ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ

      ಮೇಲೆ ವಿವಿಧ ಸ್ವಾಭಾವಿಕ ವಿಭಾಗಗಳ ಪರಿಸ್ಥಿತಿಯನ್ನುಷ್ಟು ಪರಿಶೀಲಿಸಬಹುದು. ಕರಾವಳಿಯಲ್ಲಿ ಮಂಗಳೂರೊಂದೇ ರೈಲ್ವೆ ಸಂಪರ್ಕ ಪಡೆದಿರುವ ಮುಖ್ಯ ಸ್ಥಳ. ಬ್ರಾಡ್ ಗೇಜಿನ ರೈಲುಮಾರ್ಗವೊಂದು ಪಾಲ್ಘಾಟಿನ ಮೂಲಕ ಸುತ್ತಿಕೊಂಡು ಚೆನ್ನೈ ತಲಪುತ್ತದೆ. ಮಂಗಳೂರಿನ ರೈಲ್ವೆ ಹಿನ್ನಾಡು ಕರ್ನಾಟಕದೊಳಗಿಲ್ಲ . ನಿರ್ಮಾಣವಾಗುತ್ತಿರುವ ಮಂಗಳೂರು-ಹಾಸನ ರೈಲ್ವೆಯಿಂದ ಮಂಗಳೂರಿನ ಸಮೃದ್ಧವಾದ ಹಿನ್ನಾಡಿಗೆ ಸಮುದ್ರಮುಖ ಲಭ್ಯವಾದಂತಾಗುತ್ತದೆ. ಕರಾವಳಿಯ ಉದ್ದಕ್ಕೂ ಘಟ್ಟದಾಚೆಗೂ ಹಲವಾರು ಬಸ್ ಸಂಚಾರ ಮಾರ್ಗಗಳುಂಟು. ಕಾರವಾರದಿಂದ ಅಂಕೋಲದ ಮೂಲಕ ಯಲ್ಲಾಪುರ ಹುಬ್ಬಳ್ಳಿ ಧಾರವಾಡಗಳಿಗೂ ಕುಮಟದಿಂದ ಶಿರಸಿಗೂ ರಸ್ತೆ ಸೌಲಭ್ಯವಿದೆ. ಬೆಂಗಳೂರು-ಮೈಸೂರು-ಮಡಿಕೇರಿಗಳ ಮೂಲಕ ಸಾಗುವ ರಸ್ತೆಯೂ ಮುಖ್ಯ ಹಾಸನ-ಮಂಗಳೂರು,ಮಂಗಳೂರು-ಚಿಕ್ಕಮಗಳೂರು ಮಾರ್ಗಗಳು ಇನ್ನೆರಡು. ಕುಂದಾಪುರ, ಉಡುಪಿ, ಪುತ್ತೂರು, ಮುಲ್ಕಿ, ಮಂಗಳೂರು ಮುಖ್ಯ ರಸ್ತೆಕೇಂದ್ರಗಳು. ಕುಂದಾಪುರ, ಉಡುಪಿ, ಪುತ್ತೂರು, ಮುಲ್ಕಿಗಳಿಂದ ಆಗುಂಬೆಯ ಮೂಲಕ ತ್ತೀರ್ಥಹಳ್ಳಿ, ಶಿವಮೊಗ್ಗ, ಕೊಪ್ಪ, ತರೀಕೆರೆಗಳಿಗೆ ಸಂಪರ್ಕವಿದೆ. ಘಟ್ಟದ ಆಚೀಚೆಯ ಸಾರಿಗೆ ಸಂಪರ್ಕ ಪ್ರಾಚೀನವಾದದ್ದು. ಮಂಗಳೂರಿನ ಹಿನ್ನಾಡು ರಸ್ತೆ ಸಮೃದ್ಧಪ್ರದೇಶ.
      ಉತ್ತರ ದಕ್ಷಿಣ ಮಲೆನಾಡಿಗೂ ಮೈದಾನಕ್ಕೂ ನಡುವೆ ರೈಲ್ವೆ ಸಂಪರ್ಕವುಂಟು. ಬೆಂಗಳೂರು-ಪುಣೆ ರೈಲುಮಾರ್ಗದಲ್ಲಿ ಅರಸೀಕೆರೆಯಿಂದ ಒಂದು ಕವಲು ಹಾಸನದ ಮೂಲಕ ಮೈಸೂರಿಗೂ ಬೀರೂರಿನಿಂದ ಒಂದು ಕವಲು ಭದ್ರಾವತಿಯ ಮುಲಕ ಶಿವಮೊಗ್ಗ-ತಾಳಗುಪ್ಪಗಳಿಗೂ ಸಾಗುತ್ತವೆ. ಬೆಂಗಳೂರು-ಪುಣೆ ಮಾರ್ಗ ಸಾಗುವುದು ಅರೆಮಲೆನಾಡಿನಲ್ಲಿ (ಧಾರವಾಡ-ಬೆಳಗಾಂವಿಗಳ ಮೂಲಕ). ಅಳಣಾವರದಿಂದ ದಾಂಡೇಲಿಗೂ ಲೋಂಡದಿಂದ ಕ್ಯಾಸಲ್ ರಾಕಿಗೂ ಮರ್ಮಗೋವಕ್ಕೂ ಕವಲುಗಳಿವೆ. ಆರೆಮಲೆನಾಡಿನ ಒಂದು ತುಂಡಿನೊಡನೆ ಮೈಸೂರು-ಚಾಮರಾಜನಗರ ರೈಲ್ವೆ ಸಂಘರ್ಪವುಂಟು. ಒಟ್ಟಿನಲ್ಲಿ ಮಲೆನಾಡಿನ ಶೇ.೧೦ ಭಾಗ ಪ್ರದೇಶವನ್ನು ಮಾತ್ರ ರೈಲ್ವೆ ಮುಟ್ಟಲು ಸಾಧ್ಯವಾಗಿದೆಯೆನ್ನಬಹುದು. ಮಲೆನಾಡಿನ ಮೂಲಕ ಹಾದುಹೋಗುವ ರಸ್ತೆಗಳ ಬಗ್ಗೆ ಪ್ರಥಮವಾಗಿ ಗಮನ ಸೆಳೆಯುವ ಅಂಶವೆಂದರೆ ಪೂರ್ವ-ಪಶ್ಚಿಮವಾಗಿ ಹರಿಯುವ ಮಾರ್ಗಗಳ ಹೆಚ್ಚಳ. ಕರಾವಳಿ ಹೆದ್ದಾರಿಯಂತೆ ಮಲೆನಾಡು ಹೆದ್ದಾರಿಯೊಂದು ಬೆಳೆದಿಲ್ಲ.
      ಉತ್ತರ ಮಲೆನಾಡಿನಲ್ಲಿ ಯಲ್ಲಾಪುರ ಮತ್ತು ಶಿರಸಿ ಎರಡು ಮುಖ್ಯ ಕೇಂದ್ರಗಳು. ಯಲ್ಲಾಪುರಕ್ಕೂ ಕರಾವಳಿಯ ಅಂಕೋಲ-ಕಾರವಾರಗಳಿಗೂ ಸಂಪರ್ಕವುಂಟು. ಬೆಂಗಳೂರು-ಪುಣೆ ರೈಲುಮಾರ್ಗದೊಂದಿಗೆ ಈಶಾನ್ಯಾಭಿಮುಖವಾಗಿಯೂ ಹಾದಿ ಹರಿದಿದೆ. ಹಳಿಯಾಳ-ಆಳ್ನಾವರ ಜಂಕ್ಷನ್ ಮತ್ತು ಹುಬ್ಬಳ್ಳಿ ಜಂಕ್ಷನ್-ಧಾರವಾಡ ಮಾರ್ಗಗಳಿಗೂ ಸಂಪರ್ಕವಿದೆ. ರಸ್ತೆ ಮಾರ್ಗಗಳು, ಶಿರಸಿಯಿಂದ ಕುಮಟ, ಹಾನಗಲ್, ಹುಬ್ಬಳ್ಳಿ, ಬನವಾಸಿ, ಸಿದ್ಧಾಪುರಗಳಿಗೆ ಸುಲಭವಾಗಿ ಹೋಗಿ ಬರಬಹುದು. ಶಿರಸಿ ಒಂದು ಮುಖ್ಯ ವ್ಯಾಪಾರಸ್ಥಳ. ಮಲೆನಾಡಿ ಮೂಲಕ ಹಾಯ್ದು ಹೋಗುವ ಮೈಸೂರು-ಮಡಿಕೇರಿ-ಮಂಗಳೂರು, ಮಂಗಳೂರು-ಮೂಡಿಗೆರೆ-ಹಾಸನ, ಮಂಗಳೂರು-ಮೂಡಿಗೆರೆ-ಆಲೂರು-ಚಿಕ್ಕಮಗಳೂರು, ಚಿಕ್ಕಮಗಳೂರು-ಹಾಸನ-ಕಡೂರು,ಶಿವಮೊಗ್ಗ-ಭದ್ರಾವತಿ-ಚಿತ್ರದುರ್ಗ,ಭದ್ರಾವತಿ-ಕಡೂರು, ಕೊಪ್ಪ-ತರೀಕೆರೆ, ತೀರ್ಥಹಳ್ಳಿ-ಶಿವಮೊಗ್ಗ,ಚಿಕ್ಕಮಗಳೂರು ಮತ್ತು ಹಾಸನ ಮುಖ್ಯ ಕೇಂದ್ರಗಳು.
      ಉತ್ತರ ಮೈದಾನದ ಬಹು ವಿಶಾಲ ಪ್ರದೇಶಗಳಲ್ಲಿ ರೈಲುಮಾರ್ಗ ವಿರಳ. ಹಿಂದಿನ ಬೊಂಬಾಯಿ ಕರ್ನಾಟಕದ ಭಾಗಕ್ಕೂ ಹೈದರಾಬಾದ್ ಕರ್ನಾಟಕಕ್ಕೂ ನಡುವೆ ರಸ್ತೆ