ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಖ್ತಾಪದ್ಧ್ತಿ-ಇಗ್ಗುತಪ್ಪ ದೇವರ ಶಿಖರ

 ಪೊದೆಯಾಗಿಯೂ ಚಿಕ್ಕಮರವಾಗಿಯೂ ಬೆಳೆಯುತ್ತದೆ.ಸದಾ ಹಸಿರಾಗಿರುವ ಬಹುವಾರ್ಷಿಕ ಸಸ್ಯವಾಗಿ ಬೆಳೆಯುವ ಪ್ರಭೇದಗಳೂ ಇವೆ.ಎಲೆ ಅಭಿಮುಖ ಅಥವಾ ವೃತ್ತ ಜೋಡಣೆಯುಳ್ಳದ್ದು.ಕೊರಿಂಬ್ ಮಾದರಿಯ ಹೂಗೊಂಚಲು ತುದಿ ಅಥವಾ ಕಂಕುಳಲ್ಲಿ ಕಾಣಿಸಿ ಕೊಳ್ಳುತ್ತದೆ.

ಹೂಗಳ ಬಣ್ಣ ಪ್ರಭೇದಗಳಿಗೆ ಅನುಸಾರವಾಗಿ ಬಿಳುಪು,ಗಿಲಾಬಿ,ಕೇಸರಿ,ಹೀಗೆ ನಾನಾ ಬಗೆ,ಹೂಗಳಿಗೆ ತೊಟ್ಟು ,ಉಪದಳ, ಗಂಟಲಲ್ಲಿ ರೋಮಗಳು ಕೂಡು ದಳದ ಹೊರಭಾಗ ೪-೫ ಭಾಗವಾಗಿ ಅಗಲವಾಗಿರುತ್ತವೆ.ಕೆಳ ಅಂಡಾಶಯ ಮೇಲ್ಭಾಗವಾಗಿದೆ.ಹ ಣ್ಣು ಗಟ್ಟಿಯಾದ ಅಥವಾ ಮೆದುವಾದ ಬೆರ್ರಿ ಮಾದರಿಯದು.ಇವನ್ನು ಉದ್ಯಾನವನ ಲಾನುಗಳಲ್ಲಿ ಮತ್ತು ದಾರಿಗಳ ಪಕ್ಕದಲ್ಲಿ ಬೆಳೆಯುತ್ತಾರೆ.ಹೂವಿನ ಬಣ್ಣಗಳಿಗೆ ಅನುಸಾರವಾಗಿ ಇಕ್ಸೋರವನ್ನು ಹೀಗೆ ವಿಂಗಡಿಸಬಹುದು.ಹಳದಿ ಮತ್ತು ಕಿತ್ತಾಲೆ ಬಣ್ಣದ ಹೂಗಳವು.೨ ಕಡುಗೆಂಪು ಹೂಗಳು.೩.ಕರಿಬಣ್ಣದ ಹೂಗಳವು.೪.ಬಿಳಿಬಣ್ಣದ ಹೂಗಳವು .೫.ಕಿತ್ತಲೆ ಮಿಶ್ರಿತ ಕರಿ ಬಣ್ಣದ ಹೂಗಳವು.

           ಇಖ್ತಾಪದ್ಧತಿ;ದೆಹಲಿ ಸಾಮ್ರಾಜ್ಯದ ಗುಲಾಮಿ
ಅರಸ ಇಲ್ತಮಷ್ ನ ಕಾಲದಲ್ಲಿ ಜಾರಿಗೆ ತಂದ ಆಡಳಿತಕ್ರಮ.ತನ್ನ ರಾಜ್ಯವನ್ನು ಅನೇಕ ಇಖ್ತಾ(ಪ್ರಾಂತ)ಗಳಾಗಿ ವಿಭಜಿಸಿ,ಪ್ರತಿ ಇಖ್ತಾವನ್ನು
ಒಬ್ಬ ತುರ್ಕ್ಕಿ ಸೇನಾಧಿಕಾರಿಯ ಇಖ್ತಾದಾರ ಆಡಳಿತ್ತಕ್ಕೆ ಒಳಪಡ್ಡಿಸಿದ

.ಈ ಇಖ್ತಾದಾರರು ತಮ್ಮ ಅಧಿಕಾರವ್ಯಾಪ್ತಿಯ ಪ್ರದೇಶದಲ್ಲಿ ಶಾಂತಿಸುವ್ಯವಸ್ಥೆ,ಕಾನೂನು ಪರಿಪಾಲನೆ , ಸೈನ್ಯ ಸಂಘಟನೆ ಮತ್ತು ಕಂದಾಯವನ್ನು ಸಂಗ್ರಹಿಸುವುದು ಮುಖ್ಯ ಕರ್ತವ್ಯಗಳಾಗಿದ್ದವು.ಇಖ್ತಾದಾರರು ತಾವು ಸಂಗ್ರಹಿಸಿದ ಕಂದಾಯದ ಹಣದಲ್ಲಿ ತಮ್ಮ ಮತ್ತು ಸೈನ್ಯ ಹಾಗೂ ಆಡಳಿತ ನಿರ್ವಹಣೆಯ ವೆಚ್ಚಕ್ಕೆ ಬೇಕಾಗುವ ಹಣವನ್ನು ಇಟ್ಟುಕೊಂಡು ಉಳಿದ ಹಣವನ್ನು ಕೇಂದ್ರ ಸರಕಾರಕ್ಕೆ

ಕಳುಹಿಸಿ ಕೊಡುತ್ತಿದ್ದರು.ದೆಹಲಿ ಸುಲ್ತಾನರು ಈ ಇಖ್ತಾದಾರರನ್ನು ಕಾಲಕಾಲಕ್ಕೆ ಬೇರೆ ಬೇರೆ ಪ್ರಾಂತಗಳಿಗೆ ವರ್ಗಾವಣೆ 

ಮಾಡುವುದರ ಮೂಲಕ ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುತ್ತಿದ್ದರು. ಕಾರಣ ಇಖ್ತಾದಾರರು ದುರ್ಬಲ ಸುಲ್ತಾನರ ಕಾಲದಲ್ಲಿ ಬಂಡಾಯವೆದ್ದು ಸ್ವತಂತ್ರ ಆಡಳಿತಗಾರರಾಗಲು ಹವಾಣಿಸತ್ತಿದ್ದರು.ಸುಲ್ತಾನರ ವಿಶ್ವಾಸವನ್ನು ಕಳೆದುಕೊಂಡವರು ಇಖ್ತಾದಾರಿಕೆಯನ್ನು ಕಳೆದು ಕೊಳ್ಳುತ್ತಿದ್ದರು.

   ಇಖ್ತಾಗಳನ್ನು ಕೆಲವು ಸಂದರ್ಭದಲ್ಲಿ

ತರಫ್ ಗಳೆಂದೂ ತರಫ್ ಗಳ ಮುಖ್ಯಸ್ಥರನ್ನು ತರಫ್ ದಾರರೆಂದೂ ಕರೆಯುವ ಪದ್ಧತಿ ರೂಢಿಯಲ್ಲಿತ್ತು.ದೆಹಲಿ ಸಲ್ತಾನರ ರಾಜ್ಯವಿಸ್ತರಣೆ, ಸಂರಕ್ಷಣೆ,ಸುಗಮ ಆಡಳಿತ,ತೆರೆಗೆ ಸಂಗ್ರಹಣೆ ಮುಂತಾದ ಕಾರ್ಯಗಳಲ್ಲಿ ಈ ಇಖ್ತಾಪದ್ಧತಿ ಬಹಳ ಸಹಕಾರಿಯಾಗಿತ್ತು.ಆದರೆ ಮುಂದೆ ಇಖ್ತಾದಾರರ ಸ್ವತಂತ್ರ ಪ್ರವೃತ್ತಿ ,ಬಂಡಯ,ಅವಿಧೇಯತೆ,ಆಂತರಿಕ ಗಲಭೆ,ಅದ್ಧಿಕಾರ ವ್ಯಾಮೋಹ ದೆಹಲಿ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತು.

             ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ: ಕನ್ಯಾವಿಕ್ರಯದ ಪರಿಣಾವವು ಎಂಬ ಇನ್ನೊಂದು ಹೆಸರನ್ನೂ ಉಳ್ಳ ಈ ಪುಟ್ಟ ಪುಸ್ತಕ ಹೊಸಗನ್ನಡದ ಮೊತ್ತಮೊದಲ ಗ್ರಂಥಗಳಲ್ಲಿ ಒಂದು;ಕನ್ನಡದಲ್ಲಿ ಮುದ್ರಣ
ಕಂಡ ಮೊದಮೊದಲ ಕೃತಿಗಳಲ್ಲಿ ಕೂಡ ಒಂದು.ಮುಖ ಪುಟದಲ್ಲಿ ಉಲ್ಲೇಖವಾಗಿರುವಂತೆ ಹವ್ಯಕಹಿತೇಚ್ಚುವಾದ ಒಬ್ಬ ವಿದ್ವಾಂಸರಿಂದ ರಚಿಸಲ್ಪಟ್ಟದ್ದನ್ನು(೧೮೮೭)ಮುಂಬಯಿಯ ಭಾರತೀ ಛಾಪಖಾನೆಯ ಅಧ್ಯಕ್ಷರು ತಮ್ಮ ಮುದ್ರಣಾಲಯದಲ್ಲಿ ಛಾಪಿಸಿದರು.ಇದೊಂದು 

ಚಿಕ್ಕ ನಾಟಕ ;೧೪ ಪುಟ್ಟ ಪುಟ್ಟ ದೃಶ್ಯಗಳುಳ್ಳದ್ದು,ಕ್ರೌನ್ ಅಷ್ಟಪತ್ರದ

ಮುದ್ರಣದಲ್ಲಿ ೪೭ ಪುಟ ;ಸಮಾರು ಮುಕ್ಕಾಲು ಗಂಟೆಯ ಅವಧಿಯಲ್ಲಿ ಆಡಬಹುದಾದದ್ದು.
                 ಉತ್ತರ ಕನ್ನಡದ ಕರ್ಕಿಯ ವೆಂಕಟರಮಣಶಾಸ್ತ್ರಿಸೂರಿ ಎಂಬ ಸಾಹಸಿ ವಿದ್ವಾಂಸ ಮುಂಬಯಿಯಲ್ಲಿ ಭಾರತೀ ಛಾಪಖಾನೆಯನ್ನು ಸ್ಥಾಪಿಸಿದರು.ಅಲ್ಲಿ ಮಂಗಳೂರಿನ ಅಕ್ಕಸಾಲಿಗರಿಂದ
ಕನ್ನಡ ಅಕ್ಷರ ಕೆತ್ತಿಸಿ ಕನ್ನಡದ ಹಳೆಯ ಕಾವ್ಯಪ್ರಸಂಗಗಳನ್ನು
ಮುದ್ರಿಸಿದ್ದರಲ್ಲದೆ ನಿಯತಕಾಲಿಕಗಳನ್ನು ಪ್ರಕಟಿಸುತ್ತಿದ್ದರು.

ಅವರೇ ಈ ಪುಸ್ತಕದ ಕರ್ತೃ ಎಂಬುದು ಈ ಪುಸ್ತಕವನ್ನು ಎರಡನೆಯ ಬಾರಿಗೆ ಪರಿಚಯ ಸಮೇತ ಪ್ರಕಟಿಸಿದ (ಕುಮಟ ೧೯೫೩) ಲಿಂಗೇಶಶರ್ಮರ ಹೇಳಿಕೆ.ಇದು ಸಂಭವ.

      ಆಗಲೇ ಇಬ್ಬರು ಹೆಂಡಿರನ್ನು ಕಳೆದುಕೊಂಡು ೬೦ ವರ್ಷ ಮೀರಿದ್ದ ಮುದಕ ಇಗ್ಗಪ್ಪ ಹೆಗಡೆ ಸಾಲ ಮಾಡಿ ತೆರ (ವಧು ದಕ್ಷಿಣೆ) ಕೊಟ್ಟು 

ಎಳೆಯ ಹುಡಿಗಿಯನ್ನು ಮದುವೆಯಾದ.ದಾಂಪತ್ಯ ವಿರಸಗೊಳ್ಳು ತ್ತಿರುವಗಲೇ ರೋಗದಿಂದ ಸತ್ತ.ಹಣಕ್ಕೆ ಮಗಳನ್ನು ಮಾರಿದ ಶಿವಭಟ್ಟ ಮನೆಯೂ ಸಟ್ಟು ಇದ್ದ ಒಬ್ಬನೇ ಮಗನೂ ಸತ್ತು ಹಾಳಾದ .ವಿಧವೆಯಾದ ಹುಡುಗಿ ಕೆಟ್ಟಳು ;ಗರ್ಭ ಕೂನಿ ಮಾಡಿ ಅಪರಾದ್ಧಿಯಾದಳು.ಈ ಅಪರಾಧದಲ್ಲಿ ಸಾಮಾಜಿಕ ದೋಷವೇ ಹೆಚ್ಚೆಂಬುದನ್ನು ಕಂಡ ನ್ಯಾಯಾದ್ಧೀಶರು ಅಲ್ಪ ಶಿಕ್ಷೆ ವಿಧಿಸಿ ಮುಗಸಿದರು.ಇದು ಸ್ಥೂಲವಾಗಿ ನಾಟಕದ ಕಥೆ.

                  ಆಡುಭಾಷೆಯನ್ನೇ ತದ್ವತ್ ಲಿಪಿಗೊಳಿಸಿ ಸಂಭಾಷಣೆ ರಚಿಸಿದ್ದು ಈ ನಾಟಕದ ಮುಖ್ಯ ವೈಶಿಷ್ಟ್ಯ.ಇಲ್ಲಿನ ಮುಖ್ಯಾ ಪಾತ್ರಗಳು
ಹೆಚ್ಚಾಗಿ ಅಡಕೆ ತೋಟವನ್ನೇ ಅವಲಂಬಿಸಿದ ಬ್ರಾಹ್ಮಣವರ್ಗದವರು
,ಹವ್ಯಕರು.ಹವ್ಯಕರು ಇವತ್ತಿಗೂ ಬಳಸುವ ಹಳಗನ್ನಡ ಪ್ರಚುರವಾದ ವಿಶಿಷ್ಟ ದೇಸಿಯನ್ನೇ ಅಪ್ಪಟವಾಗಿ ಇಲ್ಲಿನ ಸಂಭಾಷಣೆಗಳಲ್ಲಿ ಬಳಸಿದೆ.ಹಾಗೇ ,

ನಾಟಕದಲ್ಲಿ ಬರುವ ಕೊಂಕಣಸ್ಥರು ಕೊಂಕನಣಿಯಲ್ಲಿ ಅಥವಾ ಕೊಂಕಣಸ್ಥ ಕನ್ನಡದಲ್ಲಿ ಮಾತಾಡುತ್ತಾರೆ.ಆಳು ತನ್ನ ಸಮಾಜದ ದೇಸಿಯಲ್ಲೇ ಮಾತಾಡುತ್ತಾನೆ.

           ಕನ್ನಡ ಸಾಹಿತ್ಯ ಚರಿತ್ರೆಯ ಒಂದು ತಿರುವಿನಲ್ಲಿ ಅನೇಕ ಹೊಸತನಗಳಿಗೆ ಧೈರ್ಯ ಮಾಡಿದ ಈ ಚಿಕ್ಕ
ಗ್ರಂಥದ ವೈಶಿಷ್ಟ್ಯಗಳು ಇವು : ೧.ಕನ್ನಡದಲ್ಲಿ ಮುದ್ರಿತವಾದ ಮೊದಲು ಹತ್ತೆಂಟರಲ್ಲಿ ಇದೂ ಒಂದು ೨.ಕನ್ನಡದ ಮೊತ್ತ ಮೊದಲ ಸ್ವತಂತ್ರ ನಾಟಕ;ಅಷ್ಟೇ ಅಲ್ಲ ಹೊಸಗನ್ನಡವನ್ನು ಆರಂಭಿಸಿದ ಮೊದಲ 

ಸ್ವತಂತ್ರ ಕೃತಿ ೩.ಸಂಸ್ಕೃತದ ರೂಪಾಂತರವಾದ ಮಿತ್ರವಿಂದಾ ಗೋವಿಂದ ಕನ್ನಡದ ಮೊದಲ ನಾಟಕವಾದರೆ ಇದೇ ಎರಡನೆಯದು. ೪.ವಸ್ತು ಯಾವುದೇ

ಗ್ರಂಥವನ್ನು ಆಧರಿಸದೆ ಜೀವನದಿಂದ ನೇರ ಎತ್ತಿಕೊಂಡದ್ದು;ವಿಷಯ ಸಾಮಾಜಿಕ.೫.ಆದ್ಯಂತ ಆಡುಮಾತನ್ನೇ 

ಅಪ್ಪಟವಾಗಿ ಬಳಸಿಕೊಡಿರುವುದು.

                  ಕರ್ತೃವಿಗೆ ಕೃತಿನಿರ್ಮಾಣ ಶ್ರದ್ಧೆಗಿಂತ ಸಮಾಜೋದ್ದಾರ ಸ್ರದ್ಧೆ ಹೆಚ್ಚಿದ ಕಾರಣ ಇದು ಶ್ರೇಷ್ಠ ಸಾಹಿತ್ಯ ಕೃತಿಯಾಗದೆ ಉಳಿದಿದೆ,                   (ಎಸ್.ಯು.ಕೆ.ವಿ.)
             ಇಹ್ಹುತ್ತಪ್ಪದೇವರಶಿಖರ; ಕೊಡಗು 

ಜಿಲ್ಲೆಯ ಪಶ್ಚಿಮ ಘಟದ ಬೆಟ್ಟಸಾಲಿನ ಶಿಖರಗಳಲ್ಲಿ ಎರಡನೆಯ ದೊಡ್ಡ ಶಿಖರ (ಮೊದಲನೆಯದು ತಡಿಯಂಡಮೋಳು), ವಿರಾಜಪೇಟೆಯಿಂದ ಸಮಾರು ೧೮ಕಿಮೀ ಪಶ್ಚಿಮಕ್ಕಿದೆ.ಎತ್ತರ ಸು,೧೨೨೦ಮೀ.ಈ ಶಿಖರಕ್ಕೆ

ಮಲ್ಮ ಎಂಬ ಹೆಸರು ಇದೆ.ಶಿಖರದ ಬಿಡದಲ್ಲಿ ಕುಂಜು (ಆಮ್ಮಂಗೇರಿ)ಎಂಬ ಗ್ರಾಮದಲ್ಲಿ ಇಗ್ಗುತಪ್ಪದೇವರ 

(ಪಾಡಿಸುಬ್ರಹ್ಮಣ್ಯ)ದೇವಾಲಯವಿದೆ. ಇದು ಕೊಡಗಿನ ಪ್ರಸಿದ್ಧ ಪುಣ್ಯಕ್ಷೇತ್ರ.ಕೊಡಗಿನ ಎಲ್ಲ ಭಾಗಗಳಿಂದಲೂ ಹಿಂದು ಯಾತ್ರಾರ್ಥಿಗಳು ಇಲ್ಲಿಗೆ ಬಂದು ತುಲಾಭಾರ ಇತ್ಯಾದಿ ಹರಕೆಗಳನ್ನೊಪ್ಪಿಸುವರು.

                                          ಇಗ್ಗುತಪ್ಪ ದೇವಾಲಯ
               ಮಲ್ಮ ಇಗ್ಗುತಪ್ಪ
ದೇವರು ನೆಲೆಸಿದ ಸ್ಥಳ ಎಂದು ಪ್ರತೀತಿ.ಶಿಖರದ ಮೇಲೆ ಸು.ಅರ್ದ್ಧ ಎಕರೆ ಸಮಭೂಮಿ ಇದೆ.ಇದರ ಮಧ್ಯೆ
ಇಗ್ಗುತಪ್ಪ ಕಲ್ಲಿನ ವಿಗ್ರಹವಿದೆ.ಹತ್ತಿರದಲ್ಲೇ ವರ್ಷ ಪೂರ್ತಿ ನೀರಿರುವ ಒಂದು ಕೊಳವಿದೆ.ಮಲ್ಮದಲ್ಲಿ ವರ್ಷಕ್ಕೆ
ನಾಲ್ಕು ಸಲ ಊರಿನವರು ನಾಡಿನವರು ಸೇರಿ ಹಬ್ಬವನ್ನು ಆಚರಿಸುತ್ತಾರೆ.ದೊಡ್ಡ ಹಬ್ಬಗಳು ಸಾಮಾನ್ಯವಾಗಿ
ಡಿಸೆಂಬರ್ ಮತ್ತು ಮಾರ್ಚ್
ತಿಂಗಳಿನಲ್ಲಿ ಬರತ್ತದೆ.ಈ ಸಮಯದಲ್ಲಿ ದೇವರಿಗೆ ಪೂಜೆ ಒಪ್ಪಿಸುವುದು,ಅನೇಕ ವಿನೋದಗಳಲ್ಲಿ ನಿರತವಾಗುವುದು ವಾಡಿಕೆ.ಕೊಡಗರ ಆಚಾರ ಪದ್ಧತ್ತಿ ಹಬ್ಬ ಹುಣ್ಣಿಮೆಗಳಲ್ಲಿ
ಈ ದೇವರ ಕಟ್ಟಳೆ ಪ್ರಕಾರ ನಡೆಯಬೇಕು.

ಆದ್ದರಿಂದ ಈ ಸ್ಥಳದಲ್ಲಿ ನಾಡಿನವರು ಕೂಡಿದಾಗ ಕೊಡಗರ ಹಬ್ಬಗಳಾದ ಹುತ್ತರಿ,ಕೈಲ್ ಮುಹುರ್ತಾ ಮೊದಲಾದವು ನಡೆಯಬೇಕದ

ದಿನ,ನಕ್ಷತ್ರ ಇತ್ಯಾದಿಗಳನ್ನು ಇಲ್ಲೇ ತೀರ್ಮಾನ ಮಾಡುತ್ತಾರೆ.
              ಕೇರಳ ಪ್ರಾಂತ್ಯದ ಕಣ್ಣಾನೂರು 

ನಗರದ ಪಶ್ಚಿಮಕ್ಕಿರುವ ಪಾಕಡ ಎಂಬ ದ್ವೀಪದಲ್ಲಿ ಹುಟ್ಟಿ ಬೆಳೆದ ಏಳುಜನ

ದೇವತೆಗಳು-ಆರು ಜನ ಅಣ್ಣತಮ್ಮಂದಿರು 

ಒಬ್ಬ ತಂಗಿ-ಇತ್ತ ಕಡೆಗೆ ವಲಸೆ ಬರುತ್ತ ಒಬ್ಬೊಬ್ಬರು ಒಂದೊದೆಡೆ ನೆಲೆಸಿದರೆಂದೂ ಅವರಲ್ಲಿ ೩ ಜನ ಅಣ್ಣಂದಿರು ಮತ್ತು ತಂಗಿ ಮಲಬಾರು ಕಡೆಯಿಂದ ಕೊಡಗಿನ ಗಡಿ ದಾಟಿ ಬಂದು ಮಲ್ಮದಿಂದ ಹುಟ್ಟಿರುವ

ಆಂಬುಲಪೊಳೆಯ ದಡದಲ್ಲಿ ಪಾಡಿತ್ತೋರ ಕಂಡಿ ಎಂಬ ಸ್ಥಳದಲ್ಲಿ ತಂಗಿದರೆಂದೂ ಆನಂತರ ಕಾರಣಾಂತರದಿಂದ ಬೇರೆಯಾಗಿ,ತಂಗಿ ಅಲ್ಲಿಂದ ೩ಕಿಮೀ