ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ಸಂಸ್ಥೆಗಳು ನಡೆಸುತ್ತಿದ್ದುವು. ಎರಡನೆಯ ಮಹಾಯುದ್ದದ ಅನಂತರ ಶಿಕ್ಷಣ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಕಂಡುಬಂತು. ಈಗ ಈ ದೇಶದಲ್ಲಿ ಜೊತೆಗೆ ಇತರೇ ವಿಶ್ವವಿದ್ಯಾನಿಲಯಗಳಿವೆ. 1 ಸ್ಟೇಟ್ ವಿಶ್ವವಿದ್ಯಾನಿಲಯ; 2 ಕೆಥೊಲಿಕ್ ವಿಶ್ವವಿದ್ಯಾನಿಲಯ ಮತ್ತು 3 ಫ್ರೀ ವಿಶ್ವವಿದ್ಯಾನಿಲಯ.

ಇತಿಹಾಸ: ಪ್ರಪಂಚದ ಭೂಪಟದಲ್ಲಿ ಕಾಂಗೋದ ಅಸ್ತಿತ್ವ ಹೊರಗಡೆಯ ಪ್ರಪಂಚಕ್ಕೆ ಗೊತ್ತಾದದ್ದು 19ನೆಯ ಶತಮಾನದಲ್ಲಿ. ಬೆಲ್ಜಿಯಮಿನ ದೊರೆ ಎರಡನೆಯ ಲೀಯೊಪೋಲ್ಪನ ಆಸಕ್ತಿಯಿಂದಾಗಿ. ಅದಕ್ಕೆ ಮುಂಚೆ ಅಲ್ಲಿ ನೆಲಸಿದ್ದ ಅನೇಕ ಗುಂಪುಗಳಲ್ಲಿ ಒಂದು ರಾಷ್ಟ್ರದ ಕಲ್ಪನೆ ಇರಲಿಲ್ಲ. ಅಲ್ಲಿದ್ದ ರಾಜ್ಯಗಳಲ್ಲಿ ಒಂದರ ಹೆಸರು ಕಾಂಗೋ. ಅಲ್ಲಿಯ ನದಿಗೂ ಅದೇ ಹೆಸರಿತ್ತು. ಆ ರಾಜ್ಯ ಅತ್ಯಂತ ವಿಸ್ತಾರವಾಗಿದ್ದದ್ದು 16ನೆಯ ಶತಮಾನದಲ್ಲಿ.ಆಗಲೂ ಅದು ಸ್ಪ್ಯಾನ್ಲಿ ಮಡುವಿನಿಂದ ಕೆಳಗಡೆಯ ಭಾಗವನ್ನೂ ಈಗಿನ ಅಂಗೋಲದ ಉತ್ತರಭಾಗವನ್ನೂ ಒಳಗೊಂಡಿತ್ತು. 19ನೆಯ ಶತಮಾನದ ವೇಳೆಗೆ ಆ ರಾಜ್ಯ ಅಳಿದಿತ್ತು. 19ನೆಯ ಶತಮಾನದಲ್ಲಿ ಎರಡನೆಯ ಲೀಯೊಪೋಲ್ಡ್ ದೊರೆ ತನ್ನ ದೇಶಕ್ಕೊಂದು ವಸಾಹತು ಸಂಪಾದಿಸಬೇಕೆಂಬ ಉದ್ದೆಶದಿಂದ ಈ ನಾಡಿನ ಮೇಲೆ ಕಣ್ಣಿಟ್ಟ. ಆದರೆ ಅವನ ಕನಸಿಗೆ ಅವನ ಸರ್ಕಾರ ಬೆಂಬಲ ನೀಡಲಿಲ್ಲ. ಆಗ ಅವನು ಖಾಸಗಿಯಾಗಿ ಪ್ರಯತ್ನ ನಡೆಸಿ, ತನ್ನ ಸ್ವಂತ ವೆಚ್ಚದಿಂದ ಈ ಕಾರ್ಯದಲ್ಲಿ ಉದ್ಯುಕ್ತನಾದ. 1876ರಲ್ಲಿ ಆಫ್ರಿಕನ್ ಅಂತಾರಾಷ್ಟ್ರೀಯ ಸಂಘದ ಸ್ಥಾಪನೆಯಾಯಿತು. ಆಫ್ರಿಕನ್ ಪ್ರದೇಶದ ಪರಿಶೋಧನೆಯೂ ಅಲ್ಲಿಯ ಜನರನ್ನು ನಾಗರಿಕರನ್ನಾಗಿ ಮಾಡುವುದೂ ಆ ಸಂಘದ ಉದ್ದೇಶ. ಆ ಸಂಘ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ಅದರ ಮರೆಯಲ್ಲಿ ಲೀಯೊಪೋಲ್ಡ್ ದೊರೆ ತನ್ನ ವಸಾಹತಿನ ಆಶೆಯ ಸುರುಳಿ ಬಿಚ್ಚಿದ. 1874-77ರಲ್ಲಿ ಹೆನ್ರಿ ಎ. ಸ್ಪ್ಯಾನ್ಲಿ ಈ ಪ್ರದೇಶದಲ್ಲಿ ಸಂಚರಿಸಿ, ಕಾಂಗೋ ನದಿಯ ಜಾಡನ್ನು ಪತ್ತೆ ಹಚ್ಚಿದ. 1878ರಲ್ಲಿ ಸ್ಪ್ಯಾನ್ಲಿಯನ್ನು ದೊರೆ ತನ್ನ ಆಶೆಯ ಸಾಧನೆಗಾಗಿ ನೇಮಿಸಿಕೊಂಡ. 1879-84ರಲ್ಲಿ ಸ್ಪ್ಯಾನ್ಲಿ ಕೆಲವು ತರುಣ ಸಾಹಸಿಗಳೊಡಗೂಡಿ ಕಾಂಗೋ ನದಿಯ ಮೇಲ್ಭಾಗದಲ್ಲೂ ಪರಿಶೋಧನೆ ನಡೆಸುವುದು ಸಾಧ್ಯವಾಯಿತು. ಆ ಭಾಗದಲ್ಲೆಲ್ಲೂ ಸ್ಥಳೀಯರಾಗಲಿ ವಿದೇಶೀಯರಾಗಲ್ಲಿ ಅವನನ್ನು ಪ್ರತಿಭಟಿಸಲಿಲ್ಲ. ಆದರೆ ಸ್ಪ್ಯಾನ್ಲಿ ಸರೋವರದ ಬಳಿಗೆ ಆ ವೇಳೆಗಾಗಲೇ ಬ್ಯ್ರಾಜನ ಕಡೆಯವರು ಬಂದಿದ್ದರು. ಆದ್ದರಿಂದ ಸ್ಪ್ಯಾನ್ಲಿ ಅದರ ಉತ್ತರ ಭಾಗವನ್ನು ಫ್ರೆಂಚರಿಗೆ ಬಿಟ್ಟುಕೊಟ್ಟು ದಕ್ಷಿಣದ ದಡದಲ್ಲಿ ಲೀಯೊಪೋಲ್ಡ್ ವಿಲ್ ಸ್ಥಾಪಿಸಿದ. ಅದೇ ಈಗಿನ ಕೀನ್ಷಾಸ. ಸ್ಪ್ಯಾನ್ಲಿ ಅನೇಕ ಆಫ್ರಿಕನ್ ನಾಯಕರೊಂದಿಗೆ ಒಪ್ಪಂದ ಮಾಡಿಕೊಂಡು ಉಪಾಯದಿಂದ ಅವರನ್ನೆಲ್ಲ ಅಧೀನರನ್ನಾಗಿ ಮಾಡಿಕೊಂಡ. ಈತರ ಪಾಶ್ಚಾತ್ಯ ರಾಷ್ಟ್ರಗಳಿಗೂ ಈ ಪ್ರದೇಶದಲ್ಲಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ದೊರಕಿಸಿಕೊಡುವ ಭರವಸೆ ನೀಡಿದ್ದರಿಂದ ಲೀಯೊಪೋಲ್ಡನ ಸ್ಥಾನ ಭದ್ರವಾಯಿತ್ತು. 1885ರಲ್ಲಿ ಲೀಯೊಪೋಲ್ಡ್ ದೊರೆ ಆ ಪ್ರದೇಶದ ಪ್ರಭುವಾದ. ಕಾಂಗೋ ಸ್ವತಂತ್ರ ರಾಜ್ಯ ಎಂದು ಅದಕ್ಕೆ ಹೆಸರಾಯಿತ್ತು. ರಾಜನ ಸ್ವಂತ ಆಸ್ತಿಯಾಗಿ ಇದನ್ನು ನಿರ್ವಹಿಸುವುದು ಕಷ್ಟವೆನಿಸಿದಾಗ ಆತ ಬೆಲ್ಜಿಯಂ ಸರ್ಕಾರವನ್ನು ಒಪ್ಪಿಸಿ 1908ರಲ್ಲಿ ಅದನ್ನು ಸರ್ಕಾರಕ್ಕೆ ವಶಪಡಿಸಿದ.

1960ರಲ್ಲಿ ಇತರ ಆಫ್ರಿಕನ್ ವಸಾಹತುಗಳು ಸ್ವತಂತ್ರ ರಾಷ್ಟ್ರಗಳಾದಂತೆ ಕಾಂಗೋವೂ ಸ್ವಾತಂತ್ರ್ಯ ಪಡೆಯಿತು. 1960ರ ಏಪ್ರಿಲ್ 26ರಿಂದ ಮೇ 16ರ ವರೆಗೆ ನಡೆದ ಆರ್ಥಿಕ ಪರಿಷತ್ತಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಕಾಂಗೋ ದೇಶದೊಡನೆ ಸಹಕರಿಸಲು ಬೆಲ್ಜಿಯಂ ಸರ್ಕಾರ ಒಪ್ಪಿತು.

ಕಾಂಗೋದ ತಾತ್ಕಾಲಿಕ ಸಂಹಿಧಾನಕ್ಕೆ ಸಹಿ ಬಿದ್ದದ್ದು 1960ರ ಮೇ 19ರಂದು. ಸಂವಿಧಾನಕ್ಕೆ ಸಹಿಬಿದ್ದ ಕೇವಲ ಒಂದು ತಿಂಗಳು ನಾಲ್ಕು ದಿನಗಳಲ್ಲಿ ಅಂದರೆ 1960ರ ಜೂನ್ 24ರಂದು ಪ್ಯಾಟ್ರಿಸ್ ಲುಮುಂಬನೇ ಪ್ರಧಾನ ಮಂತ್ರಿಯಾದ. ಆತನ ರಾಜಕೀಯ ಸ್ಪರ್ಧಿ ಕಸವುಬು ರಾಷ್ಟ್ರಾಧ್ಯಕ್ಷನಾದ. ಅಲ್ಲಿಂದ ಆರು ದಿನಗಳಲ್ಲಿ (ಜೂನ್ 30) ಕಾಂಗೋದ