ಈ ಪುಟವನ್ನು ಪರಿಶೀಲಿಸಲಾಗಿಲ್ಲ.

628

                                              ಉದ್ಭವ-ಉದ್ಯಮಕೂಟ

ಇವೆಲ್ಲವೂ ರಸವತ್ ಎಂಬ ಅಲಂಕಾರದಲ್ಲೇ ಅಡಕವಾಗಿವೆಯೆಂದು ಅವನ ಮತ.ಒಟ್ಟಿನಲ್ಲಿ ಭರತನ ನಾಟ್ಯಶಾಸ್ತ್ರಕ್ಕೆ ಸಂಬಧ ಪಟ್ಟ ರಸ ವಿಮರ್ಶೆಯನ್ನು ಬಲ್ಲವನಾಗಿದ್ದರೂ ಉದ್ಭಟ ಕೇವಲ ಭಾಮತಮತಾನುಯಾಯಿ. ಅಲಂಕಾರ ಶಾಸ್ತ್ರದಲ್ಲಿ ಉದ್ಭಟನ ಪ್ರಭಾವ ವಿಶೇಷವಾಗಿದೆ.ಅವನ ಪ್ರಸಿದ್ದಿ ಭಾಮಹನನ್ನೂ ಹಿಂದೆ ಬೀಳುವಂತೆ ಮಾಡುವಷ್ಟು ಹಿರಿದಾಗಿತ್ತು.ಆನಂತರ ಬಂದ ಅನೇಕ ಅಲಂಕಾರಿಗಳು-ಅವನೊಡನೆ ಭಿನ್ನಾಭಿಪ್ರಾಯ ಉಳ್ಳವರೂ-ಅವನನ್ನು ಅತ್ಯಂತ ಗೌರವದೀನ್ದ ಕಂಡಿದ್ದಾರೆ.ಇದಕ್ಕೆ ಅವನ ತತ್ತಭವದ್ಭಿರುದ್ಭಟಾಧಿಭಿಃ(ಧ್ವನ್ಯಾಲೋಕ),ತಾವದ್ಭಾಮಹೋದ್ಭಟ ಪ್ರಭೃತಯಃ(ಅಲಂಕಾರ ಸರ್ವಸ್ವ) ಮುಂತಾದ ಮಾತುಗಳು ಸೂಕ್ತ ನಿದರ್ಶನಗಳಾಗಿವೆ(ಬಿ.ಕೆ.ಎಸ್) ಉಧ್ಭವ:೧.ಉದ್ ಮತ್ತು ಭೂ ಇವುಗಳಿಂದ ನಿಷ್ಪನ್ನವಾಗಿದೆ.ಉತ್ಪತ್ತಿ,ಜನ್ಮ ಮೂಲಸ್ಥಾನ ಎಂಬ ಅರ್ಥದಲ್ಲಿ ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಇದರ ಪ್ರಯೋಗವನ್ನು ಕಾಣಬಹುದು.೨.ನಹುಷನ ಮಗನ ಹೆಸರು.೩.ವಿಷ್ಣು ಸಹಸ್ರನಾಮದಲ್ಲಿರುವಂತೆ ವಿಷ್ಣುವಿನ ಒಂದು ಹೆಸರು.ಸಮುದ್ಗತೋ ಭವೋಯಸ್ಮಾದುದ್ಭವಃ ಪರಿಕೀರ್ತಿತಃ.ಯಾರಿಂದ ಈ ಲೋಕ ಹೊರ ಹೊಮ್ಮಿತೋ ಅವನು ಉದ್ಭವ. ಉದ್ಭವಾವಸ್ಥೆ:ಸಂಯುತ ಸ್ಥಿತಿಯಿಂದ ಆಗತಾನೆ ಬೇರ್ಪಟ್ಟ ವಸ್ತುವಿನ ಅವಸ್ಥೆ(ನೇಸಂಟ್ ಸ್ಟೇಜ್).ಕೆಲವು ಮೂಲವಸ್ತುಗಳಿಗೆ ಈ ಅವಸ್ಥೆಯಲ್ಲಿ ಹೆಚ್ಚು ಕ್ರಿಯಾಶಕ್ತಿ ಯಿರುವುದು ಕಂಡು ಬಂದಿದೆ.ಇದಕ್ಕೆ ಜಲಜನಕ ಉತ್ತಮ ನಿದರ್ಶನ.ಕೂಡಿಟ್ಟ ಜಲಜನಕವನ್ನು ಆಮ್ಲಮಿಶ್ರಿತ ಪೊಟ್ಯಾಸಿಯಂ ಪರ್ಮಾಂಗನೇಟಿನ ದ್ರಾವಣದ ಮೂಲಕ ಹರಿಸಿದಾಗ ಅದರ ಊದಾ ಬಣ್ಣ ಬದಲಾಯಿಸುವುದಿಲ್ಲ.ಆದರೆ ದ್ರಾವಣಕ್ಕೆ ಒಂದು ಚೂರು ಅಶುದ್ದ ಸತುವನ್ನು ಸೇರಿಸಿದರೆ ಅದು ಅಲ್ಲಿರುವ ಆಮ್ಲದಿಂದ ಜಲಜನಕವನ್ನು ಪಲ್ಲಟಿಸುವುದು.ಬಿಡುಗಡೆಯಾದ ಜಲಜನಕ ಉದ್ಭವಾವಸ್ಥೆಯಲ್ಲಿರುವುದರಿಂದ ತತ್ತಕ್ಷಣ ಪರ್ಮಾಂಗನೇಟನ್ನು ಆಕರ್ಷಿಸಲು ಪ್ರಾರಂಭಿಸುವುದು.ದ್ರಾವಣದಲ್ಲಿರುವ ಊದಾಬಣ್ಣ ತತ್ತಕ್ಷಣ ಮಾಯವಾಗುವುದು.ಹೀಗಾಗಲು ಉದ್ಭವವಾಸ್ಥೆಯಲ್ಲಿರುವ ಜಲಜನಕಕ್ಕೆ ಹೆಚ್ಚು ಕ್ರಿಯಾಶಕ್ತೀರುವುದೇ ಕಾರಣ.ನವಜಾತ ಜಲಜನಕವನ್ನು ಪಡೆಯಲು ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸಬಹುದು:೧.ಅಶುದ್ದ ಸತು ಮತ್ತು ದುರ್ಬಲ ಸಲ್ಫೂರಿಕ್ ಆಮ್ಲ.೨.ಕಬ್ಬಿಣ ಮತ್ತು ಸ್ವಲ್ಪ ಹೈದ್ರೋಕ್ಲೋರಿಕ್ ಆಮ್ಲ ಬೆರೆಸಿರುವ ನೀರು.ನಟ್ರೋ ಸಂಯುಕ್ತಗಳನ್ನು ಅಮೈನೋ ಸಂಯುಕ್ತಗಳನ್ನಾಗಿ ಆಕರ್ಷಿಸಲು ಈ ಮಿಶ್ರ ಸಹಕಾರಿ. ೩.ತವರ ಮತ್ತು ಹೈಡ್ರೋಕ್ಲೋರಿಕ್ ಆಮ್ಲ.ಸೋಡಿಯಂ ಮತ್ತು ಆಲ್ಕೋಹಾಲ್.ಆಲ್ಕೈಲ್ ಹ್ಯಾಲೈಡುಗಳನ್ನು ಅಮೀನುಗಳನ್ನಾಗಿ ಇದು ಪರಿವರ್ತಿಸುವುದು.೫.ಸತು ತಾಮ್ರದ ಜೋಡಿ ಮತ್ತು ಆಲ್ಕೋಹಾಲ್.ಇದರಿಂದ ಆಲ್ಕೈಲ್ ಹ್ಯಾಲೈಡುಗಳನ್ನು ಪ್ಯಾರಫಿನ್ ಹೈದ್ರೋಕಾರ್ಬನ್ನುಗಳಾಗಿ ಪರಿವರ್ತಿಸಬಹುದು. ಉದ್ಭವಾವಸ್ಥೆಗೂ ಕ್ರಿಯಾಶಕ್ತಿಗೂ ಇರುವ ಸಂಬಧವನ್ನು ವಿವರಿಸುವ ಅನೇಕ ಸಿದ್ದಾಂತಗಳಿವೆ.ಮೊದಲನೆಯ ವಾದ ಹೀಗಿದೆ:ಕೂಡಿಟ್ಟ ಜಲಜನಕದಲ್ಲಿ ಅಣುವಿರುತ್ತದೆ,ಅದನ್ನು ಒಡೆದು ಪರಮಾಣು ರೂಪಕ್ಕೆ ರೂಪಕ್ಕೆ ತರಲು ಶಕ್ತಿ ವ್ಯಯವಾಗಬೆಕು,ಆನಂತರವೇ ಅದು ಆಕರ್ಷಣಕಾರಿಯಾಗಲು ಸಾಧ್ಯ.ಆದಾರೆ ನವಜಾತ ಜಲಜನಕದಲ್ಲಿ ಪರಮಾಣುಗಳು ಸಿದ್ದವಾಗಿರುತ್ತವೆ.ಆದ್ದರಿಂದ ಆ ಜಲಜನಕ ನೇರವಾಗಿ ಅಪಕರ್ಷಿತವಾಗುವ ವಸ್ತುವಿನೊಂದಿಗೆ ವ್ಯವಹರಿಸಬಲ್ಲದು.ಈ ವಾದ ಆಕರ್ಷಕವಾಗಿದೆ.ಆದರೆ ವಿವಿಧ ಮೂಲಗಲಳಿಂದ ಪಡೆದ ಜಲಜನಕದ ಕ್ರಿಯಾಶಕ್ತಿಯಲ್ಲಿ ವ್ಯತ್ಯಾಸವಾಗಲು ಕಾರಣವೇನು ಎಂಬ ಪ್ರಶ್ನೆಯನ್ನು ಇದು ಉತ್ತರಿಸುವುದಿಲ್ಲ.ಉದಾಹರಣೆಗೆ ಸತು ಮತ್ತು ಸಲ್ಫೂರಿಕಾಮ್ಲದಿಂದ ಪಡೆದ ನವಜಾತ ಜಲಜನಕ ಕ್ಲೋರೇಟುಗಳನ್ನು ಕ್ಲೋರೈಡುಗಳಾಗಿ ಆಕರ್ಷಿಸುತ್ತದೆ.ಆದರೆ ಸೋಡಿಯಂ ಅಮಾಲ್ಗಂ ಮತ್ತು ನೀರಿನಿಂದ ಉದ್ಭವಿಸಿದ ಜಲಜನಕ ಹೀಗೆ ಮಾಡುವುದಿಲ್ಲ.ಇದೇ ರೀತಿ ಬೇರೆ ಬೇರೆ ಲೋಹಗಳನ್ನು ಋಣಧ್ರುವವಾಗಿಟ್ಟುಕೊಂಡು ವಿದ್ಯುದ್ವಿಧಾನದಿಂದ ಪಡೆದ ಜಲಜನಕದ ಕ್ರಿಯಾಶಕ್ತಿಯಲ್ಲೂ ವ್ಯತ್ಯಾಸವಿರುವುದು ವ್ಯಕ್ತವಾಗಿದೆ.ಬೆಳ್ಳಿಗಿಂತ ಸೀಸದ ಋಣಧ್ರುವದಲ್ಲಿ ಜಲಜನಕ ಬಿಡುಗಡೆಯಾಗಲು ೦.೪೯ ವೋಲ್ಟುಗಳಷ್ಟು ಹೆಚ್ಚು ವಿದ್ಯುತ್ ಅಗತ್ಯ.ಅಂಥ ನಾವು ಬಳಸಿದ ಹೆಚ್ಚು ವಿದ್ಯುತ್ತನ್ನು ಮೈಗೂಡಿಸಿಕೊಂಡು ವಿಶೇಶ ಪಟುತ್ವವನ್ನು ಪ್ರದರ್ಶಿಸುವುದು.ಇದರಂತೆಯೇ ವಿವಿಧ ಕ್ರಿಯೆಗಳಲ್ಲಿ ಹುಟ್ಟುವ ಶಕ್ತಿಯಲ್ಲಿ ವ್ಯತ್ಯಾಸವಿರುತ್ತದೆ.ಆ ಶಕ್ತಿಯೆಲ್ಲಾ ಉಷ್ಣದ ರೂಪದಲ್ಲೇ ಹೊರಬೀಳುವುದಿಲ್ಲ.ಸ್ವಲ್ಪ ಭಾಗವನ್ನು ನವಜಾತ ಜಲಜನಕ ಹೊಂದಿರಲು ಸಾಕು.ಇದರಿಂದ ಅದರ ಕ್ರಿಯಾಶಕ್ತಿ ಹೆಚ್ಚಾಗಬಹುದು.ಇದು ಕೆಲವರ ಮತ.ರೂಢಿಯಲ್ಲ್ಲಿರುವ ಮತ್ತೊಂದು ವಿವರಣೆ ಹೀಗಿದೆ:ಹುಟ್ಟು ಸ್ಥಿತಿಯಲ್ಲಿ ಜಲಜನಕ ಸೂಕ್ಷ್ಮ ಗುಳ್ಳೆಗಳ ರೂಪದಲ್ಲಿ ಇರುತ್ತದೆ.ಪರಿಣಾಮವಾಗಿ ಅದರ ಅಂತರಿಕ ಒತ್ತಡ ಹೆಚ್ಚಿ ಪಟುತ್ವ ಜಾಸ್ತಿಯಾಗುತ್ತದೆ.ಕೂಡಿಟ್ಟ ಜಲಜನಕವನ್ನು ವಿಪರೀತ ಒತ್ತಡಕ್ಕೆ ಗುರಿಪಡಿಸಿದಾಗ ಅದರ ಪಟುತ್ವ ಹೆಚ್ಚುತ್ತದೆಯೆಂದು ಪ್ರಯೋಗಗಳಿಂದ ಶ್ರುತಪಟ್ಟಿದೆ.ಇದು ಮೇಲ್ಕಂಡ ವಾದವನ್ನು ಪುಷ್ಟೀಕರಿಸುತ್ತದೆ.ಆದರೆ ಈ ಬಗ್ಗೆ ತಜ್ನ್ಯರಲ್ಲಿ ಒಮ್ಮತವಿಲ್ಲ.ಅಂತೂ ನವಜಾತ ಜಲಜನಕದ ಉನ್ನತ ಚುಟುವಟಿಕೆಗೆ ಅದು ಪರಮಾಣು ಸ್ಥಿತಿಯಲ್ಲಿರುವುದೇ ಕಾರಣ ಎಂಬ ವಾದದ ಬಗ್ಗೆ ಒಲವು ಕಮ್ಮಿಯಾಗಿದೆ.(ಎಚ್.ಜಿ.ಎಸ್) ಉದ್ಭೂತರೂಪ:ಚಕ್ಷು(ಕಣ್ಣು) ಇಂದ್ರಿಯದಿಂದ ಉಂಟಾಗುವ ಪ್ರತ್ಯಕ್ಷಕ್ಕೆ ಗೋಚರವಾಗುವ ರೂಪ.ಉದ್ಭೂತ ಎಂದರೆ ಮೇಲೆದ್ದು ವ್ಯಕ್ತವಾಗುವುದು ಎಂದರ್ಥ.ರೂಪ ಚಕ್ಷುರಿಂದ್ರಿಯದಿಂದ ಗ್ರಹಿಸ್ಲ್ಪಡುವ ಗುಣ.ಚಾಕ್ಷುಷ ಪ್ರತ್ಯಕ್ಷವಾಗಬೇಕೆಂದರೆ ಆಲೋಕ ಸಂಯೋಗ(ಬೆಳಕಿನ ಸಂಬಂಧ) ಮತ್ತು ಉದ್ಭೂತರೂಪ ಇವೆರಡೂ ಇರಲೇಬೇಕು.ಆದುದರಿಂದಲೇ ಕ್ರಿಯಾಂ ಜಾತಿಂ ಯೋಗ್ಯ ವೃತ್ತಿಂ ಸಮವಾಯಂ ಚ ತಾದೃಶಮ್ ಗೃಹ್ಣಾತಿ ಚಕ್ಷುಃ ಸಂಬಂಧಾದಾಲೋಕೋದ್ಭೂತರೂಪಯೋಃ ಎಂದು ಭಾಷಾಪರಿಚ್ಛೇಧದಲ್ಲಿ ಹೇಳಿದೆ.ಕಣ್ಣಿಗೆ ಗೋಚರವಾಗುವ ದ್ರವ್ಯ(ವಸ್ತು)ದಲ್ಲಿರುವ ಗಮನ ಮೊದಲಾದ ಕ್ರಿಯೆ,ಘಟತ್ವ ಮೊದಲಾದ ಜಾತಿ ಸಮುದಾಯ ಸಂಬಂಧ ಇವುಗಳನ್ನು ಆಲೋಕ(ಬೆಳಕು) ಮತ್ತು ಉದ್ಭೂತ ರೂಪಗಳ ಸಂಬಂಧದಿಂದ ಚಕ್ಷುರಿಂದ್ರಿಯ ಗ್ರಹಿಸುತ್ತದೆ,ಅಂದರೆ ಸಾಕ್ಷಾತ್ಕರಿಸುತ್ತದೆ. ಉದ್ಯಮಕೂಟ:ಎರಡೂ ಅಥವಾ ಹೆಚ್ಚು ಉದ್ಯಮ ಘಟಕಗಳ ತಾತ್ಕಾಲಿಕ ಅಥವಾ ಶಾಶ್ವತ ಏಕೀಕರಣ(ಕಾಂಬಿನೇಶನ್).ಉದ್ಯಮ ಕ್ಷೇತ್ರದಲ್ಲಿ ಬಂಡವಾಳದ ಮೊತ್ತವೂ ಉತ್ಪಾದನೆಯೂ ಅಧಿಕವಾದಂತೆಲ್ಲ ಇದರಲ್ಲಿ ನಿರತವಾಡ ಘಟಕಗಳು ತಂತಮ್ಮಲ್ಲೇ ಸ್ಪರ್ಧೆ ನಡೆಯದಂತೆ ಪರಸ್ಪರವಾಗಿ ಏರ್ಪಡಿಸಿಕೊಂಡ ಒಡಂಬಡಿಕೆ,ಸಂಯೋಜನೆ,ವಿಲೀನತೆ. ಬಂಡವಾಳ ವ್ಯವಸ್ಥೆಯ ಆರಂಭ ಕಾಲದಿಂಸಲೂ ಅದರ ಬೆಳವಣಿಗೆಗೆ ಪ್ರೋತ್ಸಾಹಕವಾಗಿದ್ದ ಅನಿರ್ಬಂಧಿತ ಸ್ಪರ್ಧೆಯ ಒಂದು ದೊಡ್ಡ ದೋಷವೆಂದರೆ ಅದಕ್ಷ ಹಾಗೂ ಕಡಿಮೆ ದಕ್ಷ ಸಂಸ್ಥೆಗಳ ನಾಶ.ಯೋಗ್ಯತೆಯುಳ್ಳದ್ದು ಮಾತ್ರ ಉಳಿಯಬೇಕೆಂಬುದು ಒಳ್ಳೆಯ ಆದರ್ಶವಾದರೂ ವಾಸ್ತವ ಜಗತ್ತಿನಲ್ಲಿ ಅನೇಕ ವೇಳೆ ಇದರಿಂದ ಅನರ್ಥವೇ ಸಂಭವಿಸಬಹುದು.ಒಂದು ಸಂಸ್ಥೆಯನ್ನು ಮುಚ್ಚಿದಾಗ ಅದರಲ್ಲಿ ನಿಯೋಜಿಸಿದ ಬಂಡವಾಳ ವ್ಯರ್ಥವಾಗುವುದಲ್ಲದೆ ಅಲ್ಲಿದ್ದ ಉದ್ಯೋಗಿಗಳು ನಿರುದ್ಯೋಗಿಗಾಳಾಗಬಹುದು.ಅಮೂಲ್ಯ ಸಾಧನಗಳ ಪೋಲಾಗಬಹುದು.ಬೃಹತ್ ಗಾಟ್ರದಲ್ಲಿ ಉತ್ಪಾದನೆ ಮತ್ತು ವಹಿವಾಟುಗಳು ನಡೇಯುವ ಈ ಕಾಲದಲ್ಲಿ ಇದರಿಂದಾಗುವ ಕಷ್ಟ ನಷ್ಟಗಳೆಷ್ಟೆಂಬುದನ್ನು ಊಹಿಸಿಕೊಳ್ಳಬಹುದು.ಸ್ಪರ್ಧೆಯ ಅನಿಶ್ಚಿತತೆಯನ್ನೂ ಅನರ್ಥಕಾರಿ ಪರಿಣಾಮಗಳನ್ನೂ ದಕ್ಷತೆಗೆ ಹೆಚ್ಚಿನ ಸ್ಥಾನ ಕೊಟ್ಟು ಲಾಭದ ಮಟ್ಟವನ್ನು ಅದುಮಿಡೂವ ಪ್ರವೃತ್ತಿಗಳನ್ನೂ ನಿವಾರಿಸಿಕೊಳ್ಳುವುದೂ,ಸಂಸ್ಥೆಯ ಉತ್ಪಾದನೆ ವಹಿವಾಟುಗಳನ್ನು ಹೆಚ್ಚಿಸಿಕೊಂಡು ಬೃಹದ್ ಗಾತ್ರದ ಉತ್ಪಾದನೆಯ ನಾನಾ ಬಗೆಯ ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಳ್ಳುವುದೂ ,ವ್ಯಾಪಾರ ಚಕ್ರದ ಏರಿಳಿತಗಳ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳುವಂತಹ ಆರ್ಥಿಕಶಕ್ತಿ ಬೆಳೆಸಿಕೊಳ್ಳುವುದೂ ಈ ಬಗೆಯ ವ್ಯವಸ್ಥೆಗಳ ಹಿಂದಿರುವ ಉದ್ದೇಶ.ಸುಂಕದ ವ್ಯವಸ್ಥೆಯ ಪ್ರಭಾವ,ಒಟ್ಟಾಗಿ ಸೇರುವ ಸಹಜಪ್ರವೃತ್ತಿ,ಅನಿಶ್ಚಿತತೆಯ ಫಲವಾದ ನಷ್ಟ ಸಂಭವ,ಬೃಹತ್ತಿನ ಮೋಹ-ಇವು ಒಕ್ಕೂಟಕ್ಕೆ ಕಾರಣಗಳಾಗಬಹುದು.ಒಂದು ಕೈಗಾರಿಕೆಗೆ ಅಲ್ಲಿನ ಸರ್ಕಾರದಿಂದ ಸುಂಕದ ರಕ್ಷಣೆ ದೊರಕಿದಾಗ ಅದರ ಅಡಿಯಲ್ಲಿ ಹೊರಗಿನ ಸ್ಪರ್ಧೆಯ ಭಯವಿಲ್ಲದೆ ನೇರವಾಗಿ ಬೆಳೆದ ಸಂಸ್ಥೆಗಳು ತಂತಮ್ಮಲ್ಲೇ ಒಡಂಬಡಿಕೆಯಿಂಡ ಒಕ್ಕೂಟ ರಚಿಸಿಕೊಂಡು ಭೀಮಶಕ್ತಿ ಗಳೀಸಿಕೊಳ್ಳಬಹುದು.ಹೀಗೆ,ಕಾರಣವೇನೇ ಇರಲಿ,ನಿರುಪಾಧಿಕ ಸ್ಪರ್ಧೆಯ ನಿವಾರಣೆ ಅಥವಾ ನಿರ್ಮೂಲನವೇ ಇಂತಹ ಪ್ರಯತ್ನಗಳೆಲ್ಲದರ ಅಂತಿಮ ಪರಿಣಾಮ.ಉತ್ಪಾದನೆಯಲ್ಲಿ ನಿರತವಾದ ಘಟಕಗಳ ನಡುವೆ ಅಲ್ಪ ಸ್ವಲ್ಪ ಒಪ್ಪಂದವೂ ಇಲ್ಲದ ಯಾವ ಉತ್ಪಾಡನಾ ಕ್ಷೇತ್ರ್ವೂ ಇಂದು ಬಹುಶಃ ಕಾಣಸಿಗಲಿಕ್ಕಿಲ್ಲ.ಏಕವ್ಯಕ್ತಿ ಉದ್ಯಮಗಳು ಕ್ರಮವಾಗಿ ಪಾಲುದಾರಿಕೆಗೂ ಕೂಡು-ಬಂಡವಾಳ ಕಂಪೆನಿಗಳೀಗೂ ಎಡೇ ಕೊಟ್ಟಿರುವ ವಿಕಾಸದ ಹಾದಿಯಲ್ಲಿ ಉದ್ಯಮ ಕೂಟವೇ ಅಂತಿಮ ಘಟ್ಟ. ಈ ಬಗೆಯ ಸಂಘಟನೆಗೆ ಒಳಗಾದ ಘಟಕಗಳ ಸ್ವರೂಪಾನುಗುಣವಾಗಿ ಉದ್ಯಮಕೂಟಗಳನ್ನು ಮೂರು ತೆರನಾಗಿ ವಿಂಗಡಿಸುವುದು ಸಾಧ್ಯ. ಸಮತಲ ಕೂಟ(ವ್ಯಾಪಾರ ಕೂಟ):ಇಂಥ ಕೂಟದಲ್ಲಿ ಕೂಡೂವ ಘಟಕಗಳು ಒಂದೇ ಬಗೆಯ ವ್ಯಾಪಾರ ಮಾಡುವಂಥವು;ಅಥವಾ ಒಂದೇ ಬಗೆಯ ಉದ್ಯಮದಲ್ಲಿ ನಿರತವಾಗಿರುವಂಥವು.(ಹಾರಿಸಾಂಟಲ್ ಕಾಂಬಿನೇಷನ್).ಊದಾಹರಣೆಗೆ ಹಲವು ಕಾಗದ ಕಾರ್ಖಾನೆಗಳದೋ ಸಕ್ಕರೆ ಕಾರ್ಖಾನೆಗಳದೋ ಕೂಟ. ಉದಗ್ರ ಕೂಟ(ಅನುಕ್ರಮ ಕೂಟ):ಒಂದೇ ಕೈಗಾರಿಕೆಯಲ್ಲಿನ ನಾನಾ ಉತ್ಪಾದನ ಘಟ್ಟಗಳು ಅಥವಾ ತಳದಿಂದ ಮೇಲುಮುಖವಾಗಿಯೋ ತುದಿಯಿಂದ ಕೆಳಮೊಗನಾಗಿಯೋ ಒಂದರೊಡನಿನ್ನೊಂದರ ಸಂಬಂಧವಿರುವ ನಾನಾ ಉದ್ಯಮಗಳು,ಅನುಕ್ರಮವಾಗಿ ಸೇರಿ ಸಂಭವಿಸಿದ ಕೂಟ(ವರ್ಟಿಚಲ್ ಕಾಂಬಿನೇಷನ್,ಸೇಕ್ವೆನ್ಸ್ ಕಾಂಬಿನೇಷನ್)ಉದಾಹರಣೆ:ಪ್ರಕಾಶನ ಸಂಸ್ಥೆಯೊಂದು ಮುದ್ರಣ ಸಂಸ್ಥೆಯೊಂದಿಗೆ ಅಚ್ಚುಕೂಟ ಉದ್ಯಮ,ಕಾಗದದ ಕಾರ್ಖಾನೆಯೊಂದಿಗೂ ಮರಳು ತಿಳ್ಳು (ವುಡ್ ಪಲ್ಪ್)ಕಾರ್ಖಾನೆಯೊಂದಿಗೂ ಕೂಡಿಕೆ. ವರ್ತುಲ ಕೂಟ(ಸಂಪೂರಕಕೂಟ,ಮಿಶ್ರಕೂಟ):ಮೇಲೆ ಸೂಚಿಸಿದ ಯಾವ ಕ್ರಮವೂ ಇಲ್ಲದೆ,ಪರಸ್ಪರ ಸಂಬಂಧಿಗಳಾಗಿಲ್ಲದ ಉದ್ಯಮಗಳನ್ನು ಒಂದು ಮಾಡಿ ರಚಿಸಿದ ಕೂಟ(ಸರ್ಕ್ಯೂಲರ್,ಕಾಂಪ್ಲಿಮೆಂಟರಿ ಅಥ್ವಾ ಮಿಕ್ಸೆಡ್ ಕಾಂಬಿನೇಷನ್)