ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸದ ವಿಲೇವಾರಿ ೧.ಪ್ರಿವಿಯಾ: ಗಭ೯ಕೂರಳಿಗೆ, ಮಗುವಿನ ಕೆಳಗೆ ಅ೦ಟಿಕೊ೦ಡಿರುವ ಮಾಸು, ಗಭ೯ದ್ವಾರಕ್ಕೆ ಪೂಣ೯ ಅಡ್ಡವಾಗಿ ಅ೦ಟಿಕೊ೦ಡಿದ್ದರೆ ಅದು ಅಪಾಯಕರ. ಪದೇ ಪದೇ ಆಗುವ ರಕ್ತಸ್ರಾವ ತಾಯಿಯನ್ನು ಮಗುವನ್ನು ಅಪಾಯದ ಅ೦ಚಿಗೆ ದೂಡುತ್ತವೆ. ಸಹಜ ಹೆರಿಗೆ ಈ ಪರಿ‌ಸ್ಥಿತಿಯಲ್ಲಿ ಅಸಾಧ್ಯ ಸ್ಕಾನಿಂಗ್ ಪರೀಕ್ಷೆಯಿಂದ ಈ ಪರಿಸ್ಥಿತಿಯನ್ನು ಬಹುಬೇಗ ಗುರುತತಿಸಬಹುದು(೧೪-೨೦ ವಾರ).ಗಭಿ೯ಣಿಸ್ತ್ರೀಯು ಪೂಣ೯ ವಿಶ್ರಾಂತಿಯೊಡನೆ ಕೆಲವು ಔಷಧಿಗಳನ್ನು ಸೇವಿಸಬೇಕಾನಬಹುದು.ಕೆಲವೊಮ್ಮೆ ನಭ೯ದ್ವಾರ ಅಗಲವಾಗದೇ ಇರಲು ಹೊಲಿಗೆ ಹಾಕುವ ಅಗತ್ಯ ಇರುತ್ತದೆ.ಮಗುವಿನ ಬೆಳವಣಿಗೆಗೆ ೩೫-೩೬-೩೭ ವಾರಗಳ ಕಾಲ ಮುಗಿದರೆ ಅನುಕೂಲ ಸ್ಥಿತಿಯಲ್ಲಿ ಶಸ್ತ್ರಚಿತ್ಸೆಯ ಮೂಲಕ ಶಿಶುವನ್ನು ಹೊರತೆರೆಯಬೇಕು.ರಕ್ತಪೂರೈಕೆಯೂ ಅವಶ್ಯಕವಾಗುತ್ತದೆ.

    ಅತಿ ತೆಳುವಾಗಿರುವಿಕೆ/ಅತಿ ದಪ್ಪವಾಗಿರುವಿಕೆ:-ಸಾಧಾರಣವಾಗಿ ೩-೪ ಸೆಂಮೀ ದಪ್ಪದ ಮಾಸು ಸಹಜವಾದದ್ದು.

೧.ತಾಯಿಗೆ ಮಧುಮೆಹ ಕಾಯಿಲೆ ಇದ್ದರೆ ೨.ತಾಯಿ-ಮಗುವಿನ ರಕ್ತವಿಲೋಮತೆ ೩.ಆಮತರಿವಾಗಿ ನಂಜಾಗಿದ್ದರೆ ೪.ಗಭ೯ಕೋಶದ ರಕ್ತಪರಿಚಲನೆಗೆ ಏನಾದರೂ ಅಡೆತಡೆ ಇದ್ದರೆ ಮಾಸು ತೆಳುವಾಗಿ ಹರಡಿಕೊಳ್ಳಬಹುದು/ಅತಿ ದಪ್ಪವಾಗಿರಬಹುದು.

  "ಆಕ್ರೀಟಾ" ಗಭ೯ಕೋಶದ ಒಳಪದರಕ್ಕೆ ಅತಿ ಹತ್ತಿರವಾದಾಗ ಅಂಟಿಕೊಂಡಿರುವ ಮಾಸು.ಈ ಪರಿಸ್ಥಿತಿಯಲ್ಲಿ ಮಾಸು ಸಹಜವಾಗಿ ಕಳಚಿಬರುವುದಿಲ್ಲ.ಹೆರಿಗೆಯಾದ ಮೇಲೆ ಅಧ೯ ಗಂಟೆಯೊಳಗೆ ಬರಬೇಕೇದ ಮಾಸು ಹೊರಬರದೇ ತಾಯಿ ದೆಹದಿಂದ ಅತಿ ರಕ್ತಸ್ರಾವ ಆಗಬಹುದು,ತಕ್ಷಣವೇ ಹಿರಿಯ ತಜ್ಞನರ ನೆರವಿನಿಂದ ಮಾಸನ್ನು ಬಿಡಿಸಿ ಹೊರತರಬೇಕಾಗುತ್ತದೆ.ಸಾಧ್ಯವಾಗದಿದ್ದರೆ ಗಭ೯ಕೋಶಕ್ಕೆ ರಕ್ತ ಪೂರೈಸುವ ನಾಳಗಳನ್ನು ಕಟ್ಟಿ ರಕ್ತ ಹರಿವನ್ನು ನಿಲ್ಲಿಸಬೇಕಾಗುತ್ತದೆ.ಮಾಸು ಹೊರಬಂದಿಲ್ಲ ಎಂದು ಹೊಕ್ಕಳ ಬಳ್ಲಿ ಹಿಡಿದು ಜೋರಾಗಿ ಎಳೆದರೆ ಗಭ೯ಕೋಶವೇ ಹೂರಬೀಳುವ ಪ್ರಸಂಗ ಬರಬಹುದು.ಇದೂ ಕೂಡ ತಾಯ ಜೀವಕ್ಕೆ ಅತಿ ಅಪಾಯಕಾರಿ.
 ತಾಯಿ ಮಹುವಿನ ಭದ್ರಸೇತು ಒಂದಿನಿತು ಹೆಚ್ಚು ಕಡಿಮೆಯಾದರೂ ತಾಯಿಗೆ/ಮಗುವಿಗೆ ತೊಂದರೆ ತಪ್ಪಿದ್ದಲ್ಲ.
  
   ಬಸುರಿ ನಂಜು-ಗಭಿ೯ಣಿಯರಿಗೆ ಕಾಡುವ ಶಾಪ.ಹೆಚ್ಚಿನ ಬಿ.ಪಿ,ಕಾಲುಬಾವು,ಅತಿಕಡಿಮೆ ಮೂತ್ರ ವಿಸಜ೯ನೆ ಕೆಲವೊಮ್ಮೆ ಅದಿರುವಾಯು ಎಲ್ಲ ಲಕ್ಷಣನಳ ಸಮೂಹ.ಇದಕ್ಕೆ ಇದಮಿಥ್ಥಂ ಎಂಬ ಕಾರಣ ತಜ್ಞರಿನೆ ಇನ್ನೂ ಸಿಕ್ಕಿಲ್ಲ.ಆದರೆ ಮಾಸುವಿನಲ್ಲಿಯ ರಕ್ತ ಪೂರಣದ ವ್ಯತ್ಯಾಸವನ್ನು ಎಲ್ಲ ಪ್ರಸಂಗಗಳಲ್ಲಿಯೂ ಗುರುತಿಸಿ ಧೃಢಪಡಿಸಲಾಗಿದೆ.ಈ ಅವ್ಯವಸ್ಥಿತ ಮಾಸು ತಾಯ ಬಸಿರು ನಂಜಿಗೆ ಕಾರಣ.ರಕ್ತಪೂರಣದಲೇಕೆ ಏರುಪೇರಾಗುತ್ತದೆ,ಯಾರಲ್ಲಿ ಆಗುತ್ತದೆ ಎಂದು ಮೊದಲೇ ಕಂಡುಹಿಡಿಯುವ ವಿಧಾನ ತಿಳಿದರೆ ಎಷ್ಟೋ ಹೆಣ್ಣುಮಕ್ಕಳ ಪ್ರಾಣ ಉಳಿಯುತ್ತದೆ.ಶಿಶುಗಳು ಆರೋಗ್ಯವಾಗಿ ನಳನಳಿಸುತ್ತವೆ.
 
     ಕಸದ ವಿಲೇವಾರಿ:ಮನೆ,ಶಾಲೆ,ಕಾಖಾ೯ನೆ,ರಸ್ತೆಗಳಲ್ಲಿ ಎಈಳುವ,ಬೇಸಾಯ ಕೈಗಾರಿಕೆಗಳಂದ ಹೊರಬೀಳುವ,ಕೆಲಸಕ್ಕೆ ಬಾರದ ವಸ್ತುವೇ ಕಸ.ಧೂಳು,ಬೂದಿ,ಕಡ್ಡಿ,ಸಿಪ್ಪು ಸದೆ,ಕೊಳೆವ ವಸ್ತು,ಕಾಗದ,ರಟ್ಟು ,ಬಟ್ಟೆಚಿಂದಿಗಳು,ಜಿಡ್ದು ಮತ್ತಿತರವಹೊತ್ತಿಕೊಂದು ಉರಿವ ಇಲ್ಲವೇ ಉರಿಯದ ಉಳಿಕೆಗಳೂ ಇದರಲ್ಲಿರುತವೆ.ಎಲ್ಲೇ ಆಗಲಿ ಕಸ ರಾಸಿ ಬಿದ್ದರೆ ಕೊಳಕು,ಅನಾರೋಗ್ಯಕರ.ಇದರಲ್ಲಿ ಪ್ರಾಣಿ,ಗಿಡ ಮರ ಸಂಬಂಧ ವಸ್ತುಗಳು ಕೂಳೆತು ನೂಣಗಳಿಗೆ ಆಸರೆಯಾಗಬಹುದು.ಕಸದಲ್ಲಿನ ಕಾಳುಕಡ್ಡಿ ತಿನ್ನಲು ಇಲಿ,ಹೆಗ್ಗಣಗಳೂ ಬರುತ್ತವೆ.ಧೂಳು,ಹುಳ,ಹುಪ್ಪಟೆ,ನೂಣಗಳಿಂದ ರೋಗಾಣುಗಳು ಜನರಿಗೆ ಹರಡುವವು.ಕಸಕಡ್ಡಿ ರಾಶಿಯಾಗಿ ಬಿದ್ದರೆ ಕೊಳಕಾಗಿ ಅಸಹ್ಯವಾಗಿ ಕಾಣುತ್ತವೆ.ಆದ್ದರಿಂದ ಕಸ ಎಲ್ಲಿ ಬಿದ್ದರೂ ಕೂಡಿಹಾಕಿ,ಸಾಗಿಸಿ,ಆರೋಗ್ಯಕ್ಕೆಕುಂದುಬರದಂತೆ ವಿಲೇವಾರಿ ಆಗಬೇಕು. ಪರಿಸರವನ್ನು ಆರೋಗ್ಯಕರವಾಗಿ ಇರಿಸಲು

ಕಸದ ಸಾಗಣೆ ಮುಖ್ಯ, ಜನಾರೋಗ್ಯ ಮಟ್ಟವನ್ನು ಈ ಸೆವೆಯಿಂದ ಅಳೆಯಬಹುದು.

   ಒಂದು ಊರಿನ ಜನರ ಜೀವನ ಮಟ್ಟಕ್ಕೆ ತಕ್ಕಹಾಗಿ ಅಲ್ಲಿ ಬೀಳುವ ಕಸವೂ ಅದರ ಪ್ರಮಾಣವೂ ಇರುತ್ತದೆ. ಉನ್ನತನಗ೯ದ ಜನರ ಮನೆಗಳಲ್ಲಿ ಬೀಳುವ ಕಸದ ಪ್ರಮಾಣ ಹೆಚ್ಚಾಗಿರುವುದು. ಬಹುಮಟ್ಟಿಗೆ ಕಾಗದ,ಪೊಟ್ಟಣಗಳು,ರಟ್ಟುಗಳು ಪ್ಲಾಸ್ಟಿಕ್ ಸಾಮಾನುಗಳು,ಖಾಲಿ ಸೀಸೆ,ಡಬ್ಬಗಳು,ಪಿಂಗಾಣಿ,ಗಾಜಿನ ವಸ್ತುಗಳೂ ಹೇರಳವಾಗಿರುತ್ತವೆ.ಮಲ ಮೂತ್ರಗಳನ್ನು ಕಸವೆಂದು ಎಣಿಸುವುದಿಲ್ಲವಾದರೂ ನಮ್ಮ ರಾಜ್ಯಗಳಲ್ಲಿ ರಸ್ತೆಗಳ ಕಸದಲ್ಲಿ ಅವೂ ಸೇರಿರುತ್ತವೆ. ಆಯಾ ಋತುಗಳು,ನಗರದ ವಿಸ್ತಾರಣಗಳಿಗೆ ತಕ್ಕಹಾಗೆ ಕಸವೂ ಬೇರೆ ಬೇರೆ ತೆರನಾಗಿರುವುದು.
     
      ಜಾಡಮಾಲಿಗಳು ಗುಡಿಸಿ ಒಂದೆಡೆ ಗುಡ್ಡೆಹಾಕಿದ್ದು ರಸ್ತೆ ಕಸ.ತೆರೆದ ಬಚ್ಚಲು,ಚರಂಡಿಗಳ ರೊಚ್ಚನ್ನು ಜಾಡಮಾಲಿಗಳು ಕಸದೊಂದಿಗೇ ಸೇರಿಸುವುದುಂಟು.ಇದರಲ್ಲಿ ಎಲೆಗಳು,ಹುಲ್ಲುಕಡ್ಡಿಗಳು,ಕಾಗದ,ಲದ್ದಿ, ಸಗಣಿ,ಹಿಕ್ಕೆ,ಗಂಜಲಗಳೇ ಮುಂತಾದವೂ ಇರುತ್ತದೆ.ಮಾರುಕಟ್ಟೆಯಿಂದ ಬಂದ ಕಸದಲ್ಲಿ ಕೊಳೆತ ಹಣ್ಣು, ಹಂಪಲು,ತರಕಾರಿ,ಹೊಟ್ಟು,ಸಿಪ್ಪೆ,ಗಿಡಮರ ಇಲ್ಲವೇ ಪ್ರಾಣಿ ಸಂಬಂಧದ ವಸ್ತುನಳು ಸೇರಿರುತ್ತವ. ಲಾಯ,ದೂಡ್ಡಿ,ರೊಪ್ಪಗಳ ಕಸದಲ್ಲಿ ಪ್ರಾಣಿಗಳ ಮಲ ಗಂಜಲ,ಉಳಿದ ಮೇವು ಕಾಳುಕಡ್ಡಿಗಳೂ ಇರುವವು. ಕಾಖಾ೯ನೆಗಳಿಂದ ಬರುವ ಕಸದಲ್ಲಿ ಸೀಮೆಸುಣ್ಣದಂಥ ನಿರಪಾಯಕರದಿಂದ ಹಿಡಿದು ತೀರ ವಿಷಕಾರಿ,ಉರಿದು ಸಿಡಿವ ವಸ್ತುಗಳ ತನಕ ಏನಾದರೂ ಇರಬಹುದು. ಮನೆ ಕಸದಲ್ಲಿ ಬೂದಿ,ಇದ್ದಿಲು,ಕಾಗದ,ರಟ್ಟು,ಬಟ್ಟೆ ಚೂರುಗಳು,ಕಡ್ಡಿ, ಪುಕ್ಕ, ಲೋಹಚೂರುಗಳು, ಗಾಜು,ದೂಳು, ಕೊಳಚೆ,ಅಡುಗೆ ಮನೆ ಗಲೀಜಿನ ರೊಚ್ಚೂ ಇರುವುವು. ಅಡುಹೆಮನೆ ಗಲೀಜನ್ನು ಆಗಾಗ್ಗೆ ಬೇಗನೆ ತೆನೆಯದಿದ್ದರೆ ಕೊಳೆತು ನಾರುತ್ತದೆ.
    
     ಕಸವನ್ನು ಹೊರಸಾಗಿಸುವ ಮುಂಚೆ ಅದನ್ನು ಒಂದೆಡೆ ಗುಡ್ಡೆ ಹಾಕುವುದು ಮುಖ್ಹ. ಸರಿಯಾಗಿ ಮುಚ್ಚುವ ಮುಚ್ಚಳವಿರುವ ತಗಡಿನ ಡಬ್ಬ ಅನುಕೂಲಕರ. ಭಾರತದಲ್ಲಿ ದಿನವೂ ಒಬ್ಬನಿಂದ ಆಗುವ ಕಸದ ಪ್ರಮಾಣ ೦.೦೫-೦.೧೦ ಘನ ಅಡಿಯಷ್ಟಂದು ಲೆಕ್ಕವಿದೆ. ೫ ಮಂದಿ ಇರುವ ಮನೆಗೆ ಅಧ೯ ಘನ ಅಡಿಯ ಡಬ್ಬ ಸಾಕು. ೩ ದಿನಕ್ಕೊಮ್ಮೆ ಕಸ ಎತ್ತುವುದಾದರೆ ೨ ಘನ ಅಡಿಗಳ ಡಬ್ಬ ಬೇಕಾಗುವುದು. ಜಾತ್ರೆ, ಉತ್ಸವ, ಹಬ್ಬ, ವಾರಗಳು, ಮದುವೆ ಮುಂತಾದ ಕಾಲಗಳಲ್ಲಿ ಇದು ಹೆಚ್ಚುತ್ತದೆ. ಮುಂದುವರಿದ ನಾಡುಗಳಲ್ಲೀಗ ಹಾಗೇ ಸಾಗಿಸಬಹುದಾದ ಕಾಗದದ ಚೀಲಗಳು ಬಳಕೆಯಲ್ಲಿವೆ. ಬೀದಿಯಲ್ಲಿ ಅಲ್ಲಲ್ಲಿ ಕಸದ ಗುಂಡಿಗಳನ್ನು ತೋಡಿದರೆ ಕೊಳಕಿನ ಗಲೀಜು ಗಾಳಿಗೆ ಹಾರಿ, ಮಳೆ ಬಂದಾಗ ಕೊಚ್ಚಿ ಹರಡುವುದು. ಸಾವ೯ಜನಿಕ ಕಸದ ತೊಟ್ಟಿಗಳಿಗೆ ಭಾರತದಲ್ಲಿ ಮುಚ್ಚಳಗಳಿರವು. ಮಳೆ ನೀರು ಒಳನುಗ್ಗದಂತಿರಿಸಲು ಕಲ್ಲುಹಾಸಿನ ಮೇಲೆ ತಳವಿಲ್ಲದ, ಹಿಡಿಗಳಿರುವ, ಗುಂಡಗಿರುವ ತೊಟ್ಟಿಗಳು ಬಳಕೆಯಲ್ಲಿವೆ.ಹಾಗೆ,ನಾಯಿಗಳು ಇವನ್ನು ಕೆದಕಿ ಬೆದಕಿ ಕಸವನ್ನು ಹೊರಚಲ್ಲುತ್ತವೆ. ಮುಚ್ಚಳ ಹಾಕಿದ್ದರೆ ಅವನ್ನು ಮುಟ್ಟಿ ತೆಗೆಯಲು, ಹೇಸಿ ಜನರು ಹೊರಗೆ ಸುತ್ತಲೂ ಎಲ್ಲೆಂದರಲ್ಲಿ ಎಸದು ಇನ್ನಷ್ಟು ಗಲೀಜು ಮಾಡುತ್ತಾರೆ. ಆಗಿಂದಾಗ್ಗೆ ಪುರಸಭೆಯ ಲಾರಿಗಳೋ ಇದರಲ್ಲಿನ ಕಸವನ್ನು ಎತ್ತಿ ತುಂಬಿಕೊಂಡು ದೂರ ಸಾಗಿಸುತ್ತವೆ.
  
   ಕಸವನ್ನು ಎತ್ತುವ ಏರ್ಪಾಡು ಹಣಕಾಸಿಗೆ ತಕ್ಕ ಹಾಗಿರುತ್ತದೆ. ಒಂದೊಂದು ಮನೆಯಿಂದಲೂ ಕಸ ಎತ್ತುವುದೇ ಎಲ್ಲಕ್ಕೂ ಒಲ್ಲಕ್ಕೂ ಒಳ್ಳೆಯ ವಿಧಾನ. ಆದರೆ , ನಮ್ಮಲ್ಲಿ ಹತ್ತಿರದಲ್ಲಿ ಹೊರಗಡೆ ಇಟ್ಟಿರುವ ತೊಟ್ಟಿಯಲ್ಲಿ ಮನೆಗಳವರು ಕಸ ತಂದು ಹಾಕಬೇಕು. ಬಹಳ ಮಂದಿ ಹೀಗೆ ಹಾಕದ್ದರಿಂದ, ಎಲ್ಲೆಂದರಲ್ಲಿ ಕಸದ ಗಲೀಜು ಮನೆಯಿಂದ ಹೊರಗೆ ಬಿದ್ದಿರುತ್ತದೆ. ಆಗ ತೊಟ್ಟಿಗಳಿಂದ ಕಸ ಎತ್ತಿನಗಾಡಿ, ಲಾರಿಗಳಲ್ಲಿ ದೂರ ಸಾಗುತ್ತದೆ. ಸತ್ತ ಪ್ರಾಣಿಗಳನ್ನು ನೇರವಾಗಿ ವಿಲೇವಾರಿಯಾಗುವ ಜಾಗಕ್ಕೆ ಸಾಗಿಸುವರು.
   ವಿಲೇವಾರಿ ವಿಧಾನಗಳು: ಎಲ್ಲ ಕಡೆಗಳಲ್ಲೂ ಅನುಕೂಲವಾಗುವಂಥ ಒಂದೇ ಒಂದು ವಿಧಾನ ಇದೆಂದು ಯಾವುದನ್ನೂ ತೋರಿಸುವಂತಿಲ್ಲ. ಅದಕ್ಕೆ ತಗಲುವ ವೆಚ್ಚ, ಇರುವ ಜಾಗ, ಕೂಲಿ ಸಿಬ್ಬಂದಿ ಮುಂತಾದವಕ್ಕೆ ತಕ್ಕ ವಧಾನವನ್ನು ಆರಿಸಿಕೊಳ್ಳಬೇಕು. ನಮ್ಮಲ್ಲಿ ಕಸವನ್ನು ವಿಂಗಡಿಸುವುದು ಅಪೂಣ೯. ವಿಲೇವಾರಿಗಾಗಿ ೬ ವಿಧಾನಗಳಿವೆ.
    ೧. ಗುಡ್ಡೆಹಾಕುವುದು: ಊರಿನಲ್ಲಿ ಹಳ‍್ಳ ಕೊಳ್ಳ, ಕಂದಕಗಳನ್ನು ತುಂಬಲೂ ಒಣಕಸವನ್ನು ಸುಲಭವಾಗಿ ವಿಲೇವಾರಿ ಮಾಡಲೂ ಈ ವಿಧಾನ ಅನುಕೂಲಕರ. ಕಸದಲ್ಲಿರುವ ಜೀವಾಣುಗಳ ಕೆಲಸದಿಂದ ಕಸದ ಗಾತ್ರವೂ ಕುಗ್ಗಿ ಬರುಬರುತ್ತ ಒಣ ಗೊಬ್ಬರವಾಗುತ್ತದೆ.