ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ಸ್ವತಂತ್ರವನ್ನು ಸಾರಲಾಯಿತಾಗಿ ಆದೊಂದು ಪ್ರಜಾಸತ್ತಾತ್ಮಕ ಗಣರಾಜ್ಯವನೀಸಿತು.ಆ ಮುಂದು ಪ್ಯಟ್ರಿಸ್ ಲುಮುಂಬ ಪ್ರಧನಿಯಾಗಿಯೂ,ಕಸವುಬು ಆಧ್ಯಕ್ಷರಾಗಿಯೂ ಮುಂದುವರಿದರು. ೧೯೬೦ರ ಕೊನೆಯ ವೇಳೆಗೆ ಕಾಂಗೋ ಹಲವು ಭಾಗಗಳಾಗಿ ಒಡೆದಿತ್ತು. ಲೀಯೊಪೋಲ್ದ್ವಿಲ್ ಮತ್ತು ಈಕ್ವೇಟರ್ ಪ್ರಾಂತ್ಯಗಳಲ್ಲಿ ಕಸವುಬು ಮತ್ತು ಮೊಬುಟುರ ಅಧಿಕಾರ ಅಲ್ಪ ಸ್ವಲ್ಪವಿತ್ತು. ಲುಮುಂಬನ ಉಪಪ್ರಧಾನಿಯಾಗಿದ್ದ ಗಿಜೆಂಜೆಗೆ ಸ್ಟ್ಯಾನ್ಲಿವಿಲ್ನನ ಈಸ್ತ್ರಾನ್ ಮತ್ತು ಕೀವು ಪ್ರಾಂತ್ಯಗಳಲ್ಲೂ ಪ್ರಭವಿತ್ತು.ಷೋಂಬೆಕತಟಾಂಗ ಸ್ವತಂತ್ರ ರಾಜ್ಯದ ಆಧಿಪತಿಯೆಂದು 1960ರಲ್ಲಿ ಹೇಳಿಕೋಳ್ಳೂತ್ತಿದ್ದ.ದಕಿಣ ಕಾಸೈಯಲ್ಲಿದ ಅಲ್ಬೆರ್ಟ್ ಕಾಲೊಂಜಿಯೂ ತನ್ನ ಪ್ರತ್ಯೇಕತೆಯನ್ನು ವ್ಯಕ್ತಪಡಿಸುತ್ತಿದ್ದ.ಷೋಂಬೆಯದಂತೂ ಹೆಚ್ಚೆನ ತಕರಾರಾಗಿತ್ತು.ಬೆಲ್ಜಿಯನ್ ಸೇನೆ ನಿರ್ಗಮಿಸಿತ್ತಾದರೂ ಷೊಂಬೆಯ ಪಡೆಗಳಿಗೆ ಅದರದೇ ನಾಯಕತ್ವವಿತ್ತು. ಆ ಪ್ರಾಂತ್ಯದ ಗಣಿ ಕಂಪನಿಗಳ ಬೆಂಬಲವೂ ಅವನಿಗಿತ್ತು. ಬೆಲ್ಜಿಯಂ, ಬ್ರಿಟನ್ ಮತ್ತು ಫ್ರಾನ್ಸ್ಗಳ ಸಹಾನುಭೂತಿ ತನ್ನ ಕಡೆಗಿದೆಯಂಬುದು ಅವನ ಭರವಸೆ. ಅಧ್ಯಕ್ಷ ಕಸವುಬುವಿನ ಸಂಧಾನ ಫಲಿಸಲಿಲ್ಲ. ಅಂತರ್ಯುದ್ಡ ಆರಂಭವಾಯಿತು. ಲುಮುಂಬ ಕೊಲೆಗೀಡಾದ. ಷೋಂಬೆಯ ಅಧ್ಯಕ್ಷತೆಯಲ್ಲಿ ಕಟಾಂಗ ಸ್ವಲ್ಪಕಾಲ ಸ್ವತಂತ್ರವೆನಿಸಿಕೊಂಡಿತ್ತು.ಅಂತಯುದ್ಧವನ್ನು ಕೊನೆಗೊಳಿಸಿ ಕಾಂಗೋದಲ್ಲಿ ಶಾಂತಿಸ್ವತಂತ್ರ್ಯಗಳನ್ನು ಸ್ಠಪಿಸಲು ವಿಶ್ವಸಂಸ್ಥೆ ನಡುವೆ ಪ್ರವೆಶಿಸಿತು.

1965ರಲ್ಲಿ ಲೆ.ಜೆ.ಜೊಸೆಫ್ ಮೊಬುಟು ಪ್ರಬಲನಾದ.ಅವನಿಂದ ಕಸವುಬುವೇ ಆಧಿಕಾರ ಕಳೆದುಕೊಳ್ಳಬೇಕಾಯಿತು. ಸೈನಿಕ ವೃತಿಯ ಬಿಳಿಯರಿಂದ ಕೂಡಿದ ಸೇನೆಯ ಬಲದಿಂದ ಪೂರ್ವ ಪ್ರಾಂತ್ಯಗಳಲ್ಲಿ 1967ರಲ್ಲಿ ಮತ್ತೆ ಬಂಡಾಯ ನಡೆಸಿದುವು.ಕೊನೆಗೆ ಈ ಸೈನ್ಯ ರುವಾಂಡಕ್ಕೆ ಹಿಂದೆಗೆಯಲಾಗಿ ಕಾಂಗೋಗೆ ಶಾಂತಿ ಬಂತು .1968ರಲ್ಲಿ ಮಧ್ಯಾ ಅಫ಼್ರಿಕನ್ ಗಣರಾಜ್ಯ ಮತ್ತು ಚಾದ್ಗಳೊಂದಿಗೆ ಅರ್ಥಿಕ ಒಕ್ಕೊಟದ ಸ್ಥಪನೆಯಾಯಿತು.ಮಧ್ಯಾ ಅಫ಼್ರಿಕನ್ ಗಣರಾಜ್ಯ ಈ ಒಕ್ಕೊಟದಿಂದ ಅನಂತರವಾಪಸಾಯಿತು.

1967ರಲ್ಲಿ ಜನಮತಗಣನೆಯ ಆಧಾರದ ಮೇಲೆ ಜಾರಿಗೆ ಬಂದ ಸಂವಿಧಾನದ ಪ್ರಕಾರ ಅಲ್ಲಿ ಅಧ್ಯಕ್ಷಿಯ ಆಡಳಿತಕ್ಕೆ ಅವಕಾಶ ಕಲ್ಪಿಸಲಾಯಿತು. ಸಾರ್ವತ್ರಿಕ ಚುನಾವನೆಯ ಮೂಲಕ ವಿಧಾನ ಸಭೆಯನ್ನು ರಚಿಸಲಾಗುತ್ತದೆ.ರಾಷ್ಟ್ರದ ಅಧ್ಯಕ್ಷನಿಗೆ ವಿಪುಲಾಧಿಕಾರವುಂಟು. ಕಾಂಗೋದಲ್ಲಿ ಹತ್ತು ಪ್ರಾಂತ್ಯಗಳಿವೆ.ಅವುಗಳೆಂದರೆ,(ರಾಜಧಾನಿ ಕೀನ್ಷಾಸವನ್ನೊಳಗೊಂಡ ಸಂಯುಕ್ತ ಜಿಲ್ಲೆ),ಬಂಡುಂಡು ಬಾಸ್ಕಾಂಗೋ,ಈಕ್ವೇಟರ್,ಪಶ್ಛಿಮ ಕಸಾಯಿ,ಕಟಂಗ,ಮನಿಯೆಮೆ,ನಾರ್ಡ್-ಕಿವು,ಓರಿಯೆಂಟಲ್,ಸುದ್-ಕಿವು.೧೯೬೬ರಲ್ಲಿ ಅಲ್ಲಿಯ ಅನೇಕ ಪಟ್ಟಣಗಳ ಐರೋಪ್ಯ ನಾಮಗಳನ್ನು ತೆಗೆದು ಹಾಕಿ ವ್ಕ್ಕೆ ದೇಶೀಯ ಹೆಸರುಗಳನ್ನು ಇಡಲಾಯಿತು.ಲೀಯೋಪೋಲ್ಡ್ವಿಲ್ ಎಂಬುದು ಕೀನ್ಷಾಸ ಆಯಿತು.ಎಲಿಸಬೆತ್ವಿಲ್ನ ಈಗ ಮಾಬಂಡಾಕ ಎಂದು ಕರೆಯಲಾಗುತ್ತಿದೆ.ಈಗಿನ ಇಸಿರೋ ಹಿಂದೆ ಪಾಲಿಸ್ ಆಗಿತ್ತು.ಬ್ಯಾನಿಂಗ್ವಿಲ್ನ ಹೆಸರನ್ನು ತೆಗೆದುಹಾಕಿ ಅದಕ್ಕೆ ಪ್ರತಿಯಾಗಿ ಬಾಂಡುಂಡು ಎಂದು ನಾಮಕರಣ ಮಾಡಲಾಗಿದೆ.ಮತ್ತಿತರ ಪ್ರಮುಖ ಪಟ್ಟಣಗಳೆಂದರೆ ಬೋಮ,ಬುಕಾವು,ಕಾಮಿನ,ಕನಂಗ,ಕೋಲ್ವೇಜಿ,ಲಿಕಾಸಿ,ಮಟಾಡಿ,ಮಬುಜಿಮಾಯಿ