ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಮಧೇನು-ಕಾಮನಬಿಲ್ಲು

ಮಾಡಿಕೊಂಡು ಇಂದಿನ ಬೆಳ್ಲಾರಿ,ಚಿತ್ರದುರ್ಗ,ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಹಲವು ಭಾಗಗಳನ್ನೂಳಗೊಂಡ ನೊಳಂಬವಾಡಿ ಎಂಬ ರಾಜ್ಯವನ್ನು ಆಳುತ್ತಿದ್ದರು. ಕಾಮದೇವನ ಆಳ್ವಿಕೆಯ ಪ್ರಾರಂಭಕ್ಕೆ ಮೊದಲೇ ಕಲ್ಯಾಣ ಚಾಳುಕ್ಯರ ಸಿಂಹಾಸನವನ್ನು ಕಳಚುರಿ ಮನೆತನದ ಬಿಜ್ಜಳ ಆಕ್ರಮಿಸಿಕೊಂಡಿದ್ದ.ಈತ 1162ರಲ್ಲಿ ಕಾಮದೇವನನ್ನು ಸೋಲಿಸಿದೆ.ಆದರೂ ಕಾಮದೇವ ಪದಚ್ಯುತರಾದ ಚಾಳುಕ್ಯರ ಪಕ್ಶಪಾತಿಯಾಗಿದ್ಡ. 1177ರಲ್ಲಿ ಹೊಯ್ಸಳ ಇಮ್ಮಡಿ ವೀರಬಲ್ಲಾಳ ಉಮ್ಮತ್ತೂರಿನಲ್ಲಿ ಕಾಮದೇವನನ್ನು ಸೋಲಿಸಿ ದುಗ್ರಮವಾದ ಉಚ್ಚಂಗಿಯನ್ನು ಮುತ್ತಿ,ಕಾಮದೇವನಿಂದ ಅಪಾರ ಕಾಣಿಕೆಗಳನ್ನು ಪಡೆದ.ಅವನ ರಾಜ್ಯವನ್ನು ಅವನಿಗೇ ಹಿಂತಿರುಗಿಸಿ,ಪಾಂಡ್ಯರಾಜಪ್ರಶ್ಯಾಪನಾಚಾರ್ಯ ಎಂಬ ಬಿರುದನ್ನು ತಳೆದ.1184ರಿಂದ 1187ರಲ್ಲಿ ಉಚ್ಚಂಗಿಯನ್ನು ಮುತ್ತಿದ.ಯುದ್ದದಕ್ಕಿ ಕಾಮದೆವನೂ ಅತನ ಮಗನಾದ ಒಡೆಯನೂ ಮರಣ ಹೊಂದಿದ.ನೊಳಂಬವಾಡಿ ಹೊಯ್ಸಳ ಸಾಮ್ರಾಜ್ಯದಲ್ಲಿ ಸಾರಿತು.

ಕಾಮಧೇನು:ದೇವಲೋಕದ ಹಸು.ಕೇಳಿದ ಪದಾಥ್ರಗಳನ್ನು ಕೊಟ್ಟು

ತಣಿಸುವ ಗುಣವುಳ್ಳದು.ಅಮೃತಮಥನ ಕಾಲದಲ್ಲಿ ಕ್ಶೀರಸಮುದ್ರದಿಂದ ಹುಟ್ಟಿದ ಇದನ್ನು ದೆವತೆಗಳು ಸಪ್ತಷ್ರಿಗಳಿಗೆ ದಾನ ಮಾಡಲಾಗಿ ಇದು ಕಾಲಕ್ರಮದಲ್ಲಿ ವಸಿಷ್ಟರ ಸ್ವತ್ತಾಯಿತು. ಇದರ ಬಣ್ಣ ಬಿಳುಪು. ನಾಲ್ಕು ವೆದಗಳೇ ಇದರ ಕಾಲುಗಳು.ನಾಲ್ಕು ಪುರುಷಾರ್ಥಗಳೇ ಇದರ ಕೆಚ್ಚಲು.ನಂದಾ,ಸುನಂದಾ,ಸುರಭೀ,ಸುಶೀಲಾ,ಸಮನಾ ಎಂಬ ಐದು ರೂಪಗಳಿಂದ ಇದು ಪ್ರಸಿದ್ದವಾಗಿದೆ.ಭಾರ್ಗವ,ಆಂಗೀರಸ,ಭಾರಧ್ವಾಜ,ಕಶ್ಯಪ,ವಸಿಷ್ಟ-ಈ ಐವರು ಋಷಿಗಳ ಆಶ್ರಮದಲ್ಲಿ ಒಂದೊಂದು ಧೇನುವಿದ್ದು ದೇವ,ಅತೆಥಿ,ಪಿತೃ ಮೊದಲಾದ ಪೂಜೆಗಳಲ್ಲಿ ನೆರವಾಗಿವೆಯೆಂದು ಪ್ರತೀತಿ. ಅಭೀಷ್ಟಸಿದ್ಧಿಗೆ ಬಲಿಪಾಡ್ಯಮಿಯ ದಿವಸ ಇದನ್ನು ಪೂಜಿಸುತ್ತಾರೆ.

ರಾಮಾಯಣದ ಪ್ರಕಾರ ವಿಶ್ವಾಮಿತ್ರ ಒಮ್ಮೆ ವಸಿಷ್ಟ ಮಹರ್ಷಿಗಳ ಅಶ್ರಮಕ್ಕೆ ಭೇಟಿಯಿತ್ತಾಗ

ವಸಿಷ್ಟರು ಕಾಮಧೇನುವಿನ ಸಹಾಯದಿಂದ ಅತಿಥಿ ಸತ್ಕಾರವನ್ನು ವಿಜ್ರಂಭಣೆಯಿಂದ ಮಾಡಿದರು. ಇದರಿಂದ ಸಂತೃಪ್ತಿ ಹೊಂದಿದ ವಿಶ್ವಾಮಿತ್ರ ಕಾಮಧೇವನನ್ನು ತಾನು ಪಡೆಯಬೇಕೆಂದು ಇಚ್ಚಿಸಿ ಈ ಒಂದು ಹಸುವಿಗಾಗಿ ತನ್ನಲ್ಲಿರುವ ಹಸುಗಳನ್ನೆಲ್ಲಾ ಕೊಡುವುದಾಗಿ ವಸಿಷ್ಟರನ್ನು ಕೇಳಿದ. ವಸಿಷ್ಟರು ಕಾಮಧೇನುವನ್ನು ಕೊಡಲು ನಿರಾಕರಿಸಿದರು.ಇದರಿಂದ ಪರಸ್ಪರ ಯುದ್ಢವಾಗಿ ವಿಷ್ವಾಮಿತ್ರ ಸೋಲನ್ನೊಪ್ಪಿಕೊಂಡು ಅಂದಿನಿಂದ ತನ್ನ ಕ್ಶಾತ್ರಭಾವ ತ್ಯಜಿಸಿ ಬ್ರಹ್ಮ ಪದವಿ ಪಡೆಯಲು ತಪಸ್ಸು ಮಾಡಲು ಉದ್ಯುಕ್ತನಾದ.ಅನೇಕ ವರ್ಷಗಳ ತಪಸ್ಸಿಂದಾಗಿ ಕಾಮಧೇನುವಿನ ಕರುವನ್ನು ಜಮದಗ್ನಿ ಮಹರ್ಷಿಗಳು ಪಡೆದಿದ್ದರೆಂದೂ ಇದನ್ನು ಕಾರ್ತವೀರ್ಯ ಅಪಹರಿಸಿದನೆಂದೂ ಇದರಿಂದಾಗಿ ಜಮದಗ್ನಿಯ ಮಗ ಪರಶುರಾಮ ಸಿಟ್ಟಿಗೆದ್ದು ಸಮಸ್ತಕ್ಶತ್ರಿಯರ ವಧೆಗೆ ಕಾರಣನಾದನೆಂದೂ ಇನೊಂದು ಹೇಳಿಕೆಯಿದೆ. ಕಾಮಧೇನು ದಕ್ಷನ ಮಗಳೆಂದೂ ಕಶ್ಯಪರ ಪತ್ನಿಯೆಂದೂ ಇನೊಂದು ಹೇಳಿಕೆಯುಂಟು.

ಕಾಮಧೇನು:'ಪ್ರಗತಿ ಸಮೃದ್ಧಿ ಸಂಸ್ಕ್ರತಿ'ಈ ಧ್ಯೇಯ ವಾಕ್ಯ ಹೊಂದಿದ್ದ ವಿಚಾರಗಳಿಗೆ ಮೀಸಲಾಗಿದ್ದ ಮಾಸಿಕೆ.ಕೌಜ಼ಲಗಿ ಹಣಮಂತರಾವ್ ಸ್ಮಾರಕನಿಧಿಯಿಂದ 1958ರ ಅಗಸ್ಟ್ ನಲ್ಲಿ ಆರಂಭವಾಯಿತು.ಕೃಷಿಕರನ್ನು ಪ್ರಗತಿಪರರನ್ನಾಗಿ ಮಾಡುವುದು,ಅವರಲ್ಲಿ ಶಾಸ್ತ್ರೀಯ ದೃಷ್ಟಿಕೋನವನ್ನು ಬೆಳೆಸುವುದು,ಶಾಸ್ತ್ರೀಯ ಕೃಷಿತಂತ್ರವನ್ನು ಅನುಸರಿಸಿ ಸಮೃದ್ದ ಬೆಳೆ ಬೆಳೆಸುವ ಬಗ್ಗೆ ಅವರಿಗೆ ಸಲಹೆ ಮತ್ತು ಅನುಭವ ಕಥೆಗಳನ್ನು ಒದಗಿಸುವುದು,ನಾಡಿನಲ್ಲೂ ವಿದೇಶಗಳಲ್ಲೂ ಕೃಷಿರಂಗದಲ್ಲಿ ನಡೆದ ಪ್ರಯೋಗಗಳ ಪರಿಚಯ ಮಾಡಿಕೊದುವುದು,ಜೊತೆಗೆ ಬಿಡುವಿನ ಸಮಯದಲ್ಲಿ ಓದಲು ಸರಸ ಸಾಹಿತ್ಯ ಒದಗಿಸುವುದು-ಇವು ಈ ಪತ್ರಿಕೆಯ ಸಂಪಾದಕರಾಗಿದ್ದವರು ರಂಗನಾಥ ದಿವಾಕರ.ಬಿಡಿ ಸಂಚಿಕೆಯ ಬೆಲೆ 50 ಪೈ.ವಾರ್ಷಿಕ ಚಂದಾ ರೂ.5.

ಪ್ರಗತಿಪರ ರೈತರ ಅನುಭವ ಕಥನ,ದುಡಿದು ಪಡೆದವರು,ಕೃಷಿಯಲ್ಲಿ ನೀವು ಅರಿತಿರಬೇಕಾದುದು ಮೊದಲಾದ ಶೀರ್ಷಿಕೆಗಳ ಅಡಿಯಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಆಕರ್ಷವಾಗಿದ್ದೆವು.ಅಲ್ಲದೆ ಕೃಷಿರಂಗದಲ್ಲಿ ಕಾಲಕಾಲಕ್ಕೆ ಅನುಸರಿಸಬೇಕಾದ ರೀತಿನೀತಿಗಳ ತಿಳಿವಳಿಕೆಯನ್ನೂ ಕೊಡಲಾಗುತ್ತಿತ್ತು.ಇದರಿಂದಾಗಿ 'ಕಾಮಧೇನು' ಎಂಬ ಹೆಸರು ಅದಕ್ಕೆ ಅನ್ವರ್ಥವಾಗಿ ಪರಿಣಮಿಸಿತು.ಸಾಹಿತಿ ರಾವ್ಬಹದ್ದೂರರು ಈ ಪತ್ರಿಕೆಯಲ್ಲಿ 'ಒಡೆದ ಕನ್ನಡಿ' ಎಂಬ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಕಥೆಗಳು ಹಳ್ಳಿಗರ ಜೀವನದಲ್ಲಿ ಬರುವ ನಾನಾ ಸಮಸ್ಯೆಗಳ ಮೇಲೆ ಕ್ಷ-ಕಿರಣ ಬೀರುತ್ತಿದ್ದವು.ಜೊತೆಗೆ ಅನ್ಯಭಾಷೆಗಳ ಉಪಯುಕ್ತವಾಗಿದ್ದೆವು.ಮೊದಲ ಕೆಲವು ಸಂಚಿಕೆಗಳ ಮುಖಪತ್ರ ತ್ರಿವರ್ಣದಲ್ಲಿ ಮುದ್ರಿತವಾಗುತ್ತಿತ್ತು.ಈ ಪತ್ರಿಕೆಯನ್ನು ನಿಧಿಯವರು 1963ರ ಮಾರ್ಚೆಯ ವರೆಗೆ ನಡೆಸಿ ಶಿರಸಿಯ ಒಂದು ಸಂಸ್ತೆಗೆ ಒಪ್ಪಿಸಿದರು.ಸ್ವಲ್ಪ ಕಾಲವಾದ ಮೇಲೆ ಅದು ಮತ್ತೆ ಹಸ್ತಾಂತರಗೊಂಡಿತಲ್ಲದೆ ಅದರ ಹೆಸರೂ ಬದಲಾಯಿತು.ಉಪಯುಕ್ತವಾಗಿದ್ದರೂ ಈ ಪತ್ರಿಕೆಯ ಪ್ರಸಾರ 1,500ಕ್ಕೆ ಮಿಕ್ಕಿರಲಿಲ್ಲ. ಪತ್ರಿಕೆಯ ಲೇಖಕರಿಗೆ ಸಂಭಾವನೆ ಕೊಡಲಾಗುತ್ತಿತ್ತು.

ಕಾಮನಬಿಲ್ಲು:ಅಧಿಕ ಸಂಖ್ಯೆಯಲ್ಲಿ ಬೀಳುತ್ತಿರುವ ಮಳೆ ಹನಿಗಳ ಮೇಲೆ ಬಿಸಿಲು ಅಥವಾ ಬೆಳುದಿಂಗಳು ಬಿದ್ದಾಗ ಸೂರ್ಯ ಅಥವಾ ಚಂದ್ರನ ನೇರಿದಿರು (180 ಅಂತರದಲ್ಲಿ)ಕಾಣುವ ವರ್ಣಮಯ ಚಾಪ (ರೇನ್ಬೋ). ನೇರಿದಿರು ಬಿಂದುವಿನ ಹೆಸರು ಸೂರ್ಯವಿರುದ್ದ ಅಥವಾ ಚಂದ್ರವಿರುದ್ದ ಬಿಂದು ಎಂದು ಹೆಸರು.ಕಾಮನಬಿಲ್ಲು ಸಾಮಾನ್ಯವಾಗಿ ಈ ವಿರುದ್ದ ಬಿಂದುವಿನ ಸುತ್ತಲೂ ವ್ಯಾಪಿಸಿರುತ್ತದೆ.ಈ ವಿದ್ಯಮಾನ ತೋರುವ ಮೊದಲು ನದೆಯುವ ಭೌತ ಕ್ರಿಯೆಯಿಷ್ಟು ಬೀಳುತ್ತಿರುವ ನೀರಹನಿಗಳಲ್ಲಿ ಬೆಳಕಿನ ಕಿರಣಗಳು ವಕ್ರೀಭವಿಸಿ ಒಳಹೊಕ್ಕು ಒಮ್ಮೆ ಅಥವಾ ಎರಡು ಬಾರಿ ಸಂಪೂರ್ಣ ಆಂತರಿಕವಾಗಿ ಪ್ರತಿಫಲಿಸಿ ಮತ್ತೆ ವಕ್ರೀಭವಿಸಿ ಹೊರಬಂದು ವೀಕ್ಷಕನನ್ನು ತಲುಪುತ್ತವೆ.ಆಗ ಒಂದು ಅಥವಾ ಕೆಲವೊಮ್ಮೆ ಎರಡು ಕಾಮನಬಿಲ್ಲು ಆಕಾಶದಲ್ಲಿ ವಿರುದ್ದ ಬಿಂದುವಿನ ದಿಕ್ಕಿನಲ್ಲಿ ಕಾಣುತ್ತವೆ.ಸೂರ್ಯನಿಂದ ಬಂದ ಸಮಾಂತರ ಕಿರಣಗಳು ಆಕಾಶದ ತುಂಬ ಹರಡಿರುವ ಎಲ್ಲ ಹನಿಗಳೊಂದಿಗೆ ಮೇಲೆ ವರ್ಣಿಸಿದಂತೆ ವರ್ತಿಸಿದರೂಕನಿಷ್ಟ ವಿಚಲನ ಕೋನ ಕೊಡಬಲ್ಲ ಸ್ಥಾನಗಳಲ್ಲಿದ್ದ ಹನಿಗಳು ವೀಕ್ಷಕನ ಕಡೆಗೆ ಕಳಿಸುವ ಕಿರಣಗಳು ಮಾತ್ರ ಅಧಿಕ ತೀವ್ರವಾಗಿರುತ್ತವೆ.ಸೂರ್ಯ (ಚಂದ್ರ) ವಿರುದ್ದ ಬಿಂದುವಿನ ಸುತ್ತ ವೃತ್ತಾಕಾರದ ಯಾವುದೇ ಕಂಸದ ಮೇಲಿರುವ ಮಳೆಯ ಹನಿಗಳೆಲ್ಲವೂ ಸ್ಥಿರವಾದ ವಿಚಲನಕೋನ ಕೊಡುವುದರಿಂದ ಕನಿಷ್ಟ ವಿಚಲನಕೋನದಲ್ಲಿ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಹನಿಗಳು ವೃತ್ತಾಕಾರ ಕಂಸದ ಮೇಲಿರಬೇಕು.ಅಂದರೆ ತೀವ್ರತೆ ಸಾಕಷ್ಟು ಇರುವ ಬಿಳಿ ಬಿಲ್ಲು ಕಾಣಬೇಕು.ಆದರೆ ಹೀಗೆ ಆಗದೆ ಕಾಮನ ಬಿಲ್ಲಿನಲ್ಲಿ ಬಣ್ಣ ಬಣ್ಣಗಳ ಪೂರಕ ಬಿಲ್ಲುಗಳು ಹೊಂದಿಕೊಂಡಿರುವಂತೆ ಕಾಣುವುದು ಬೆಳಕು ಸಪ್ತವರ್ಣಗಳ ಮಿಶ್ರಣವಾಗಿರುವುದರಿಂದ (VIBGYOR-ನೇರಿಳೆ,ತೀವ್ರನೀಲಿ,ನೀಲಿ,ಹಸುರು,ಹಳದಿ,ಕಿತ್ತಳೆ,ಕೆಂಪು).ಕನಿಷ್ಟ ವಿಚಲನೆಯ ಕೋನಗಳು.