ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೀಟೋನುಗಳು ಸಾವಯವ ಆಮ್ಲಗಳನ್ನು ವೇಗವರ್ಧಕಗಳ ಸಾನ್ನಿಧ್ಯದಲ್ಲಿ ಉಷ್ಣಕ್ರಿಯೆಗೆ (ಪೈರೊಲಿಸಿಸ್) ಒಳಪಡಿಸಿದಾಗ ಕೀಟೋನುಗಳ ಸೃಷ್ಡಿಯಾಗುತ್ತದೆ.೪೦೦-೪೫೦ ಸೆಂ ಉಷ್ಣತೆಯಲ್ಲಿರುವ ಥೋರಿಯಂ ಆಕ್ಸೈಡಿನ ಮೇಲೆ ಆಮ್ಲಗಳನ್ನು ಹಾಯಿಸಿ ಈ ಕ್ರಿಯೆಯಲ್ಲಿ ಸಾಧಿಸಬಹುದು. ಎರಡು ಆಮ್ಲಗಳ ಮಿಶ್ರಣವನ್ನು ಉಪಯೋಗಿಸಿ ಮಿಶ್ರ ಕೀಟೋನುಗಳನ್ನುಈ ಕೆಳಗೆ ತೋರಿಸಿರುವ ಸಮೀಕರಣಕ್ಕೆ ಅನುಗುಣವಾಗಿ ತಯಾರಿಸಬಹುದಾದರೂ ಅದೇ ಸಮಯದಲ್ಲಿ ಸರಳ ಕೀಟೋನುಗಳ ಸೃಷ್ಟಿಯೂ ಆಗುವುದರಿಂದ ಮಿಶ್ರ ಕೀಟೋನುಗಳ ಉತ್ಪತ್ತಿ ಕಡಿಮೆ ಇರುತ್ತದೆ.

ಸಾವಯವ ಆಮ್ಲಗಳಿಂದ ಕೀಟೋನುಗಳನ್ನು ತಯಾರಿಸುವ ಮತ್ತೊಂದು ವಿಧಾನವು ಬಳಕೆಯಲ್ಲಿದೆ. ಸಾವಯವ ಆಮ್ಲಗಳಾ ಕ್ಯಾಲ್ಶಿಯಂ ಲವಣಗಳನ್ನು ಉಷ್ಣಕ್ರಿಯೆಗೆ ಒಳಪಡಿಸಿ ಬಟ್ಟೆಯಿಳಿಸಿದಾಗಲೂ ಕೀಟೂಣುಗಳ ಉತ್ಪತ್ತಿಯಾಗುತ್ತದೆ.

ಎರಡು ಬಗೆಯ ಆಮ್ಲಗಳ ಲವಣಗಳನ್ನು ಒಟ್ಟಿಗೆ ಉಪಯೋಸಿದಾಗ ಸರಳ ಕೀಟೋನುಗಳೊಡನೆ ಅಲ್ಪ ಪ್ರಮಾಣದಲ್ಲಿ ಮಿಶ್ರ ಕೀಟೋನುಗಳ ಉತ್ಪಾದನೆಯೂ ಆಗುತ್ತದೆ.

ಗ್ರಿನಾರ್ಡ್ ಅಥವಾ ಮತ್ತಿತರ ಸವಾಯವ ಲೋಹ ಸಂಯುಕ್ತಗಳನ್ನು ಉಪಯೋಗಿಸಿ ಸರಳ ಅಥವಾ ಮಿಶ್ರ ಕೀಟೋನ್ನುಗಳನ್ನು ತಯಾರಿಸಬಹುದು. ಈ ಬಗೆಯ ತಯಾರಿಕೆಗಳನ್ನು ಕೆಳಗೆ ಸಮೀಕರಣಗಳಿಂದ ನಿರ್ದೇಶಿಸಬಹುದು.

ಎಸ್ಟರುಗಳು ಪಟು (ಆಕ್ಟಿವ್) ಜಲಜನಕವನ್ನುಳ್ಳ ಇತರ ಸಂಯುಕ್ತಗಳೊಡನೆ ಸಂಯೋಗಿಸಿದಾಗ ಕೀಟೋನುಗಳ ಸೃಷ್ಟಿಯಾಗುತ್ತದೆ. ಈ ಬಗೆಯ ಕೀಟೋನ್ ಸಂಯೋಜನೆಯ ನಿದರ್ಶಾವಾಗಿ ಕೆಳಗಿರುವ ಸಮೀಕರಣವನ್ನು ಬರೆಯಲಾಗಿದೆ.

(ಕಾರ್ಬೊನಿಲ್ ಪುಂಜದ ಪಕ್ಕದಲ್ಲಿರುವ ಇಂಗಾಲಕ್ಕೆ ಸೇರಿದ ಜಲಜನಕ ಪಟುವಾದುದು. ಮೇಲಿನ ಪಕ್ಕದಲ್ಲಿರುವ ಪಟುಜಲಜನಕವನ್ನು ಕೆಳಗೆ ಗೆರೆ ಹಾಕಿ ತೋರಿಸಿದೆ.) ಈ ವಿಧಾನವನ್ನು ಸಾವಯವ ಲೋಹ ಸಂಯುಕ್ತಗಳನ್ನು ಉಪಯೋಗಿಸುವ ವಿಧಾನಗಳನ್ನು ಅನೇಕ ಸಂಕೀರ್ಣ (ಕಾಂಪ್ಲೆಕ್ಸ್) ಸಾವಯವ ಸಂಯೋಜನೆಯಲ್ಲಿ ಉಪಯೋಗಿಸಲಾಗಿದೆ.

1. ಕಾರ್ಬೊನಿಲ್ ದ್ವಿಬಂಧಕ್ಕೆ ಎರಡು ಜಲಜನಕದ ಪರಮಾಣುಗಳು ಸೇರಿದರೆ ಎರಡನೆಯ ವರ್ಗದ ಆಲ್ಕೊಹಾಲಿನ ಉತ್ಪತ್ತಿಯಾಗುತ್ತದೆ. ಈ ಹೈಡ್ರೋಜನೀಕರಣ ಅಥವಾ ಅಪಕರ್ಷಣವನ್ನು ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್, ಸೋಡಿಯಂ ಬೋರೋ ಹೈಡ್ರೇಟ್ ಅಥವಾ ಸೋಡಿಯಂ ಆಲ್ಕೊಹಾಲ್ ಮಿಶ್ರಣಗಳಂತ ಅಪಕರ್ಷಣಕಾರಿಗಳನ್ನು ಉಪಯೋಗಿಸಿ ಸಾಧಿಸಬಹುದು. ಇಲ್ಲವಾದರೆ ವೇಗವರ್ಧಕಗಳ ಸಾನ್ನಿಧ್ಯದಲ್ಲಿ ಜಲಜನಕವನ್ನಾದರೂ ಉಪಯೋಗಿಸಬಹುದು. ಒಟ್ಟಿನಲ್ಲಿ ಅಪಕರ್ಷಣಾಕ್ರಿಯ ಈ ಸಮೀಕರಣಾಕ್ಕೆ ಅನುಗುಣವಾಗಿರುತ್ತದೆ.

ಮತ್ತೊಂದು ಬಗೆಯ ಅಪಕರ್ಷಣದಿಂದ ಕೀಟೋನುಗಳ ಆಮ್ಲಜನಕವನ್ನು ನಿವಾರಿಸಿ ಕಾರ್ಬೋನಿಲ್ ಪುಂಜ ಪೂರ್ಣವಾಗಿ ನಾಶವಾಗುವಂತೆ ಮಾಡಬಹುದು. ಇದನ್ನು ಸಾಧಿಸಲು ಎರಡು ಬಗೆಯ ಅಪಕರ್ಷಣದಲ್ಲಿ ಅಮಾಲ್ಗಂ ಮಾಡಿದ ಸತು ಮತ್ತು ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣವನ್ನು ಅಪಕರ್ಷಣಕಾರಿಯಾಗಿ ಉಪಯೋಗಿಸಲಾಗುತ್ತದೆ.

ವುಲ್ಫ್-ಕಿಪ್ನರ್-ಹ್ವಾಂಗ್- ಮಿನ್ಲಾನ್ ವಿಧಾನದಲ್ಲಿ ಪೊಟ್ಯಾಸಿಯಂ ಹೈಡ್ರಾಕ್ಸೈಡಿನ ಸಾನ್ನಿಧ್ಯದಲ್ಲಿ ಹೈಡ್ರಜೀನ್ನನ್ನು ಅಪಕರ್ಷಕವಾಗಿ ಉಪಯೋಗಿಸಲಾಗುತ್ತದೆ. ಅಪಕರ್ಷಣಾ ಈ ಸಮೀಕರಣಕ್ಕನುಗುಣವಾಗಿ ಆಗುತ್ತದೆ.

ಈವರೆಗೆ ತಿಳಿಸಿರುವ ಎಲ್ಲಾ ಅಪಕರ್ಷಣ ವಿಧಿಗಳಾನ್ನು ರಸಾಯನಿಕ ಸಂಯೋಜನೆಗಳಲ್ಲಿ ಧಾರಾಳಾವಾಗಿ ಉಪಯೋಗಿಸಲಾಗುತ್ತಿದೆ.

ಅನೇಕ ಕೀಟೋನುಗಳಿಗೆ ಹೈಡ್ರೋಜನ್ ಸಯನೈಡಿನೊಡನೆ ಸಂಕಲನ ಸಾಧ್ಯ ಕಾರ್ಬೊನಿಲ್ ಪುಂಜಕ್ಕೆ ಹೈಡ್ರೋಜನ್ ಸಯನೈಡ್ ಸಂಕಲನಗೊಂಡಾಗ ಸಯನೋಹೈಡ್ರಿನುಗಳ ಸೃಷ್ಟಿಯಾಗುತ್ತದೆ ಇವುಗಳಿಂದ ಅನೇಕ ಸಾವಯವ ಆಮ್ಲಗಳನ್ನು