ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಸರೆಕಟ್ಟು(ಸಂಕಟ್ಟು)

15.5ಮೀಗೆ ಹ್ಯಾಮರ್ ಬೀಮ್ ಆಸರೆಕಟ್ಟುಗಳು ಬಂದುವು.ಆ ಮೇಲೆ ಮರದಿಂದಲೇ ಮಾಡಿದ ಹಗುರವಾದ ತಡಿಕೆಯ(ಲ್ಯಾಟಿಸ್)ನಮೂನೆ ಬಂತು.ಮುಂದಿನ ಹಜ್ಜೆಯಲ್ಲಿ ಒಂದೇ ಸರಕಟ್ಟಿನಲ್ಲಿ ಒತಡಕ್ಕೆ(ಕಂಪ್ರೆಷನ್) ಸಿಕ್ಕಿದ ಭಾಗಗಳನ್ನು ಮರದಿಂದಲೂ ಎಳತಕ್ಕೆ(ಟೆನ್ಷನ್) ಸಿಕ್ಕಿದನ್ನು ಕಬ್ಬಿಣದಿಂದಲೂ ಮಾಡಿ ಅಗಲವಾದ ಕಣ್ಣುಗಳಿಗೆ ಉಪಯೋಗಿಸಿದರು.ಅಗಲವಾದ ಕಣ್ಣಿನ ರೈಲು ಸೇತುವೆಗಳು ಬಂದಾಗಿನಿಂದ ಸರಕಟ್ಟುಗಳಿಗೆ ಮೊದಲು ತಾಂಡವಾಳವನ್ನೊ(ಕ್ಯಾಸ್ಟ್ ಐರನ್),ಆಮೇಲೆ ಮೆದು ಕಬ್ಬಿಣವನ್ನೊ(ರಾಟ್ ಐರನ್),ಈಚಿಗೆ ಉಕ್ಕನ್ನೊ ಉಪಯೋಗಿಸುತ್ತಿದಾರೆ.ಮಿತಿಮೀರಿದ ಭಾರದಿಂದಲೂ ಉಷ್ಣತೆಯ(ಟೆಂಪರೇಚರ್) ಬದಲಾವಣೆಯಿಂದಲೂ ಆಗಬಹುದಾದ ಚಲನೆಗೆ ಅವಕಾಶ ಮಾಡಿಕೊಡಲು ಒಂದು ಕೊನೆಯನ್ನು ರೋಲರುಗಳ ಮೇಲೆ ಇಟ್ಟಿರುತ್ತಾರೆ.ಒಂದು ಆಸರೆಕಟ್ಟಿನ ಸಂವಿಧಾನದಲ್ಲಿ ನಾಲ್ಕು ಹಂತಗಳಿವೆ: 1.ಚೌಕಟ್ಟು ಹೊರಬೇಕಾದ ಭಾರಹಳ ಲೆಕ್ಕಾಚರ. 2.ತೊಲೆಗಳು,ಕಂಬಗಳು ಮತ್ತು ದೊಲಗಳ ಸಂವಿಧಾನ ಮತ್ತು ಜೋಡಣೆ. 3.ಮೇಲೆ ಭಾರ ಬಿದ್ದಾಗ ಅದರ ಭಾಗಗಳಲ್ಲಿ ಉತ್ಪನ್ನವಾಗುವ ತ್ತಾಸಗಳು(ಸ್ಟ್ರೆಸ್). 4.ಈ ತ್ರಾಸಗನ್ನು ಸುರಕ್ಷಿತವಾಗಿ ತಡೆಯುವ ಹಾಗೆ ಭಾಗಗಳ ಜೋಡನೆ. ಆಸರೆಕಟ್ಟಿನ ಮೇಲೆ ಬರುವ ಭಾರಗಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು:1. ಅದರ ಸ್ಥಿರಭಾಗ(ಡೆಡ್-ಲೋಡ್).ಇದು ಲಂಬವಾಗಿ ಕೆಳೆಕ್ಕೆ ಎಳೆಯುತ್ತದೆ.2.ಸೇತುವೆಯ ಮೇಲೆ ಒಡಾಡುವ ಕಾರುಗಳು,ರೈಲುಗಾಡಿಗಳು,ಮಂಜು ಮತ್ತು ಗಾಳಿಯ ಒತ್ತಡ(ಲೈವ್ ಲೋಡ್).ಈ ಭಾರದ ಅಘಾತ ಸೇತುವೆಯ ಮೇಲೆ ವಿಶೇಷವಾಗಿದೆ.ದೊಡ್ಡ ಆಸರೆಕಟ್ಟುಗಳು ಒಂದೇ ಸಮತಲದಲ್ಲಿ(ಪ್ಲೇನ್)ಇರಬಹುದು.ಇಲ್ಲವೇ ಎರಡು ಸಮತಲದಲ್ಲಿರಬಹುದು.L ಆಕಾರದಲ್ಲಿ ಎರಡು ಉಕ್ಕಿನ ಕೋನಗಳಿಂದ ಮಾಡಿದ ಒಂದು ಸಮತಲದ ಆಸರೆಕಟ್ಟುಗಳನ್ನು ಕಾರ್ಖಾನೆಗಳು ಮತ್ತು ಯಂತ್ರಾಗಾರಗಳ್ ಮಾಡುಗಳಲ್ಲಿ ಉಪಯೋಗಿಸುತ್ತಾರೆ.n ಅಥವಾ U ಆಕಾರದಲ್ಲಿ ಎರಡು ಇಲ್ಲವೆ ನಾಲ್ಕು ಅಸಮವಾಅ ಕೋನೆಗಳಿಂದ ಮಾಡಿದ ಎರಡು ಸಮತಳಗಳ ಆಸರೆಕಟ್ಟುಗಳನ್ನು ಅಗಲವಾದ ಸೇತುವೆಗಳಲ್ಲಿ ಉಪಯೋಗಿಸುತ್ತಾರೆ. ದೊಡ್ಡ ಸೇತುವೆಯ ಸಂವಿಧಾನದಲ್ಲಿ ಹೊಳೆಯ ತಳದ ಮತ್ತು ತಳಪಾಯದ ನಿಷ್ಕ್ರುಷ್ಟವಾದ ತಿಳಿವಳಿಕೆ ಆವಶ್ಯಕ.ಆಗ ಸೇತುವೆಯ ಕಣ್ಣಿನ ಅಗಲ ಮತ್ತು ನಮೂನೆಯನ್ನು ನಿರ್ಧರಿಸಬಹುದು.ರಸ್ತೆಗಳ ಸೇತುವೆಗಳ ಮೇಲೆ ಹೋಗುವ ಟ್ರಕ್ಕುಗಳ ಮತ್ತು ಟ್ರಾಕ್ಟರುಗಳ ಭಾರ ಈಚೆಗೆ ಬಹಳ ಹೆಚ್ಚಾಗುತ್ತಿದೆ.ಸೇತುವೆಯ ಭಾರದಲ್ಲಿ ಆಸರೆಕಟ್ಟು,ರಸ್ತೆ,ನೀರಿನ ಕೊಳಾಯಿಗಳು ಮತ್ತು ವಿದ್ಯುತ್ತಿನ ಸಾಲುಗಳು ಮುಖ್ಯವಾದುವು.ಸೇತುವೆಯುಅ ಉಕ್ಕಿನ ತೊಕವನ್ನು ಸೊತ್ರಗಳನ್ನು(ಫಾರ್ಮುಲ)ನಂಬದೆ ನೇರವಾಗಿ ಲೆಕ್ಕ ಹಾಕಬೇಕು.ಹಾಗೆಯೇ ಕಟ್ಟಡಗಳಲ್ಲೂ ಮೇಲೆ ಬರುವ ಮಾಡುಗಳು,ಗೋಡೆಗಳು ಮತ್ತು ವಿಶಿಷ್ಟಭಾರಗಳ್ನ್ನು (ಸ್ಪೆಷಲ್ ಲೋಡ್ಸ್) ಪ್ರತ್ಯೇಕವಾಗಿ ಲೆಕ್ಕ ಹಾಕಬೇಕು.ಮಂಜು ಮತ್ತು ಗಾಳಿಯ ಒತ್ತಡ ಒಂದೊಂದು ಪ್ರದೇಶಕ್ಕೊ ಬೇರೆ ಬೇರೆಯಾಗಿರುತ್ತದೆ.ಸಾಮಾನ್ಯವಾಗಿ ಉಪಯೋಗದಲ್ಲಿರುವ ಆಸರೆಕಟ್ಟುಗಳ ನಮೂನೆಗಳನ್ನು ಚಿತ್ರಗಳಲ್ಲಿ ತೋರಿಸಿದೆ.ಇವುಗಳಲ್ಲಿ ಒಂದು ಸನ್ನಿವೇಶಕ್ಕೆ ಯಾವ ಸಂವಿಧಾನ ಹೊಂದುವುದೆಂದು ನಿರ್ಣಯಿಸಿ ಆಸರೆಕಟ್ಟಿನ ಭಾಗಗಳಲ್ಲಿ ತ್ರಾಸುಗಳನ್ನು ರೇಖಾಕ್ರುತಿಗಳ ಮೂಲಕವೊ(ಗ್ರ್ಯಾಫಿಕ್ ಸ್ಟ್ಯಾಟಿಕ್ಸ್),ಗಣಿತದ ಮೊಲುಕವೊ(ಅನಲಿಟಿಕಲಿ)ಗೊತ್ತು ಮಾಡಿ.ಒಂದರೊಡನೆ ಇನ್ನೂಂದನ್ನು ಹೋಲಿಸಿ ಹೆಚ್ಚಿನ ತ್ರಾಸವನ್ನು ಸಂವಿಧಾನಾಲ್ಲಿ ಉಪಹೋಗಿಸಿಕೊಳ್ಳಬೇಕು. ಉಕ್ಕಿನ ಇಲ್ಲವೆ ಪ್ರಬಲಿತ ಕಾಂಕ್ರೀಟಿನ(ರೀಇನ್ ಫೋರ್ಸ್ ಕಾಂಕ್ರೇಟ್)ಆಸರೆಕಟ್ಟಿನ ಮೇಲುಗಡೆಯ ತುಂಡಗಳ್ಳನ್ನು ಮೇಲಿನ ಹುರಿಯೆಂದೊ(ಅಪ್ಪರ್ ಕಾರ್ಡ್)ಕೆಳಗಿನ ತುಂಡುಗಳನ್ನು ಕೆಳಗಿನ ಹುರಿಯೆಂದು(ಲೋಯರ್ ಕಾರ್ಡ್)ಕರೆಯುತ್ತಾರೆ.ಇವೆರಡನ್ನೊ ಒಟ್ಟುಗೂಡಿಸುವ ಲಂಬವಾದ ಇಲ್ಲದೆ ಓರೆಯಾದ ಭಾಗಗಳನ್ನು ದಿಂಡಿನ(ವೆಬ್)ಭಾಗಗಳು ಎನ್ನುತ್ತಾರೆ.ಚೌಕಟ್ಟು ಹೊರಬೇಕಾದ ಭಾರಗಳನ್ನು ಕಾರ್ಡ್ ಮತ್ತು ವೆಬ್ ನ ತುಂಡುಗಳ ಸಂದಿಗಳ ಮೇಲೆ ಬೇಳುವ ಹಾಗೆ ಸಂವಿಧಾನ ಮಾಡಿರುತ್ತಾರೆ.ಈ ಕಾರಣದಿಂದ ಆಸರೆಕಟ್ತಿನ ಭಾಗಗಳು ಒತ್ತಡದ (ಕಂಪ್ರೆಷನ್)ಅಥವಾ ಎಳೆತದ ತ್ರಾಸದಲ್ಲಿರುತ್ತವೆ.ಬಾಗುವ(ಬೆಂಡಿಂಗ್)ತ್ರಾಸದಲ್ಲಿರುವುದಿಲ್ಲ.ಸೇತುವೆಯ ಒಂದು ಕಣ್ಣಿನಮೇಲೆ ಬೇಳುವ ಭಾರವನ್ನು ಹಿಮ ಮತ್ತು ಗಾಳಿಯ ಒತ್ತಡವನೊ ಸೇರಿಸಿ ಲೆಕ್ಕ ಹಾಕಿ ಆಸರೆಕಟ್ಟಿನ ನಕ್ಷೆಯಮೇಲೆ ಮೇಲಿನ ಹುರಿಯ ಸಂಧಿಗಳಿಗೆ ಸಂಪೊರ್ಣವಾಗಿ ಹಂಚಿ ರೇಖಾಕ್ರುತಿಗಳಿಂದ(ಗ್ರಾಫಿಕ್ ಸ್ಟ್ಯಾಟಿಕ್ಸ್)ಆಸರೆಕಟ್ಟಿನ ಒಂದೊಂದು ರೌಂಡಿನ ಮೇಲೂ ಬೇಳುವ ಒತ್ತಡದ ಅಧವಾ ಎಳೆತದ ಅಥವಾ ತ್ರಾಸದ ಪ್ರಮಾಣವನ್ನು ಶಾಸ್ತ್ರೀಯವಾಗಿ ನಕ್ಷೆಗಳಿಂದಲೇ ಒಂದು ವಿಶಿಷ್ಟವಾದ ವಿಧಾನದಲ್ಲಿ ಕಂಡುಹಿಡಿಯುತ್ತಾರೆ.ಆಮೇಲೆ ಆಸರೆಕಟ್ಟಿನ ಚಿತ್ರದಲ್ಲಿ ಒತ್ತಡಕ್ಕೆ(-)ಸಿಕ್ಕಿದ ಭಾಗಗಳನ್ನು ದಪ್ಪವಾದ ರೇಖೆಗಳ್ಂದಲೂ ಎಳತಕ್ಕೆ(+)ಸಿಕ್ಕಿದವುಗಳನ್ನು ತೆಳುವಾದ ರೇಖೆಗಳ್ಂದಲೂ ಗುರುತುಮಾಡಿ ಒಂದೊಂದು ಭಾಗದಲ್ಲೊ ಬರುವ ತ್ರಾಸುಗಳನ್ನು ಕೋಷ್ಟಕಗಳಲ್ಲಿ ಬರೆದಿಡುತ್ತಾರೆ.ಈ ಆಧಾರದ ಮೇಲೆ ಒಂದೊಂದು ರೌಂಡನ್ನು ಪ್ರತ್ಯೇಕವಾಗಿ ಸಂವಿಧಾನ ಮಾಡುತ್ತಾರೆ.ಮನೆಯ ಮಾಡುಗಳಲ್ಲಿ ಉಪಯೋಗಿಸುವ ಸರಕಟ್ಟುಗಳು ಮೇಲುಗಡೆಯಿಂದ ಬರುವ ತೊಕ,ಹಿಮ,ಮತ್ತು ಗಾಳಿಯ ಭಾರವನ್ನು ಮೇಲಿನ ಹುರಿಯ ಮೂಲಕ ಹೂರುತ್ತವೆ.ಒಳಮಾಳಿಗೆಯಿದ್ದರೆ ಅದರ ತೊಕ ಕೆಳಗಿನ ಹುರಿಯಮೇಲೆ ಬೇಳುತ್ತದೆ. ಸೇತುವೆಯ ಎರಡು ಆಸರೆಕಟ್ಟುಗಳ ನಡುವೆ ತಳದಲ್ಲಿ ರೈಲೂದಾರಿಯಾಗಲಿ,ರಸ್ತೆಯಗಲಿ ಹೋದರೆ ಅದನ್ನು ತ್ರೊ ಸೇತುವೆಯನ್ನುತ್ತಾರೆ.ಮೇಲುಗಡೆ ಹೋದರೆ ಡೆಕ್ ಸೇತೆವೆಯನ್ನುತ್ತಾರೆ.ಸೇತುವೆಯಗಳಲ್ಲಿ ಭಾರ ಮೇಲಿನ ಹುರಿಯ ಮೇಲಾದರೊ ಬೀಳಬಹುದು,ಕೆಳಹುರಿಯ ಮೇಲಾದರೊ ಬೀಳಬಹುದು.ಡೆಕ್ ಸೇತುವೆಗಳಲ್ಲಿ ಮೇಲಿನ ಹುರಿಯೂ ತ್ರೊ ಸೇತುವೆಗಳಲ್ಲಿ ಕೆಳಗಿನ ಹುರಿಯೂ ಭಾರವನ್ನು ಹೊರುತ್ತವೆ.ಸೇತುವೆಗಳಲ್ಲಿ ಆಸರೆಕಟ್ಟಿನ ಭದ್ರತೆಯನ್ನು ಕಾಪಾಡಲು ಆದರ ಸಮತಳಕ್ಕೆ ಸಮಕೋಣವಾಗಿ ಬಿಗಿ ಪಟ್ಟಿಯನ್ನು ಕೊಡಬೇಕಾಗುತ್ತದೆ.ಸಾಮಾನ್ಯವಾಗಿ ಎರಡು ಆಸರೆಕಟ್ಟುಗಳ ನಡುವೆ ಒಂದು ಚೌಕಟ್ಟನ್ನು ಸೇರಿಸುತ್ತಾರೆ. ಆಸರೆಕಟ್ಟಿನ ಆಳ ಸೇತುವೆಯ ಕಣ್ಣಿನ1/8 ಭಾಗದಿಂದ 1/5ರವರೆಗೊ ವ್ಯತ್ಯಾಸವಾಗುತ್ತದೆ.ಕಣ್ಣಿನ ಅಗಲ ಹೆಚ್ಚಾದ ಹಾಗೆ ಈ ಪ್ರಮಾಣವೊ ಹೆಚ್ಚಾಗುತ್ತದೆ.ಒಂದೇ ಆಗಲದ ರಸ್ತೆಯ ಸೇತುವೆಯ ಆಳ ರೈಲು ಸೇತುವೆಯ ಆಳಕ್ಕಿಂತ ಕಡಿಮೆಯಾಗಿರುತ್ತದೆ.ಸೇತುವೆಯ