ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಸ್ಥಳೀಯ ತೋಟಗಳಲ್ಲೇ ಕೆಲಸ ದೊರಕುತ್ತದೆ.ಇಲ್ಲಿ ಜನಸಂಖ್ಯೆಯ ಒತ್ತಡ ಹೆಚ್ಚಾಗಿಲ್ಲ.ಇರುವ ಸಂಪನ್ಮೂಲಗಳನ್ನೆಲ್ಲ ಸಂಪೂರ್ಣವಾಗಿ ಇಲ್ಲಿ ಬಳಸಿಕೊಂಡಿಲ್ಲ. ಮಲೆನಾಡಿನಲ್ಲಿ ವರ್ಷಕ್ಕೆ ಒಂದು ಬತ್ತದಬೆಳೆ ಸಾಮಾನ್ಯ.ಎರಡು ಬೆಳೆ ಉತ್ತರಾರ್ಧದಲ್ಲಿ ಹೆಚ್ಚು.ಅಲ್ಲಿ ಒಟ್ಟು ಸಾಗುವಳಿ ನೆಲದಲ್ಲಿ ಶೇ.೫-೧೦ ಪ್ರದೇಶದಲ್ಲಿ ಎರಡು ಬೆಳೆ ತೆಗೆಯುವುದುಂಟು.ಮಳೆ ಸಮೃದ್ಧಿಯಾಗಿರುವ ಕಡೆಗಳಲ್ಲಿ ಹಳ್ಳಿಗಳು ತಮಗೆ ಸಾಕಾಗುವಷ್ಟು ಬತ್ತ ಬೆಳೆಯುತ್ತವೆ.ಕಡಿಮೆ ಮಳೆಯ ಪೂರ್ವದಂಚುಗಳಲ್ಲಿ ಒಮ್ಮೊಮ್ಮೆ ಅಕ್ಕಿಯ ಕೊರತೆ ಬರುವುದುಂಟು.ಅಡಕೆ,ವೀಳೆಯದೆಲೆ,ಮೆಣಸು,ಲವಂಗ,ಕಿತ್ತಳೆ,ಕಾಫಿ ಮುಖ್ಯ ಹಣಗಳಿಕೆ ಬೆಳೆಗಳು.ಕಾಫಿ(ಕೆಲವು ಕಡೆ ಚಹ),ಮೆಣಸು ಮುಂತಾದವುನೆಡುತೋಟದ(ಪ್ಲಾಂಟೇಷನ್) ಬೆಳೆಗಳು.ಕಾಫಿ ತೋಟಗಳು ದಕ್ಶಿಣದಲ್ಲಿವೆ.ಇವು ಬೃಹದ್ ಗಾತ್ರದ ಬಂಡವಾಳ ಉದ್ಯಮಗಳು.ಕಾಫಿ ಬೆಳೆಯುವ ಪ್ರದೇಶ ಉಳಿದೆಡೆಗಳಿಗಿಂತ ಹೆಚ್ಚು ಅಭಿವೃದ್ಧಿಹೊಂದಿದೆ.ಇಲ್ಲಿ ಹಣದ ಪ್ರಸಾರ ಹೆಚ್ಚು ರಸ್ತೆಗಳು ಬೆಳೆದಿವೆ.ಭೂಸಾರ ಕೊಚ್ಚೆ ಹೋಗಿ ತ್ಯಜಿಸಲಾದ ಕಾಫಿ ತೋಟಗಳೆಡೆಯಲ್ಲಿ ಲಂಟಾನಾ ವಿಶೇಷವಾಗಿ ಬೆಳೆದಿದೆ.ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಅವಶ್ಯವಾದ ಕಾರ್ಮಿಕರು ದಕ್ಶಿಣ ಕನ್ನಡ ಮತ್ತು ಕೇರಳಗಳಿಂದ ಅಧಿಕ ಸಂಖ್ಯೆಯಲ್ಲಿ ಬರುವರು.ಸ್ಥಳೀಯ ಜನರೂ ತೋಟಗಳಿಂದ ಆಕರ್ಶಿವಾಗುವುದರಿಂದ ಸಾಮಾನ್ಯ ಬೇಸಾಯಕ್ಕೆ ಸಾಕಷ್ಟು ದುಡಿಮೆಗಾರರ ಅಭಾವ ಏರ್ಪಡುತ್ತದೆ.ದಕ್ಶಿಣ ಮಲೆನಾಡಿನಲ್ಲಿ ಬತ್ತದ ಎರಡು ಬೆಳೆ ತೆಗೆಯದಿರುವುದಕ್ಕೆ ಇದೂ ಒಂದು ಕಾರಣ.ದಕ್ಶಿಣದ ಎತ್ತರದ ಮಲೆನಾಡಿನಲ್ಲಿ ಸಾಗುವಳಿಯಾಗುವ ನೆಲದ ಕಾಲುಭಾಗದಿಂದ ಅರ್ಧಭಾಗದವರೆಗಿನ ಜಮೀನು ಕಾಫಿ ಮತ್ತು ಚಹಗಳಿಗೆ ಮೀಸಲು.ಉತ್ತರದಲ್ಲಿ ಎತ್ತರ ಪ್ರದೇಶಗಳಲ್ಲೂ ಕಾಫಿ ತೋಟಗಳು ಅಷ್ಟೇನೂ ಇಲ್ಲ.ದಕ್ಶಿಣಕ್ಕಿಂತ ಅಲ್ಲಿ ಮಳೆಗಾಲ ಒಓದು ತಿಂಗಳಷ್ಟು ಕಡಿಮೆ.ಕಾಫಿ ಹೂ ಬಿಡಲು ಅವಶ್ಯವಾದ ಬೇಸಗೆ ಮಳೆ ಬರುವ ನಚ್ಚುಗೆಯಿಲ್ಲ.ಬತ್ತ ಎಲ್ಲೆಲ್ಲೂ ಬೆಳೆಯುತ್ತದೆ.ಯಲ್ಲಾಪುರದಿಂದ ಮಡಿಕೇರಿಯವರೆಗಿನ ತಾಲ್ಲೂಕುಗಳಲ್ಲಿ ಮೆಣಸು ಬೆಳೆಯುವ ಪ್ರದೇಶ ಒಟ್ಟು ಸಾಗುವಳಿ ಜಮೀನಿನ ಶೇ.೧೦ರಿಂದ ೨೫ರ ವರೆಗಿರುತ್ತದೆ.ಪೂರ್ವದ ತಾಲ್ಲೂಕುಗಳಾದ ನರಸಿಂಹರಾಜಪುರ,ಶಿವಮೊಗ್ಗ ಮತ್ತು ಪಿರಿಯಪಟ್ಟಣಗಳಲ್ಲಿ ಶೇ.೫ಕ್ಕಿಂತ ಕಡಿಮೆ ನೆಲದಲ್ಲಿ ಮೆಣಸು ಬೆಳೆಯುತ್ತದೆ.ಮೆಣಸು ಬೆಳೆಯ ಜೊತೆಗೆ ಹಣ್ಣು ತರಕಾರಿ ಬೆಳೆಯುವುದೂ ಸಾಮಾನ್ಯ,ಪೂರ್ವದ ಕಡೆಗೆ ಸಾಗಿದಂತೆ ಮೆಣಸಿನ ಭೂಮಿ ಕಡಿಮೆಯಾಗಿ ಹಣ್ಣು ತರಕಾರಿ ಬೆಳೆ ಹೆಚ್ಚುತ್ತದೆ.ಕಡಿಮೆ ಮಳೆಯ ಪೂರ್ವ ಪ್ರದೇಶದಲ್ಲಿ ಎಣ್ಣೆಕಾಳುಗಳ ಬೆಳೆಯೂ ಮುಖ್ಯ.ನೆರೆಯ ಮೈದಾನದ ಬೆಳೆಯೇ ಇಲ್ಲೂ ಬೆಳೆಯುವುದು ಅಭ್ಯಾಸವಾಗಿದೆ. ಅರೆಮಲೆನಾಡಿನ ನೆಲದಲ್ಲಿ ಸು.ಶೇ.೫೦ರಷ್ಟು ಭೂಮಿ ಬೇಸಾಯಕ್ಕೊಳಪಟ್ಟಿದೆಯೆಂದು ಸ್ಥೂಲವಾಗಿ ಹೇಳಬಹುದು.ಶಿಕಾರಿಪುರ ಹಾಸನಗಳಲ್ಲಿ ಬತ್ತ ಅತ್ಯಂತ ಮುಖ್ಯ ಬೆಳೆ.ರಾಗಿ,ಜೋಳ ಮುಂತಾದವೂ ಬೆಳೆಯುತ್ತವೆ.ಹಾಸನದ ದಕ್ಶಿಣದ ಪ್ರದೇಶದಲ್ಲಿ ಕಾಫಿಯನ್ನೂ ಸ್ವಲ್ಪ ಬೆಳೆಯುತ್ತಾರೆ.ಹಿರೇಕೆರೂರಿನ ಉತ್ತರಕ್ಕೆ ಹತ್ತಿಯ ಕಪ್ಪು ನೆಲದ ಬದಿಯ ನೆಲದಲ್ಲಿ ಜೋಳ,ಹತ್ತಿ,ತೊಗರಿ,ಎಣ್ಣೆಕಾಳು ಬೆಳೆಯುತ್ತವೆ.ಹಾಸನ ಮತ್ತು ದಕ್ಶಿಣದಲ್ಲಿ ಆಲೂಗೆಡ್ಡೆ,ಈರುಳ್ಳಿ,ಮಾವು,ಬಾಳೆ,ಕಿತ್ತಳೆ,ತೊಗರಿ,ಎಣ್ಣೆಕಾಳುಗಳು,ತೆಂಗು,ಕಡಲೆಕಾಯಿ ಬೆಳೆಯುವರು. ಉತ್ತರ ಮೈದಾನದ ಹಳ್ಳಿಗಳು ಅಡಕವಾಗಿವೆ.ಜಮೀನು ಹಿಡುವಲಿಯ ಗಾತ್ರ ಹೆಚ್ಚು.ಭೂರಹಿತ ದುಡಿಮೆಗಾರರ ಪ್ರಮಾಣವೂ ಹೆಚ್ಚು.ಖುಷ್ಕಿ ನೆಲವೇ ಅಧಿಕವಾಗಿದೆ.ಇಲ್ಲಿ ಪರಮಾವಧಿ ಮಳೆ ಬೀಳುವುದು ತಡವಾಗಿಯಾದ್ದರಿಂದಲೂ ನೆಲಕ್ಕೆ ಹೆಚ್ಚು ಜಲಧಾರಣಶಕ್ತಿಯಿರುವುದರಿಂದಲೂ ಚಳಿಗಾಲದ ಬೆಳೆಗಳು(ರಾಬಿ)ಹೆಚ್ಚು.ಎಲ್ಲೆಡೆಗಳಲ್ಲೂ ಜೋಳ ಸಾಮಾನ್ಯ,ಹತ್ತಿ,ಬಾಜ್ರ,ಶೇಂಗ,ರಾಗಿ ಇತರ ಬೆಳೆಗಳು. ಹರಿಹರದಿಂದ ಹೊನ್ನಾಳಿಯವರೆಗಿನ ಪ್ರದೇಶ ಮಲೆನಾಡಿನ ಸೆರಗಿನಂತಿದೆ.ಇಲ್ಲಿ ಜೋಳ,ರಾಗಿ,ಎಣ್ಣೆಬೀಜ,ತೊಗರಿ,ಹತ್ತಿ,ಸಂಬಾರ ಪದಾರ್ಥ ಮತ್ತು ಬತ್ತ ಬೆಳೆಯುತ್ತವೆ.ಹರಿಹರದಲ್ಲಿ ಸಾಗುವಳಿಯ ನೆಲದಲ್ಲಿ ಶೇ.೩೯ರಷ್ಟೂ ಹೊನ್ನಾಳಿಯಲ್ಲಿ ಶೇ.೨೦ರಷ್ಟೂ ಪ್ರದೇಶ ಜೋಳಕ್ಕೆ ಮೀಸಲು.ಹರಿಹರ ಪ್ರದೇಶದಲ್ಲಿ ಎಣ್ಣೆ ಬೀಜಗಳೂ ಹೊನ್ನಾಳಿಯಲ್ಲಿ ತೊಗರಿ ರಾಗಿಗಳೂ ಅನಂತರದ ಮುಖ್ಯ ಬೆಳೆಗಳು.ಧಾರವಾಡ,ಸಂಪಗಾಂವ್,ಹುಬ್ಬಳ್ಳಿ,ಕುಂದಗೋಳ,ಶಿರಹಟ್ಟಿ ಪ್ರದೇಶಗಳಲ್ಲಿ ಜೋಳ,ಗೋಧಿ,ಬತ್ತ,ಹತ್ತಿ,ಬೇಳೆ,ಎಣ್ಣೆಬೀಜ,ಸಂಬಾರ ಪದಾರ್ಥ ಬೆಳೆಯುತ್ತವೆ.ಇವುಗಳ ಪೈಕಿ ಕುಂದಗೋಳವೊಂದನ್ನು ಬಿಟ್ಟರೆ ಉಳಿದೆಡೆಗಳಲ್ಲೆಲ್ಲ ಜೋಳ ಬೆಳೆಯುವ ನೆಲವೇ ಒಟ್ಟು ಸಾಗುವಳಿ ಪ್ರದೇಶದ ಶೇ.೨೫ರಿಂದ ೩೦ರ ವರೆಗೆ ಇದೆ.ಕುಂದಗೋಳದಲ್ಲಿ ಹತ್ತಿ ಬೆಳೆಯುವ ಪ್ರದೇಶದ ಶೇ೩೮.೩ ಶಿರಹಟ್ಟಿಯಲ್ಲಿ ಎಣ್ಣೆಬೀಜವೂ ಜೋಳದಷ್ಟೇ ಮುಖ್ಯ ಬೆಳೆ.ಹುಬ್ಬಳ್ಳಿಯಲ್ಲಿ ಜೋಳಕ್ಕೆ ಎರಡನೆಯ ಬೆಳೆ.ಧಾರವಾಡ ಸಂಪಗಾವಗಳಲ್ಲಿ ಕಾಳುಗಳಿಗೆ ಎರಡನೆಯ ಸ್ಥಾನ.ಬೆಳಗಾಂವಿ ಪ್ರದೇಶದ ಕೃಷಿ ಭೂಮಿಯಲ್ಲಿ ಶೇ.೨೯ರಷ್ಟು ಭೂಮಿಯಲ್ಲಿ ಬತ್ತ ಬೆಳೆಯತ್ತಾರೆ.ಜೋಳ ಕಾಳುಗಳೂ ತಕ್ಕಮಟ್ಟಿಗೆ ಬೆಳೆಯುತ್ತವೆ.ಗೋಧಿ,ಹತ್ತಿ,ಎಣ್ಣೆಬೀಜ,