ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಜಿಪ್ಪಿನ ವಾಸ್ತುಶಿಲ್ಪ, ಕಲೆ ಉದ್ದನೆಯವಾಗಿದ್ದು, ಮುಖ ಕುತ್ತಿಗೆಗಳು ಉದ್ದವಾಗಿಯೂ ತಲೆ ದೇಹಪ್ರಮಾಣಕ್ಕೆ ಕಿರಿದಾಗಿಯೂ ಇವೆ. ೧೮ನೆಯ ರಾಜವಂಶಕಾಲದಿಂದ (ಪ್ರ.ಶ.ಪೂ. ೧೫೮೦-೧೩೫೦) ಪ್ರಾರಂಭವಾಗುವ ಹೋಸರಾಜ್ಯಕಾಲ ಈಜಿಪ್ಟ್ ದೇಶದ ಅತಿ ಉನ್ನತಿಯ ಕಾಲ. ಆರಾಜಕತೆ ಯಿಂದ ಮತ್ತು ಹಿಕ್ಸೋಸ್ ಆಳ್ವಿಕೆಯಿಂದ ನಷ್ಟವಾದ ನಗರ, ದೇವಾಲಯಗಳು ಈಗ ಪುನಃ ನಿಮಾಣ ಗೋಂಡವು. ಅಮಾಸಿಸ್ನಿಂದ ಟುಟುಂಖಾಮೆನ್ವರೆಗಿನ ಅರಸುಗಳೆಲ್ಲರೂ ಕಲೆಯನ್ನು ತುಂಬ ಪೋತ್ಸಾಹಿಸಿದರು. ಈ ಕಾಲದಲ್ಲಿ ಬೃಹದಾಕಾರದ ಮೂತಿ‍ಗಳ ಕೆತ್ತನೆ ಪ್ರಾರಂಭವಾಯಿತು. ೪ನೆಯ ರಾಜವಂಶಕಾಲದಲ್ಲಿ ಸ್ಫಿಂಕ್ಸ್ನ ಬಹು ದೋಡ್ಡ ಮೂತಿಯೋಂದನ್ನು (೫೭ಮೀ. ಉದ್ದ ೨೦ ಮೀ. ಎತ್ತರ) ಕೆತ್ತಿದ್ದರು. ಅರಸುಗಳನ್ನು ಅಮಾನುಷ ಗಾತ್ರದಲ್ಲಿ ಚಿತ್ರಿಸುತ್ತಿರಲಿಲ್ಲ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ೩ನೆಯ ಅಮೆನ್ ಹೋತೆಪನ ಮೂತಿಗಳು. ಕೈರೋ ಮ್ಯೂಸಿಯಂನಲ್ಲಿರುವ ೩ನೆಯ ಥಟ್ಮೋಸ್ ಅರಸನ ಮೂತಿ ಚೆನ್ನಾಗಿದೆ. ಚಿಕ್ಕ ಮೂತಿಗಳು ಶೈಲಿಯಲ್ಲಿ ಸಾಂಪ್ರದಾಯಿಕ ವಾಗಿದ್ದರೂ ನೈಜತೆಯಿಂದ ತುಂಬಿವೆ. ವೇಷಭೂಷಣಗಳು ಸಮಕಾಲೀನ ವಾಗಿವೆ. ರಾಣಿ ಹಟ್ಷೆಪ್ಸುಟ್ ನೌಕೆಗಳನ್ನು ಪಂಟ್ ಎಂಬಲ್ಲಿಗೆ ಕಳುಹಿಸುತ್ತಿರುವ, ಕೆತ್ತಿ ಬಣ್ಣ ಬಳಿದ ಚಿತ್ರಗಳು ಚೆನ್ನಾಗಿವೆ. ಅಮನಕಾಲದ ಅಕ್ನಾಟನ್ನನ ಮೂತಿಯಲ್ಲಿ ಅರಸನನ್ನು ಸಾಂಪ್ರದಾಯಿಕವಾಗಿ ಚಿತ್ರಿಸುವ ಬದಲು ನೈಜ ಶೈಲಿಯಲ್ಲಿ ಚಿತ್ರಿಸಲಾಗಿದೆ. ತೆಳ್ಳಗಿನ ದೇಹ ಭಾವುಕ ಮುಖ, ಸ್ವಲ್ಪ ಜೋಲುಹೋಟ್ಟೆಯ ಈ ಮೂತಿ ಸಂಪ್ರದಾಯಕ್ಕೆ ನೇರ ವಿರುದ್ದವಾಗಿದೆ. ಮೂತಿಶಿಲ್ಪದ ಸೌಂದಯ‍ದ ಪರಮಾಧಿಯನ್ನು ಬಲಿನ್ ಮ್ಯೂಸಿಯಂನಲ್ಲಿರುವ ರಾಣಿ ನೆಫರ್ ಟೆಟಿಯ ತಲೆಯಲ್ಲಿ ಕಾಣಬಹುದು. ಬಣ್ಣ ಬಳಿಯಲ್ಪಟ್ಟು ಸೂಕ್ಷ್ಮವಾಗಿ ಚಿತ್ರಿತವಾದ ಕಣ್ಣುಗಳುಳ್ಳ ಈ ಶಿಲಾಮೂತಿಯಲ್ಲಿ ಅವಳ ಸೌಂದಯ, ಸ್ವಭಾವಗಳು ಚೆನ್ನಾಗಿ ಮೂಡಿವೆ. ಆಗೆತದಲ್ಲಿ ಒಬ್ಬ ಶಿಲ್ಪಿಯ ಮನೆ ಬೆಳಕಿಗೆ ಬಂದಿದ್ದು, ಅದರಲ್ಲಿ ಹಲವಾರು ವ್ಯಲ್ತಿಗಳ ಮುಖಗಳ ಅಚ್ಚುಗಳು (ಮಾಸ್ಕ್ಸ್) ದೋರೆತಿವೆ. ೧೯, ೨೦ನೆಯ ರಾಜವಂಶ (ಪ್ರ.ಶ.ಪೂ. ೧೩೫೦-೧೦೯೪) ಕಾಲದ ಕೆಲವು ಕೆತ್ತನೆಗಳಲ್ಲಿ ಮಾತ್ರ ಸೂಕ್ಷ್ಮತೆ, ಸೌಂದಯಗಳಿವೆ. ಈಗ ಟ್ಯುರಿನ್ನಲ್ಲಿರುವ ಎರಡನೆಯ ರಾಮ್ಸೆಸ್ ಮೂತಿ‍ ಈಜಿಪ್ಟಿನ ಕಲೆಯ ಯನ್ನತಿಯ ಕೋನೆಯ ನಿದಶ‍ನ. ರಾಮ್ಸೆಸ್ ನ ದಂಡಯಾತ್ರೆಗಳನ್ನು ಚಿತ್ರಿಸುವ ಅನೇಕ ಉಬ್ಬಿನ ಕೆತ್ತನೆಗಳು ಬೃಹತ್ಪ್ರಮಾಣದಲ್ಲಿ ರಾಮೇಸಿಯಮ್ನಲ್ಲಿ ಕೆತ್ತಲ್ಪಟ್ಟಿದಸದರೂ ಅವುಗಳಲ್ಲಿ ಗಾತ್ರಕ್ಕೇ ಪ್ರಾಧಾನ್ಯವಲ್ಲದೆ ಅಭಿರುಚಿಗಲ್ಲ. ರೇಖಾಕೃತಿಗಳು ಸ್ವಲ್ಪ ಕೆಟ್ಟಿವೆ. ಸ್ವಲ್ಪವಾಗಿ ಏಷ್ಯದ ಪ್ರಭಾವವೂ ಅಲ್ಲಲ್ಲಿ ಕಾಣುತ್ತದೆ. ಮಣ್ಣಿನ ಪಾತ್ರೆ, ಕಲಶಗಳು ಮತ್ತು ಇತರ ಕಲೆಗಳು: ರಾಜವಂಶಪೂವ‍ ಕಾಲದ ಕಲ್ಲಿನ ಪಾತ್ರೆಗಳಲ್ಲಿ, ಮಡಕೆಗಳಲ್ಲಿ ತೀರ ಹಳೆಯವು ಅಷ್ಟು ಚೆನ್ನಾಗಿಲ್ಲ. ಮುಂದಿನವು ಕೆಂಪು ಮತ್ತು ಕಪ್ಪು ಹೋಳಪಿನ ಹೋರಮೈಯುಳ್ಳವು. ಇದರಲ್ಲಿ ಕೆಲವು ಪಾತ್ರೆಗಳ ಮೇಲೆ ಪ್ರಾಣಿಗಳ ಗೀರುಚಿತ್ರಗಳಿವೆ. ಅಲ್ಪಸ್ವಲ್ಪವಾಗಿ ಕೆಂಪು ಹೋರಮೈಯಲ್ಲಿ ಬಿಳಿಯ ಅಲಂಕಾರಿಕ ರೇಖೆಗಳು, ಪ್ರಾಣಿಗಳ ಚಿತ್ರಗಳು, ಅಪೂವ‍ವಾಗಿ ದೋಣಿಗಳ ಚಿತ್ರಗಳು ಇವೆ. ಆಮೇಲಿನವಲ್ಲಿ ಹಳದಿ ಕಂದು ಹೋರಮೈಉ ಮೇಲೆ ಕೆಂಪು ಬಣ್ಣದಲ್ಲಿ ಹಡಗುಗಳು, ಜಲ್ಲೆಗಳು, ಗಂಡಸರು, ಹೆಂಗಸರು ಮತ್ತು ಪ್ರಾಣಿಗಳ ಚಿತ್ರಗಳಿವೆ. ಇವೆಲ್ಲ ಆ ಕಾಲದ ಆಳವಿಲ್ಲದ ಗೋರಿಗಳಲ್ಲಿ ದೋರಕಿವೆ. ದುಃಖಿಸುತ್ತಿರುವ ಬಣ್ಣದ ಸ್ತ್ರೀಮೂತಿಗಳು ದೋರಕಿವೆ. ಇವುಗಳ ಕೆಲಸ ನಾಜೂಕಾಗಿಲ್ಲ. ಕಲ್ಲಿನ ಕಲಶಗಳು ಸಾಧಾರಣವಾಗಿವೆ. ಬಳಪದ ಕಲ್ಲಿನ ಕೆಲವು ದೋಡ್ಡ ಫಲಕಗಳಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಬೇಟೆಗಾರರ ಮತ್ತು ಪ್ರಾಣಿಗಳ ಚಿತ್ರ ಗಳಿವೆ. ಹಳೆಯ ರಾಜ್ಯ ಕಾಲದಲ್ಲಿ ಮಡಕೆಗಳಿಗೆ ಕುಂಬಾರನ ಚಕ್ರದ ಉಪಯೋಗವಾಗಲಾರಂಭವಾಯಿತು. ರಾಜವಂಶ ಪೂವಕಾಲದಲ್ಲಿ ಪ್ರಾರಂಭವಾಗಿದ್ದ ನೀಲಿ ಮೆರುಗುಳ್ಳ ಫೆಯಾನ್ಸ್ ವಸ್ತುಗಳಲ್ಲಿ ಸುಧಾರಣೆ ಯನ್ನು ಕಾಣಬಹುದು. ಸ್ಟೆಪ್ ಪಿರ ಮಿಡ್ಡಿನೋಳಗಿನ ಒಂದು ಕೋಣೆಯಲ್ಲಿ ಸುಮಾರು ೩೦ ಸಾವಿರ ಕಲ್ಲಿನ ಕಲಶ ಗಳು ದೋರಕಿದ್ದು ಅವುಗಳಲ್ಲಿ ಅನೇಕ ಕಲಶಗಳು ಈಜಿಪ್ಪಿನ ಕಲೆಗೆ ರತ್ನಪ್ರಾಯವಾಗಿವೆ. ಕೆಂಪು ಮಿರುಗುಳ್ಳ ಮಡಕೆ ಗಳು ಚೆನ್ನಾಗಿವೆ. ಚಂದ್ರಕಾಂತಶಿಲೆಯ ಕೆತ್ತನೆಯಿರುವ ಸುಂದರವಾದ ಲೇಪ ದಾನಿ ಕಲಶಗಳು ದೋರಕಿವೆ. ೭ನೆಯ ರಾಜವಂಶದ (ಪ್ರ.ಶ.ಪೂ. ೨೪೩೧) ವರೆಗೆ ಮಣ್ಣಿನ ಪಾತ್ರೆಗಳು ಚೆನ್ನಾಗಿದ್ದು, ಆಮೇಲೆ ಕ್ರಮವಾಗಿ ಅವನತಿ ಹೋಂದುತ್ತ ೧೨ನೆಯ ರಾಜವಂಶದ ಕಾಲಕ್ಕೆ ನಷ್ಟವಾಗಿವೆ. ಈ ಕಾಲದ ನಿತ್ಯೋಪಯೋಗಿ ಮಡಕೆಗಳು ಸುಂದರವಾಗಿಲ್ಲ. ಹಳೆಯ ರಾಜ್ಯ ಕಾಲದಲ್ಲಿ ನಸುನೀಲಿ ಫೆಯಾನ್ಸಿನ ನೀರಾನೆಯೇ ಮೋದಲಾದ ಪ್ರಾಣಿಮೂತಿ ಗಳೂ ಈ ಮನುಷ್ಯಮೂತಿಗಳೂ ಚೆನ್ನಾಗಿವೆ. ಕಲ್ಲಿನ ಕಲಶಗಳಿಗೂ ಈ ಕಾಲದಲ್ಲಿ ಹೋಳಪನ್ನು ಕೋಡುತ್ತಿದ್ದರು. ನಿಜವಾದ ಗಾಜಿನ ಪ್ರಥಮ ಬಳಕೆ ಕೂಡ ಇದೇ ಕಾಲದಲ್ಲಿ ಅದಂತೆ ತೋರುತ್ತದೆ. ಮೋದಲಿಗೆ ನಾಜೂಕಿಲ್ಲದಿದ್ದರೂ ಕೆಲವೇ ವಷಗಳಲ್ಲಿ ತೆಳ್ಳಗಿನ ಪಾರದಶಕವಲ್ಲದ ಹಸರುಗಾಜು ಹಾಗೂ ಗಾಜು ಮತ್ತು ಚಿನ್ನಗಳ ಬಳಕೆಯಿರುವ ಸುಂದರವಾದ ಕಲಶ ಪಾತ್ರೆಗಳು, ಈ ಕಾಲದಲ್ಲಿ ನಿಮಿತವಾದುವು. ಹೋಸ ರಾಜ್ಯ ಕಾಲದ ಗಾತ್ರಪ್ರಿಯತೆಯ ಪ್ರತೀಕವಾಗಿ ದೋಡ್ಡ ದೋಡ್ಡ ಚಂದ್ರಕಾಂತಶಿಲೆಯ ಕಲಶಗಳು ದೋರಕಿವೆ. ೧೯ನೆಯ ರಾಜವಂಶ (ಪ್ರ.ಶ.ಪೂ. ೧೩೫೦-೧೨೦೫) ಕಾಲದ ಚಂದ್ರಕಾಂತಶಿಲೆಯ ಬೋಗುಣಿಗಳು, ಕಲಶಗಳು ಚೆನ್ನಾಗಿವೆ. ಈ ಕಾಲದಲ್ಲಿ ಹೂಜಿಯಾಕಾರದ ಪಾತ್ರೆಗಳು ಜನಪ್ರಿಯವಾಗುತ್ತ ಬಂದವು. ಮಡಕೆ ಕುಡಿಕೆಗಳಲ್ಲಿ ನೀಲಿ, ಹಳದಿ, ನೇರಳೆ, ಕಂದು, ಹಸುರೇ ಮೋದಲಾದ ಬಹುವಣದ ಹೋಳಪುಳ್ಳವು ಕಾಣಬರುತ್ತವೆ. ಬಹುವಣದ ಗಾಜಿನ ಕಲಶಗಳೂ ಈ ಕಾಲದವು. ನೀಲವಣ‍ದ ಗಾಜು ಹೆಚ್ಚು ಬಳಕೆಯಲ್ಲಿತ್ತು. ಕಪ್ಪು ಬಣ್ಣದ ಗಾಜು ತೀರ ಅಪೂವ‍. ಒಡವೆಗಳು, ಆಭರಣಗಳು, ಬೆಳ್ಳಿಯ ಮತ್ತು ಬಂಗಾರದ ಪಾತ್ರೆ ಬಟ್ಟಲುಗಳು ಕಾಲಾನುಕ್ರಮವಾಗಿ ಹಳೇ ರಾಜ್ಯಕಾಲದಿಂದ ಮೋದಲಾಗಿ ದೋರಕುತ್ತವೆ.