ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳ್ಳಿಪೀರ ಉದ್ಯಾನಪ್ರಾಮುಖ್ಯ ಇರುವ ಕೆಲವು ಮುಖ್ಯ ಬಗೆಯ ಕಳ್ಳಿಗಳನ್ನು ಕೆಳಗೆ ಹೆಸರಿಸಲಾಗಿದೆ: ೧. ಪೆರೆಸ್ಕಿಯ, ೨. ಒಪನ್ಮಿಯ ೩, ಎಪಿಫಿಲಮ್, ೪. ಫಿಲೋಕ್ಯಾಕ್ಟಸ್, ೫. ಮ್ಯಾಮಿಲೇರಿಯ ೬. ಎಕೈನೊಸಿರಸ್, ೭. ಅಸ್ಟ್ರೋಫೈಟಿಮ್ ೮. ಎನ್ ಸಿಫಲೊಕಾಪ್ರಸ್ ೯. ಎಕೈನೊಕಾಕ್ಟಸ್ ೧೦. ಎರಿಯೊಸಿರಿಯಸ್ ೧೧. ಸಿರಿಯಸ್ ೧೨. ಎಸ್ಪೋಸ್ಟೊ

ಕೆಲವು ಬಗೆಯ ಕಳ್ಳಿಗಳಿಗೆ ಔಷಧೀಯ ಗುಣಗಳಿವೆ. ಉದಾಹರಣೆಗೆ ಸಿರಿಯಸ್ ಗ್ರಾಂಡಿಫ್ಲೊರಸ್ ಎಂಬ ಕಳ್ಳಿಯ ಎಳೆಯ ಕಂಡವನ್ನು ಹೃದಯಕ್ರಿಯೆಯನ್ನು ಉತ್ತೇಜನಗೊಳಿಸಲು ಬಳಸುತ್ತಾರೆ. ಇದರ ಕಷಾಯವನ್ನು ಜಲೋದರ (ಡ್ರಾಪ್ಸಿ) ರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ಪಾಪಾಸು ಕಳ್ಳಿಯ (ಒಪನ್ವಿಯ) ಹಣ್ಣುಗಳನ್ನು ಬೇಯಿಸಿ ನಾಯಿಕೆಮ್ಮನ್ನು ಗುಣಪಡಿಸಲು ಬಳಸುವುದುಂಟು.

ಮೇಲೆ ಹೇಳಿದ ಕ್ಯಾಕ್ಟೇಸೀ ಕುಟುಂಬದ ಸಸ್ಯಗಳೇ ಅಲ್ಲದೆ ಯೂಫೋಬಿ‍ಯೇಸೀ ಕುಟುಂಬದ ಯೂಫೋಬಿ‍ಯ ಮತ್ತು ಕ್ಯಾರಲೂಮ ಜಾತಿಯ ಸಸಿಗಳು ಅಮರಿಲ್ಲಿಡೇಸೀ ಕುಟುಂಬದ ಅಗೇವ್ ಹಾಗೂ ಫರ್ ಕ್ರಿಯ ಎಂಬ ಜಾತಿಯ ಸಸ್ಯಗಳೂ ಲಿಲಿಯೇಸೀ ಕುಟುಂಬಕ್ಕೆ ಸೇರಿದ ಯಕ್ಕ, ಅಲೊಗಳೊ ಕಾಸುಲೇಸೀ ಕುಟುಂಬದ ಕ್ರ್ಯಾಸುಲ, ಕ್ಯಾಲ್ಯಾಂಕೋಯಿ, ಬ್ರೈಯೋಫಿಲಮ್ ಮುಂತಾದವೂ ಸಾಮಾನ್ಯ ಭಾಷೆಯಲ್ಲಿ ಕಳ್ಳಿಗಳೆಂದೇ ಹೆಸರಾಗಿವೆ. (ಎಂ.ಎಚ್.ಎಂ. ಎಂ.ಸಿ.ಆರ್)./ ಕಳ್ಳಿಪೀರ /: ಸಮಶೀತೋಷ್ಣವಲಯ ಹಾಗೂ ಉಷ್ಣವಲಯಗಳಲ್ಲಿ ವಾಸಿಸುವ ಒಂದು ಜಾತಿಯ ಹಕ್ಕಿ (ಬೀ ಈಟರ್). ಬಲು ಸುಂದರವಾದ ಮತ್ತು ವಣ‍ವೈವಿಧ್ಯವುಳ್ಳ ಈ ಹಕ್ಕಿ ಮಿಂಚುಳ್ಳಿಗಳಿಗೆ (ಕಿಂಗ್ ಫಿಶರ್) ಹತ್ತಿರ ಸಂಬಂಧಿ. ಕೊರಾಸೈಯಿಪಾರ್ಮೀಸ್ ಗಣದ ಮೆರಾಪಿಡೀ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ ಹಲವಾರು ಜಾತಿಗಳಿದ್ದು ಇವುಗಳಲ್ಲಿ ಮೆರಾಪ್ಸ್ ಜಾತಿಯವು ಮುಖ್ಯವಾದವು. ಪ್ರಭೇದಗಳು ೨೪. ಎಲ್ಲಕ್ಕೂ ಬೀಈಟರ್ ಎಂಬ ಸಾಮಾಣ್ಯ ಹೆಸರೇ ಇದೆ. ಆಫ್ರಿಕ, ಆಸ್ಪ್ರೇಲಿಯ, ಮಡಗಾಸ್ಕರ್ ಮತ್ತು ಭಾರತದಲ್ಲಿ ಇವು ಸಾಮಾನ್ಯ.

ಬಗೆಬಗೆಯ ಕೀಟಗಳು ಇದರ ಆಹಾರವಾದರೂ ಜೇನುನೊಣವೆಂದರೆ ಬಲು ಇಷ್ಟ. ಅದರಿಂದಲೇ ಇದಕ್ಕೆ ಬೀ ಈಟರ್ ಎಂಬ ಹೆಸರು ಬಂದಿರುವುದು. ಭಾರತದಲ್ಲಿ ಐದು ಪ್ರಭೇದಗಳಿಗೆ ಸೇರಿರುವ ಹಕ್ಕಿಗಳಿವೆ - ನೀಲಿ ಬಾಲದ ಕಳ್ಳಪೀರ (ಮೆರಾಪ್ಸ್ ಪೆರ್ ಸಿಕಸ್) ಮತ್ತು ಹಸಿರು ಬಣ್ಣದ ಕಳ್ಳಿಪೀರ (ಮೆರಾಪ್ಸ್ ಓರಿಯಂಟ್ಯಾಲಿಸ್). ಮೆ. ಎಪಿಯಾಸ್ಟರ್, ಮೆ. ಲೆಶ್ಚಿನಾಲ್ಟಿ, ಮೆಫ್ಲಿಲಿಪಿನಸ್. ಹಸುರು ಬಣ್ಣದ ಕಳ್ಳಿಪೀಠ ಸಾಧಾರಣವಾಗಿ ಗುಬ್ಬಚ್ಚೆಯಷ್ಟಿದೆ. ಭಾರತದ ಹಿಮಾಲಯ ಪವ‍ತದ ೫,೦೦೦ ಎತ್ತರದಿಂದ ಹಿಡಿದಕನ್ಯಾಕುಮಾರಿಯ ತನಕ ಎಲ್ಲ ಕಡೆಗಳಲ್ಲೂ ಸಾಮಾನ್ಯವಾಗಿ ಕಾಣಬಹುದು. ಇದರ ಕೊಕ್ಕು ನೀಳವಾಗಿ, ತೆಳುವಾಗಿ ಸ್ವಲ್ಪ ಬಾಗಿದೆ. ರೆಕ್ಕೆಗಳು ಸಣ್ಣವು; ದುಂಡಾಗಿವೆ. ಬಾಲದಲ್ಲಿ ೧೨ ಗರಿಗಳಿವೆ. ಇವುಗಳಲ್ಲಿ ಮಧ್ಯದ ಗರಿಗಳು ಮೊಟಕಾದ ಸೂಜಿಗಳಂತಿವೆ. ಈ ಹಕ್ಕಿ ಬಹಳ ಚುರುಕಾಗಿ ಹಾರಾಡಬಲ್ಲರದು. ಹಾರುತ್ತಿರುವಾಗ ಇದರ ದೇಹದ ವಿವಿಧ ಬಣ್ಣಗಳು