ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವಿರೊಯಿಜ್-ಅವೆಸ್ತ

ಸೇರಿದೆ.ಬೆಳಕು,ಕಾವು,ಶಕ್ತಿ,ಚಲನೆಗಳಂಥ ಭೌತಿಕ,ರಾಸಾಯನಿಕ ವಿಚಾರಗಳಲ್ಲೂ ಖನಿಜಶಾಸ್ತ್ರದಲ್ಲೂ ಜ್ಯಾಮಿತಿಯಲ್ಲೂ ಆವಿಸೆನ್ನ ಮುನ್ನಡೆದಿದ್ದ.ಈತನ ಗ್ರಂಥಗಳಲ್ಲಿ ಆಲ್ ಕಾನೂನ್ ಫಿಲ್ತಿಬ್ (ವೈಧ್ಯ ವಿಜ್ಞಾನ) ಆವಿಸೆನ್ನನನ್ನು ಆಪಾರ ಕೀರ್ತಿಗೇರಿಸಿದ,ದಶಲಕ್ಷ ಪದಗಳಿರುವ ವೈದ್ಯಕ ಮಹಾಗ್ರಂಥ ಬರೆದ್ದಿಟ್ಟಿದ್ದ ಇವನ ಅನುಭವಗಳಲ್ಲಿ ಬಹುಪಾಲು ಇವನ ಅಲೆದಾಟಗಳಲ್ಲಿ ಕಳೆದುಹೋದರೂ ಈ ಕ್ರಮವರಿತ ವಿಶ್ವಕೋಶದಂತಿರುವ ತನ್ನ ವೈದ್ಯಗ್ರಂಥದಲ್ಲಿ ಬಹುಮಟ್ಟಿಗೆ ರೋಮ್ ಸಾಮ್ರಾಜ್ಯದ ಗ್ರೀಕ್ ವೈದ್ಯರ ಸಾಧನೆಗಳನ್ನೂ ಇತರ ಅರಬ್ಬೀ ಗ್ರಂಥಗಳನ್ನೂ ತನ್ನ ಅನುಭವಗಳೊಂದಿಗೆ ಸೇರಿಸಿದ್ದ.ಅಲ್ಲದೆ,ಚರ್ಮರೋಗ ವಿಜ್ಞಾನ, ಅಂಗರಚನಾವಿಜ್ಞಾನ, ಅಂಗಕ್ರಿಯಾವಿಜ್ಞಾನ, ಶಸ್ತ್ರವೈದ್ಯ, ಪ್ರಸೂತಿವಿಜ್ಞಾನ, ಮನೋರೋಗವಿಜ್ಞಾನ, ಔಷಧವಸ್ತು ವಿಜ್ಞಾನಗಳನ್ನೂ ಅಳವಡಿಸಿದ್ದ. ಶಸ್ತ್ರವೈದ್ಯವನ್ನು ವೈದ್ಯದಲ್ಲಿ ಒಂದು ಕಿರಿಯ ವಿಭಾಗವೆಂದು ಈತ ಗಣಿಸಿದ್ದರಿಂದ, ಹಲವಾರು ಶತಮಾನಗಳ ಕಾಲ ಆ ದಿಸೆಯ ಮುನ್ನಡೆ ಕುಂಟಿತು. ಈ ಗ್ರಂಥ ಇಸ್ಲಾಂ ಪ್ರಪಂಚದಲ್ಲಿ ಹೆಸರಾಗಿ ಈಗಲೂ ಮಾನ್ಯವಾಗಿದೆ, ಅಧಿಕೃತವಾಗಿದೆ. 6 ಶತಮಾನಗಳ ಕಾಲ ಯುರೋಪಿನ ವಿಶ್ವವಿದ್ಯಾಲಯಗಳಲ್ಲೂ ಇದೇ ಪಠ್ಯಗ್ರಂಥವಾಗಿತ್ತು. ಕ್ರಿಮೋನದ ಗೆರಾರ್ಡ್ 12ನೆಯ ಶತಮಾನದಲ್ಲಿ ಇದನ್ನು ಲ್ಯಾಟಿನ್ನಿಗೆ ಅನುವಾದಿಸಿದ್ದು, 1500ರ ಹೊತ್ತಿಗೆ 15 ಬಾರಿ ಅಚ್ಚಾಗಿತ್ತು. ಬೆಲ್ಲುನೋದ ಆಂಡ್ರಿಯ ಅಲ್ಟಾಗೊ ಹೊಸದಾಗಿ ಮಾಡಿದ ಅನುವಾದ 1527ರಲ್ಲೂ ಆನಂತರವೂ ಅಚ್ಚಾಯಿತು. ಅಚ್ಚಾದ ಅರಬ್ಬೀ ಗ್ರಂಥಗಳಲ್ಲಿ (1593) ಇದು ಎರಡನೆಯದು.ಆವಿಸೆನ್ನನ ಕೃತಿಗಳಲೆಲ್ಲಾ ಈ ಮಹಾಗ್ರಂಥ ಅತ್ಯಂತ ಕೀರ್ತಿಗಳಿಸಿತ್ತು.

                                                         (ಎಸ್.ಟಿ.ಪಿ)

ಅವಿರೊಯಿಜ್: 1126-98 ಸ್ಪೇನಿನ ಅರಬ್ಬೀ ದಾರ್ಶನಿಕ. ಇಬ್ನೆರಷ್ಡ್ ಎಂಬ ಹೆಸರೂ ಉಂಟು. ಖಗೋಳ, ಔಷದ ಮತ್ತು ನ್ಯಾಯಶಾಸ್ತ್ರದ ಮೇಲೂ ಗ್ರಂಥಗಳನ್ನೂ ರಚಿಸಿದ್ದಾನೆ. ಮೂಲಗ್ರಂಥಗಳು ಅರಬ್ಬೀ ಭಾಷೆಯಲ್ಲಿದ್ದರೂ ಲ್ಯಾಟಿನ್ ಮತ್ತು ಹೀಬ್ರೂಗೆ ಭಾಷಾಂತರವಾಗಿದೆ. ಇಸ್ಲಾಂ ಧರ್ಮವನ್ನು ಕುರಿತು ಬರೆದ ಗ್ರಂಥಗಳೂ ಅರಿಸ್ಟಾಟಲ್ ನನ್ನು ಕುರಿತು ಬರೆದ ಟಿಪ್ಪಣಿಗಳೂ ಮನನೀಯವಾಗಿವೆ. ಅರಿಸ್ಟಾಟಲನ ವಿಚಾರಗಳನ್ನು ಕ್ಯಾಥೊಲಿಕ್ ಸಿದ್ಧಾಂತಗಳಿಗೆ ಅಳವಡಿಸುವ ಪ್ರಯತ್ನವನ್ನು ಇವನ ಲೇಖನಗಳಲ್ಲಿ ಕಾಣಬಹುದು. ಇವನ ವಿಚಾರಗಳು ಮಧ್ಯಯುಗದ ಯುರೋಪಿನಲ್ಲಿ ಪ್ರಚಲಿತವಾದ ಸಂಪ್ರದಾಯಬದ್ಧ ವಿದ್ಯಾಭ್ಯಾಸ ಹಾಗು ಧಾರ್ಮಿಕ ಶಿಕ್ಷಣದ (ಸ್ಕೊಲ್ಯಾಸ್ಟಿಸಿಸಮ್) ಮೇಲೆ ಬಹಳ ಪ್ರಭಾವ ಬೀರಿವೆ. ಅಕ್ಟಿನಸ್ ಮತ್ತು ಡಾಂಟೆ ಮುಂತಾದವರು ಇವನ ವಿಚಾರಗಳ ಪ್ರಭಾವಕ್ಕೊಳಗಾಗಿರುವುದು ಸರ್ವವಿದಿತ.ಕಿತಾಬ್ ಅಲ್ ಕುಲ್ ಯಾತ್(ವಿಶ್ವಗಳ ಪುಸ್ತಕ) ಇವನ ಪ್ರಮುಖ ವೈದ್ಯಕೀಯ ಪುಸ್ತಕ.

                                                        (ಎಚ್.ಕೆ.ಆರ್)

ಸ್ಪೇನಿನ ಕಾರ್ಡೋಬದಲ್ಲಿ ಹುಟ್ಟಿದ ಇವನು ಅವೆಂಜೋಯರ್ ನ ಶಿಷ್ಯ. ಅವಿಸೆನ್ನನ ಗ್ರಂಥಗಳ ಮೇಲೆ ಟಿಪ್ಪಣಿಗಳನ್ನು ಬರೆದ. ಸಿಡುಬು ಒಂದು ಬಾರಿ ತಗುಲಿದರೆ ಮತ್ತೆ ಬರದೆಂದು ಗಮನಿಸಿದವರಲ್ಲಿ ಇವನೇ ಮೊದಲಿಗ. ಅವೆಂಜೋಯರ್: 1113-62 ಅರಬ್ಬಿಯ ಅಬುಮಾರ್ವಾನ್ ಅಬ್ದುಲ್ ಮಲ್ಲಿಕ್ ಇಬ್ನ್ ಜೋರ್, ತಂದೆಯೂ ತಾತನೂ ವೈದ್ಯರಾಗಿದ್ದ ಹೆಸರಾಂತ ಕುಟುಂಬದ, ಸ್ಪೇನಿನ ಮುಸ್ಲಿಂ ವೈದ್ಯ ತತ್ತ್ವಜ್ಞಾನಿ ವೈದ್ಯ ಅವಿರೊಯಿಜ್ ನ ಸಮಕಾಲೀನನಾಗಿ, ಅವನ ಭಾಷಣಗಳನ್ನು ಕೇಳಿ ಅವನಿಂದಲೇ ವೈದ್ಯ ಕಲಿತ. ಬುದ್ಧಿ ಇಲ್ಲವೇ ಬುದ್ಧಿ ಪ್ರಮಾಣ ತತ್ತ್ವಶಾಲಿಯಾಗಿದ್ದ. ಆಗಿನ ಕಾಲದಲ್ಲಿ ಉನ್ನತಿಗೇರಿದ ಗ್ಯಾಲೆನ್ನನನ್ನು ಎದುರಿಸುವ ಎದೆಗಾರಿಕೆ ತೋರಿದ ಕೆಲವೇ ಮಂದಿಯಲ್ಲಿ ಇವನೊಬ್ಬ. ಬೊಗಳೆ ವೈದ್ಯಗಾರಿಕೆಯನ್ನೂ ಜೋತಿಷಿಗಳ ಕುರುಡು ನಂಬಿಕೆಯ ಮದ್ದುಗಳನ್ನೂ ಬಲವಾಗಿ ವಿರೋಧಿಸಿ ತನ್ನ ಬರವೆಣಿಗೆಗಳಲ್ಲಿ ವ್ಯಕ್ತಪಡಿಸಿದ. ಗರ್ಭಕೋಶವನ್ನು ಪೂರ್ತಿ ತೆಗೆದುಹಾಕಲು ಮೊದಲು ಕೈ ಹಾಕಿದ. ಪ್ರಾಣಿಗಳ ಮೇಲೆ ಪ್ರಯೋಗಗಳನ್ನು ನಡೆಸಿದ. ಜಠರದ ಏಡಿಗಂತಿ, ನನ್ನಿಲುಕದ(ಮೀಡಿಯಾಸ್ಟೃನಂ) ಕುರು, ಒಳಗಿವಿ ಕೀವು ಇವನ್ನೆಲ್ಲ ವಿವರಿಸಿದ. ಕಜ್ಜಿಗೆ ಕಾರಣವಾದ ಹುಳುವನ್ನು ಮೊದಲು ಬಣ್ಣಿಸಿದ. ಒಂದು ಹೊತ್ತಗೆಯಲ್ಲಿ(ಆಲ್ ಅಫದಿಯ) ಆಹಾರ, ಮದ್ದುಗಳನ್ನು ವಿವರಿಸಿದ. ಇನ್ನೊಂದರಲ್ಲಿ (ಅಲ್ ಇಕ್ತಿಸಾದ್) ಮಾನಸಿಕ ಬೇನೆ, ಜನಾರೋಗ್ಯವನ್ನು ವಿವರಿಸಿದ. ರೋಗಗಳು, ಚಿಕಿತ್ಸೆ, ಪಥ್ಯ, ಮದ್ದುಗಳ ವಿವರವಿರುವ ಅವನ ಅಲ್ಟೆಯಿಸಿರ್(ಆರೋಗ್ಯದ ಸರಿಪಡಿಸಿಕೆ) ಎಂಬ ಪುಸ್ತಕ ಯಹೂದಿ ನುಡಿಗೂ (1260) ಆಮೇಲೆ ಲ್ಯಾಟಿನ್ನಿಗೂ (1280) ಅನುವಾದವಾಗಿ, 17ನೆಯ ಶತಮಾನದ ತನಕ ಜಾರಿಯಲ್ಲಿತ್ತು ಮಗನೂ ತಂದೆಯ ಶಿಷ್ಯನಾಗಿ ಹಲವಾರು ವೈದ್ಯ ಗ್ರಂಥಗಳನ್ನು ಬರೆದ. ಅವೆನೇರಿಯಸ್, ರಿಚರ್ಡ್ ಹೆನ್ರಿಕ್ ಲಡ್ವಿಗ್: 1843-96. ಜರ್ಮನ್ ದಾರ್ಶನಿಕ. ಸೂರಿಕ್ ನಲ್ಲಿ ತತ್ತ್ವ ಶಾಸ್ತ್ರದ ಪ್ರಾಧ್ಯಪಕನಾಗಿದ್ದ (1877-96). ಈತ ರಚಿಸಿದ ತತ್ತ್ವ ಶಾಸ್ತ್ರಗ್ರಂಥಗಳಲ್ಲಿ ಎರಡು ಲೋಕವಿಖ್ಯಾತವಾಗಿವೆ. ಮೊದಲೆನೆಯದು ತತ್ತ್ವಶಾಸ್ತ್ರ ಸೂತ್ರಗಳ ಬಗ್ಗೆಯೂ ಎರಡನೆಯದು ತತ್ತ್ವವಿಮರ್ಶೆಯ ಬಗ್ಗೆಯೂ ಇವೆ. ಎರಡನೆಯ ಗ್ರಂಥದಲ್ಲಿ ಈತ ಪ್ರತಿಪಾದಿಸಿರುವ ತತ್ತ್ವಸಾನುಭವ ವಿಮರ್ಶೆ (ಎಂಪಿರಿಯೋ ಕ್ರಿಟಿಸಿಸಂ). ಮನುಷ್ಯನ ಚಿಂತನೆಯಿಂದ ವಿಕಸನಗೊಳ್ಳುವ ಅರಿವು ಹಾಗು ಪರಿಸರದ ಮೇಲೆ ನಿರ್ಧಾರವಾಗುವ ಲೌಕಿಕಾನುಭವ- ಈ ಎರಡನ್ನೂ ಸಮನ್ವಯಗೊಳಿಸಬಹುದು ಎನ್ನುವುದೇ ಈತ ಸೂಚಿಸಿದ ವಿಚಾರಧಾರೆ. ಈ ತತ್ತ್ವ ಲೌಕಿಕವಾದದಿಂದ(ಮೆಟೀರಿಯಲಿಸಿಮ್) ವಿಭಿನ್ನ ವಾದುದೆಂದು ಹೇಳಲಾಗಿದೆ. ಅವೆಸ್ತ: ಜರತುಷ್ಟ್ರನ ಅನುಯಾಯಿಗಳು ಬರೆದಿರುವ ಪ್ರಾಚೀನ ಧಾರ್ಮಿಕ ಲೇಖನಗಳ ಸಂಕಲನ. ಆ ಧರ್ಮಾವಲಂಬಿಗಳ ಪೈಕಿ ಅನೇಕರು ಈಗ ಭಾರತದಲ್ಲಿ ಬಾಳುತ್ತಿದ್ದಾರೆ. ಇರಾನ್ ದೇಶ ಅವರ ಹಳೆಯ ತವರು ಮನೆ: 6ನೆಯ ಶತಮಾನದಲ್ಲಿ ಪ್ರವಾದಿ ಜರತುಷ್ಟ್ರ ಅಲ್ಲಿ ಜೀವಿಸುತ್ತಿದ್ದು ತನ್ನ ಉಪದೇಶಗಳನ್ನು ಪ್ರಚಾರ ಮಾಡುತ್ತಿದ್ದ. ಪ್ರಥಮತಃ ಅವೆಸ್ತ ಎಂದರೆ ಪವಿತ್ರ ಗ್ರಂಥ ಎಂದು ಅರ್ಥ. ಅದಕ್ಕೆದುರಾಗಿ ಜಂಡ್ ಎಂಬುದು ಆ ಪವಿತ್ರಗ್ರಂಥದ ಮೇಲೆ ಪಹ್ಲವಿ ಭಾಷೆಯಲ್ಲಿರುವ ಟೀಕೆ ಮತ್ತು ಟಿಪ್ಪಣಿ. ಎರಡನೆಯದಾಗಿ, ಅವೆಸ್ತ ಎಂಬುದು ಆ ಪವಿತ್ರ ಗ್ರಂಥದಲ್ಲಿ ಪ್ರಯುಕ್ತವಾಗಿರುವ ಭಾಷೆಗೂ ಅನ್ವಯಿಸುತ್ತದೆ. ಈಗ ಜ್ಂಡ್ ಎಂಬುದು ಅವೆಸ್ತ ಭಾಷೆಯ ಹೆಸರಲ್ಲವೆಂಬುದು ಸ್ಪಷ್ಟ ಅವೆಸ್ತ ಪದ ಪಹ್ಲವಿಯ ಅವಿಸ್ತಾಕ್ ಅಥವಾ ಅಪಸ್ತಾಕ್ ಎಂಬ ಮೂಲದಿಂದ ಬಂದುದು. ಈ ಮೂಲ ಶಬ್ದ ಉಪಸ್ತಾ ಎಂಬ ಮಾತೃಕೆಯಿಂದ ಹೊರಟಿದೆಯನ್ನುವ ಪಕ್ಷದಲ್ಲಿ, ಅದರ ಅರ್ಥ ಅದಿಮ ಅಥವಾ ಅಸಲು ಪ್ರತಿ ಎಂದಾಗುತ್ತದೆ. ಈಗ ಉಪಲಬ್ದವಾಗಿರುವ ಅವೆಸ್ತ ಒಂದೇ ಒಂದು ಪುಸ್ತಕವಾಗಿಲ್ಲ; ಯಾವುದೋ ಕಾಲದಲ್ಲಿ ಹೇರಳವಾಗಿದ್ದ ಸಾಹಿತ್ಯರಾಶಿಯ ಏಕಾಂಶವೆನಿಸಿರುವ ಹಲವಾರು ಪುಸ್ತಕಗಳ ಸಂಕಲನ. ಪಾರಸಿ ಸಂಪ್ರದಾಯದ ಪ್ರಕಾರ 1000 ಅಧ್ಯಾಯಗಳ 21 ನಾಸ್ಕುಗಳನ್ನು(ಪುಸ್ತಕಗಳನ್ನು) ಒಳಗೊಂಡಿದ್ದ ಮೂಲ ಅವೆಸ್ತ ಪ್ರಮಾಣಾವಳಿ ಮೊದಲು ಅಕಿಮೀನಿಯನ್ ಕಾಲದಲ್ಲಿ ಸ್ಥಿರೀಕೃತವಾಯಿತು. ಅದನ್ನು ದನಗಳ ಚರ್ಮದ ಮೇಲೆ ಬರೆದು ಅದರ ಎರಡು ಪ್ರತಿಗಳನ್ನು ಪರ್ಸಿಪೊಲಿಸ್ ನಗರದ ಪತ್ರಾಗಾರ ಮತ್ತು ಧನಾಗಾರಗಳಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ದುರದೃಷ್ಟವಶಾತ್ ಆ ಪ್ರತಿಗಳೆರಡೂ ಅಲೆಕ್ಸಾಂಡರನ ವಿಜಯಯಾತ್ರೆಯ ಪರಿಣಾಮವಾಗಿ ನಾಶ ಹೊಂದಿದವು. ಆದಾದ ಮೇಲೆ ವೊಲೊಗೋಸಿಸ್ I ಎಂಬ ರಾಜ ಪ್ರಾರಂಭ ಮಾಡಿದ ಉದ್ಯಮವನ್ನು ಜರತುಷ್ಟ್ರನ ಧರ್ಮದಲ್ಲಿ ತುಂಬ ಶ್ರದ್ಧೆಯುಳ್ಳ ಸಸ್ಸೇನಿಯನ್ ರಾಜರು ಮುಂದುವರಿಸುತ್ತ ಪ್ರಶ.3ನೆಯ ಶತಮಾನದ ಹೊತ್ತಿಗೆ ಬರೆಹದಲ್ಲಾಗಲೀ ಪುರೋಹಿತರ ನೆನಪಿನಲ್ಲಾಗಲೀ ಉಳಿದಿದ್ದ ಪ್ರಮಾಣಾವಳಿ ಎಲ್ಲವನ್ನೂ ಸಮಗ್ರವಾಗಿ ಪುನರುಜ್ಜೀವನಗೊಳಿಸಲು ಸಮರ್ಥರಾದರು. ಎರಡನೆಯ ಶಾಹಪೂರ್ (4ನೆಯ ಶತಮಾನ)ರಾಜನ ಕಾಲದಲ್ಲಿ ಇದರ ಕಟ್ಟಕಡೆಯ ಪರಿಷ್ಖರಣ ನಡೆದು ಮತಕ್ಕೆ ಸಂಬಂಧಪಡದ ವೈಧ್ಯ, ಜ್ಯೋತಿಷ ಮತ್ತು ಭೂಗೋಳಗಳ ವಿಷಯಗಳನ್ನೂ ಒಳಗೊಂಡಿದ್ದ ಸಸ್ಸೇನಿಯನ್ ಪ್ರಮಾಣಾವಳಿ ಒಂದು ಸ್ಥಿರರೂಪಕ್ಕೆ ಬಂತು. ದೀನ್ ಕರ್ದ್ ಎಂಬ ೯ನೆಯ ಶತಮಾನದ ಪಹ್ಲವಿ ವಿಶ್ವಕೋಶ. ಈ ಎರಡನೆಯ ಪರಿಷ್ಕರಣದಲ್ಲೂ 21 ನಾಸ್ಕುಗಳಿದ್ದುವೆಂದೂ ಅವುಗಳಲ್ಲಿ 20 ಮೂಲ ಪ್ರಮಾಣಗಳಿಗೆ ಸರಿಹೊಂದುತ್ತಿದ್ದುವೆಂದೂ ತಿಳಿಸುತ್ತದೆ. ಆದರೆ ಈ ಪುನರುದ್ಧೃತ ಗ್ರಂಥ ಮಹಮ್ಮದೀಯರು ಇರಾನಿನೊಳಕ್ಕೆ ನುಗ್ಗಿದಾಗ ತುಂಬ ಭಂಗಕ್ಕೆ, ಅಲೆಕ್ಸಾಂಡರನ ದಂಡಯಾತ್ರೆಯ ಸಮಯದಲ್ಲಿ ಆದುದಕ್ಕಿಂತಲೂ ಹೆಚ್ಚಾದ ಭಂಗಕ್ಕೆ ಒಳಗಾಯಿತು. ನಾಶಕ್ಕೆ ಪಕ್ಕಾಗದೆ ಶೇಷವುಳಿಯಿತೋ ಅದನ್ನು ಕೆಲವು ಜರತುಷ್ಟ್ರಾನುಯಾಯಿಗಳು, ಎಂದರೆ, ಇರಾನಿನಲ್ಲಿ ಉಳಿದುಕೊಂಡ ಗಾಬ್ರರೂ ಭಾರತದ ಪಶ್ಚಿಮ ತೀರದಲ್ಲಿ ಆಶ್ರಯ ಪಡೆದ ಪಾರಸಿಗಳೂ ಕಾಪಿಟ್ಟುಕೊಂಡರು. ಈಗಿನ ಅವೆಸ್ತ ಈ ಅವಶೇಷಗಳ ತಳಹದಿಯ ಮೇಲೆ ನಿಂತಿದೆ. ಆದುದರಿಂದ ಬಹಳ ಹರುಕುಮುರುಕಾಗಿದೆ. ಸಸ್ಸನಿದನ ಪರಿಷ್ಕರಣದ ಮೂರನೆಯ ಒಂದು ಭಾಗ ಮಾತ್ರ ಅದರಲ್ಲಿದೆ ಎಂದು ಊಹಿಸಾಲಾಗಿದೆ. ಆದರೆ ನಷ್ಟವಾಗಿರುವ ಪರಿಷ್ಕರಣದಲ್ಲಿ ಸಾಮನ್ಯವಾಗಿ ಯಾವ ಯಾವ ವಿಷಯಗಳಿದ್ದುವೆಂಬುದು ದೀನ್ ಕರ್ದ್ ಎಂಬ ಗ್ರಂಥದಲ್ಲಿನ ವಿವರಗಳಿಂದ ನಮಗೆ ತಿಳಿದು ಬರುತ್ತದೆ. ಅವೆಸ್ತದ ಪುಸ್ತಕಗಳನ್ನು ಈ ಮುಂದಿನಂತೆ ವರ್ಗೀಕರಿಸುವುದು ರೂಢಿ: 1.ಗಾಥಗಳು 2.ಯಸ್ನ 3.ವೀಸ್ ಪರೆಡ್ 4.ಯಷ್ತಗಳು 5.ವೆಂದಿದಾದ್ ಮತ್ತು 6.ಲಘುಸ್ತುತಿಗಳು ಹಾಗು ಅಸಮಗ್ರ ಲೇಖನಗಳು. ಭಾಷೆ ಮತ್ತು ಛಂದಸ್ಸುಗಳ ತಳಹದಿಯ ಮೇಲೆ ಕಟ್ಟಿರುವ ಕಾಲಾನುಕ್ರಮದ ದೃಷ್ಟಿಯಿಂದ ಈ ಗ್ರಂಥಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ:1.ಗಾಥಗಳು, ಯಣ್ ಹೆ ಹಾತಂ ಪ್ರಾರ್ಥನೆ ಹಳೆಯ ಗಾಥೆಯ ಉಪಭಾಷೆಯೊಂದರಲ್ಲಿ ಬರೆದಿರುವ ಒಂದು ಲೇಖನ ಸಮುದಾಯವನ್ನೊಳಗೊಂಡಿರುವ ಯಸ್ನ ಹಾಪ್ತನ್ ಹಾಯಿತಿ 2.ಈಚಿನ ಉಪಭಾಷೆಯೊಂದರಲ್ಲಿ ರಚಿತವಾದ ಕಿರಿಯ ಅವೆಸ್ತ ಎಂಬ ಮಿಕ್ಕ ಭಾಗ.