ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಯಶೂರ-ಆರ್ಯ ಸಮಾಜ ಆರ್ಯಶೂರ:ಸು.೪ನೆಯ ಶತಮಾನ ಸುಪ್ರಸಿದ್ಧ ಜಾತಕಮಾಲೆಯನ್ನು ಬರೆದವ.ಅಶ್ವಘೋಷನೇ ಈತನೆಂದು ಟಿಬೆಟಿಯನ್ ಧಾರ್ಮಿಕ ಇತಿಹಾಸವನ್ನು ಬರೆದ ತಾರಾನಾಥ ಲಾಮ ವಾದಿಸುತ್ತಾನೆ.ಈ ಗ್ರಂಥದಲ್ಲಿ ಮೂವತ್ತ ನಾಲ್ಕು ಜಾತಕದ ಕಥೆಗಳಿವೆ.ಇವು ಬೋಧಿಸತ್ತ್ವನ ಪಾರಮಿತವನ್ನು ನಿರೂಪಿಸುವ ಕಥೆಗಳು.ಬಹುಮಟ್ಟಿಗೆ ಚರಿಯಾಪಿಟಕದಲ್ಲಿ ಅಡಕವಾಗಿರುವ ಹಳೆಯ ಕಥೆಗಳನ್ನೇ ಆರ್ಯಶೂರ ಆಯ್ದುಕೊಂಡು ತನ್ನ ಸಾರಸ್ವತ ಪ್ರತಿಭೆಯಿಂದ ಹೊಸರೂಪ ಕೊಟ್ಟಿದ್ದಾನೆ.ಪ್ರವಚನಕಾರರಿಗೆ ಉಪಯೋಗವಾಗುವ ಕಥೆಗಳನ್ನು ಅದೇ ದೃಷ್ಟಿಯಿಂದ ಹೆಣೆದಿದ್ದಾನೆ.ಕಥೆ ಹಳತಾದರೂ ಶೈಲಿ ಸೊಗಸಾಗಿದೆ.ಗದ್ಯ ಪದ್ಯ ಸೇರಿದ ಈ ಸಂಸ್ಕೃತ ಉತ್ತಮವಾಗಿದೆ,ಕಾವ್ಯರಸಭೂಯಿಸ್ಠವಾಗಿದೆ.ಇಲ್ಲಿಗೆ ಯಾತ್ರಿಕನಾಗಿ ಬಂದಿದ್ದ ಇತ್ಸಿಂಗ್ ಅವನ ಕಾಲದಲ್ಲಿ ಆರ್ಯಶೂರನ ಗ್ರಂಥ ನಾಡಿನಾದ್ಯಂತ ಬಳಕೆಯಲ್ಲಿಯಲ್ಲಿತ್ತೆಂದು ಹೊಗಳಿ ಬರೆದಿದ್ದಾನೆ.೬ನೇ ಶತಮಾನದಲ್ಲಿ ನಿರ್ಮಿತವಾದ ಅಜಂತ ಭಿತ್ತಿಚಿತ್ರಿಕೆಗಳು ಕೆಲವು ಆರ್ಯಶೂರನ ಗ್ರಂಥಗಳ ಪ್ರಸಂಗವನ್ನು ನಿರೂಪಿಸುತ್ತವೆ.ಆರ್ಯಶೂರನ ಮಾತುಗಳನ್ನೆ ಆ ಚಿತ್ರಗಳ ಅಡಿಯಲ್ಲಿ ಬರೆದಿದ್ದಾರೆ.ಟಿಬೆಟಿಯನ್ ಸಂಪ್ರದಾಯದಲ್ಲಿ ಆರ್ಯಶೂರನ ಜಾತಕಮಾಲೆಯಲ್ಲದೆ ಇನ್ನೂ ಐದು ಗ್ರಂಥಗಳನ್ನು ಬರೆದಿದ್ದಾನೆಂದು ನಂಬುತ್ತಾರೆ.(ಎಸ್.ಕೆ.ಆರ್) ಆರ್ಯಸತ್ಯ:ಸಂಸಾರಬಂಧದಿಂದ ಬಿಡುಗಡೆಯನ್ನು ಅಪೇಕ್ಷಿಸುವವರು ಅವಶ್ಯ ತಿಳಿಯತಕ್ಕದ್ದನ್ನು ಬೌದ್ಧಧರ್ಮದಲ್ಲಿ ಹೀಗೆ ಹೆಸರಿಸಲಾಗಿದೆ.ಇದು ದುಃಖ,ಸಮುದಯ,ನಿರೋಗ,ಮಾರ್ಗ ಎಂದು ನಾಲ್ಕುವಿಧ.ಮೋಕ್ಷವನ್ನು ಅಪೇಕ್ಷಿಸುವಾತ ಮೊದಲು ದುಃಖದ ಸ್ವಭಾವವನ್ನು ತಿಳಿಯಬೇಕು.ಹಾಗೇ ಅದರ ಕಾರಣವನ್ನು,ನಿವೃತ್ತ್ಯುಪಾಯವನ್ನೂ,ಸಾಧನೆಯ ಮಾರ್ಗವನ್ನೂ ತಿಳಿಯಬೇಕು.ಇದ್ದನ್ನೇ ಚತುರಾರ್ಯ ಸತ್ಯ ಎಂದು ಕರೆಯುವುದು.ಬುದ್ಧನೇ ಈ ಅಂಶವನ್ನು ಉಪದೇಶಿಸಿದ(ಪ್ರಮಾಣವಾರ್ತಿಕ ಇತ್ಯಾದಿ).ಈ ನಾಲ್ಕು ವಿಧದ ಆರ್ಯಸತ್ಯಗಳನ್ನು ಯಥಾರ್ಥವಾಗಿ ಅರಿತವರನ್ನೂ ಆರ್ಯಸತ್ಯ ಹೇಳುವ ಪದ್ದತಿ ಮಹಾವ್ಯುತ್ಪತ್ತಿಯಲ್ಲಿ ಕಂಡುಬರುತ್ತದೆ.(ಕೆ.ಎಸ್.ವಿ) ಆರ್ಯಸಮಾಜ:ಭಾರತದ ಧಾರ್ಮಿಕ ಪುನರುಜ್ಜೀವನದ ಕಾರ್ಯದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಸಂಸ್ಥೆಗಳಲ್ಲಿ ಒಂದು.ಇದರ ಸಂಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿ ಪಮ್ಜಾಬಿನ ಉಜ್ವಲ ಪ್ರತಿಭಾವಂತ ಯತಿಗಳು.(೧೮೨೪-೮೩).ವೈದಿಕ ಧರ್ಮವೇ ನಿಜವಾದ ನಿಷ್ಠೆಯೆಂದು ಅವರು ಗ್ರಹಿಸಿ ಅದರ ಪುನರುಜ್ಜೀವನಕ್ಕೆಂದು ಆರ್ಯಸಮಾಜದಲ್ಲಿ ೧೮೭೫ ಏಪ್ರಿಲ್ ೧೦ರಂದು ಮುಂಬಯಿ ನಗರದಲ್ಲಿ ವ್ಯವಸ್ಥೆ ಮಾಡಿದರು.ಎರಡು ವರ್ಷಗಳ ಆನಂತರ ಲಾಹೋರದಲ್ಲಿ ಒಂದು ಶಾಖೆ ಪ್ರವರ್ತಿತವಾಯಿತು.ಕಾಲಕ್ರಮದಲ್ಲಿ ಭಾರತದ ಎಲ್ಲಾ ನಗರಗಳಲ್ಲೂ ಆರ್ಯ ಸಮಾಜದ ಚಳವಳಿ ಬಲಗೊಂಡಿತು.ಆದರೆ ಪಂಜಾಬ್ ಅದರ ಕೇಂದ್ರ ಸ್ವರೂಪವಾಗಿ ಉಳಿದು ಕಾಂಗಡಿ,ಬೃಂದಾವನ,ಜ್ವಾಲಾಪುರಗಳಲ್ಲಿನ ಗುರುಕುಲಗಳಿಂದ ಅದರ ಪ್ರಶಸ್ತಿ ಹೆಚ್ಚಿತು.ಮಹರ್ಷಿ ದಯಾನಂದ ಸರಸ್ವತಿ ತಮ್ಮ ಜೀವನಪರ್ಯಂತವೂ ಅದರ ಪ್ರಾಣವಾಗಿ ಉಳಿದರು.ಮುಂದೆ ಶ್ರದ್ಧಾನಂದ,ಲಾಲಾ ಲಜಪತ್ರಾಯ್,ಗಂಗಾಪ್ರಸಾದ್ ಉಪಾಧ್ಯಾಯ,ಲಾಲಾ ಹಂಸರಾಜ,ಗುರುದತ್ತ ಮೊದಲಾದವರ ಬೆಂಬಲದಿಂದ ಸಂಸ್ಥೆ ಬೆಳೆಯಿತು. ಆರ್ಯಸಮಾಜ ವ್ಯವಸ್ಥೆಗೊಂಡಗ ಈ ಪ್ರಮುಖ ವಿಧಿಗಳು ಅದರ ಅಂಗವಾಗಿ ಮೈದಳೆದವು.ಸರ್ವಜನರ ಪ್ರಯೋಜನಕ್ಕೆಂದೇ ಈ ಸಮಾಜ ವ್ಯವಸ್ಥಾಪಿತವಾಯಿತು.ಮನುಶ್ಯ ಜೀವನದಲ್ಲಿ ಶೀಲ,ಧರ್ಮ,ಉದ್ಯಮ ಇವುಗಳಲ್ಲಿಯೂ ವೇದವೇ ಮುಖ್ಯ ಪ್ರಮಾಣ.ಶತಪಥಾದಿ ಬ್ರಾಹ್ಮಣಗಳೂ,ಶಿಕ್ಷಾದಿ ಷಡಂಗಗಳೂ ನಾಲ್ಕು ಉಪವೇದಗಳೂ ಷಡ್ದರ್ಶನಗಳೂ ವೈದಿಕ ಶಾಖೆಗಳೂ ವೇದ ಪ್ರಾಮಾಣ್ಯದ ಪರಧಿಯಲ್ಲೇ ಸೇರುತ್ತವೆ.ಜಗತ್ತಿನ ಪ್ರತಿ ರಾಷ್ಟ್ರದ ಮುಖ್ಯ ನಗರದಲ್ಲೂ ಒಂದೊಂದು ಶಾಖೆಯನ್ನು ವ್ಯವಸ್ಥೆ ಮಾಡಬೇಕು.ಶೀಲವಂತನಾದ ಯಾವ ಮನುಷ್ಯನೂ ಸಮಾಜದ ಸದಸ್ಯನಾಗಬಹುದು.ಸಮಾಜದ ಸಂನ್ಯಾಸಿ ಸದಸ್ಯರು ತಮ್ಮತಮ್ಮ ಕುಟುಂಬದ ನಿರ್ವಹಣೆಗೆ ವ್ಯವಸ್ಥೆ ಮಾಡಿ ಉಳಿದ ಕಾಲವನ್ನೂ ಶಕ್ತಿಯನ್ನೂ ಸಮಾಜಕ್ಕೆ ಉತ್ಸಾಹದಿಂದ ಸಮರ್ಪಿಸಬೇಕು.ಸಮಾಜ ಪ್ರತಿ ವಾರವೂ ಸಭೆ ಸೇರತಕ್ಕದ್ದು.ಸಮಾಜದ ಪ್ರತಿ ಸದಸ್ಯನೂ ತನ್ನ ಮಾಸಿಕ ಉತ್ಪಾದನೆಯಲ್ಲಿ ನೂರಕ್ಕೆ ಒಂದರಂತೆ ಸಮಾಜಕ್ಕೆ ಕೊಡಬೇಕು.ಹೀಗೆ ಬಂದ ಹಣದಿಂದ ಸಮಾಜ ತನ್ನ ಮುಖ ಒಅತ್ರಿಕೆಯನ್ನೂ ಶಾಲೆಯನ್ನೂ (ಆರ್ಯ ವಿದ್ಯಾಲಯ) ನಡೆಸತಕ್ಕದ್ದು.ಸದಸ್ಯರು ಏಕದೇವವಾದಿಗಳು;ದೇವರು ನಿರಾಕಾರ,ಸರ್ವಶಕ್ತ,ಅಜಾತ,ಅನಂತ,ಅವಿಕಾರ್ಯ,ಅದ್ವಿತೀಯ,ದಯಾಳು,ಜಗನ್ನಿಯಾಮಕ,ಸ್ವತಂತ್ರ ಪರಿಶುದ್ದ,ಚತುರ್ವರ್ಗಫಲದಾಯಕ,ಮಾತಾಪಿತೃಸ್ವರೂಪ,ಅವನೊಬ್ಬನೇ ಪೂಜಾರ್ಹ.ಸ್ತುತಿಯಿಂದ,ಪ್ರಾರ್ಥನೆಯಿಂದ,ಭಕ್ತಿಯಿಂದ ಅವನನ್ನು ಆರಾಧಿಸಬೇಕು.ಆರ್ಯಸಮಾಜದವರು ವಿಗ್ರಹಾರಾಧನೆಯನ್ನು ಅನುಮೋದಿಸುವುದಿಲ್ಲ.ನಿರಾಕಾರನಾದ ಭಗವಂತನನ್ನೇ ಅವರು ನ ಸತ್ಯ ಪ್ರತಿಮಾ ಭವತಿ -ಎನ್ನುವ ವೇದವಾಕ್ಯಕ್ಕೆ ವಿಷಯವನ್ನಾಗಿ ಗ್ರಹಿಸುತ್ತಾರೆ.ವೈದಿಕ ಸಂಸ್ಕಾರಗಳಲ್ಲಿ ಅವರಿಗೆ ಅಚಲವಾದ ಶ್ರದ್ಧೆ.ಗರ್ಭಾಧಾನದಿಂದ ಹಿಡಿದು ಅಂತ್ಯೇಷ್ಟಿಯವರೆಗೆ ಎಲ್ಲಾ ಸಂಸ್ಕಾರಗಳನ್ನು ವೈದಿಕ ಮಂತ್ರಗಳಿಂದಲೇ ನಡೆಸಬೇಕೆಂಬುದು ಅವರ ಆಗ್ರಹ.ವೇದಗಳಲ್ಲಿ ಮತ್ತು ಇತರ ಆರ್ಷ ಗ್ರಂಥಗಳಲ್ಲಿ ಅಡಗಿರುವ ಸತ್ಯವನ್ನು ಎಲ್ಲ ಶಾಲೆಗಳಲ್ಲೂ ಬಾಲಕ-ಬಾಲಕಿಯರಿಗೆ ಕಲಿಸಬೇಕೆಂದು ಅವರ ಕಾತರ.ಪ್ರಾಪಂಚಿಕ ವ್ಯವಹಾರದಲ್ಲೂ,ಪಾರಮಾರ್ಥಿಕ ವಿಚಾರದಲ್ಲೂ ಅಭ್ಯುದಯವನ್ನು ಸಾಧಿಸುವುದು ಆರ್ಯ ಸಮಾಜದ ಉದ್ದೇಷ.ಈ ದೃಷ್ಟಿಯಿಂದ ಎಲ್ಲಾ ಕೆಲಸಗಳನ್ನುಲೂ ಧಾರ್ಮಿಕ ಅಥವಾ ಆಧ್ಯಾತ್ಮಿಕ ಮನೋವೃತ್ತಿಯಿಂದಲೇ ಮಾಡಬೇಕೆಂದು ಆರ್ಯ ಸಮಾಜದ ವಿಧಿ.ಮೌಢ್ಯವನ್ನು ತೊಲಗಿಸಿ ಜನಕ್ಕೆ ಜ್ನ್ಯಾನ ದಾಹ ಮಾಡಬೇಕೆಂಬ ಹಂಬಲದೊಂದಿಗೆ ಜನ ಸತ್ಯವನ್ನೇ ನಿಷ್ಠುರವಾಗಿ ಅನ್ವೇಷಣೆ ಮಾಡಬೇಕೆಂದೂ ಅಸತ್ಯವನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕೆಂದು ದಯಾನಂದರು ಸಾರಿ ಅದನ್ನು ಆರ್ಯ ಸಮಾಜದ ವಿಧಿಗಳಲ್ಲಿ ಸೇರಿಸಿದರು.ಈ ನೆಲೆಯಲ್ಲಿ ವರು ಸಂಪ್ರದಾಯದಿಂದ ಬಂದ ಪುರಾಣಗಳನ್ನೂ,ತಂತ್ರಗಳನ್ನು ಅಸಾಧುವೆಂದು ತಿರಸ್ಕರಿಸಿದರು.ಪುರಾಣಗಳೆಲ್ಲವೂ ಕಟ್ಟುಕಥೆ,ಪುರಾಣಕಾರರೆಲ್ಲರೂ ಧೂರ್ತರು ಎಂಬುದು ಅವರ ವಿಶ್ವಾಸ.ಅವರ ದೃಷ್ಟಿಯಲ್ಲಿ ಶುದ್ಧ ವೈದಿಕ ಸಿದ್ಧಾಂತವೇ ಪ್ರಮಾಣ,ಉಳಿದುದೆಲ್ಲಾ ಅಲ್ಲ. ಈ ಸಮಾಜಧೋರಣೆಯಲ್ಲಿ ಸಾಮಾಜಿಕದೃಷ್ಟಿ ದೃಢವಾಗಿ ಬೇರೂರಿ ಬಂದಿತು.ಯಾವ ವ್ಯಕ್ತಿಯೂ ತನ್ನ ವೈಯುಕ್ತಿಕ ಪ್ರಗತಿಯನ್ನೇ ಪುರುಷಾರ್ಥವೆಂದು ಬಗೆಯದೆ,ಎಲ್ಲರ ಅಭ್ಯುದಯದ ಸಾಧನೆಯಿಂದ ತನ್ನ ಸಮಾಧಾನವನ್ನು ಪಡೆದುಕೊಳ್ಳಬೇಕೆಂಬ ವಿಧಿಯಿದೆ.ಸರ್ವರ ಹಿತ ಸುಖಗಳಿಗೆ ನೆರವಾಗುವಂಥ ಸಾಂಘಿಕ ಕಟ್ಟಳೆಗಳನ್ನು ಅವಶ್ಯವಾಗಿ ಅನುಸರಿಸಬೇಕು.ಆರ್ಯಸಮಾಜ ಇಡೀ ಮಾನವ ಸಮಾಜದ ಭೌತಿಕ,ಸಾಮಾಜಿಕ,ಆಧ್ಯಾತ್ಮಿಕ ಪ್ರಗತಿಗೆ ಸಾಧನವಾಗಬೇಕು.ಆರ್ಯ ಸಮಾಜದ ಸದಸ್ಯ ಆರ್ಯನೆನಿಸಿಕೊಳ್ಳುತ್ತಾನೆ.ಆರ್ಯರೆಲ್ಲರೂ ಸಮಾನರು.ದಯಾನಂದರು ಆರ್ಯ ಸಮಾಜದ ಸಾಮಾನ್ಯ ಸದಸ್ಯನಾಗಿಯೇ ಉಳಿದುದರಲ್ಲದೆ ಅದರ ಅಧ್ಯಕ್ಷರಾಗಲು ಒಪ್ಪಲಿಲ್ಲ.ಅವರ ಭಾವಚಿತ್ರವನ್ನು ಯಾವ ಆರ್ಯಸಮಾಜದ ಭವನದಲ್ಲಿಯೂ ಹಾಕಬಾರದೆಂದು ಅವರು ಸೂಚನೆಯಿತ್ತರು.ತಾನು ಸಭಾಂಗಣಕ್ಕೆ ಬಂದಾಗ ನೆರೆದಿದ್ದ ಜನ ಎದ್ದು ನಿಲ್ಲುವುದನ್ನೂ ನಿಷೇಧಿಸಿದರು.ಭಗವಂತನೊಬ್ಬನೇ ಸರ್ವೋತ್ತಮ.ಉಳಿದ ಯಾವುವೂ ಅವನಿಗೆ ಸಮನಾಗಲಾರದು.ಎಲ್ಲಾ ಜನರೂ ಸಮಾನರು ಎಂಬುದು ಅವರ ಉಪದೇಶ. ಮೂಢನಂಬಿಕೆಗಳನ್ನು ಖಂಡಿಸುವುದರಲ್ಲಿ ಆರ್ಯಸಮಾಜ ಸಿದ್ಧವಾಯಿತು.ಸಮಾಜಸುಧಾರಣೆಯೂ ಇದರಿಂದ ಆಯಿತು.ಆ ಕಾಲಕ್ಕೆ ಬಲಗೊಳ್ಳುತ್ತಿದ್ದ ಕ್ರೈಸ್ತ ಪ್ರಚಾರಕರಿಗೆ ಆರ್ಯ ಸಮಾಜದ ಸ್ಥಾಪನೆಯಿಂದ ಆತಂಕವುಂಟಾಯಿತು.ಕ್ರೈಸ್ತರು ಹಿಂದೂ ಧರ್ಮದ ಹುಳುಕೆಂದು ಪುರಾಣಗಳಿಂದ ಬಲಗೊಂಡ ನಂಬಿಕೆಗಳನ್ನೂ ಕಲ್ಪನೆಗಳನ್ನೂ ಎತ್ತಿ ತೋರಿಸುತ್ತಿದ್ದರು.ಆದ್ದರಿಂದ ಅವರ ಪ್ರಚಾರಕ್ಕೆ ನೆರವಾಗುತ್ತಿತ್ತು.ಆದರೆ ದಯಾನಂದರು ಇವು ನಿಜವಾದ ಹಿಂದೂ ಧರ್ಮವಲ್ಲವೆಂದು ವೈದಿಕನಿಷ್ಠೆಯಲ್ಲಿ ಪುರಾಣಗಳು ಅಸಂಬದ್ಧವೆಂದು ತಾವೇ ಎತ್ತಿ ತೋರಿಸಿದ್ದರಿಂದ ಅವರ ಬಾಯಿಕಟ್ಟಿತು.ಮಹಮ್ಮದೀಯರ ಪ್ರಚಾರವೂ ಹೀಗೇ ಬಲಗೊಂಡಿತ್ತು.ಹಿಂದೂಗಳಾಗಿದ್ದವರು ಬಲವಂತದಿಂದ ಮುಸಲ್ಮಾನರಾಗಿ ಪರಿವರ್ತಿತರಾಗಿದ್ದು ಅಂತವರನ್ನು ಮತ್ತೆ ಹಿಂದೂ ಸಮಾಜಕ್ಕೆ ಸೇರಿಸಿಕೊಳ್ಳಲು ಯಾವ ಕ್ರಮವೂ ಇರದಿದ್ದಾಗ,ಆರ್ಯಸಮಾಜ ಶುದ್ಧೀಕರಣದ ಕ್ರಿಯೆಯನ್ನು ಏರ್ಪಡಿಸಿ ಕೃತಕೃತ್ಯವಾಯಿತು.ಇದರಿಂದ ಉತ್ತರ ಭಾರತದಲ್ಲಿ ಮಹಮದ್ದೀಯರ ಮತ್ತು ಕ್ರೈಸ್ತರ ಮತಾಂತರ ಕಾರ್ಯಗಳು ಸಾಕಷ್ಟು ಕುಂಠಿತವಾದವು.ಈ ಸಮಾಜದಿಂದ ದೇಶದಲ್ಲಿ ರಾಷ್ಟ್ರ ಭಾವನೆಯೂ ಬಲಗೊಂಡಿತು. ಗುರುಕುಲಗಳಲ್ಲಿ ಆರ್ಯ ಸಮಾಜ ಏರ್ಪಡಿಸಿದ ವಿದ್ಯಾಭ್ಯಾಸ ಕ್ರಮ ಮಾದರಿಯಾಗಿತ್ತು.ಹರಿಜನೋದ್ಧಾರ ಹೊಸದಾಗಿದ್ದ ಆ ಕಾಲದಲ್ಲಿ ಹರಿಜನ ಬಾಲಕರು ಗುರುಕುಲದಲ್ಲಿ ವ್ಯಾಸಾಂಗ ಮಾಡುತ್ತಿದ್ದರು.ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗಿನ ವಿವಿಧ ಬಗೆಯ ಶಾಲೆಗಳು ಸಮಾಜದ ಹೆಸರಿನಲ್ಲಿ ನಡೆಯುತ್ತಿವೆ.ಅನಾಥಾಲಯಗಳು,ವನಿತಾಶ್ರಮಗಳು,ಶಾಲೆಗಳು,ಚಿಕಿತ್ಸಾಲಯಗಳು,ಅತಿಥಿಭವನಗಳು,ವ್ಯಾಯಾಮಶಾಲೆಗಳೂ,ಮುದ್ರಣಾಲಯಗಳು,ಪುಸ್ತಕಭಂಢಾರಗಳು ಪತ್ರಿಕೆಗಳು-ಬಹುಸಂಖ್ಯೆಯಲ್ಲಿ ಸಮಾಜದ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿವೆ.ಆರ್ಯಸಮಾಜದ ಸಾಹಿತ್ಯವೂ ವಿಸ್ತಾರವಾಗಿ ಬೆಳೆದಿದೆ.ವೇದ-ವೇದಾಂಗಗಳನ್ನು ಭಾರತೀಯ ದೇಶಭಾಷೆಯಲ್ಲಿ ತಂದ ಮೊದಲ ಕೀರ್ತಿ ಸಮಾಜಕ್ಕೆ ಸೇರುತ್ತದೆ.ಇತಿಹಾಸ,ಗಣಿತ,ವಿಜ್ನ್ಯಾನ, ಮೊದಲಾದುವನ್ನೂ ಸಮಾಜ ಕಡೆಗಣಿಸಿಲ್ಲ.ಮೇಲಾಗಿ ಸ್ವಾತಂತ್ರ್ಯ ಸಮರದಲ್ಲಿ ಭಾರತದ ಇತರರೊಂದಿಗೆ ಸಮಾಜ ಕೈಗೆ ಕೈಕೊಟ್ಟು ಹೊಡೆದಾಡಿದೆ.ಭಾರತದಲ್ಲಿ ಸುಮಾರು ನಾನೂರು ಸಮಾಜಗಳೂ ಹನ್ನೆರಡು ಪ್ರತಿನಿಧಿಸಭೆಗಳೂ ಇವೆ.ಹೊರದೇಶಗಳಾದ ನೆಟಾಲ್,ನೆರೋಬಿ,ಮಾರಿಷಸ್,ಫಿಜಿ,ಸುರೀನಾಮ್ ಮೊದಲಾದ ಸ್ಥಳಗಳಲ್ಲಿ ಆರ್ಯಸಮಾಜ ವಿಸ್ತರಿಸಿದೆ.ಮೂಲತಃ ೧೦೦ ಜನ ಸದಸ್ಯರಿಂದ ಆರಂಭವಾದ ಆರ್ಯಸಮಾಜ ವಿಸ್ತರಿಸಿದೆ.ಮೂಲತಃ ೧೦೦ ಜನ ಸದಸ್ಯರಿಂದ ಆರಂಭವಾದ ಆರ್ಯ ಸಮಾಜವಾದಲ್ಲಿ ಪ್ರಪಂಚದಾದ್ಯಂತ ಈಗ ೩ ರಿಂದ ೪