ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನೇಕ ತಾದಂಬರಿಗಳನ್ನು ಬರೆದ. ಯಾವ ಗುಂಪಿಗೆ ಸೇರಿದ್ದರೂ ಕೆಲವು ಕಾಲ ರೊಮಾಂಟಿಕ್ ಪಂಥವನ್ನು ಕೆಲವು ಬಾರಿ ಬಾಲ್ಜಾಕ್‍ನನ್ನು ಅನುಸರಿಸುವ ಮನೋಭಾವವನ್ನು ತೋರಿದ.ಹಲವಾರು ಕವನ, ಪ್ರವಾಸಕಥನ, ಪ್ರಬಂಧಗಳನ್ನು ಬರೆದಿದ್ದರೊ ಇವನಿಗೆ ಶಾಶ್ವತವಾದಾ ಕೀರ್ತಿ ದೊರೆತಿರುವುದು ಇವನ ಎಲ್ ಸೊಂಬ್ರಿರೊ ಡೆಸ್ ಟ್ರೆಸ್ ಪಿಕೊಸ್ (ಮೂರು ಮೂಲೆಯ ಟೋಪಿ) ಎಂಬ ಹಾಸ್ಯರಭರಿತ ಪ್ರೇಮಕಥೆಯ ಮೂಲಕವೇ ಎನ್ನಬಹುದು. ಈ ಸುಂದರ ಕೃತಿಯನ್ನು ಸರ್ವಾಂಟಿಸ್‍ನ ಡಾನ್‍ಕ್ವಿಕ್ಸೊಟ್ ಕಾದಂಬರಿಗೆ ಹೋಲಿಸುತ್ತಾರೆ. ಅಲಾಸ್ಕ; ಅಮೇರಿಕ ಸ್ಂಯುಕ್ತ ಸ್ಂಸ್ಥಾದ ಯೊದು ರಾಜ್ಯ ಸಂಯುಕ್ತ ಸ್ಂಸ್ಥಾದ ಹೊರಗೆ ಪ್ರತ್ಯೇಕವಾಗಿ ಉತ್ತರ ಅಮೆರಿಕದ ವಾಯವ್ಯದಲ್ಲಿರುವ ಈ ರಾಜ್ಯದ ವಿಸೀರ್ಣ 1522596 ಚ.ಕಿಮೀ.ಜನಸ್ಂಖ್ಯೆ 6,26,932(2000). ರಾಜಧಾನಿ ಜೊನೆ. ಅಲಾಸ್ಕ; ಅಮೇರಿಕ ಸಂಯುಕ್ತಸ್ಂಸ್ಥಾನ, 1867ರಲ್ಲಿ ರಾಷ್ಯದಿಂದ ಈ ಭಾಗವನ್ನು ಕೊಂಡು 1884ರಲ್ಲಿ ಆರೆಗಾನ್ ಸ್ಂಸ್ಥಾನದ ಒಂದು ಜಿಲ್ಲೆಯಾಗಿ ಪರಿಗಣಿಸಿತು. 1912ರಲ್ಲಿ ಒಂದು ಸೀಮೆಯಾಗಿ ರೊಪಗೊಂಡು 1959ರಲ್ಲಿ 49ನೆಯ ಪ್ರಾಂತವಾಗಿ ಸಂಯುಕ್ತಸ್ಂಸ್ಥಾನದಲ್ಲಿ ವಿಲೀನ ಹೊಂದಿತು.1912ರಿಂದ ಈಚೆಗೆ ಸಂಯುಕ್ತಸ್ಂಸ್ಥಾನಕ್ಕೆ ಸೇರಿದ ರಾಜ್ಯಗಳಲ್ಲಿ ಇದು ಮೊದಲೆನೆಯದು. ಬಹು ದೊಡ್ಡ ರಾಜ್ಯ, ಖಂಡದ ಇತರ ರಾಜ್ಯಗಳಿಂದ ಪ್ರತ್ಯೇಕವಾಗಿ ವಾಯವ್ಯದ ಅಂಚಿಬಲ್ಲಿದ್ದು ಪರ್ವತಮಯವಾಗಿದೆ. ಉತ್ತರ ಅಕ್ಷಾಂಶ 65 ಮತ್ತು ಪಶ್ಚಿಮ ರೇಖಾಂಶ 150ಯಲ್ಲಿದೆ.ಅಗ್ನೋಯ ಮತ್ತು ಪೂವಾಕ್ಕೆ ಕೆನೆಡ ದೇಶ, ಪಶ್ಚಿಮಕ್ಕೆ ಬೆರಿಂಗ್ ಜಲಸಿಂಧಿ ಮತ್ತು ಬೇರಿಂಗ್ ಸಮುದ್ರ,ಉತ್ತರಕ್ಕೆ ಮಕಿಂಜಿ ಕೊಲ್ಲಿ ಹಾಗೊ ದಕ್ಷಿನಕ್ಕೆ ಅಲಾಸ್ಕ ಖಾರಿಗಳು ಸುತ್ತುವರಿದಿವೆ. ಅಮೇರಿಕಯ ಬಹು ದೊಡ್ಡ ಪರ್ವತಶ್ರೇಣಿಯ ವಾಯವ್ಯದ ಬಾಗಿದ ವಿಸ್ತ್ರಿತಭಾಗ ಇರುವುದು ಇಲ್ಲಿಯೇ. ದಕ್ಷಿಣದ ಸಾಧಾರಣ ಎತ್ತರದ ತೀರಪ್ರದೇಶದ ಶ್ರೇಣೆಯ ಜೊತೆಗೆ ಒಳಭಾಗದಲ್ಲಿ ಸ್ವಲ್ಪ ಎತ್ತರವಾದ ಸಮಾನಾಂತರ ಶ್ರೇಣಿ ಇದೆ. ಉತ್ತರ ಅಮೇರಿಕದ ಅತ್ಯಂತ ಎತ್ತರದ ಮೆಕಿನ್ಲ ಶಿಖರ (6193.5) ಈ ಒಳಭಾಗದ ಶ್ರೇಣಿಯಲ್ಲಿದೆ. ತಗ್ಯಾದ ಉತ್ತರದ ಶ್ರೇಣಿ ಕಮಾನಿನಂತೆ ಬಾಗಿದೆ ಅಲಾಸ್ಕದ ಎತ್ತರಭಾಗ ಉತ್ತರದ್ರುವದ ಆಚೆಗೆ ವ್ಯಾಪಿಸಿ ವಿಲಕ್ಶಣವಾದ ಖಂಡಾಂತರ ವಾಯುಗುಣವನ್ನು ಹೊಂದಿದ್ದೆ. ದಕ್ಷಿಣತೀರ ಜಪಾನ್ ಪ್ರವಾಹದ ಮಾರುತಗಳಿಂದ ಉಷ್ಣತೆಯನ್ನು ಪಡೆದು ಆಹ್ಲಾದಕರ ವಾಯುಗುಣವನ್ನು ಪಡೆದಿದೆ.1898ರ ಸುವರ್ಣ ಶೋಧದ (ಗೋಲ್ಡ್ ರಷ್) ದಿನಗಳಲ್ಲಿ ಅಲಾಸ್ಕದ ಖನಿಜಗಳಲ್ಲಿ ಚಿನ್ನ ಅಗ್ರಸ್ಥಾನ ಪಡೆಯಿತು.ಇಂದು ಕಲ್ಲಿದ್ದಲು ಆ ಸ್ಥಾನಕ್ಕೇರಿದೆ. ಪೆಟ್ರೋಲಿಯಂ, ಸ್ವಾಭಾವಿಕ ಆನಿಲ ತವರ,ಕ್ರೋಮೈಟ್,ಪಾದರಸ,ತಾಮ್ರ,ಆಂಟಿಮನಿ,ಟ್ಂಗ್‍ಸ್ವನ್ ಮುಂತಾದ ಖನಿಜಗಳೂ ಅಲ್ಪ ಸ್ವಪ್ಲ ದೊರೆಯುತ್ತವೆ. ಅದಾಗ್ಯೊ 1977ರಲ್ಲಿ ಟ್ರಾನ್ಸ್-ಅಲಾಸ್ಕ ಕೊಳವೆ ಮಾರ್ಗವನ್ನು ನಿರ್ಮಿಸಿದ ಅನಂತರ ಅಲಾಸ್ಕದ ಆರ್ಥಿಕ ವ್ಯವಸ್ಥೆಯಲ್ಲಿ ಬಹಳಷ್ಟು ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಿಗಳ ಉತ್ಪಾದನೆಯನ್ನಾಧರಿಸಿದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕಚ್ಚಾ ತೈಲ ಉತ್ಪಾದಿಸುವ ಪ್ರಾಂತ್ಯಗಳಲ್ಲಿ ಟೆಕ್ಸಾಸ್ ಅನಂತರ ಅಲಾಸ್ಕ ದ್ವೀತಿಯ ಸ್ಥಾನದಲ್ಲಿದೆ. ಮಧ್ಯ ಅಕ್ಷಾಂಶ ಪ್ರದೇಶದ ಬೆಳೆಗಳ ಜೊತೆಗೆ ಪಶುಪಾಲನೆಯ ಉತ್ಪಾನ್ನವು ಸೇರುತ್ತದೆ. ಆಂಕೊರೇಜಿನ ಬಳಿಯ ಮಟನುಸ್ಕ ಕಣವೆಯ ಬೆಳೆ ರಾಜ್ಯದ ಅರ್ಧ ಉತ್ಪತ್ತಿಯಷ್ಟಾದರೂ ವ್ಯವಸಾಯ ಅಲ್ಲಿ ಅಷ್ಟಾಗಿ ಮುಂದುವರಿದಿಲ್ಲ ; ಮೀನುಗಾರಿಕೆ ಮತ್ತು ಅದರ ರಫ್ತು ಅಲಾಸ್ಕದ ಮುಖ್ಯ ಕೈಗಾರಿಕೆ. ಇದರಲ್ಲಿ ಸಾಲ್ಮನ್ ಜಾತಿಯ ಮೀನುಗಳೇ ಹಚ್ಚು. ಈ ಕೈಗಾರಿಕೆ ರ್ರಜ್ಯದ ಬಹುಪಾಲು ಕಾರ್ಮಿಕವರ್ಗಕ್ಕೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಸಣ್ಣ ಕಣಿವೆಗಳನ್ನು ದಕ್ಷಿಣದ ತೀರಪ್ರದೇಶಗಳಲ್ಲಿ ಬಹುಪಾಲು ಪ್ರಜೆಗಳು ವಾಸಿಸಿದರೆ, 15,800ರಷ್ಟು ಅಲ್ಪ ಸಂಖ್ಯೆಯ ಎಸ್ತಿಮೋಜನರು ರಾಜ್ಯದ ಉತ್ತರ ಹಾಗೂ ಪಶ್ಚಿಮ, ಭಾಗದಲ್ಲಿ ವಾಸಿಸುತ್ತರೆ. ಆಂಕೊರೇಜ್, ಫೇರ್‍ಬ್ಯಾಂಕ್ಸ್, ಜೊನೆ ಮತ್ತು ಕೆಚೆಕನ್-ಇವು ಮಖ್ಯ ನಗರಗಳು. ಜೂನ್ ಅಲಾಸ್ಕದ ರಾಜಧಾನಿ. ಅಲಿಂಹಗ್ ಹ್ಯಾಂ,ವಿಲಿಯಂ: 1824-89. ಐಲೆಂಡಿನಲ್ಲಿ ಕವಿ. 1846-1870ರವರಗೆ ಸುಂಕದ ಇಲಾಖೆಯಲ್ಲಿ ಕೆಲಸಮಾಡಿ 1847ರಲ್ಲಿ ಫ್ರೇಸರ್ಸ್ ಮ್ಯಾಗಜ಼ಿನ್ ಎಂಬ ಪ್ರಸಿದ್ಧ ನಿಯತಕಾಲಿಕ ಪತ್ರಿಕೆಯ ಸಂಪಾದಕನಾದ. ಅದೇ ವರ್ಷ ಪತ್ರಿಕೆಗಳಿಗೆ ಆಲ್ಂಕಾರಿಕ ಚಿತ್ರಗಳನ್ನು ಬರೆಯುತ್ತಿದ್ದ ಹೆಲೆನ್ ಪ್ಯಾಟ್ರರ್‍ಸನ್ ಎಂಬುವಳನ್ನು ಮದುವೆಯಾದ. 1890ರಲ್ಲಿ ಇವನ ಬರಹೆಗಳು ಆರು ಸ್ಂಪುಟಗಳಲ್ಲಿ ಪ್ರಕಾಶಗೊಂಡವು. ಇವುಗಳಲ್ಲಿ ಡೇ ಅಂಡ್ ನೈಟ್ ಸಾಂಗ್ಸ್, ಲಾರೆನ್ಸ್ ಬ್ಲೊಂ ಫೀಲ್ಡ್ ಇನ್ ಐರ್ಲೆಂಡ್, ಐರಿಷ್ ಸಾಂಗ್ಸ್ ಅಂಡ್ ಪೊಯಂಸ್ ಎಂಬುವು ಹಸರು ಗಳಿಸಿವೆ. ಇವನ ದಿನಚರಿಯನ್ನು ಇವನ ಪತ್ನಿಯೇ ಸಂಪಾದಿಸಿದಳು. ಅಲ್ಲಿ ಆದಿಲ್ ಷಾ 1: ಬಿಜಾಪುರದ 5ನೆಯ ಸುಲ್ತಾನ(1558-80).ಇಬ್ರಾಹೀಮನ ಮಗ ಮತ್ತು ಉತ್ತರಾಧಿಕಾರಿ.ಷಿಯಾ ಪಂಥದ ಅನುಯಾಯಿ. ಈತ ಆ ಪಂಥಕ್ಕೆ ಹೆಚ್ಚು ಪಂಗಡದವರಿಗೆ ಅಸಮಧಾನವುಂಟಾಯಿತಾಗಿ ಇವನು ಆಳ್ವಿಕೆಯ ಮೊದಲಲ್ಲಿಯೇ ಅನೇಕ ಎಡರುಗಳಾನ್ನು ಎದುರಿಸಬೇಕಾಯಿತು. ಪಟ್ಟಕ್ಕೆ ಬರುತ್ತಿದಂತೆಯೆ 1558ರಲ್ಲಿ ವಿಜಯನಗರದ ರಾಜನೊಡನೆ ಒಪ್ಪಂದವನ್ನು ಮಾಡಿಕೊಂಡು ಅಹಮದ್‍ನಗರದ ಮೇಲೆ ದಾಳಿ ಮಾಡಿದ. ಆದರೆ ಈ ಸಂದರ್ಭದಲ್ಲಿ ರಾಮರಾಯ ಮಹಮ್ಮದ್ದೀಯರ ಮೇಲೆ ಎಸಗಿದ ಕ್ರತ್ಯಗಳು ಬೇರೆ ರಾಜ್ಯಗಳ ಮಹಮ್ಮದ್ದೀಯರ ಮನನೋಯಿಸಿ ದೊಚ್ಚಗೇಳುವಂತೆ ಮಾಡಿದ್ದರಿಂದ ಅಲ್ಲಿ ರಾಮರಾಯನ ಮೈತ್ರಿ ಕಡೀಯಿತು ಅನಂತರ ಮಹಮ್ಮದ್ದೀಯ ರಾಜ್ಯಗಳಾದ ಬಿಜಾಪುರ,ಅಹಮದ್‍ನಗರ, ಬಿದರೆ ಮತ್ತು ಗೋಲ್ಕೊಂಡದ ಸುಲ್ತಾನರು ಒಂದು ಒಕ್ಕೊಟವನ್ನು ಮಾದಿಕೊಂಡು ವಿಜಯನಗರದ ಮೇಲೆ ಯುದ್ಧ ಸಾರಿದರು.ತಾಳಿಕೋಟೆಯಲ್ಲಿ 1565ರಲ್ಲಿ ನಡೆದ ಯುದ್ಧದಲ್ಲಿ ರಾಮರಾಯ ಸೋತು ಕೊಲೆಗೀಡಾದ. ಈ ಯುದ್ಧದಲ್ಲಿ ಹಾಗೂ ಅನಂತರ ವಿಜಯನಗರನ್ನು ಸೂರೆಗೊಳ್ಳುವಲ್ಲಿ ಅಲಿ ಪ್ರಮುಖ ಪಾತ್ರ ವಹಿಸಿದ. ತಾಳಿಕೋಟೆಯ ಯುದ್ಧಾನಂತರ ಅಹಮದ್‍ನಗರದ ಸುಲ್ತಾನನೊಡನೆ ಒಪ್ಪಂದ ಮಾದಿಕೊಂಡೂ ಪಶ್ಚಿಮ ಕರಾವಳಿಯಲ್ಲಿದ್ದ ಪೋರ್ಚುಗೀಸರ ವಿರುದ್ಧ ದಂಡೆತ್ತಿಹೋಗಿ ಗೋವೆಯನ್ನು ಮುತ್ತಿದೆ. ಆದರೆ ಪೋರ್ಚುಗೀಸರು ಇವನನ್ನು ಹಿಮೆಟ್ಟಿಸಿದರು. ರಾಜ್ಯಕ್ಕೆ ಹಿಂದಿರುಗುವ ಮೊದಲು ಇವನು ಆದವಾಣಿ ಕೋಟೆಯನ್ನು ಗೆದ್ದುಕೊಂಡ.1573ರಲ್ಲಿ ತುರ್ಕಲನ್ನು ಗೆದ್ದ. ತರುವಾಯ, ವಿಜಯನಗರದ ಆಧೀನದಲ್ಲಿದ್ದು, ತಾಳಿಕೋಟೆಯ ಯುದ್ಧದ ಅನಂತರ ಸ್ವತಂತ್ರನಾಗಿ ಬಂಕಾಪುರದಲ್ಲಿ ಆಳುತ್ತಿದ್ದ ವೇಲಪರಾಯನ ಮೇಲೆ ದಂಡೆತ್ತಿಹೋದ. 15 ತಿಂಗಳ ಸತತ ಹೋರಾಟದಿಂದ ಬಂಕಾಪುರವನ್ನು ವಶಪಡಿಸಿಕೊಂಡ. ಅನಂತರ ಇವನ ದಂಡನಾಯಕ ಮಸ್ತಫ ಖಾನ್ ಚಂದ್ರಗುತ್ತಿಯನ್ನು ಸಾಧಿಸಿಕೊಂಡನಲ್ಲದೆ ಕರ್ನಾಟಕದ ಕೆಲವು ಸಣ್ಣಪುಟ್ಟ ನಾಯಕರುಗಳಿಂದು ಕಪ್ಪಕಾಣಿಕೆಗಳನ್ನು ವಸೂಲು ಮಾಡುವುದರಲ್ಲೂ ಯಶಸ್ವಿಯಾದ. ಅಲಿ ಆದಿಲ್ ಷಾ ಅನೇಕ ಬಾರಿ ಪೆನುಕೊಂಡವನ್ನು ಗಳಿಸಲು ಪ್ರಯತ್ನ ಪಟ್ಟು ವಿಫಲನಾದ.1580ರಲ್ಲಿ ತನ್ನ ಅರಮನೆಯಲ್ಲಿಯೇ ಕೊಲೆಯಾದ. ಅನಂತರ ಇವನ ಸೋದರನ ಮಗ ಇಬ್ರಾಹೀಂ ಪಟ್ಟಕ್ಕೆ ಬಂದ. ಪ್ರಸಿದ್ಧ ಚಾಂದಬೀಬಿ (ನೇಡಿ) ಅಲಿಯ ಹೆಂಡತಿ. (ಎಸ್.) ಅಲ್ಲಿ ಆದಿಲ್ ಷಾ 2: ಬಿಜಾಪುರದ 8ನೆಯ ಸುಲ್ತಾನ (1656-72). ಮಹಮ್ಮದನಮಗ. ತಂದೆಯ ಮರಣಾಂತರ ಈ ಕೇವಲ 18 ವರ್ಷ್ವದವನಾಗಿದ್ದಾಗ ಪಟ್ಟಕ್ಕೆ ಬಂದ. ಈ ಸಂಧರ್ಭದ ಲಾಭ ಪಡೆಯಲು ದಖನ್ನಿನಲ್ಲಿ ವೈಸ್‍ರಾಯಿಯಾಗಿದ್ದ ಔರಂಗಜೇಬ್ ಬಿಜಾಪುರದ ರಾಜ್ಯದ ಮೇಲೆ ದಂಡೆತ್ತಿ ಬಂದ. ಪೆರೆಂಡ ಕೋಟೆ ಮತ್ತು ಅದರ ಸುತ್ತಮುತ್ತ ಣಪ್ರದೇಶ್ಗಳನನ್ನೂ ಅನಂತರ ಕಲ್ಯಾಣಿ ಮತ್ತುಬಿದರೆಯನ್ನೂ ಮತ್ತು ಗೆದ್ದುಕೊಂಡ. ಬಿಜಾಪುರಕ್ಕೆ ನುಗ್ಗಿ ಅಲಿಯನ್ನು ಸೋಲಿಸಿದ. ಅಲಿ ಒಪ್ಪಂದಕ್ಕೆ ಒಡಂಬಟ್ಟು ಓರಂಗಜೇಬ್ ಗೆದ್ದುಕೊಂಡಿದ್ದ ಬಿದರ, ಕಲ್ಯಾಣಿ ಮತ್ತು ಪೆರೆಂಡವನ್ನು ಮುಗಲರಿಗೆ ಬಿಟ್ಟುಕೊಟ್ಟ(೧೬೫೭). ಈ ಮಧ್ಯದಲ್ಲಿ ಶಿವಾಜಿ ಬಿಜಾಪುರಕ್ಕೆ ಸೇರಿದ ಕೆಲವು ಪ್ರದೇಶಗಳನ್ನು ಹಿಡಿದಿದ್ದರಿಂದ ಅಲಿ ಶಿವಾಜಿಯ ಅಫಜಲಖಾನನನ್ನು ಕಳುಹಿಸಿದ.ಆದರೆ ಅಫಜಲಖಾನ ಹತನಾದ. ಶಿವಾಜಿ ಪಣ್ಹಾಳವನ್ನು ಗೆದ್ದುಕೊಂಡ. ಆಗ ಅಲಿಯಿಂದ ನಿಯೋಜಿತನಾದ ಸಿದ್ದಿ ಜೊಹಾರ್ ಶಿವಾಜಿಯ ಮೇಲೆ ಜಯ ಗಳೀಸುವ ಹಂತ ತಲುಪಿದ್ದಾಗ ಶಿವಾಜಿ ಪಣ್ಹಾಳದಿಂದ ತಪ್ಪಿಸಿಕೊಂಡು ಪಾರಾದ. ಅಲಿ ಆದಲ್ ಷಾ ಪಣ್ಹಾಳವನ್ನು ವಶಪಡಿಸಿಕೊಂಡ. ಶಿವಾಜಿ ದಾಳಿಗಳನ್ನು ಮುಂದುವರಿಸಿ ಕೊಂಕಣದ ಹಲವು ಪ್ರದೇಶಗಳನ್ನು ಅಲಿಯಿಂದ ಗದ್ದುಕೊಂಡ. ಅಲ್ಲಿಂದಲೂ ಶಿವಾಜಿ ಹಿಮ್ಮೆಟ್ಟುವಂತೆ ಅಲಿ ಆದಿಲ್ ಷಾ ಕ್ರಮ ಕೈಗೊಂಡ. ಔರಂಗಜೇಬ್ ದೆಹಲಿಯ ಸುಲ್ತಾನನಾದಮೇಲೆ ಬಿಜಾಪುರದ ವಿರುದ್ಧ ಯುದ್ಧವನ್ನು ಮುಂದುವರಿಸಲು ದಂಡನಾಯಕ ಜಯಸಿಂಗನನ್ನು ಕಳುಹಿಸಿಕೊಟ್ಟ (1665). ಜಯಸಿಂಗ್ ಶಿವಾಜಿಯ ಮೇಲೆ ಯುದ್ಧಮಾಡಿ ಪುರಂದರ ಒಪ್ಪಂದವನ್ನು ಮಾಡಿಕೊಂಡ. ಅನಂತರ ಜಯಸಿಂಗ್ ಶಿವಾಜಿಯ ಸಹಾಯ ಪಡೆದು ಬಿಜಾಪುರದ ಮೇಲೆ ದಂಡೆತ್ತಿಬಂದ. ಆದರೆ ಬಿಜಾಪುರವನ್ನು ಅಲಿ ಆದಿಲ್ ಷಾನಿಂದ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಅಲಿ ಆದಿಲ್ ಷಾ ಮುಗಲರ ಮತ್ತು ಮರಾಟರ ವಿರುದ್ಧ ಹೋರಾಡಿ ಬಿಜಾಪುರ ರಾಜ್ಯವನ್ನು ರಕ್ಷಿಸಿದ. ಆದರೆ ತನ್ನ ಆಳ್ವಿಕೆಯ ಕೊನೆಯ ಆರು ವರ್ಷ್ಗಳನ್ನು ಸುಖಲೋಪನಾಗಿ ಕಳೆದು 1672ರಲ್ಲಿ ಮೃತನಾದ. ಆಲಿಗೇಟರ್ ಮೊಸಳೆ: ಸರೀಸೃಪವರ್ಗಕ್ಕೆ ಸೇರಿದ ಒಂದು ಜಾತಿಯ ಮೊಸಳೆ (ನೋಡಿ-ಮೊಸಳೆ). ಅಮೆರಿಕದ ಸಂಯುಕ್ತಸಂಸ್ಥಾನ್ಗಳ ದಕ್ಷಿಣಭಾಗ ಮತ್ತು ಚೀನಾ ದೇಶಗಳಲ್ಲಿ ಜೀವಿಸುತ್ತದೆ. ತಲೆ ಅಗಲ ಮತ್ತು ಚಿಕ್ಕದಾಗಿಯೂ ಮೂತಿ ಮೊಂಡಿಗೆಯೂ ಇದೆ. ಕೆಳದವಡೆಯ ನಾಲ್ಕನೆಯ ಹಲ್ಲು ಮೇಲ್ದವಡೆಯಲ್ಲಿರುವ ಗುಳೂಗೆಯಲ್ಲಿ ಹುದುಗಿದೆ.ಆದರೆ ಇತರ ಮೊಸಳೆಗಳಲ್ಲಿ ನಾಲ್ಕನೆಯ ಹಲ್ಲು ಮೇಲ್ದವಡೆಯ ಒಂದು ಸಂದಿಯಲ್ಲಿ ಸೇರಿಕೊಂಡಿದೆ. ಉಳಿದ ಮೊಸಳೆಗಳಂತೆ ಕಾಲಿನ ಪಾದದಲ್ಲಿ ಹಲ್ಲೊಡೆದ ಅಂಚು ಇರುವುದಿಲ್ಲ; ಜಲಪಾದ ಕಾಲು ಬೆರಳುಗಳ ತುದಿಯವರೆಗೊ ಅವರಿಸಿರುವುದಿಲ್ಲ. ಆಲಿಗೇಟರ್ ಮೊಸಳೆಗಳಲ್ಲಿ ಎರಡು ಪ್ರಭೇದಗಳು: 1.ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಮಿಸಿಸಿಪ್ಪಿಯ ಆಲಿಗೇಟರ್ 2. ಚೀನ ದೇಶದ ಯಾಂಗ್ಟ್‍ಜಿಕಿಯಾಂಗ್ ಭಾಗದಲ್ಲಿರುವ ಸ್ಯೆನೆಸಿಸ್ ಆಲಿಗೇಟರ್.