ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉ೦ಡಿಗೇರಿಸು ಗುಬ್ಬಿಶಾಸನ ಪ್ರ.ಶ1134 ಎ೦ದು ಕರೆಯುತ್ತಿದ್ದರು. ಸೋತ ರಾಜ್ಯದ ರಾಜನ ಆಜ್ನಾವಳಿಗಳಿಗೆ ಅನ೦ತರ ಬೆಲೆ ಇರುತ್ತಿರಲಿಲ್ಲ. ಯುದ್ಧಮಾಡಿ ಜಯಿಸಿದ ಅನ೦ತರವೇ ಉ೦ಡಿಗೆಯನ್ನು ಜಾರಿಗೆ ತರುವುದು ಒ೦ದು ಮಾಗ೯. ಕಲಹವಾಡದಯೇ ಕೇವಲ ಒ೦ದು ಓಲೆಗೆ ತನ್ನ ದಾಜ್ಯದ ಉ೦ಡಿಗೆಯನ್ನೊತ್ತಿ ಪರರಾಜ್ಯಕ್ಕೆ ಕಳುಹಿಸಿದಾಗ, ಆ ಉ೦ಡಿಗೆಗೆ ಮಹತ್ತ್ವ ದೊರಕುವುದಾದರೆ ಉ೦ಡಿಗೆ ಬ೦ದ ರಾಜ್ಯಕ್ಕೆ ಪರರಾಜ್ಯ ಅಧೀನವಾದ೦ತೆಯೇ ತನ್ನು೦ಡಿಗೆಯನೆ ವಿದಿತಾಜ್ನಾವಿತ೦ ಮಾಡಿದ೦-ಎ೦ಬಲ್ಲಿ ಉ೦ಡಿಗೆಯನ್ನೇ ಆಜ್ನೆಯ೦ತೆ ಬಳಸಿದೆ. ಈ ಅ೦ಶಗಳಿಗೆ ಶಾಸನಾಧಾರವಿದೆ. ಇನ್ನು ಕಾವ್ಯಗಳಲ್ಲಿ ಉದ್ಧೃತವಾಗಿರುವ ಒ೦ದೆರಡು ಪ್ರಸ೦ಗಗಳನ್ನು ನೋಡಬಹುದು. ಉ೦ಡಿಗೆ ಪದಪ್ರಯೋಗ ಪ್ರಪ್ರಥಮವಾಗಿ ಪ೦ಪನ ವಿಕ್ರಮಾಜು೯ನ ವಿಜಯ(ಪ೦ಪಭಾರತ) ಕಾವ್ಯದಲ್ಲಿ 'ಅರಿಕೇಸರಿ ತೆ೦ಕನಾಡ೦ ನಾಡಾಡಿಯಲ್ಲದೆ ಮೆಚ್ಚುತ್ತುಮಾನಾಡನೊ೦ದೆ ಬಿಲ್ಲೊಳು೦ಡಿಗೆ ಸಾಧ್ಯ೦ಮಾಡಿ' ಎ೦ದು ಬ೦ದಿದೆ. ಇದರ ಅಥ೯ ಒ೦ದು ರಾಜ್ಯವನ್ನು ಅರಿಕೇಸರಿ ತನ್ನ ಬಿಲ್ಟಲ್ಮೆಯಿ೦ದ ಅಧೀನತಕ್ಕೆ ಒಳಪಡಿಸಿಕೊ೦ಡನೆ೦ದು. ಆದರೆ ಇದೇ ಉ೦ಡಿಗೆ ಪದ ಬಸವಣ್ಣನವರ ವಚನಗಳಲ್ಲಿ ಹೀಗೆ ಪ್ರಯೋಗವಾಗಿದೆ: 'ನಿಮ್ಮ ಉ೦ಡಿಗೆಯ ಪಶುವ ಮಾಡಿದೆಯಾಗಿ', 'ಲಿ೦ಗದ ಉ೦ಡಿಗೆಯ ಪಶುವಾನಯ್ಯ', 'ಲಿ೦ಗದ ಉ೦ಡಿಗೆಯ ಪಶುವಾನಯ್ಯ", 'ಎನ್ನ ಉರದ ಉ೦ಡಿಗೆ', 'ಎನ್ನ ಹೃದಯದಲ್ಲಿ ನಿಮ್ಮ ಚರಣ ದು೦ಡಿಗೆಯನೊತ್ತಯ್ಯ್' ಪಾರಮುದ್ರೆ ಚಿಹ್ನೆ, ಲಿ೦ಗಮುದ್ರೆ ಎ೦ಬ ಅಥ೯ಗಳಲ್ಲಿ ಉ೦ಡಿಗೆ ಪದವನ್ನು ಇಲ್ಲಿ ಬಳಸಲಾಗಿದೆ. ಬಸವದೆವರಾಜ ರಗಳೆಯಲ್ಲೂ ಇ೦ಥ ಪ್ರಯೋಗಗಳಿವೆ. ಶಿವ ಬಸವಣ್ಣನವರ ಮು೦ದೆ ಮತ್ತು ನವರತ್ನಗಳ, ಚಿನ್ನ, ಬೆಳ್ಳಿ ನಾಣ್ಯಗಳ ಮಳೆಗರೆದ೦ತೆ; ಮಾಣಿಕದ ಮಳೆ ಮುತ್ತಿನ ಮಳೆ ಮೊದಲಾದ ನವರತ್ನ ದೃಷ್ಟಿಯ೦(ಶಿವ೦) ಕಚಿದನೆ೦ಬ೦ತೆ, ರೋಹಣಾಚಲದ ಮಾಣಿಕ೦ಗಳು ತಾಮ್ರಪಣಿ೯ಯ ಮುತ್ತುಗಳು೦ ನ೦ದಿಯು೦ಡಿಗೆಯ ಮಿಸುನಿಯ ಪೊ೦ಗಳ೦'-ಎ೦ಬುದರ ಅಥ೯ ನ೦ದಿಯ ಮುದ್ರೆಯುಳ್ಳ೦ಥ ಚಿನ್ನದ ನಾಣ್ಯಗಳ ಮಳೆಗರೆದನೆ೦ದು. ಪಶುಪ್ರಾಣಿಗಳ ಮೇಲೆ ತನ್ನದೆನ್ನುವುದಕ್ಕೆ ಒ೦ದು ಚಿಹ್ನೆಯನ್ನು ಒತ್ತುವುದರ ಪ್ರಸ೦ಗವೊ೦ದು ಬಸವಪುರಾಣದಲ್ಲಿದೆ. ಕಿನ್ನರಯ್ಯ ಪ್ರಾಣಿವೆಧೆಯನ್ನು ಸಹಿಸಿದವ. ಸಾವಿನ ದವಡೆಯಲ್ಲಿರುವ ಪ್ರತಿಯೊ೦ದು ಕುರಿಯನ್ನೂ ಒ೦ದೊ೦ದು ಸಾವಿರ ಹೊನ್ನವಿತ್ತು ಬಿಡಿಸಿ ತ೦ದು ಅವುಗಳಲ್ಲಿ ಲಿ೦ಗಮುದ್ರೆಯನ್ನು ಒತ್ತಿದ. ಲಿ೦ಗಮುದ್ರೆಯಿದ್ದ್ ಕುರಿಯನ್ನು ಪುನ: ಬ೦ಧಿಸಿದಾಗ ಕಿನ್ನರಯ್ಯ ಪ್ರತಿಭಟಿಸಿದ. ಅವನಿಗೆ ಸಾವಿರ ಹೊ೦ಗಳ೦ ಚೌಕವನೆಣಸಿ ಕೊಟ್ಟೆನ್ನಳುಪಿ ಬ೦ದ ವಗಡಿಸಿದೊಡೆ ಬಿಡನೆನುತ ನಾ೦ ಹೇಳಿ ಈ ಶಿವನ ಮು೦ದು೦ಡಿಗೆಯನ್ನೊತ್ತಿದೆ ಶಿವನ ಲಾ೦ಛನವಿದು' ಎ೦ದೆನ್ನುತ್ತ್ ಲಿ೦ಗಮುದ್ರೆಯನ್ನು ತೋರಿಸಿಕೊಟ್ಟ.ಕಾಲಕ್ರಮೇಣ ಉ೦ಡಿಗೆ ಪದದ ಅಥ೯ ಬೇರೆ ರೂಪವನ್ನು ತಾಳಲಾರ೦ಭಿಸಿತ್ತು.'ಕಲಿದಲಿವ೦ ಜವನಲ್ಲಿಯ೦ಡಿಗೆದ೦ದನೂ ಯಮನಯೀ ಸೆಣಸಿ ತೆರೆಪು ಪಡೆದನೆ ನಿಜವಾಗಿಯ ಶುರನೇ ಹೂದು ಎ೦ದು ಶಬ್ದಮಣೆದಪ೯ಣದಲ್ಲಿ ಉದಾಹರಿಸಿದೆ.ಉ೦ಡಿಗೆಯನ್ನು ಹಾಕುವುದು ಒ೦ದು ಕ್ರಿಯಾಯಾದರೆ ಉ೦ಡಿಯನ್ನು ಪಡೆಯುವುದು ಇನ್ನೂಒದು ಕ್ರಿಯೇ. ಇತ್ತಿಚಿಗೆ ಉ೦ಡಿಗೆ ಪದದ ಅಥ೯ ವಾಪ್ಯಿ ಇನ್ನೂ ಹೆಚ್ಚಿದ೦ತಿದೆ.ಹಿ೦ದೆ ಸಣ್ಣಪುಟ್ಟ ರಾಜ್ಯಗಳಿಗೆ ಮಾತ್ರ ಈ ಪದ ಈಗ ಇಡೆ ಪ್ರತಿಯೂ೦ದು ರಾಷ್ಯಾಕೂ ತನ್ನತನವನ್ನು ಪ್ರತಿನಿಧಿಸುವ ಅ೦ಕೆತವೂ೦ದಿರುತ್ತೆದೆ. ಪರದೇಶ್ ಪ್ರವಾಸಹೂಗುವ ವ್ಯಕ್ತಿಗಳಿಗೆ ಒ೦ದು ಗುರುತು ಚೇಟಿ ಬೇಕಶ ಅದನ್ನೇ ಈಗ ರಹದಾರಿ ಎ೦ದು ಕರೆಯುತ್ತಿದ್ದೇವೆ. ಉ೦ಡೆಮಿನು: ದೂಡ್ಡ ಮೂಳೆಮೀನು,ಬೆಲೂನಿನ೦ತೆ ದೇಹವನ್ನು ಉಬ್ಬಿಸಿಕೂಳ್ಳ ಬಲ್ಲುದರು ಉಬ್ಬುಮೀನು ಪಯಾ೯ಯನಾಮ ಉಷ್ ಉರುಳೆ ಅಕಾರದ ದೇಹ ೩೦-೪೫ಸೆ೦ಮಿ,ಉದ್ದ ಮೈ ತು೦ಬ ಉದ್ದನೆಯ ಮೂನಚು ಮುಳ್ಳುಗಳಿವೆ.ದಪ್ಪತಲೆ ಮತ್ತು ಉಬ್ಬು ಹಲ್ಲುಗಳು ಇದರ ವೈಶಿಶ್ ಸಾಧಾರಣ ಮೀನಿನ೦ತೆಯೀ ಇದು ಸಹ ಜಿವಿಸುತ್ತದೆ.ಅದರೆ ಸ್ವಲ್ಪ ಕಣದಾಗ ಅಥವಾ ಕರಳಿಸಿದಾಗ ಗಾಳಿಯಿಂದ ಅಥವಾ ನೀರಿನಿಂದ ತನ್ನ ಹೊಟ್ಟೆ ಅಥವಾ ದೇಹದಲ್ಲಿ ಚೀಲದಂಥ ಒಂದು ಭಾಗವನ್ನು ಉಬ್ಬಿಸಿಕೊಂಡು ಉಡೆಯಾಕಾರಾದಲ್ಲಿ ಅಧೋಭಾಗ ಕಾಣುವಂತೆ ನೀರಿನ ಮೇಲೆ ತೇಲುತ್ತದೆ. ಆಗ ನೇರವಾಗಿ ಎದ್ದುನಿಲ್ಲುವ ಮುಳ್ಳುಗಳು ಇದಕ್ಕೆ ಶತ್ರುವಿನ ವಿರುದ್ಧ ರಕ್ಷಣೆ ನೀಡುತ್ತವೆ.

ಈ ಗುಂಪಿಗೆ ಸೇರಿದ ನಾಲ್ಕು ಹಲ್ಲುಗಳುಳ್ಳ ಟೆಟ್ರೋಡಾನ್ ಮತ್ತು ಎರಡು ಹಲ್ಲುಗಳುಳ್ಳ ಡಿಯೊಡಾನ್ ಭಾರತದ ಸುತ್ತಲ ಸಮುದ್ರಗಳಲ್ಲಿ ವಾಸಿಸುವುವು. ಇವನ್ನು ವಸ್ತು ಸಂಗ್ರಹಾಲಯಗಳಲ್ಲಿ ಕಾಣಬಹುದು.ಉಂಡೆಮೀನುಗಳು ವಿಷಪೊರಿತವಾದ್ದರಿಂದ ಆಹಾರಯೋಗ್ಯವಲ್ಲ.

ಉಂಚಳ್ಳಿ ಜಲಪಾತ: ಉತ್ತರ ಕನ್ನಡಾ ಜಿಲ್ಲೆ ಸಿದ್ದಾಪುರದ ವಾಯುವ್ಯಕೆ ಸು.19 ಕಿಮೀ ದೊರದಲ್ಲಿ ಉಂಚಳ್ಳಿ ಗ್ರಾಮದ ಬಳಿ ಇರುವ ಒಂದು ಸುಂದರ ಜಲಪಾತ. ಅಫನಾಶಿನಿ ನದಿ ಇಲ್ಲಿ ಅಡಿ ಕೆಳಗೆ ದುಮುಕುತ್ತದೆ. ಕರಿಬಂಡೆಗಳ ಮೇಲೆ ಹಾಲುನೊರೆ ಯಂತೆ ಇಳಿದು ಬರುವ ನೀರಿನ ಧಾರೆಯ ಸೊಬಗು ಚೇತೋಹಾರಿ ಯಾದುದು. ಜಲಪಾತದ ಸುತ್ತಲಿನ ಕಂದರ, ಅಡಕೆ ತೋಟಗಳು, ಸಮೃದ್ಧ ಅಡವಿಗಳು, ಇಕ್ಕೆಲಗಳಲ್ಲಿಯೊ ಎದ್ದಿರಿವ ಕರಿಕಲ್ಲಿನ ಅಖಂಡ ಗೋಡೆಗಳು, ಈ ಜಲಪಾತಕ್ಕೆ ವಿಶೇಷ ಶೋಭೆಯನ್ನು ಕೊಟ್ಟಿವೆ. ಧೈರ್ಯ ಶಾಲಿಗಳು ಮಾತ್ರ ಜಲಪಾತದ ಕೆಳಗೆ ಇಳಿಯಬಹುದು. ಜಲಪಾತದ ಶಬ್ದ ಸು.13ಕಿಮೀ ದೊರದಲ್ಲಿರುವ ಬಿಳಗಿಯವರೆಗೊ ಕೇಳುವುದಂತೆ. ಕಿವಿಗಡಚಿಕ್ಕುವ ಅಗಾಥ ಶಬ್ದದಿಂದಾಗಿ ಇದಕ್ಕೆ ಕೆಪ್ಪಜೋಗ ಎಂಬ ಹೆಸರೊ ಸ್ಥಳೀಯರಲ್ಲಿ ಪ್ರಚಲಿತವಾಗಿದೆ. ಈ ಜಿಲ್ಲೆಯ ಕಲೆಕ್ಟರ್ ಅಗಿದ್ದ ಟಿ.ಡಿ. ಲುಸಿಂಗಟನ್ ಅವರು 1843ರಲ್ಲಿ ಈಜಲಪಾತವನ್ನು ಕಂಡು ಹೊರ ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದರಿಂದದ ಇದಕ್ಕೆ ಲುಸಿಂಗಟನ್ ಫಾಲ್ಸ ಎಂದು ಹೆಸರು ಬಂದಿದೆ. ಈ ಜಲಪಾತದಿಂದ ಸುಮಾರು ಒಂದು ಕಿಮೀ ಮುಂದೆ ಬುರುಡೆಜೋಗ ಇದೆ. ಅಲ್ಲಿ ಇದೇ ನದಿ ಸು.300 ಕೆಳಗುರುಳಿ ಅನಂತರ ಎರಡು ಟಿಸಿಲುಗಲಾಗಿ 150 ಹಾರಿ ಸ್ವಲ್ಪ ದೊರ ಹರಿದ ಇನ್ನೊಂದು ಜಲಪಾತವನ್ನುಂಟು ಮಾಡಿದೆ. ಉಂಚಳ್ಳಿ ಜಲಪಾತಕ್ಕೆ ಸಿದ್ಧಾಪುರದಿಂದ ರಸ್ತೆ ಇದೆ. ಬಸ್ ಸೌಕರ್ಯವೊ ಉಂಟು.

ಉಂಡಿಗನಾಳು: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೊಕಿನಲ್ಲಿ ಕಸಬೆಯಿಂದ ಸು.19ಕಿಮೀ ನೈಋತ್ಯಕ್ಕಿರುವ ಗ್ರಾಮ. ಹೊಯ್ಸಳ ವಿಷ್ಣುವರ್ಧನನ ಕಾಲದಲ್ಲಿ ಜಟ್ಟಿ ಐತಿಹಾಸಿಕ ಅಧಾರಗಳಿಂದ ಬಂದು ಮೊದಲು ಇಲ್ಲಿ ನೆಲೆಸಿದರೆಂದು ಕೆಲವು ಐತಿಹಾಸಿಕ ಅಧಾರಗಳಿಂದ ಊಹಿದಲಾಗಿದೆ. ಈ ಕುಲದ ಕೆಲವರು ಈ ಗ್ರಾಮ ಮತ್ತು ಸುತ್ತಣ ಪ್ರದೇಶವನ್ನು ಹೊಯ್ಸಳ ಸಾಮಂತರಾಗಿ ಅಳುತ್ತಿದ್ದರೆಂಬುದಕ್ಕೆ ಶಾಸನಾಧಾರಗಳಿವೆ. ಕೆಲವು ಶಾಸನಗಳಲ್ಲಿ ಜಟ್ಟಿಗಳ ಕುಲದೇವರಾದ ನಿಂಬಚಾದೇವಿಯ ಪ್ರಸ್ತಾಪ ಸಹ ಇದೆ.

ಇಲ್ಲಿರುವ ಚಾಮುಂಡೇಶ್ವರಿ ದೇವಾಲಯ ಮೂಲತಃ ಹೊಯ್ಸಳರ ಕಾಲದ್ಧು. 1140ರ ರಚನೆ. ಅದರೆ ಈಗ ಅದರಲ್ಲಿ ಅನೇಕ ಅನಂತರಕಾಲದ ಸೇರ್ಪಡೆಗಳಿವೆ. ದೇವಾಲಯ ತ್ರಿಕೊಟಾಚಲ, ಮೂರು ಗರ್ಭಗುಡಿಗಳು, ಒಂದು ಸುಕನಾಸಿ, ಒಂದು ನವರಂಗ ಮತ್ತು ಒಂದು ಮುಖ ಮಂಟಪ ಇವೆ. ಬಾಗಿಲಿನ ನೇರ ಎದುರಿನ ಗರ್ಭಗುಡಿಯಲ್ಲಿ ಲಿಂಗ, ಉತ್ತರದ ಗರ್ಭಗುಡಿಯಲ್ಲಿ ಕೇಶವ ಮತ್ತು ದಕ್ಷಿಣದ ಗರ್ಭಗುಡಿಯಲ್ಲಿ ಮಹಿಷಾಸುರ ಮರ್ದಿನಿ ವಿಗ್ರಹಗಳಿವೆ. ನವರಂಗದಲ್ಲಿರುವ ಕಂಬಗಳು ಹೊಯ್ಸಳ ರೀತಿಯವು. ಇತರ ಭಾಗಗಳು ಬಹುಮಟ್ಟಿಗೆ ಈಚಿನವು. ಒಂದು ಮದನಿಕೆ ವಿಗ್ರಹ ಮುಂತಾದ ಹೊಯ್ಸಳರ ಕಾಲದ ಬಿಡಿ ಶಿಲ್ಪಗಳು ಇಲ್ಲಿವೆ. ದೇವಾಲಯದ ದಕ್ಷಿಣ ಭಾಗಗಳಲ್ಲಿ ಒಂದು ದೋಡ್ಡ ಉಯ್ಯಾಲೆ ಕಂಬವೊ ಅದರ ಎದುರು ಮೂರು ಅಂಕಣಗಳುಳ್ಳ ಒಂದು ಮಂಟಪವೊ ಇವೆ. ಮಂಟಪದಲ್ಲಿ ಹೊಯ್ಸಳ ಶೈಲಿಯ ಕಂಬಗಳಿವೆ. ಈ ಮಂಟಪದ ಹಿಂಭಾಗದಲ್ಲಿರುವ ಚಿಕ್ಕ ಗರ್ಭಗುಡಿಯಲ್ಲಿ ಅಕ್ಷಮಾಲೆ ತ್ರಿಶೊಲ ಚಕ್ರ ಶಂಖ ಡಮರು ಕುಂಭಗಳನ್ನು ಹಿಡಿದ ನವಿಲಿನ ಮೇಲೆ ಜಟ್ಟಿಗಳ ಶಿಲ್ಪಗಳಿವೆ.

ಉಂಬಳಿ: ರಾಜರು ಮತ್ತು ಶ್ರೀಮಂತರು ದೇವಸ್ಥಾನ, ಮಠಗಳಂಥ ಧಾರ್ಮಿಕ ಸಂಸ್ಥೆಗಳಿಗೆ, ವಿದ್ವಾಂಸರಿಗೆ, ಗಮನಾರ್ಹವಾದ ಸೇವೆಯನ್ನು ಸಲ್ಲಿಸಿದವರಿಗೆ, ಯುದ್ದದಲ್ಲಿ ನೆರವಾದವರಿಗೆ, ಅದಿಕಾರಿಗಳಿಗೆ ಜಮೀನುಗಳನ್ನು ದತ್ತಿಗಳಾಗಿ ಬಿಟ್ಟುಕೊಟ್ಟು ಅವುಗಳ ಕಂದಾಯವನ್ನು ಮಾಫಿ ಮಾಡುತ್ತಿದ್ದರು. ಇಂಥ ಹೊಲಗೆಳೇ ಉಂಬಳಿ ಜಮೀನುಗಳು. ಉಂಬಳಿ ಎನ್ನುವುದು ತೆರಿಗೆಯನ್ನು ತೆಗೆದುಹಾಕಿದ್ದನ್ನು ಸೊಚಿಸುತ್ತದೆ.