ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗ್ರೆಸ್, ಭಾರತ ರಾಷ್ಟ್ರೀಯ ಬಂಗಾಳದಲ್ಲೆಲ್ಲ ಚಳವಳಿ, ಹರತಾಳಗಳ ಪ್ರತಿಭಟನೆಯ ವಾತಾವರಣ ಹರಡಿತು. ಭಾರತದ ಎಲ್ಲ ಪ್ರಾಂತ್ಯಗಳಿಗೂ ಹಬ್ಬಿತು. ಇದರೊಂದಿಗೆ ರಾಷ್ಟ್ರೀಯತಾ ಪ್ರಜ್ನೆಯೂ ಬೆಳೆಯಿತು. ಲೋಕಮಾನ್ಯ್ ತಿಲಕ್, ಸುರೇಂದ್ರನಾಥ್ ಬ್ಯಾನರ್ಜಿ ಮುಂತಾದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ೧೯೦೫ ರಿಂದ ೧೯೦೮ ರವರೆಗೆ ಬಂಗಾಳ ವಿಭಜನೆಯನ್ನು ವಿರೋಧಿಸುವ ಉಗ್ರ ಆಂದೋಲನವೆದ್ದಿತು. ಕಾಂಗ್ರೆಸ್ ಸಂಸ್ಥೆ ಜನಪ್ರಿಯತೆಗಳಿಸಿ ರಾಷ್ಟ್ರೀಯ ಸಂಸ್ಥೆಯಾಯಿತು. ಕ್ಶೋಭೆಯನ್ನು ತಡೆಯಿಡಿಯಲು ಬ್ರಿಟಿಷರು ೧೯೦೯ರಲ್ಲಿ ಮಾರ್ಲೆ-ಮಿಂಟೋ ಸುಧಾರಣೆಗಳನ್ನು ನೀಡಿದರು. ಆದರೆ ಈ ಸುಧಾರಣೆಯಲ್ಲೇ ಪಾಕಿಸ್ತಾನದ ಬೀಜಾವಾಪನೆಯಾಗಿತ್ತು. ಇದರಲ್ಲಿ ಮುಸಲ್ಮಾನರಿಗೆ ಪ್ರತ್ಯೇಕ ಚುನಾವಣಾ ಸೌಲಭ್ಯವನ್ನು ಕೊಡಲಾಗಿತ್ತು. ಇದರ ಪರಿಣಾಮವಾಗಿ, ದೇಶದಲ್ಲಿ ತೃಪ್ತಿಗಿಂತ ಅತೃಪ್ತಿಯೇ ಹೆಚ್ಚಿತು. ೧೯೦೭ರಲ್ಲಿ ಸೂರತಿನಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವವೇಶನದಲ್ಲಿ ಮುಂದಾಳುಗಳಲ್ಲಿ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದುವು. ಸಂಸ್ಥೆಯ ಚಟುವಟಿಕೆಗಳು ಅಷ್ಟೊಂದು ಸುಗಮವಾಗಿರಲಿಲ್ಲ. ಅಸಹಕಾರ, ಕಾನೂನು ಭಂಗ: ಒಂದನೆಯ ಮಹಾಯುದ್ಧದಲ್ಲಿ ಕಾಂಗ್ರೆಸ್ ಬ್ರಿಟಿಷರಿಗೆ ಬೆಂಬಲ ನೀಡಿತು. ಅದರ ಪ್ರತಿಫಲವಾಗಿ ಮತ್ತು ಅಸಂತುಷ್ಟ ಭಾರತೀಯರನ್ನು ತೃಪ್ತಿಪಡಿಸಲೆಂದು ಬ್ರಿಟಿಷ್ ಪಾರ್ಲಿಮೆಂಟ್ ೧೯೧೯ರಲ್ಲಿ ಸುಧಾರಣಾ ಕಾಯಿದೆಯೊಂದನ್ನು ಭಾರತಕ್ಕೆ ನೀಡಿತು. ಈ ಕಾಯಿದೆ ನಾಡಿನ ಜನರನ್ನು ಮತ್ತು ಕಾಂಗ್ರೆಸಿಗರನ್ನು ತೃಪ್ತಿಪಡಿಸಲಿಲ್ಲ. ಆಳರಸರ ಸಾಮ್ರಾಜ್ಯಷಾಹಿ ಯುದ್ಧಕ್ಕೆ ತಮ್ಮ ನೈತಿಕ ಹಾಗೂ ಭೌತಿಕ ಸಹಾಯ ನೀಡಿದ ಜನತೆಯ ಆಶೆಯನ್ನು ಈ ಸುಧಾರಣೆಯ ಕಾಯಿದೆ ಈಡೇರಿಸಲಿಲ್ಲ. ಜನ ಇದರ ವಿರುದ್ಧವಾಗಿ ಕಾಂಗ್ರೆಸಿನ ನೇತೃತ್ವದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. ೧೯೧೯ರಲ್ಲಿ ಪಂಜಾಬ್ ಪ್ರಾಂತದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದಾಗಿ ನೂರಾರು ಚಳುವಳಿಗಾರರು ಹುತಾತ್ಮರಾದರು.ಇದರಿಂದ ದೇಶಾದ್ಯಂತ ಜನ ಬ್ರಿಟಿಷ್ ಸರ್ಕಾರದ ವಿರುದ್ಧ ಸಿಡಿದೆದ್ದರು. ಕಾಂಗ್ರೆಸ್ ಪಕ್ಷದ ಸಂಘಟನೆ ಪ್ರಬಲವಯಿತು. ಆವೇಳೆಗೆ ಕಾಂಗ್ರೆಸಿನ ಚಾಲಕರಲ್ಲಿ ಗಾಂಧೀಜಿ ಹಿರಿಯಸ್ಥಾನ ದೊರಕಿಸಿಕೊಂಡಿದ್ದರು. ದಕ್ಷಿಣ ಆಫ್ರಿಕದಂತೆ ಭಾರತದಲ್ಲೂ ಅಸಹಕಾರ ಮತ್ತು ಕಾನೂನು ಭಂಗ ಚಳವಳಿಗೆ ಸರಿಯಾದ ವಾತಾವಾರಣದೆ ಎಂಬುದನ್ನರಿತ ಗಾಂಧೀಜಿ ಕಾಂಗ್ರೆಸಿನ ಆಶ್ರಯದಲ್ಲಿ ಅಸಹಕಾರ ಚಳವಳಿ ಪ್ರಾಂಭಿಸಿದರು.ಅಸಹಕಾರ ಚಳವಳಿಯ ಗೊತ್ತುವಳಿಯನ್ನು ಸ್ವೀಕರಿಸಲಾದದ್ದು ೧೯೨೦ರಲ್ಲಿ, ಕಲ್ಕತ್ತದಲ್ಲಿ ಕರೆದ ಕಾಂಗ್ರೆಸ್ ವಿಶೇಷ ಅಧೀವೆಶನದಲ್ಲಿ. ಅದರ ಪ್ರಕಾರ ಶಾಸನಸಭೆ, ಶೈಕ್ಷಣಿಕ ಕ್ಷೇತ್ರ, ಕೋರ್ಟು, ಕಚೇರಿ ಮುಂತಾದವುಗಳಿಗೆ ಬಹಿಷ್ಕಾರ ಹಾಕಲಾಯಿತು. ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಕೈಕೊಂಡ ದಮನನೀತಿ ಜನತೆಯನ್ನು ರೊಚ್ಚಿಗೆಬ್ಬಿಸಿತು. ಇದಲ್ಲದೆ ಬ್ರಿಟಿಷರು ಒಂದನೆಯ ಮಹಾಯುದ್ಧದಲ್ಲಿ ತುರ್ಕಿಗೆ ಮಾಡಿದ ಅನ್ಯಾಯ ಭಾರತೀಯ ಮುಸಲ್ಮಾನರನ್ನು ಕೆರಳಿಸಿತ್ತು. ಹೀಗಾಗಿ ಭಾರತದ ಹಿಂದೂ ಮುಸ್ಲಿಮರು ಏಕತೆಯಿಂದ ಬ್ರಿಟಿಷರನ್ನು ಪ್ರತಿಭತಿಸಿದರು. ಕಾಂಗ್ರೆಸ್ ಬ್ರಿಟಿಷ್ ಪ್ರಭುತ್ವವನ್ನು ಅಲುಗಾಡಿಸುವ ದೃಷ್ಟಿಯಿಂದ ಮುಸಲ್ಮಾನರಿಗೆ ಪ್ರಿಯವಾದ ಖಿಲಾಫತ್ ಚಳವಳಿಗೆ ಬೆಂಬಲ ನೀಡಿತು. ಇದರಿಂದ ಹಿಂದೂ ಮುಸ್ಲಿಂ ಐಕ್ಯವಾಯಿತಾಗಿ ಬ್ರಿಟಿಷರು ಅಂಜಿದರು. ಆದರೆ ಇದು ತಾತ್ಕಾಲಿಕ ಐಕ್ಯ. ಅನಂತರ ೧೯೨೧ರ ಅಧಿವೇಶನದಲ್ಲಿ ಅಸಹಕಾರದೊಡನೆ ಕಾನೂನು ಭಂಗ ಚಳವಳಿಯನ್ನು ಪ್ರಾರಂಭಿಸಬೇಕೆಂದು ನಿರ್ಣಯವೊಂದನ್ನು ಕಾಂಗ್ರೆಸ್ ಸ್ವೀಕರಿಸಿತು. ತಮ್ಮ ಪ್ರಭುತ್ವವನ್ನೇ