ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭೦

                                                         ಆರೋಗ್ಯ ಸುರಕ್ಷಣಾ ಕಾಯಿದೆಗಳು

ಕಾರ್ಮಿಕನ ಕೂಲಿಯ ಹಣದ ಸ್ವಲ್ಪ ಭಾಗವನ್ನು ಮುರಿದುಕೊಂಡು ಕೂಡಿಟ್ಟ ಹಣದಿಂದ ಕಾರ್ಮಿಕನಿಗೆ ಕಾಯಿಲೆಯಾದಾಗ,ಅಂಗ ಉನವಾದಾಗ,ಮುಪ್ಪಾದಾಗ,ಸತ್ತಾಗ ಪರಿಹಾರ ಹಣ ನೀಡಲು ಕಾನೂನಾಯಿತು.ಈ ಶಾಸನದಲ್ಲಿ ಪರತ್ತುಗಳನ್ನು ಪಾಲಿಸುವಾಗ ಮಾಲೀಕರು ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರಿಂದ,ಈ ಶಾಸನ ರದ್ದಾಯಿತಾದರೂ (೧೭೭೦),ಅದು ಮತ್ತೆ ೧೭೯೨ ರಲ್ಲಿ ಪುನರುದ್ಧಾರವಾಯಿತು.ಈ ನಿಧಿಯ ಮೇಲ್ವಿಚಾರಣೆ,ಅಡಳಿತಗಳು ನ್ಯಾಸಧಾರಿಗಳ(ಟ್ರಸ್ಟಿಗಳ) ವಶಕ್ಕೆ ಹೋಯಿತು.

ಸರ್ ರಾಬರ್ಟ್ ಪೀಲ್ ಮಂಡಿಸಿದ ಉಮೇದುವಾರರ ಆರೋಗ್ಯ ಮತ್ತು ನೈತಿಕ ಸುಧಾರಣಾ ಕಾಯಿದೆ ೧೮೦೨ ರಲ್ಲಿ ಜಾರಿಗೆ ಬಂತು.ಇದರಿಂದ ಹತ್ತಿಗಿರಣೆಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕರ ಪರಿಸ್ಥಿತಿಯನ್ನು ಉತ್ತಮಪಡಿಸಲು ಅನುಕೂಲವಾಯಿತು.ಆದರೂ ಈ ಶಾಸನದಿಂದ ಏನೂ ಅನುಕೂಲ ಆಗದಿದ್ದರೂ ಸರ್ಕಾರಕ್ಕೆ ಕಾರ್ಮಿಕರಲ್ಲಿ ಇರುವ ಶ್ರದ್ಧೆಯನ್ನು ತೋರಿದಂತಾಯಿತು.ಬೇರೆ ದೇಶಗಳಲ್ಲೂ ಕೈಗಾರಿಕೋದ್ಯೋಮಗಳಲ್ಲೂ ಬಾಲ ಕರ್ಮಿಕರಿಗೆ ಅನ್ವಯಿಸುವ ಕಾಯಿದೆಗಳಿಗಾಗಿ ಒತ್ತಾಯ ಆರಂಭವಾಯಿತು.

ಬಡತನ ಪರಿಹಾರ ಕಾನೂನನ್ನು (೧೮೩೪) ಜನಾರೋಗ್ಯಪಾಲನೆಯ ಕಾನೂನುಗಳನ್ನು (೧೮೪೪-೪೫) ತರಲು ಪ್ರಮುಕ ಪಾತ್ರ ವಹಿಸಿದವ ಎಡ್ವಿನ್ ಚಾಡ್ವಿಕ್.ರೋಗವೇ ಬಡತನಕ್ಕೆ ಕಾರಣವೆಂದು ಇವನಿಗೆ ಚೆನ್ನಾಗಿ ಮನದಟ್ಟಾಗಿತ್ತು.ಬ್ರಿಟನ್ ದೇಶದ ಕಾರ್ಮಿಕ ಜನತೆಯ ನೈರ್ಮಲ್ಯ ಸ್ಥಿತಿಗಳ ಪರಿಶೀಲನಾ ಸಮತಿಯ ವರದಿ ಹೊರಬಿತ್ತು(೧೮೪೨).ಈ ಸಮತಿಯ ಕಾರ್ಯದರ್ಶಿ ಎಡ್ವಿನ್ ಚಾಡ್ವಿಕ್.ಈ ವರದಿಯ ಮೇಲೆ ರಚಿಸಿದ ಶಾಸನಗಳು ಆರೋಗ್ಯ,ಸೊರಕ್ಷಣೆ,ಸಮಾಜ ಸಮಸ್ಯೆಗಳ ಮೇಲೆ ರಾಷ್ಟ್ರೀಯಮಟ್ಟದ ಮೇಲ್ವಿಚಾರಣೆ ಮತ್ತು ಹತೋಟಿಗೆ ಆಧಾರವಾದುವು.೧೮೩೩ರ ಕಾರ್ಖಾನೆ ಕಾಯಿದೆ ಅನಂತರ ಬಂದ ಆಧುನಿಕ ಕೈಗಾರಿಕ ಉದ್ಯಮಗಳ ಶಾಸನಕ್ಕೆ ಹಿನ್ನಲೆಯಾಯಿತು.ಲಿವರ್ ಪೂಲಿನ ನೈರ್ಮಲ್ಯ ಕಾಯಿದೆಯಿಂದಾಗಿ (೧೮೪೬)ನಕರಕ್ಕೆ ಆರೋಗ್ಯಾಧಿಕಾರಿ ಹಾಗೂ ಎಂಜಿನಿಯರ್ ಗಳು ಬರುವಂತಾಯಿತು.ಅದೇ ವರ್ಷ ಚಾರಿಯಾದ ಉಪದ್ರವ ಕಳೆವ ಶಾಸನ,ರೋಗನಿರೋಧಕ ಶಾಸನ ಇವೇ ಮೊದಲಾದವು(೧೮೪೮) ಚಾರಿಗೆಬಂದ ಜನಾರೋಗ್ಯ ಶಾಸನದ ಪೀಠಿಕೆಯಾದವು.

ಯುರೋಪಿನಲ್ಲಿ : ಇಂಗ್ಲೆಂಡಿನಲ್ಲಿ ಈ ಸಮಾಜ ಸುಧಾರಣ ಶಾಸನಗಳು ಆಗುತ್ತಿದ್ದಂತೆಯೇ ಜರ್ಮನಿ,ಫ್ರಾನ್ಸ್ ಗಳಲ್ಲೂ ಚಳುವಳಿ ರಭಸದಿಂದ ಮುಂದುವರಿಯಿತು.ಜರ್ಮನಿಯ ಜೋಹಾನ್ ಪೀಟರ್ ಫ್ರಾಂಕ್ ಆರೋಗ್ಯ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಿಸಲೂ ಅದರ ಆಡಳಿತಕ್ಕೆ ರಾಷ್ತ್ರೀಯ ಮಟ್ಟದ ಆರೋಗ್ಯ ಇಲಾಖೆಗಳಿರ ಬೇಕೆಂತಲೂ ಮೊಟ್ಟ ಮೊದಲು ಪ್ರತಿಪಾದಿಸಿದ.ಅದ್ದನ್ನು ಕಡ್ಡಾಯವಾಗಿ ಆಚರಣೆಗೆ ತರಲು ವೈದ್ಯಕೀಯ ಪೊಲೀಸ್ ಇಲಾಖೆ ನಿರ್ಮಾಣವಾಗಬೇಕೆಂದು ಶಿಫಾರಸ್ಸಾಯಿತು.ಇದೇ ರೀತಿ ಫ್ರಾನ್ಸಿನಲ್ಲೂ ಕಾರ್ಮಿಕರ ಆರೋಗ್ಯ ಸುರಕ್ಷಣೆ ಸರ್ಕಾರದ ಜವಾಬ್ದಾರಿ ಎಂದಾಯಿತು.ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಿಗೆ ಉಂಟಾಗುವ ಅಪಘಾತಗಳಲ್ಲಿ ರಕ್ಷಣೆ,ಪರಿಹರ ಕೊಡುವುದಲ್ಲದೆ ಗರ್ಭಿಣೆಯರು ಹಡೆದಾಗ ಅವರ ಆರೈಕೆ,ವೇತನ,ರೋಗ ಬಂದಾಗ ವಿಶ್ರಾಂತಿವೇತನ ಮುಪ್ಪು,ನಿರ್ಬಲತೆ,ಊನ ಹಾಗೂ ಸಾವು ಒದಗಿದಾಗ ನೀಡುವ ಪರಿಹಾರಗಳಿಗೆ ಶಾಸನಗಳಾದವು(೧೮೮೪).ಈ ವಿಷಯದಲ್ಲಿ ಮುಂಬರುವ ಸಮಾಜ ಸುಧಾರಣಾ ಕಾಯಿದೆಗಳಿಗೆಲ್ಲಾ ಆಡಿಗಲ್ಲನ್ನು ಹಾಕಿ,ಜರ್ಮನಿ ಮುಂದಾಳತ್ವ ವಹಿಸಿತು.

ಅಮೆರಿಕದಲ್ಲಿ : ಅಮೆರಿಕ ಸಂಯುಕ್ತ ಸಂಸ್ಧಾನಗಳಲ್ಲೂ ಈ ಶಾಸನಗಳು ಹೆಚ್ಚು ಕಡ್ಮೆ ಇಂಗ್ಲೆಂಡಿನಲ್ಲಿ ಆದ ಹಾಗೇ ರೂಪುಗೊಂಡಿತಾದರೂ ಸಾಮಾನ್ಯವಾಗಿ ಹೇಳುವುದಾ ದರೆ,ಶಾಸನಗಳು ಚಾರಿಗೆ ಬರಲು ಸಾವಕಾಶವಾಯಿತು.೧೯ನೆಯ ಶತಮಾನದ ಮೊದಲಲ್ಲಿ,ಹೆಂಗಸರು,ಮಕ್ಕಳು ಕೂಲಿ ಮಾಡುವ ಕಾಲ ನಿರ್ಧರಿಸುವ.ಅವರಿಗೆ ಸಾಕಷ್ಟು ರಕ್ಷಣೆ ಕೊಡುವ ಶಾಸನಗಳು ಮೊದಲು ಚಾರಿಗೆ ಬಂದುವು.ಹೇಗೆ ಶಾಸನಗಳಾದರೂ ಅವ್ನ್ನು ಆಚರಣೆಗೆ ತರಲೂ ಆಚರಿಸದವರ ಮೇಲೆ ಕ್ರಮ ಜರುಗಿಸಲೂ ವ್ಯವಸ್ಥೆ ಇರಲಿಲ್ಲ. ಕ್ರಮ ಜರುಗಿಸಿದರೂ ನುಣುಚೆಕೊಳ್ಳಲು ಸಾಕಷ್ಟು ನ್ಯೂನತೆಗಳು ಇದ್ದವು.ಅಮೇರಿಕದ ಒಳಕಲಹವಾದ ಮೇಲು ಸಂಸ್ಧಾನಗಳಲ್ಲಿನ ಶಾಸನಗಳು ಕ್ರಮಬದ್ದವೆಂದೇ ಎಲ್ಲರೂ ತಿಳಿದಿದ್ದರು. ಸಮಾಜ ಸುಧಾರಣ ಶಾಸನಗಳು,ಕರಾರುಗಳಲ್ಲಡಗಿರುವ ನಿಬಂಧನೆಗಳನ್ನು ಕಡ್ಡಾಯ ಮಾಡಬೇಕೆಂದು ಹಾಕಿರುವ ಶರತ್ತುಗಳು,ಸರ್ಕಾರ,ವ್ಯಾಪಾರ.ಕೈಗಾರಿಕ ಇಯಾದಿ ವ್ಯಕ್ತಿ ಪ್ರಯತ್ನಗಳಲ್ಲಿ ಪ್ರವೇಶಿಸಕೂಡದು ಎಂಬ ಎಂಬ ನ್ಯಾಯಸಮ್ಮತವಾದ ತತ್ತ್ವಕ್ಕೆ ಧಕ್ಕೆ ಎನ್ನುವ ಭಾವನೆ,೧೮೯೦ರ ವರಗೆ ಜನಗಳಲ್ಲಿ ಮೂಡಲಿಲ್ಲ.

೨೦ನೇ ಶತಮಾನಕ್ಕೆ ಮುಂಚೆ ಅಮೇರಿಕದ ಕಾಂಗ್ರೆಸ್ ಕೆಲವೇ ಸಮಾಜ ಸುಧಾರಣಾ ಶಾಸನಗಳನ್ನು ಮಂಡಿಸಿತ್ತು.೧೭೯೮ರಲ್ಲಿ ನಾವಿಕರ ಕೂಲಿ ಹಣದಿಂದ ೨೦%ನ್ನು ಹಿಡಿದು ರಾಜ್ಯವಿಮಾ ನಿಧಿಗೆ ಜಮಾಮಾಡಿ,ಅವರು ಅಂಕವಿಕಲರಾದಲ್ಲಿ,ನಿರ್ಬಲರಾದಲ್ಲಿ ಆ ನಿಧಿಯಿಂದ ಪರಿಹಾರ ಕೂಡುವ ಯೋಜನೆಯನ್ನು ಸಂಯೂಕ್ತರಾಷ್ಟ್ರ ಸರ್ಕಾರ ಚಾರಿಗೆ ತಂದಿತು.೧೮೭೦ರಲ್ಲಿ ಸಂಪರ್ಕನಿಷೇಧ ದತ್ತಾಂಶ ಶೇ.೨೦ ಎದ್ದದ್ದು ಶೇ.೪೦ ಕ್ಕೆ ಹೆಚ್ಚಿತು.೧೮೭೮ರಲ್ಲಿ ರಾಷ್ಟ್ರೀಯ ಸಂಪರ್ಕ ನಿಷೇಧ (ಕ್ಚಾರಂಟೀನ್) ಶಾಸನ ವಿಧಾಯಕವಾಯಿತು.ಈ ಶಾಸನ ಅಮೇರಿಕದ ಸರ್ಜನ್ ಜನರಲ್ ನಿಗೆ ಸಂಯುಕ್ತ ಸಂಸ್ಧಾನದ ಬಂದರುಗಳಿಗೆ ಬರುವ ಜನರ ಜಹಜುಗಳಲ್ಲಿ ಸಾಕಷ್ಟು ಕಾಲ ಬೇರೆಯಾಗಿ ಇರಿಸಲು ಅಧಿಕಾರ ದೊರಕಿತು. ಇದಾದ ಮರಿವರ್ಷ ರಾಷ್ಟ್ರೀಯ ಆರೋಗ್ಯ ಸಮತಿ ಸ್ಧಾಪಿತವಾಯಿತು.

ಭಾರತದಲ್ಲಿ : ಭಾರತದಲ್ಲೂ ಸುಮಾರು ೧೮೬೦ರಿಂದೀಚೆಗೆ ಜನಾರೋಗ್ಯದ ಆಡಳಿತ ಸುಧಾರಿಸಿತೆನ್ನಬಹುದು.ಈಸ್ಟ್ ಇಂಡಿಯಾ ಕಂಪನಿ ೧೮೫೯ರಲ್ಲಿ ಜನಾರೋಗ್ಯ ಆಡಳಿತವನ್ನು ವಹಿಸಿಕೊಂಡಿತು.ಅದಕ್ಕೆ ಮುಂಚೆ ಬೇರೆಬೇರೆ ರಾಜ್ಯಗಳಲ್ಲಿ ತಮ್ಮವೇ ನಿಬಂಧನೆಗಳಿದ್ದರೂ ಆಚರಣೆಗೆ ಬಂದವು ಕೇವಲ ಅಲ್ಪ.ಅಂಗ್ಲ ಸೈನಿಕರ ಮರಣ ಪ್ರಮಾಣ ಮಿತಿಮೀರಿ ಇಂಗ್ಲೆಂಡ್ ನ ಪಾರ್ಲಿಮೆಂಟಿನ ಗಮನಕ್ಕೆ ಬಂದದ್ದು ಈಸ್ಟ್ ಇಂಡಿಯಾ ಕಂಪನಿ ಬಂದ ಅನಂತರ.ಕೂಡಲೇ ರಾಜಸನ್ನದಿನ ಪ್ರಕಾರ ರಚಿತವಾದ ಒಂದು ಆಯೋಗ ಭಾರತದ ಸೈನ್ಯದಳ ಹಾಗೂ ನಾಗರಿಕರ ಅಪಾರ ಸಾವುಗಳಿಗೆ ಕಾರಣಗಳನ್ನು ತನಿಖೆ ಮಾಡಿ ಶಿಘಾರಸುಗಳೊಂದಿಗೆ ವರದಿ ಕೊಡಬೇಕೆಂದು ನೇಮಕವಾಯಿತು.೧೮೬೧ರಲ್ಲಿ ಅಂಗ್ಲಸೈನಿಕರ ಸಾವುಗಳು ೧೦೦ಕ್ಕೆ ೬೯,ಭಾರತದ ಸೈನಿಕರಲ್ಲಿ ಸಾವಿರಕ್ಕೆ ೨೦ ಇದ್ದವು.ಜೈಲುಗಳಲ್ಲಿ ಮರಣಸಂಖ್ಯಾಪ್ರಮಾಣ ಸಾವಿರಕ್ಕೆ ೮೪-೧೨೦ರವರೆಗು ಇದ್ದವು.ಈ ಅಂಕಿ ಅಂಶಗಳು ೧೯೧೦-೧೯೧೪ರ ಹೊತ್ತಿಗೆ ಕ್ರಮವಾಗಿ ೪.೩೬,೪.೩೯,೨೧--೫೦ಕ್ಕೆ ಇಳಿದಿದ್ದುವು.ಸಮಿತಿ ೧೮೬೩ ರ ವರದಿಯಲ್ಲಿ ಆರೋಗ್ಯ ನೈರ್ಮಲ್ಯಗಳ ಮೇಲ್ವಿಚಾರಣೆ ಬೇರೊಂದು ನಿಯೋಚಿತ ಮಂಡಳಿ ಆಗಬೇಕೆಂದು ಸೂಚಿಸಿತು.ಆ ಪ್ರಕಾರ ಬಂಗಾಲ,ಮುಂಬಯಿ,ಮದರಾಸು ಪ್ರಾಂತ್ಯಗಳಲ್ಲಿ ಮೊದಲಿನ ಮಂಡಳಿಗಳು ಸ್ಥಾಪನೆಯಾದುವು.ಈ ಮಂಡಳಿ ಕೂಡಲೇ ಆರೋಗ್ಯ ನೈರ್ಮಲ್ಯಗಳನ್ನು ನೋಡಿಕೊಳ್ಳಲು ಜನಾರೋಗ್ಯ ಇಲಾಖೆಗಳು ಏರ್ಪಡಬೇಕೆಂದು ಸಲಹೆಕೊಟ್ಟಿತು.ಈ ಸಲಹೆ ಬಹಳ ವರ್ಷಗಳವರೆಗೆ ಹಾಗೆ ಇತ್ತು.ಮದ್ರಾಸಿನಲ್ಲಿ ಸ್ಥಾಪಿತವಾದ ಮಂಡಳಿ ಮಾತ್ರ ಯಶಸ್ವಿಯಾಗಿ ಕೆಲಸ ಮಾಡಿ ಮರಣಪ್ರಮಾಣವನ್ನು ಬಹಳಮಟ್ಟಿಗೆ ಕಡಿಮೆ ಮಾಡಲು ಕಾರಣವಾಯಿತು.೧೮೬೯ ರ ಹೊತ್ತಿಗೆ ಈ ಮಂಡಳಿಯ ಸದಸ್ಯ ವೈದ್ಯಾಧಿಕಾರಿ ಮಾತ್ರ ಆರೋಗ್ಯ ಮತ್ತು ನೈರ್ಮಲ್ಯಾಧಿಕಾರಿ(ಸ್ಯಾನಿಟರಿ ಕಮಿಷನರ್)ಎನಿಸಿಕೊಂಡು ಉಳಿದಿದ್ದ.

ಕೈಗಾರಿಕಾ ಕ್ರಾಂತಿ,ವೈದ್ಯದ ಮುನ್ನಡೆ : ೧೮ನೆಯ ಶತಮಾನದ ಕೊನೆಯಲ್ಲೂ ೧೯ನೆಯ ಶತಮಾನದ ಮೊದಲಲ್ಲೂ ಯಂತ್ರಸಾಧನಗಳನ್ನು ಕಂಡುಹಿಡಿದುದರ ಫಲವಾಗಿ ಅನೇಕರು ನಿರುದ್ಯೋಗಿಗಳಾಗಿ ಧಣಿಗಳಿಗೂ ಕೂಲಿ ಕೆಲಸಗಾರರಿಗೂ ಇದ್ದ ಪರಸ್ಪರ ಸಂಬಂಧ ವಿರಸಗೊಂಡು ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು.ಇದಕ್ಕೂ ಹಿಂದೆ ಕೆಲಸಗಾರರಿಗೆ ಅನ್ವಯಿಸುವ ಕಾಯಿದೆಗಳೆಲ್ಲ ಕುಲಧರ್ಮ,ಜಾತಿಧರ್ಮ ಇತ್ಯಾದಿಗಳ ಮೇಲೆ ರೂಪಿತವಾಗಿದ್ದುವು.ಪ್ರಜಾಪಾಲನೆ ಮಾಡುತ್ತಿದ್ದ ರಾಜ ಪ್ರಜೆಗಳ ತಂದೆ ಎಂಬ ಭಾವನೆ ಬೆಳೆದಿತ್ತು.ಪ್ರಶ.೬೪೩ರಲ್ಲಿ ರೊಟಾರಿ ಲೊಂಬಾರ್ಡ್ಸ್ ರಾಜ ಕಟ್ಟಡಗಳನ್ನು ಕಟ್ಟುವಾಗ ಕೂಲಿಯಾಳಿಗೆ ಅಪಘತವಾದಲ್ಲಿ ಅವನಿಗೆ ಪರಿಹಾರ ಕೊಡಬೇಕೆಂದು ಆಜ್ನೆ ಮಾಡಿದ್ದ.ಇವಕ್ಕೆ ಹಿನ್ನೆಲೆಯಾಗಿ ಕೇವಲ ಮಾನವ ಹಿತಿಸಾಧನೆ ಇತ್ತೇ ಹೊರತು ಬೇರೇನೂ ಇಲ್ಲ.ಕೈಗಾರಿಕಾ ಕ್ರಾಂತಿಯಿಂದೀಚೆಗೆ,ಕೆಲಸಗಾರನ ಅರೋಗ್ಯದ ಕಡೆ ಗಮನ ತೀವ್ರವಾಯಿತು.ಅವನ ಕೆಲಸದ ಸ್ಥಳ,ಕೆಲಸ ಹಾಗೂ ಹುದ್ದೆಯಿಂದಾಗಿ ಬಂದ ರೋಗಗಳ ಅರಿವು ಕ್ರಮವಾಗಿ ಅನುಭವದಿಂದ ತಿಳಿದು ಬಂತು.ಉದಾಹರಣೆಗೆ,ಗಣೆಯ ಅಳದ ಕೆಲಸಗಾರನಿಗೆ ಶ್ವಾಸಕೋಶದ ಸಿಲಿಕಬೇನೆ(ಸಿಲಿಕೋಸಿಸ್),ಸೀಸ,ರೇಡಿಯಮ್ ಮತ್ತಿತರ ರಾಸಾಯನಿಕಗಳೊಂದಿಗಿನ ಕೆಲಸಗಾರರಿಗೆ ದೇಹದೊಳಕ್ಕೆ ರಾಸಾಯನಿಕ ಹೊಕ್ಕು ವಿಷವಾಗುವುದು ಇವೇ ಮೊದಲಾದ ಉದ್ಯೋಗಿಕ ರೋಗಗಳೆಂದು ಪರಿಗಣಿಸಲಾಯಿತು.ಈ ಕೈಗಾರಿಕೆ,ಉದ್ಯೋಗಗಳಿಂದಾಗಿ ಬರುವ ರೋಗದ ತನಿಖೆ,ನಿದಾನ ಮತ್ತು ಚಿಕಿತ್ಸೆ ಬಹಳಮಟ್ಟಿಗೆ ಮುಂದುವರಿದುದೇ ಈ ವಿಷಯಗಳಲ್ಲಿ ಶಾಸನಗಳಾಗಲು ಕಾರಣವಾದುವು.ಕಾರ್ಖಾನೆಗಳಿಗೂ ಅಲ್ಲಿನ ಕೆಲಸಗಾರರಿಗೂ ಅನ್ವಯಿಸುವ ಕಾಯಿದೆಗಳು,ಇತರ ಕೆಲಸಗಾರರ ಸುರಕ್ಷಣೆ ಕಾಯಿದೆ,ನೊಂದ ಕೆಲಸಗಾರರ ಪರಿಹಾರ ಕಾಯಿದೆ,ಹಾಗೂ ಉದ್ಯೋಗದಿಂದಲೇ ಬರುವ ರೋಗಗಳ ಪರಿಹಾರಕ್ಕಾಗಿ ಕಾಯಿದೆಗಳೇ ಮೊದಲು ಕೈಗಾರಿಕಾ ವಿಪ್ಲವದಿಂದಾಗಿ ಬಂದ ಮುಖ್ಯ ಶಾಸನಗಳು.ಕೈಗಾರಿಕೆಯ ವೈದ್ಯ ತಳಹದಿ ಹಾಕಿದವ ಬರ್ನಾರ್ಡಿನೊ ರಾಮಜ್ಜಿನಿ.ಈತ ಹೊರಡಿಸಿದ ಒಂದು ಗ್ರಂಥದಲ್ಲಿ(೧೭೧೩)ರೋಗಕ್ಕೂ ದಾರಿದ್ರ್ಯಕ್ಕೂ ಇರುವ ಸಂಬಂಧವನ್ನು ಚೆನ್ನಾಗಿ ತೋರಿದ್ದಾನೆ.ರಾಮಜ್ಜಿನಿಗೆ ಮೊದಲು ಹಗೂ ಅನಂತರ ಆಮೂಲಾಗ್ರ ಅಧ್ಯಯನ.ಕೈಗಾರಿಕೋದ್ಯಮಗಳಿಗನ್ವಯಿಸುವ ವೈದ್ಯವಿಜ್ನಾನವನ್ನು ಎತ್ತಿ ಹಿಡಿವ ಅನೇಕ ಪ್ರಕಟಣೆಗಳು ಹೊರಬಿದ್ದುವು.ಅವುಗಳಲ್ಲಿ ಮಹತ್ತ್ವ ಪೊರಿತವಾದವು,೧೪೭೩ರಲ್ಲಿ ಉಲ್ ರಿಕ್ ಎಲೆನ್ಬರ್ಗ್ ಬರೆದ ಕೆಲಸಮಾಡುವ ಕಡೆ ಹುಟ್ಟುವ ವಿಷಷೂರಿತ ಹಾಗೂ ಕೆಡುಕಿನ ಧೂಮದ ಪರಿಣಾಮವಾಗಿ ಅಕ್ಕೆಸಾಲಿಗರನ್ನು ಕಾಡುವ ರೋಗಗಳು,೧೫೫೬ ರಲ್ಲಿ ಜೆಯಾರ್ವಿಯಸ್ ಆಗ್ರಿಕೋಲನ ಗಣೆ ಕೆಲಸಗಾರರ ರೋಗಗಳು,೧೭೭೫ರಲ್ಲಿ