ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕದ ವಾಸ್ತುಶಿಲ್ಪ ೧೪ ಅಡಿ ಎತ್ತರವಾಗಿದೆ.ಮೂರೂ ಬಹಳ ಸುಂದರ ವಿಗ್ರಹಗಳಾಗಿವೆ.ಈ ಕಾಲಕ್ಕೆ ಸೇರುವ ನಂಜನಗೂಡು(ನೋಡಿ ನಂಜನಗೂಡು)ದೇವಾಲಯದ ಉಚ್ಚಿಷ್ಟ ಗಣಪತಿ,ಹಳೇಬೀಡಿನ ನೃತ್ಯಸರಸ್ವತಿ,ನೃತ್ಯಗಣಪತಿ,ನುಗ್ಗಿಹಳ್ಳಿಯ(ನೋಡಿ ನುಗ್ಗೆಹಳ್ಳಿ)ಗೋವರ್ಧನರ ಕೃಷ್ಣ ಮತ್ತು ಹಯಗೀವ-ಇವು ಪ್ರಸಿದ್ಧ ಕೃತಿಗಳು.

ವಿಜಯನಗರ ಕಾಲದಲ್ಲಿ ಶಿಲ್ಪಕಲೆ ಹೊಸದಿಕ್ಕಿನಲ್ಲಿ ಪ್ರವಹಿಸಿತು.ಪ್ರಸಿದ್ಧ ಕಲಾಭಿಗ್ನರೊಬ್ಬರು ಹೇಳುವಂತೆ ಪರಿಷ್ಕೃತವಾದ ಮುಗಿತಾಯದಲ್ಲೂ ಸೂಕ್ಷ್ಮ ವಿವರಗಳ ನಿಷ್ಕೃಷ್ಟತೆಗಳಲ್ಲೂ ಹೊಯ್ಸಳ ಕಲೆ,ಪ್ರಮಾಣಬದ್ಧತೆಯಲ್ಲೂ ಘನತೆ ಗಾಂಭೀರ್ಯಗಳಲ್ಲೂ ಪಲ್ಲವಕಲೆ ಅಸಾದೃಶ್ಯವಾಗಿದ್ದರೆ,ನಯವಾದ ಸತ್ವಪೂರ್ಣ ಭಾವ ನಿರೂಪಣದಲ್ಲಿ ವಿಜಯನಗರ ಶಿಲ್ಪ ಅವನ್ನು ಮೀರಿಸುತ್ತದೆ.ಬೃಹದಾಕಾರದ ೨೨ ಅಡಿ ಏಕಶಿಲಾಮೂರ್ತಿ ನರಸಿಂಹ ಮತ್ತು ಹನುಮಂತನ ಶಿಲ್ಪಗಳಲ್ಲಿ ಭಯಂಕರತೆ ಎದ್ದು ಕಾಣುತ್ತದೆ.ಹಂಪಿಯ (ನೋಡಿ ಹಂಪೆ)ಹಜಾರ ರಾಮಸ್ವಮಿಯ ಅಂಗಳದ ಗೋಡೆಗಳ ಮೇಲಿನ ರಾಮಾಯಣ ಶಿಲ್ಪಗಳು ಜೀವಂತ ಸತ್ವಶಾಲಿ ಸುಂದರ ಕೃತಿಗಳು.ವಿಠಲ ಸ್ವಾಮಿಯ ದೇವಾಲಯದ ಮುಖಮಂಟಪದ ಜಗತಿಯಲ್ಲಿರುವ ವಿಪುಲ ಶಿಲ್ಪಗಳೂ ಕಂಬಗಳ ಮೇಲಿನ,ದೊಡ್ಡ ಅಳತೆಯ ವಿಗ್ರಹಗಳೂ ಭಾವಪೂರ್ಣವಾಗಿದ್ದು ಸೌಂದರ್ಯದ ಪ್ರತೀಕಗಳಾಗಿವೆ.ಈ ಕಾಲದ ಕೆತ್ತನೆಗಳಲ್ಲಿ ಕಾಣುವ ಮೃಗ ಪಕ್ಷಿಗಳ ಕೆತ್ತನೆ ಮುಖ್ಯವಾಗಿ ಆನೆ ಕುದುರೆಗಳ ಶಿಲ್ಪಗಳು ಕಣ್ಸೆಳೆಯುತ್ತವೆ.ಕರ್ನಾಟಕದ ಹೊರಗಿದ್ದರೂ ವಿಜಯನಗರದ ಅರಸರ ಆಶ್ರಯದಲ್ಲಿ ನಿರ್ಮಿತವಾದ ತಾಡಪತ್ರಿ,ಲೇಪಾಕ್ಷಿ(ನೋಡಿ ಲೇಪಾಕ್ಷಿ)ವಿರಿಂಚಿ ಪುರಗಳ ಶಿಲ್ಪವೈಭವವನ್ನು ಸ್ಮರಿಸದಿರಲು ಸಾಧ್ಯವಿಲ್ಲ.ತಾಡಪತ್ರಿಯ ಶಿಲ್ಪಗಳು ಈ ಕಾಲದ ಉಳಿದೆಲ್ಲ ಕೃತಿಗಳಿಗಿಂತಲೂ ಹೆಚ್ಚು ಕಲಾಭಿರುಚಿಯನ್ನು ಪ್ರದರ್ಶಿಸುತ್ತವೆಂದು ಜೇಮ್ಸ್ ಫರ್ಗ್ಯುಸನ್ ತಿಲಿಸುತ್ತಾನೆ.ಈಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಿತವಾದ ಕಾರ್ಕಳದ(ನೋಡಿ ಕಾರ್ಕಳ)ವೇಣೂರಿನ ಗೊಮ್ಮಟ ಮೂರ್ತಿಗಳೂ ಮೈಸೂರು ಜಿಲ್ಲೆಯ ಶ್ರಮಣರ ಗುಡ್ಡದ ಗೊಮ್ಮಟ ಮೂರ್ತಿಯೂ ಜೈನಶಿಲ್ಪದ ಸುಂದರ ಕೃತಿಗಳಾಗಿವೆ.

ಅನಂತರ ಕಾಲದ ಇಕೇರಿ ಶಿಲ್ಪಶೈಲಿಯಲ್ಲಿ ಹೊಯ್ಸಳ ಮತ್ತು ವಿಜಯನಗರ ಶಿಲ್ಪಗಳ ಛಾಯೆಯಿದ್ದರೂ ಅವುಗಳ ಪ್ರೌಢಿಮೆ ಕಾಣಬರುವುದಿಲ್ಲ.ವೀರಭದ್ರ ಮಂದಿರದ ಭುವನೇಶ್ವರಿ ದೇವಾಲಯದ ಗೋಡೆಗಳ ಮೇಲಿನ ಅಲಂಕಾರಿಕ ನೃತ್ಯಕಾರ,ಸಂಗೀತಕಾರರ ಶಿಲ್ಪಗಳೂ ಐತಿಹಾಸಿಕ ಪ್ರಾಮುಖ್ಯ ಪಡೆದಿವೆ.ಕಂಬಗಳ ಮೇಲಿನ ಯಕ್ಷ-ಯಕ್ಷಿಯರ ಸುಂದರ ಪ್ರತಿಮೆಗಳು ಹಂಸ ಮತ್ತು ಸಿಂಹಗಳ ಶಿಲ್ಪಗಳೂ ಆಕರ್ಷಕವಾಗಿವೆ.

ವಿಜಯನಗರ ಕಾಲದಿಂದ ಮೈಸೂರು ರಾಜ್ಯ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪ ಕಲೆ ಹೊಯ್ಸಲ ಮತ್ತು ದ್ರಾವಿಡ ಶೈಲಿಗಳ ಮಿಲನದಿಂದ ಹೊಸ ರೂಪುರೇಖೆಗಳನ್ನು ಪಡೆಯುತ್ತಿವೆ.ಶೃಂಗೇರಿಯ(ನೋಡಿ-ಶೃಂಗೇರಿ)ವಿದ್ಯಾಶಂಕರ(೧೩೫೬),ಕೋಲಾರ ಜಿಲ್ಲೆಯ ವಿರೂಪಾಕ್ಷಪುರದ ವಿರೂಪಾಕ್ಷ(೧೪೨೦)ಗುಡಿಗಳ ಶಿಲ್ಪಗಳು ಈ ಹೊಸ ಶೈಲಿಯ ನಿದರ್ಶನಗಳಾಗಿವೆ.ವಿದ್ಯಾಶಂಕರ ದೇವಾಲಯವಂತೂ ಪ್ರತಿಮಾಗೃಹವೆಂದು ಕರೆಯಲರ್ಹವಾಗಿದೆ.ಇಲ್ಲಿನ ದೇವ ವಿಗ್ರಹಗಳೂ ಪೌರಾಣಿಕ ದೃಶ್ಯಗಳೂ ಕಲ್ಲಿನ ಶಿಲ್ಪಗಳೂ ಉನ್ನತ ಕೃತಿಗಳಾಗಿವೆ.೧೬ನೆಯ ಶತಮಾನದ ಅವನಿಯ(ನೋಡಿ-ಅವನಿ)ದೇವಸ್ಥಾನಗಳ ಹೊರಗೋಡೆಗಳ ಮೇಲಿನ ಶಿಲ್ಪಗಳೂ ಭುವನೇಶ್ವರಿಯ ಅಷ್ಟದಿಕ್ಪಾಲಕ ಶಿಲ್ಪಗಳೂ ಸುಂದರ ಕೃತಿಗಳು.೧೫೬೦ರ ಕೃಷ್ಣರಾಜ ಸಾಗರದ ಗೋಪಾಲಕೃಷ್ಣ ಗುಡಿಯ ಮೂಲ ಮೂರ್ತಿ ಆರಡಿ ಎತ್ತರವಾಗಿದ್ದು,ದೇವತೆ,ಮುನಿ,ಗೋಪಗೋಪಿಯರು ಮತ್ತು ಹಸುಗಳಿಂದ ಸುತ್ತುವರಿದ ಬಹಲ ಸುಂದರ ಕೃತಿ.೧೭ನೆಯ ಶತಮಾನದ ತೆರಕಣಾಂಬಿಯ ದೇವಾಲಯದ ಕಂಬಗಳ ಮೇಲಿರುವ ದೇವತಾವಿಗ್ರಹಗಳಲ್ಲಿ ಭಾಹು೯ತ್ ಶಿಲ್ಪಗಳ ಛಾಯೆ ಕಂಡುಬರುತ್ತದೆ.ಕುದುರ್ ಸವಾರಿ ಮಾಡುತ್ತಿರುವ ನಾಲ್ಕು ಕೈಗಳ ವಿಷ್ಣುಮೂರ್ತಿ ಅಪೂರ್ವವಾದುದು.ಈ ಕಾಲದ(೧೬೬೪)ಚಾಮುಂಡಿಬೆಟ್ಟದ ೧೧ ಅಡಿ ಎತ್ತರದ ಬಸವ ಕಲಾಪೂರ್ಣವಾದ ಸುಂದರ ಕೃತಿ.೧೭ನೆಯ ಶತಮಾನದಲ್ಲಿ ಮೈಸೂರರಸರ ಅಶ್ರಯದಲ್ಲಿ ನಿರ್ಮಿತವಾದ ಗುಂಡ್ಲುಪೇಟೆಯ ಪರವಾಸುದೇವ ಮಂದಿರದಲ್ಲಿನ ಶಿಲ್ಪಗಳುಗಮನಾರ್ಹವಾಗಿವೆ.ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ನೂರಾರು ಮೂರ್ತಿಶಿಲ್ಪಗಳು ಸ್ರುಷ್ಟಿಯಾದವು.ನಂಜನಗೂಡಿನಲ್ಲಿರುವ ಶೈವಪುರಾತನ ಮೂರ್ತಿಗಳ ಸಾಲು,ಭಕ್ತರ ವಿಗ್ರಹಗಳು ಇವಕ್ಕೆ ಮಾದರಿಗಳು.ಅನಂತರ ಕಾಲದಲ್ಲಿ ಅನೇಕ ದೇವಾಲಯಗಳೂ ಮೂರ್ತಿಶಿಲ್ಪಗಳೂ ನಿರ್ಮಿತವಾಗಿದ್ದರೂ ಅವುಗಳ ಕಾಣಿಕೆ ಗಮನಾರ್ಹವಾಗಿಲ್ಲ.ಈಚಿನ ಮೈಶುರು ಅರಮನೆಯ ಅಲಂಕರಣಕ್ಕೆ ಮಾಡಲ್ಪಟ್ಟ ಶಿಲ್ಪಕೃತಿಗಳಲ್ಲಿ ವಿವಿಧ ಕಾಲದ ಶಿಲ್ಪಗಳ ಮತ್ತು ಆಧುನಿಕ ಯುಗದ ವರ್ಣಚಿತ್ರಗಳ ಪ್ರಭಾವವಿದ್ದು ಕಲಾತ್ಮಕವಾಗಿವೆಯೆಂದು ವಿನ್ಸೆಂಟ್.ಎ.ಸ್ಮಿತ್ ಅಭಿಪ್ರಾಯಪಡುತ್ತಾನೆ. ಸ್ವಾಮಿಗಳ ಶಿಲ್ಪಗಳೂ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಶಿಲ್ಪಗಳ ಸಂತತಿಯೂ ಈ ಗುಂಪಿಗೆ ಸೇರಿದ್ದು ಪುರಾತನ ಸಂಪ್ರದಾಯದ ಆಧುನಿಕ ಅನುಕರಣೆಯ ನಿದರ್ಶನಗಳಾಗಿವೆ.(ಎಸ್.ಕೆ.ಆರ್.)

ಕರ್ನಾಟಕದ ವಾಸ್ತುಶಿಲ್ಪ:ಕರ್ನಾಟಕದ ವಾಸ್ತು ಶಿಲ್ಪ ಚಾರಿತ್ರಿಕಯುಗದ ಆರಂಭ ಕಾಲದಿಂದಲೂ ಪ್ರಾಮುಖ್ಯ ಗಳಿಸಿಕೊಂಡಿದೆ.ಇಲ್ಲಿಯ ನಾನಾ ಅರಸುತನಗಳೂ ಶ್ರೀಮಂತ ವಂಶಗಳೂ ಇದಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ.ಅಲ್ಲದೆ ಈ ನಾಡು ತನ್ನ ವಿಶಿಷ್ಟ ಭೌಗೋಳಿಕ ಸನ್ನಿವೇಶದ ಕಾರಣದಿಂರಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ತಾನವಾಗಿದೆ.ಆದ್ದರಿಂದ ಕರ್ನಾಟಕದ ವಾಸ್ತು ಶಿಲ್ಪಸಂಪತ್ತು ಗಮನಾರ್ಹವೂ ವೈವಿಧ್ಯಪೂರ್ಣವೂ ಆದದ್ದು.ವಿವಿಧ ರಾಜವಂಶಗಳ ಕಾಲದಲ್ಲಿ ಕರ್ನಾಟಕದ ಈ ಕಲೆ ಬೆಳೆದು ಬಂದ ಬಗೆಯನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ.

ಮೌರ್ಯರ ಮತ್ತು ಸಾತವಾಹನರ ಕಾಲ:ಕರ್ನಾಟಕದಲ್ಲಿ ವಾಸ್ತುಶಿಲ್ಪ ಅತ್ಯಂತ ಪುರಾತನವಾದದ್ದಾದರೂ ಯಾವಾಗ ಪ್ರಾರಂಭವಾಯಿತೆಂದು ಹೇಳಲು ಖಚಿತ ಆಧಾರಗಳಿಲ್ಲ.ಅಶೋಕನ ಕಾಲದ ಕಟ್ಟಡಗಳು ಕರ್ನಾಟಕದಲ್ಲಿ ಇದ್ದಿರಬಹುದಾದರೂ ಅವು ನಾಶವಾಗಿರಬಹುದು.ಅಶೋಕನ ಪ್ರಾಂತೀಯ ಸರ್ಕಾರವಿದ್ದ ಮಾಸ್ಕಿಯಂಥ ಪಟ್ಟಣದಲ್ಲಿಯೂ ಯಾವ ಕಟ್ಟಡಗಳೂ ಉಳಿದುಬಂದಿಲ್ಲ.ಇಸಿಲದಲ್ಲಿ(ಬ್ರಹ್ಮಗಿರಿ-ಚಿತ್ರದುರ್ಗ ಜಿಲ್ಲೆ)ವೀಲರ್ ನಡೆಸಿದ ಭೂಶೋಧನೆಯಲ್ಲಿ ತುಂಬ ಶಿಥುಲವಾದ,ಇಟ್ಟಿಗೆಯ,ಬೌದ್ಧ ಕಟ್ಟಡವೊಂದು ಮಾತ್ರ ಸಿಕ್ಕಿತು.(ನೋಡಿ-ಇಸಿಲ)

ಸಾತವಾಹನರ ಕಟ್ಟಡಗಳೂ ಅಪೂರ್ವವೇ.ಚಂದ್ರವಳ್ಳಿ(ಚಿತ್ರದುರ್ಗ ಜಿಲ್ಲೆ)ಭೂಶೋಧನೆಯಲ್ಲಿ ಕಟ್ಟಡಗಳು ಸಿಕ್ಕದಿದ್ದರೂ ಸಾತವಾಹನರ ಕಾಲದ ದೊಡ್ಡ ಗಾತ್ರದ(೧೬"*೧೦"*೧೩")ಇಟ್ಟಿಗೆಗಳು ಸಿಕ್ಕಿದುವು.ಇಟ್ಟಿಗೆ ಕಟ್ಟಡಗಳು ಚಿತ್ತಾಪುರ ಆ ಕಾಲದಲ್ಲಿದ್ದವೆಂದು ಊಹಿಸಬಹುದು.ಇವುಗಳಿಂದ ಇಟ್ಟಿಗೆ ಕಟ್ಟಡಗಳು ತಾಲ್ಲೂಕಿನ ಸನ್ನತಿ ಎಂಬಲ್ಲಿ ಸಾತವಾಹನ ಕಾಲದ ಬೌದ್ಧಸ್ತೂಪಗಳ ಆಯಕ ಕಂಬಗಳ ಮತ್ತು ಸ್ತೂಪಗಳ ಮೇಲೆ ಜೋಡಿಸಿದ ಸುಣ್ಣಕಲ್ಲಿನ ಶಿಲ್ಪಗಳೂ ವಿಪುಲವಾಗಿ ಸಿಕ್ಕಿವೆ.ಇವುಗಳ ಮೇಲೆ ಸಾತವಾಹನ ಕಾಲದ ಲಿಪಿಯ ಪ್ರಾಕೃತ ಶಾಸನಗಳಿವೆ.ಇವುಗಳ ಕಾಲ ಕ್ರಿ.ಶ.೧ರಿಂದ ೩ನೇ ಶತಮಾನ.ಶಿಲ್ಪದ ರೀತಿ ಅಮರಾವತಿ ಮತ್ತು ನಾಗಾರ್ಜುನಕೊಂಡದವನ್ನು ಹೋಲುತ್ತದೆ.ಈ ಶಿಲ್ಪಗಳು ಆಗಿನ ಕಾಲದ ಸಾಮಾಜಿಕ ಜೀವನ ಮತ್ತು ಕಲೆಗಳ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ.ಇತ್ತೀಚೆಗೆ ನಡೆದ ಪ್ರಾಕ್ತನ ಉತ್ಖನನದಲ್ಲಿ ಬನವಾಸಿಯ ಕುದುರೆಯ ಲಾಳಾಕೃತಿಯಲ್ಲಿರುವ(ಗಜಪೃಷ್ಠಾಕೃತಿ)ಎರಡು ದೇವಗೃಹಗಳು ಕಂಡುಬಂದಿವೆ.ಇವುಗಳೊಂದರಲ್ಲಿ ಎರಡು,ಮತ್ತೊಂದರಲ್ಲಿ ಮೂರು ವಲಯಗಳಿದ್ದು ಈ ವಲಯಗಳ ಮಧ್ಯೆ ಇಕ್ಕಾಟ್ಟಾದ ಪ್ರದಕ್ಷಿಣ ಮಾರ್ಗ(?)ವಿದೆ.ಇದರಲ್ಲೊಂದರ ನಕ್ಷೆ ವಿಶದವಾಗಿ ತಿಳಿದಿದ್ದು ಮುಂದುಗಡೆ ಆಯಾಕಾರದ ಕೊಠಡಿಗಳೂ ಹಿಂಭಾಗದಲ್ಲಿ ಒಂದು ಎತ್ತರದ ಜಗತಿಯೂ ತಿಳಿದುಬರುತ್ತದೆ.ಈ ಜಗತಿ ಲಾಳಾಕಾರಕ್ಕೆ ಹೊಂದಿಕೊಂಡಿರುವುದರಿಂದ ಮೇಲಿನ ಕಟ್ಟಡವೂ ಅದೇ ಆಕೃತಿಯಲ್ಲಿದೆ.ಇಲ್ಲಿಯ ಸುಮಾರು ಐದಡಿಗಳ ದಪ್ಪದ ಗೋಡೆಗಳು ಆ ಕಾಲದ ಕಟ್ಟಡಗಳ ಸುಭದ್ರತೆಯನ್ನು ತೋರುತ್ತದೆ.

ಕದಂಬರ ಕಾಲ:ಕದಂಬರು ಕರ್ನಾಟಕ ಕಾಲದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದರು.ಅವರ ಮುಖ್ಯ ಪಟ್ಟಣಗಳು ಬನವಾಸಿ ಮತ್ತು ಹಲಸಿ.ಕದಂಬರ ಕಾಲದಲ್ಲಿ ಗರ್ಭಗೃಹ ಮುತ್ತು ಸುಕನಾಸಿ ಬೇರೆಬೇರೆಯಾಗಿ ನಿರ್ಮಾಣವಾಗಲು ಪ್ರಾರಂಭವಾಯಿತೆಂದು ಮೊರೆಸ್ ಅಭಿಪ್ರಾಯಪಡುತ್ತಾನೆ.