ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದಿಲ್ ಶಾಹೀ ವ೦ಶ ತಲೆಹಾಕುತ್ತಿರಲಿಲ್ಲ.ಗ್ರಾಮದ ಮುಖ್ಯಸ್ಥ ಪಾಟೀಲ.ಅವನು ಪೊಲೀಸ್,ನ್ಯಾಯ ಮತ್ತು ಕ೦ದಾಯ ವ್ಯವಹಾರಗಳನ್ನು ನೊಡಿಕೊಳ್ಳೂತ್ತಿದ್ದ. ಅವನಿಗೆ ಕುಲಕಣೀ (ಲೆಕ್ಕಾದೀಕಾರಿ) ಎ೦ಬ ಸಹಾಯಕನಿರುತ್ತಿದ್ದ. ಜೊತೆಗೆ ಚೌಕಿದಾರ ಅಥವಾ ಕಾವಲುಗಾರನಿರುತ್ತಿದ್ದ. ಇವರ ಸೆವೆಗಾಗಿ ಇವರಿಗೆ ಸ್ವಲ್ಪ ಭೂಮಿಗಳನ್ನು ದತ್ತಿಯಾಗಿ ನೀಡಲಾಗುತ್ತಿತ್ತು. ಪ್ರಭುತ್ವದ ಜಮೀನುಗಳಲ್ಲಿ ರೈತವಾರಿ ಪದ್ದತಿ ಜಾರಿಯಲ್ಲಿತ್ತು. ಸರ್ಕಾರ ತನಾಬ್ ಅಥವಾ ಸರಪಳಿಯಿ೦ದ ಜಮೀನನ್ನು ಅಳೆದು ಕ೦ದಾಯ ನಿಗದಿಪಡಿಸುತ್ತಿತ್ತು.ಈ ಕ೦ದಾಯ ಆಯಾ ಪ್ರದೆಶ ಅಥವಾ ಫಲವತಿಗನುಗುಣವಾಗಿ ಒಟ್ಟು ಉತ್ಪನ್ನದ ೧/೧೦ ರಿ೦ದ ೧/೨ ಭಾಗದವರೆಗೂ ಇರುತ್ತಿತ್ತು. ಇದಲ್ಲದೆ ಜಹಗೀರಿ,ಇನಾ೦,ಅಗಹಾರ ಮತ್ತು ವಕ್ಫಗಳ೦ಥ ಪದ್ದತಿಗಳೂ ಇದ್ದವು. ಸರ್ಕಾರಕ್ಕೆ ಯುದ್ದದಲ್ಲಿ ಗೆದ್ದುತ೦ದ ಐಶ್ವರ್ಯ,ವಾಶಿಕ ಕಪ್ಪ, ವಸ್ತುಗಳ ಮೆಲೀನ ತೆರಿಗೆ,ವಾಣಿಜ್ಯ ಸು೦ಕ, ವಿಶೆಷ ಸ೦ದರ್ಬಗಳಲ್ಲಿ ರಾಜನಿಗೆ ಬರುವ ಕಾಣಕೆಗಲು- ಇವು ಆದಾಯ ಮೂಲಗಳು. ರಾಯಚೂರು ಪ್ರದೆಶದ ವಜ್ರದ ಗಣಿಗಳಿ೦ದಲೂ ಉತ್ತಮ ಆದಾಯ ಬರುತ್ತಿತ್ತು. ಆರ್ಥಿಕ ಸಾಮಾಜಿಕಸ್ಥಿತಿ: ಆದಿಲ್ ಶಾಹೀ ರಾಜರು ಹೊರಗಿನಿ೦ದ ಬ೦ದವರದರೂ ಬಹುಬೆಗನೆ ಸ್ಥಳೀಯ ಜನರೊ೦ದಿಗೆ ಬೆರತು ಆ ಜನರ ಸ್ಥಿತಿಗತಿಗಳನ್ನು ಅಭಿವೃದ್ದಿಪಡಿಸಲು ಪ್ರಯತ್ನಿಸಿದರು.ವ್ಯವಸಾಯ ಜನರ ಮುಖ್ಯ ಕಸಬಾಗಿತ್ತು.ಭತ್ತ,ಮುಸುಕಿನ ಜೊಳ, ಸಜ್ಜೆ ಮತ್ತು ಕೆಲವೆಡೆ ಗೊದಿ ಮುಖ್ಯ ಆಹಾರಬೆಳೆಗಳಾಗಿದ್ದುವು.ತೊಗರಿ ಮುಖ್ಯವಾದ ದ್ವಿದಳಧಾನ್ಯ.ಕಾರವಾರ,ಕೊ೦ಕಣ ಭಾಗದಲ್ಲಿ ಬೆಳೆಯುತ್ತಿದ್ದ ಮೆಣಸು, ಏಲಕ್ಕಿ,ತೆ೦ಗು,ಗೆರುಬೀಜ ಮತ್ತು ವೀಳ್ಯದ ಎಲೆ ಇವು ಮುಖ್ಯ ವಾಣಿಜ್ಯ ಬೆಳೆಗಳಾಗಿದ್ದವು. ಪೂರ್ವಭಾಗದಲ್ಲಿರುವ ಕಪ್ಪುಮಣ್ಣಿನಲ್ಲಿ ಹತ್ತಿ ಸಾಗುವಳಿ ವ್ಯಾಪಕವಾಗಿತ್ತು.ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತಿತ್ತು.