ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಪ್ಟೆರಿಕ್ಸ್-ಆಫಾ

ಆಪ್ಟೆರಿಕ್ಸ್:ಕೀವೀ ಎಂಬ ಹಾರಲಾಗದ ಪಕ್ಷಿಯ ವಂಶನಾಮ.ನ್ಯೂಜಿಲೆಂಡಿನ ಮೂಲನಿವಾಸಿ.ಇದರ ರೆಕ್ಕೆ ಬಹಳ ಮೊಟಕು;ಪುಕ್ಕದ ಗರಿಗಳು ಬಿಡಿಡಿ.ಪೃಷ್ಠಭಾಗ ಮೊಟಕಾಗಿ ಕಾಣುತ್ತದೆ.ಮಾಂಸಕ್ಕೆಂದು ಇವನ್ನು ಬೇಟೆಯಾಡುವುದುಂಟು.ಇದರ ಕೂಗು ಕೀವೀ ಎಂದು ಧ್ವನಿಸುವುದರಿಂದ ಅದೇ ಹೆಸರು ಪಕ್ಷಿಗೆ ಬಳಕೆಯಾಗಿದೆ.

ಕೀವೀ ಗಾತ್ರದಲ್ಲಿ ದೊಡ್ಡ ಕೋಳಿಯನ್ನು ಹೋಲುವುದು.ಇದರ ಕೊಕ್ಕು ಅತಿ ಉದ್ದವಾಗಿ ಬಾಗಿದೆ.ಕೊಕ್ಕಿನ ತುದಿಯಲ್ಲಿ ನಾಸಿಕ ರಂಧ್ರಗಳು ಇವೆ.ಈ ಪಕ್ಷಿಗಳ ಗ್ರಹಣ ಮತ್ತು ಶ್ರವಣ ಶಕ್ತಿ ಅತಿ ಚುರುಕು;ಆದರೆ ದೃಷ್ಟಿ ಸ್ವಲ್ಪ ಮಂದ.ಕಾಲುಗಳು ಬಹಳ ದಪ್ಪ;ಪ್ರತಿ ಕಾಲಿನಲ್ಲೂ ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಹಿಂದಕ್ಕೆ ತಿರುಗಿದೆ.ರೇಗಿಸಿದಾಗ ಇವು ಮೈಮೇಲೆ ಬೀಳಲು ಹಿಂಜರಿಯುವುದಿಲ್ಲ.ವಾಸ ದಟ್ಟವಾದ ಕಾಡುಗಳಲ್ಲಿ.ಇದು ನಿಶಾಚರಿ.ಈ ಹಕ್ಕಿ ತನ್ನ ಉದ್ದವಾದ ಕೊಕ್ಕಿನಿಂದ ಇರುವೆ,ಗೆದ್ದಲುಹುಳು ಮತ್ತು ಎರೆಹುಳುಗಳನ್ನು ಗೂಡುಗಳಿಂದ ಎಳೆದು ತಿನ್ನುತ್ತದೆ.

ಬೆಳುದಿಂಗಳ ರಾತ್ರಿಯಲ್ಲಿ ಇವುಗಳ ಗರಿಗಳು ಥಳಥಳ ಹೊಳೆಯುತ್ತವೆ.ಈ ಜಾತಿಯ ಪಕ್ಷಿಗಳಲ್ಲಿ ಗಂಡಿಗೆ ಶಿಶ್ನವಿದೆ;ಕೀವೀ ಪಕ್ಷಿಯ ಮೊಟ್ಟೆ ಬಹು ದೊಡ್ಡದು.ತಂದೆ ತಾಯಿ ಪಕ್ಷಿಗಳು ಮೊಟ್ಟೆಗಳನ್ನು ಜೋಪಾನವಾಗಿ ಕಾಪಡಿ,ಮರಿಗಳಾದ ಮೇಲೆ ಆನಂದದಿಂದ ಅವುಗಳ ಸಂಗಡ ನಲಿಯುತ್ತವೆ.

ಈ ಪಕ್ಷಿಜಾತಿಯಲ್ಲಿ ಮೂರು ವಂಶಗಳು ಮಾತ್ರ ಉಳಿದಿವೆ.ಅವೆಲ್ಲ ಬಹುಮಟ್ಟಿಗೆ ಒಂದನ್ನೊಂದು ಹೋಲುತ್ತವೆ.ಅವುಗಳಲ್ಲಿ ಕೀವೀ ಎಂದು ಕರೆಯುವ ಆಪ್ಟೆರಿಕ್ಸ್ ಆಸ್ಟ್ರೀಲಿಕ್ಸ್ ಎಂಬುದೇ ದೊಡ್ಡ ಪಕ್ಷಿ. (ಜಿ.ಎಂ.ಬಿ.)

ಆಪ್ಟೆರಿಗೋಟ:ಕೀಟವರ್ಗದ ಕೆಳದರ್ಜೆಯ ಎರಡು ಉಪವರ್ಗಗಳಲ್ಲಿ ಒಂದು;ಇನ್ನೊಂದರ ಹೆಸರು ಪ್ಟೆರಿಗೋಟ.ಆಪ್ಟೆರಿಗೋಟಗಳಲ್ಲಿ ರೆಕ್ಕೆಗಳಿಲ್ಲ ಪ್ಟೆರಿಗೋಟಗಳು ರೆಕ್ಕೆಗಳಿರುವುವು.ಆಪ್ಟೆರಿಗೋಟ ಪದ ಆಪ್ಟೀರಾ(ನೆಲದ ಮೇಲಿನ ಹಲವಾರು ರೆಕ್ಕೆಗಳಿಲ್ಲದ ಸಂಧಿಪದಗಳನ್ನು ಕುರಿತು ಬಲುಹಿಂದೆ ಬಳಸುತ್ತಿದ್ದ ಪದ)ಪದದಿಂದ ಭಿನ್ನವಾಗಿದೆ.ಆಪ್ಟೆರಿಗೋಟಗಳು ಪ್ರಪಂಚದಲ್ಲೆಲ್ಲ ಹರಡಿವೆ.ಶರೀರ ರಚನೆ ಎಲ್ಲಕ್ಕೂ ಒಂದೇ ತೆರನಾಗಿದೆ.

ಆಪ್ಟೆರಿಗೋಟ ಕೀಟಗಳನ್ನು ನಾಲ್ಕು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು.ಪ್ರೊಟೂರ,ಕೊಲೆಂಬೊಲ,ಥೈಸನೂರ,ಡೈಪ್ಲೂರ.

ಪ್ರೊಟೂರ:ಗಾತ್ರ ಸಣ್ಣ.ಬಣ್ಣ ಹಳದಿ.ಬೂದು.ಕುಡಿ ಮೀಸೆಗಳಿಲ್ಲ.ಬಾಯಿ ತಲೆಯೊಳಗೆ ಅಡಗಿದೆ.೧೨ ಖಂಡಗಳು(ಉಂಗುರದಂಥ ರಚನೆ)ಉದರದಲ್ಲಿವೆ.ಉಪಾಂಗಗಳು ಮೊದಲನೆಯ ೩ ಖಂದಗಳಲ್ಲಿ ಮಾತ್ರ ಇವೆ.ವಾಸ ಸಾಮಾನ್ಯವಾಗಿ ಕಾಡಿನ ಕೊಳಕು ವಸ್ತುಗಳ ಕೆಳಗಿನ ಮಣ್ಣಿನಲ್ಲಿ.ಕೆಲವು ವೇಳೆ ತೊಗಟೆಯ ಕೆಳಗೆ ಅಸಂಖ್ಯಾತವಾಗಿರುತ್ತವೆ.ಪ್ರಾಯದ ಕೀಟದ ಉದರದಲ್ಲಿ ೧೨ ಖಂಡಗಳಿವೆ.ಕೊನೆಯ ೩ ಖಂಡಗಳ ಬೆಳೆವಣಿಗೆ ಕೀಟ ಮೊಟ್ಟೆಯಿಂದ ಹೊರಬಂದ ಮೇಲೆ ಅಗುವುದು.ಅವು ಉದ್ದದಲ್ಲಿ ಇತರ ಖಂಡಗಳಿಗಿಂತ ಚಿಕ್ಕವು.

ಕೊಲೆಂಬೊಲ:ಕುಡಿಮೀಸೆ,ಜಿಗಿಬಾಲ(ಉದ್ದ ೧-೫ ಮಿಮೀ)ಇವೆ.ವಾಸ ಕೊಳೆಯುತ್ತಿರುವ ಸಸ್ಯಗಳೆಡೆ,ತೊಗಟೆಗಳ ಹಿಂದೆ ಇರುವೆ ಗೂಡುಗಳಲ್ಲಿ ಇತ್ಯಾದಿ.ಬಾಯಿ ತಲೆಯೊಳಗೆ ಅಡಗಿದೆ.ಉದರದಲ್ಲಿ ೬ ಖಂಡಗಳಿವೆ.ಮೊದಲನೆಯ ಖಂಡದ ಮೇಲೆ ಮಧ್ಯದ ಉಪಾಂಗಗಳಿವೆ.೩ನೆಯ ಖಂಡದ ಮೇಲೆ ಮಾರ್ಪಟ್ಟ ಚಿಕ್ಕ ಉಪಾಂಗಗಳೂ ಇವೆ.ಉಸಿರಾಡಲು ಶ್ವಾಸನಾಳಗಳಿವೆ.ಕೀಟಗಳು ಸಸ್ಯ,ಮಾಂಸ ಎರಡನ್ನೂ ತಿನ್ನುವುವು.ಬಣ್ಣ ಕಪ್ಪು,ಬೂದು,ನೀಲಿ.ಹೆಣ್ಣು ಗಂಡುಗಳಲ್ಲಿ ವ್ಯತ್ಯಾಸ ಕಾಣುವುದಿಲ್ಲ.

ಥೈಸನೂರ:ಕೊಳೆತ ಎಲೆ,ತೊಗಟೆಗಳು ಕಲ್ಲುಗಳು ಕೆಳಗೆ,ಮಣ್ಣಿನಲ್ಲಿ,ಇರುವೆ.ಗೆದ್ದಲ ಗೂಡುಗಳಲ್ಲಿ ವಾಸ.ಕುಡಿಮೀಸೆ,ಉದರದಲ್ಲಿ ೧೦-೧೧ ಖಂಡಗಳು.ಕೆಳಗಡೆಯ ಉಪಾಂಗಗಳು ಜೊತೆಯಾಗಿವೆ.ಉದರದ ತುದಿಯಲ್ಲಿ ಬಿರುಗೂದಲು(ಬ್ರಿಸಲ್ ಟೈಲ್ಸ್)ಇವೆ.ಶ್ವಾಸನಾಳ ಇದೆ.ಎದೆಯ ಪಕ್ಕದಲ್ಲಿ ನಾಲ್ಕು ಜೊತೆ ಶ್ವಾಸರಂಧ್ರಗಳಿವೆ.ಕೊಳೆತ ಸಸ್ಯ,ಪುಸ್ತಕಗಳಿಗೆ ಲೇಪಿಸಿದ ಗಂಜಿ ತಿನ್ನುತ್ತದೆ.ಕೆಲವು ಮಾಂಸಾಹಾರಿ ಕೀಟಗಳೂ ಉಂಟು.

ಡೈಪ್ಲೂರ:ಹಲವಾರು ಖಂಡಗಳಿಂದ ಕೂಡಿದ ಕುಡಿಮೀಸೆಗಳಿವೆ.ಬಾಯಿಯ ಒಂದು ಭಾಗ ತಲೆಯೊಳಗೆ ಹುದುಗಿದೆ.ಕುರುಡು.೧೧ ಖಂಡಗಳಿರುವ ಉದರ.ಇದರ ಕೊನೆಗೆ ಖಂಡಗಳಿಂದ ಕೂಡಿದ ಚಿಮಟದಂಥ ಎರಡು ಉದ್ದದ ರಚನೆಗಳಿವೆ. (ಪಿ.ಎಂ.)

ಆಪ್ಲೈಟ್:ಸೂಕ್ಷ್ಮಕಣಗಳಿಂದ ಕೂಡಿದ ಸಕ್ಕರೆಯಂಥ ರಚನೆಯಿರುವ ಶಿಲೆ.ಸಾಮಾನ್ಯವಾಗಿ ಗ್ರಾನೈಟಿನ ಖನಿಜಸಂಯೋಜನೆಯುಳ್ಳ ಶಿಲೆ.ಆದರೆ ಇದರ ಖನಿಜಸಂಯೋಜನೆ ಗ್ರಾನೈಟಿನಿಂದ ಗ್ರಾನೊಡೆಯೊರೈಟಿನ ತನಕ ವ್ಯತ್ಯಾಸ ಹೊಂದಬಹುದು.ಇದು ಸಾಮಾನ್ಯವಾಗಿ ಬೆಣಚು-ಫೆಲ್ಡ್ ಸ್ಪಾರ್ಗಳನ್ನು ಪ್ರಮುಖವಾಗಿ ಹೊಂದಿರುತ್ತವೆ.ಫೆಲ್ಡ್ ಸ್ಪಾರ್ ಗಳು ಆರ್ತೋಕ್ಲೇಸಿನಿಂದ ಪೇಜಿಯೋಕ್ಲೇಸಿನವರೆಗೂ ವ್ಯತ್ಯಾಸಹೊಂದಬಹುದು .ಕಪ್ಪು ಮತ್ತು ಬಿಳಿ ಅಭ್ರಕಗಳು,ಮತ್ತಿತರ ಖನಿಜಗಳು ಬಹಳ ಸ್ವಲ್ಪ ಪ್ರಮಾಣದಲ್ಲಿರಬಹುದು.

ಆಪ್ಲೈಟುಗಳು ಬಿತ್ತಿಗಳ(ಡೈಕ್ಸ್) ಹಾಗೂ ಸಣ್ಣಸಣ್ಣ ದಾರಗಳಂತೆಯೂ,ಸಾಮಾನ್ಯವಾಗಿ ಕೆಲವೇ ಅಡಿಗಳ ಅಗಲ ಉಳ್ಳದ್ದಾಗಿಯೂ ಇರುತ್ತವೆ.ಅವುಗಳ ಅಂಚುಗಳು ಸ್ಪಷ್ಟವಾಗಿಯಾದರೂ ಇರಬಹುದು.ಅವು ಸುತ್ತುಮುತ್ತಲಿನ ಕಲ್ಲುಗಳೊಡನೆ ಹೊಂದಿಕೊಂಡಿರಬಹುದು.ಕೆಲವು ತಮ್ಮ ಅಂಚುಗಳಿಗೆ ನೇರವಾಗಿ ಪಟ್ಟಿಗಳನ್ನು ಹೊಂದಿರಬಹುದು(ಬ್ಯಾಂಡೆಡ್).ಸಾಮನ್ಯವಾಗಿ ಇವು ದೊಡ್ಡ ದೊಡ್ಡ ಗ್ರಾನೈಟ್ ಮಹಾಶಿಲೆಗಳಲ್ಲಿ ಇರುತ್ತವೆ.ಇತರ ಶಿಲೆಗಳಲ್ಲಿ ಬಹಳ ಅಪೂರ್ವವಾಗಿ ದೊರೆಯುತ್ತವೆ.ಸಾಮಾನ್ಯವಾಗಿ ಇವು ಪೆಗ್ಮಟೈಟ್ಗಳ ಜೊತೆಯಲ್ಲಿರುತ್ತವೆ.ಪೆಗ್ಮಟೈಟ್ ಮತ್ತು ಆಪ್ಲೈಟುಗಳು ಸಂಬಂಧ ಅನೇಕ ವಿಧವಾಗಿರಬಹುದು.ಒಂದನ್ನೊಂದು ಹೊಂದುಕೊಂಡಿರಬಹುದು ಅಥವಾ ಒಂದಕ್ಕೊಂದು ನೇರವಾಗಿರಬಹುದು.ಅಥವಾ ಒಂದರಲ್ಲೊಂದು ತ್ಯಾಪೆಗಳಂತೆಯೂ ಮಚ್ಚೆಗಳಂತೆಯೂ ಇರಬಹುದು.

ಆಪ್ಲೈಟುಗಳು ವಿವಿಧ ರೀತಿಯಲ್ಲಿ ಉದ್ಭವಿಸುತ್ತವೆ.ಬಿರುಕುಗಳಲ್ಲಿ ಗ್ರಾನೈಟುಗಳ ಅಥವಾ ಪೆಗ್ಮಟೈಟುಗಳ ಪುನಃಸ್ಫಟೀಕರಣದಿಂದ ಉದ್ಭವಿಸುತ್ತವೆ.ಇನ್ನು ಕೆಲವು ಶಿಲಾಂತಸ್ಸರ ಸ್ಥಾನಪಲ್ಲಟದಿಂದ(ಮೆಟಸೊಮಾಟಿಸಂ)ಉಂಟಾಗುತ್ತವೆ.ಹಲವಾರು ಗ್ರಾನೈಟ್ ಶಿಲಾರಸದ ಸ್ಫಟಿಕೀಕರಣದ ಸಮಯದಲ್ಲಿ ಉದ್ಭವಿಸಿದ ಶೇಷ ದ್ರಾವಣಗಳಿಂದ(ರೆಸಿಡ್ಯುಯಲ್ ಸಲ್ಯೂಷನ್ಸ್)ಉದ್ಭವಿಸುತ್ತವೆ.ಈ ಶೇಷ ದ್ರಾವಣಗಲ್ಲಿ ಅನಿಲಗಳು ಹಾಗೇ ಉಳಿದರೆ ಪೆಗ್ಮಟೈಟುಗಳುಂಟಾಗುತ್ತವೆ.ಅನಿಲಗಳು ಉಳಿಯದೇ ಹೋದಲ್ಲಿ ಆಪ್ಲೈಟುಗಳುಂಟಾಗುತ್ತವೆ. (ಎಸ್.ಬಿ.ಎಲ್.)

ಆಫ್ ಹ್ಯೂಮನ್ ಬಾಂಡೇಜ್:ಸಾಮರ್ಸೆಟ್ ಮಾಮ್ ನ ಪ್ರಸಿದ್ಧ ಇಂಗ್ಲಿಷ್ ಕಾದಂಬರಿ.ಮಾಮ್ ಇದನ್ನು ೧೮೮೯ರಲ್ಲಿ ಬರೆಯಲು ಪ್ರಾರಂಭಿಸಿದ.೧೯೧೫ರಲ್ಲಿ ಪ್ರಕಟವಾಯಿತು.ಕತೃರ್ವಿನ ಜೀವನವನ್ನೇ ಕಾದಂಬರಿಯ ಕಥೆಯಲ್ಲಿ ಬಹುಮಟ್ಟಿಗೆ ಕಾಣಬಹುದು.ಕಥಾನಾಯಕ ಫಿಲಿಪ್ ಕುಂಟನಾಗಿ ಹುಟ್ಟಿ ಅನೇಕ ಕಷ್ಟಗಳನ್ನು ಸಹಿಸುತ್ತಾನೆ.ಮಾಮ್ ಆದರೋ ತನ್ನ ಉಗ್ಗಿನಿಂದ ಕಷ್ಟಪಡುತ್ತಾನೆ.ಫಿಲಿಪ್ ತನ್ನ ಕುಂಂಟನ್ನು ಸರಿಪಡಿಸಲೆಂದು ದೇವರನ್ನು ಭಯಭಕ್ತಿಯಿಂದ ಪ್ರಾರ್ಥಿಸುತ್ತಾನೆ.ತನ್ನ ಉಗ್ಗಿನ ಬಗ್ಗೆಯೂ ಮಾಮ್ ಒಮ್ಮೆ ಹಾಗೆ ಪ್ರಾಥಿಸಿದ್ದನಂತೆ. (ಎಚ್.ಎ.ಎಸ್.)

ಈ ಕಾದಂಬರಿಯ ನಾಯಕ ಫಿಲಿಪ್ ನಿಗೆ 'ಕ್ಲಬ್ ಫುಟ್'(ಕಾಲು ದಪ್ಪನಾಗಿದ್ದು ಸರಿಯಾಗಿ ಬೆಳೆಯದಿರುವುದು).ಇದರಿಂದ ಶಾಲೆಯಲ್ಲಿ ಇತರರ ಹಾಸ್ಯಕ್ಕೆ ಗುರಿಯಾಗಿ ಹಿಂಸೆಗೊಳಗಾಗುತ್ತಾನೆ.ಆತನಿಗೆ ತಂದೆ ಇಲ್ಲ,ತಾಯಿ ಇಲ್ಲ,ಕಲಾವಿದನಾಗಲು ಪ್ರಯತ್ನಿಸುತ್ತಾನೆ,ಯಶಸ್ವಿಯಾಗುವುದಿಲ್ಲ.ವೈದ್ಯನಾಗಲು ಓದುತ್ತಿರುವಾಗ ಹೋಟೆಲಿನಲ್ಲಿ ಕೆಲಸಮಾಡುವ ಒಬ್ಬ ಹುಡುಗಿಯಲ್ಲಿ ಅನುರಕ್ತನಾಗಿ,ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಸ್ಥಿತಿಯಲ್ಲಿರುತ್ತಾನೆ.ಚಿಕ್ಕಪ್ಪನ ನೆರವಿನಿಂದ ವೈದ್ಯನಾಗುತ್ತಾನೆ.ಅವನಿಗೆ ಬೇಡದ ಹುಡುಗಿಯರು ಆತನನ್ನು ಬಯಸಿ ಕಾಟಕೊಡುತಾರೆ.ಕಡೆಗೆ ಸ್ಯಾಲಿ ಎನ್ನುವ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಾಗಿ ಬಾಳುತ್ತಾನೆ.ಆದರೂ ಅವನನ್ನು ಅತೀವ ಏಕಾಕಿತನದ ಭಾವ ಕಾಡುತ್ತದೆ,ಮದುವೆಗೆ ಅರ್ಥವಿಲ್ಲ ಎನ್ನಿಸುತ್ತದೆ.

ಈ ಕಾದಂಬರಿ ಪರೋಕ್ಷ ಆತ್ಮಮಿತ್ರ,ಈ ಕಾದಂಬರಿಯನ್ನು ಬರೆದಿದ್ದರಿಂದ ತನ್ನನ್ನು ಕಾಡುತ್ತಿದ್ದ ನೆನಪುಗಳಿಂದ ಬಿಡುಗಡೆಯಾಯಿತು.ಈ ಕಾದಂಬರಿಯ ಬರೆಹ ತನಗೊಂದು ಚಿಕಿತ್ಸೆಯಾಯಿತು ಎಂದು ಮಾಮ್ ನೇ ಹೇಳಿಕೊಂಡಿದ್ದಾನೆ.

ಆಘಾ:ಇಂಗ್ಲೆಂಡಿನ ಮರ್ಸಿಯ ದೇಶವನ್ನು ಪ್ರ.ಶ.೭೫೭-೯೬ ರವರೆಗೆ ಆಳಿ,ಸಮಗ್ರ ಇಂಗ್ಲೆಂಡ್ ಒಂದೇ ರಾಜ್ಯವಾಗಲು ದಾರಿಮಾಡಿಕೊಟ್ತ ಒಬ್ಬ ದೊರೆ.ಕೆಂಟ್,ಸಸೆಕ್ಸ್ ಮುಂತಾದ ನೆರೆ ರಾಜ್ಯಗಳು ತನ್ನ ಪ್ರಭಾವಕ್ಕೆ ಒಳಪಡುವಂತೆ ಮಾಡಿಕೊಂಡು,೭೭೪ರಲ್ಲಿ ಹೊರಡಿಸಿದ ಸನ್ನದಿನಂತೆ ರೆಕ್ಸ್ ಆಂಗ್ಲೋರಂ ಅಥವಾ ಇಂಗ್ಲಿಷರ ದೊರೆ ಎಂಬ ಬಿರುದು ಧರಿಸಿದ.ಪೂರ್ವ ಆಂಗ್ಲಿಯ ದೇಶವನ್ನು ವಶಪಡಿಸಿಕೊಂಡು ವೆಸೆಕ್ಸ್