದು ಹೇಳಬಹುದು.

ಖಚಿತವಾದ ಆಂಧ್ರಪ್ರದೇಶದ ಚರಿತ್ರೆ ಸಾತವಾಹನರೊಂದಿಗೆ ಪ್ರಾರಂಭವಾಗುತ್ತದೆ.ಸಾತವಾಹನಗಳನ್ನು ಪುರಾಣಗಳಲ್ಲಿ ಆಂಧ್ರರು ಮತ್ತು ಆಂಧ್ರಭೃತ್ಯರು ಎಂದು ಕರೆದಿದೆ.ಸಾತವಾಹನರ ಉಗಮದ ವಿಚಾರವಾಗಿ ಖಚಿತವಾದ ಮಾಹಿತಿ ದೊರಕಿಲ್ಲ.ಅಷ್ಟೇ ಅಲ್ಲದೆ ಅವರು ಆಳಿದ ಕಾಲ ಮತ್ತು ವಿವಿಧ ರಾಜರುಗಳ ವಿಚಾರವಾಗಿಯೂ ನಿಖರವಾಗಿಯೂ ನಿಖರವಾದ ಚಾರಿತ್ರಿಕ ವಿಷಯಗಳು ಉಪಲಬ್ಧವಾಗಿಲ್ಲ.ಸಾತವಾಹನರ ಮೂಲ ನಿವಾಸಸ್ಥಾನ ಕರ್ನಾಟಕದ ಬಳ್ಳಾರಿ ಜಿಲ್ಲೆಯಾಗಿತ್ತೆಂದೂ ಇಲ್ಲಿಂದ ಅವರು ಆಂಧ್ರ ದೇಶಕ್ಕೆ ವಲಸೆ ಹೋದರೆಂದು ಸಾಮಾನ್ಯವಾಗಿ ಎಲ್ಲ ಚರಿತ್ರಕಾರರೂ ಒಪ್ಪುತ್ತಾರೆ.ಆಂಧ್ರ ದೇಶದಲ್ಲಿ ಮೊಟ್ಟಮೊದಲನೆಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಸಾತವಾಹನರು ಪ್ರ.ಶ ೨೩ರಿಂದ ಸು.೪೫೦ರವರೆಗೆ ರಾಜ್ಯಭಾರ ಮಾಡಿದರು.ಶ್ರೀಮುಖ ಇವರ ಮೊಟ್ಟ್ಮೊದಲನೆಯ ದೊರೆ.ಅನಂತರ ಇವನ ಸಹೋದರನಾದ ಕನ್ಹ ರಾಜನಾದ(೨೦೭-೧೮೯).ಮುಂದಿನ ರಾಜನಾದ ಶ್ರೀ ಸಾತಕರ್ಣಿ ನಾನಾಘಾಟ್ ಎಂಬಲ್ಲಿ ದೊರಕಿರುವ ಶಿಲ್ಪಗಳಲ್ಲಿ ತನ್ನ ರಾಣಿ ನಾಗಕನ್ನಿಕೆಯೊಡನೆ ಚಿತ್ರಿತನಾಗಿದ್ದಾನೆ.ಈತ ಪಶ್ಚಿಮ ಮಾಳ್ವ ದೇಶವನ್ನು ಗೆದ್ದು,ಅಶ್ವಮೇಧವೇ ಮೊದಲಾದ ಅನೇಕ ಯಾಗಗಳನ್ನು ಮಾಡಿದ.ಸ್ವಲ್ಪಕಾಲದ ಅನಂತರ ಆಳಿದ ಎರಡನೆಯ ಸಾತಕರ್ಣಿ ೫೬ ವರ್ಷಗಳ ಕಾಲ ರಾಜನಾಗಿದ್ದ.ಇವನ ರಾಜ್ಯ ಮಧ್ಯಪ್ರದೇಶದವರೆಗೂ ಹರಡಿತ್ತು.ಹದಿನೇಳಯ ಸಾತವಾಹನ ರಾಜನಾದ ಹಾಲ ಸಪ್ತಶತಿ ಎಂಬ ಪ್ರಾಕೃತ ಗ್ರಂಥವನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ಖ್ಯಾತನಾಗಿದ್ದಾನೆ.ಇದು ೭೦೦ ಶೃಂಗಾರ ಪದ್ಯಗಳ ಸಂಕಲನ.

ಅನಂತರ ಶಕರು,ಪಹ್ಲವರು,ಯವನರು ಬಲಯುತರಾದುದರಿಂದ ಸಾತವಾಹನರ ಪ್ರಾಬಲ್ಯ ಕಡಿಮೆಯಾಯಿತು.ಗೌತಮಿಪುತ್ರ ಸಾತಕರ್ಣಿ ಎಂಬ(ಪ್ರ.ಶ ೮೦-೧೦೪)ಸಾತವಾಹನ ರಾಜ ಶಕರು,ಪಹ್ಲವರು ಯವನರನ್ನು ಸೋಲಿಸಿ ಸಾತವಾಹನ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿದೆ.ಈತ ನಹಪಾನನನ್ನು ಕಿತ್ತುಕೊಂಡ.ತಾಯಿಯಾದ ಗೌತಮೀ ಬಲಶ್ರೀ ಕೆತ್ತಿಸಿದ ನಾಸಿಕದ ಶಾಸನದಲ್ಲ್ಲಿ ಗೌತಮಿಪುತ್ರ ಸಾಧಿಸಿದ ಮಹಾತ್ಕಾರ್ಯಗಳು