ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುಸ್ತಿ ಭುಜಗಳೂ ಏಕಕಾಲದಲ್ಲಿ ಮಣ್ಣಿಗೆ ತಗಲುವಂತೆ ಆತ ಆಂಗಾತವಾಗಿ ಬೀಳಬೇಕು.ಹೀಗೆ ಕುಸ್ತಿಯ ಸೋಲು ಗೆಲುವುಗಳು ನಿರ್ಧಾರವಾಗುತ್ತವೆ. ಕುಸ್ತಿ ವೈಯಕ್ತಿಕ ಕ್ರೀಡೆಗಳಲ್ಲಿ ಅತ್ಯುತ್ತಮವಾದುದು.ಓಡುವ ಪಂದ್ಯದಲ್ಲಿ ಸ್ಪರ್ಧಿ ತನ್ನ್ ಶಕ್ತಿ,ಓಡುವ ಪಂದ್ಯದಲ್ಲಿ ಸ್ಪರ್ಧಿ ತನ್ನ ಶಕ್ತಿ, ಓಡುವ ರೀತಿ, ತಾನು ಅದುವರೆಗೆ ಮಾಡಿದ ಅಭ್ಯಾಸ ಇವುಗಳ ಆಧಾರದ ಮೇಲೆ ತನ್ನ ಪಾಡಿಗೆ ತಾನು, ಕೈಲಾದಷ್ಟು ಪ್ರಯತ್ನ ಮಾಡಿ, ಓಡಿ ಜಯಗಳಿಸುತ್ತಾನೆ. ಕುಸ್ತಿಮಾಡುವವನು ತನ್ನ ವೈಯಕ್ತಿಕ ಶಕ್ತಿ, ತನ್ನ ಕುಸ್ತಿಮಾಡುವ ರೀತಿ, ಬಳಸುವ ಪಟ್ಟುಗಳು, ಮಾಡಿದ ಸಾಧನೆ- ಇವುಗಳ ಆಧಾರದ ಮೇಲೆ ಜಯಗಳಿಸುತ್ತಾನಾದರೂ ಇವೆಲ್ಲವುಗಳ ಜೊತೆಗೆ ತನ್ನ ಎದುರಾಳಿಯ ಶಕ್ತಿಯನ್ನು ಉಪಯೋಗಿಸಿಕೊಡು ಹಾಕಿದ ಪಟ್ಟೇ ಅವನಿಗೆ ಮುಳುವಾಗುವಂತೆ ತೋಡು ಮಾಡಿ ಎದುರಾಳಿಯನ್ನು ಕೆಡವಿ ಜಯಗಳಿಸುತ್ತಾನೆ.

ಸಾಧನೆಯ ಅವಶ್ಯಕತೆ: ಕುಸ್ತಿ ಮಾಡುವವನು ನಾಲ್ಕು ಮುಖ್ಯವಾದ ಅಂಶಗಳನ್ನು ಗಮನದಲ್ಲಿಡಬೇಕು: 1ಶಕ್ತಿ, 2 ದಮ್ಮುಕಸ್ತು(ದಮ್ಮು ಮುರಿಯುವುದು), 3 ಪಟ್ಟುಗಳು ಅಥವಾ ಡಾವುಗಳು, 4 ಚತುರತೆ. ಈ ನಾಲ್ಕು ಅಂಶಗಳಲ್ಲಿ ಒಂದಿಲ್ಲದೆ ಹೋದರೂ ಜಯಗಳಿಸುವುದು ಕಷ್ಟವಾಗುತ್ತದೆ. ಕುಸ್ತಿ ಮಾಡುವವನಿಗೆ ದಮ್ಮಕಸ್ತು ತುಂಬಾ ಅಗತ್ಯವಾದದ್ದು. ದಮ್ಮನ್ನು ಮುರಿಯಲು ಅಂಗಸಾಧನೆ ಮಾಡಬೇಕಾಗುತ್ತದೆ. ಎಷ್ಟು ಹೊತ್ತು ವ್ಯಾಯಾಮ ಮಾಡಿದರೂ ಏದುಸಿರು ಬರದಂತೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಖಾಡಕ್ಕಿಳಿದ ಒಂದೆರಡು ನಿಮಿಷಗಳಲ್ಲೇ ವ್ಯಕ್ತಿ ಸುಸ್ತು ಬೀಳಬೇಕಾಗುತ್ತದೆ. ಮೈಸೂರು ಮಟ್ಟಿ= ಗರಡಿಯಲ್ಲಿನ ಮಣ್ಣಿನಂಗಳ ಅರಸರಾದ ಕಂಠೀರವ ನರಸಿಂಹರಾಜ ಒಡೆಯರನ್ನು ಇಲ್ಲಿ ನೆನೆಯಬಹುದು. ಅವರು ಕುಸ್ತಿ ಪಟ್ಟುಗಳಿಗೆ ಆಶ್ರಯದಾತರಾಗಿದ್ದುದಲ್ಲದೆ. ಸ್ವಯಂ ಕುಸ್ತಿ ಪಟುಗಳಾಗಿದ್ದು, ದಮ್ಮು ಮುರಿಯಲು ಪ್ರತಿ ದಿವಸ ಬೆಳಗಿನ ಜಾವ ಹೆಗಲಮೇಲೆ ಎಮ್ಮೆಕರುವನ್ನು ಹೊತ್ತುಕೊಂಡು ಚಾಮುಂಡಿ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರಂತೆ. ಕುಸ್ತಿಯನ್ನು ಮಾಡಲು ಮಟ್ಟಿಯನ್ನು ಪ್ರವೇಶಿಸುವ ಮೊದಲು ಹೊಸಬನಾದವ ಸಾಕಷ್ಟು ಅಂಗ ಸಾಧನೆ ಮಾಡಿದ್ದು ದಮ್ಮು ಮುರಿದು, ತನ್ನ ದೇಹ ಸಾಮರ್ಥ್ಯ ಹೆಚ್ಚಿಸಿಕೊಂಡಿರಬೇಕು. ಅನಂತರವೇ ಕುಸ್ತಿ ಮಾಡಲು ಮಟ್ಟಿಯ ಪ್ರವೇಶ ಮಾಡಬೇಕು. ಇದಕ್ಕಾಗಿ ಬಸ್ಕಿ ಹೊಡೆಯುವುದು, ದಂಡೆ ಹೊಡೆಯುವುದು, ಓಡುವುದು, ಮೆಟ್ಟಲು ಹತ್ತಿ ಇಳಿಯುವುದು, ಭಾರವಾದ ವಸ್ಥುವನ್ನು ಕೈಯ್ಯಿಂದ ತಿರಿಗಿಸುವುದು. ಮಟ್ಟಿ ಕುರಾಯಿಸುವುದು, ಕುತ್ತಿಗೆಗೆ ಶಕ್ತಿ ಬರುವ ಸಲುವಾಗಿ ಕತ್ತು ತಿರುಗಿಸುವುದು, ಏಟು ತಿನ್ನುವುದು ಮತ್ತು ತೊಡೆಗಳಿಗೆ ಶಕ್ತಿ ಮತ್ತು ಬಿಗಿ ಬರಲು ಕಂಬ ಕಟ್ಟುವುದು ಮುಂತಾದ ಅಂಗಸಾಧನೆಗಳನ್ನು ಅಳವಡಿಸಲಾಗಿದೆ. ಎಲ್ಲಾ ಕುಸ್ತಿ ಪಟ್ಟುಗಳೂ ಅಭ್ಯಾಸ ಕಾಲದಲ್ಲಿ ಮೈಗೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಹುಜ್ಜಿಕೊಂಡು ಸಾಧನೆ ಮಾಡುತ್ತಾರೆ. ಇದು ದೇಹದ ಮಾಂಸಖಂಡಗಳನ್ನು ಸಡಿಲಗೊಳಿಸಿ, ಕುಸ್ತಿ ಮಾಡಲು ಅನುಕೂಲವನ್ನು ಉಂಟುಮಾಡುತ್ತದಲ್ಲದೆ, ಚರ್ಮವನ್ನು ಮೃದುಗೊಳಿಸಿ, ಕಾಂತಿಯುಕ್ತವನ್ನಾಗಿಸುತ್ತದೆ.

ಮಟ್ಟಿಯ ತಯಾರಿ: ಪ್ರತಿಯೊಂದು ಗರಡಿ ಮನೆಯ್ತಲ್ಲಿನ ಮಟ್ಟಿಯೂ ಕೆಂಪುಮಣ್ಣಿನಿಂದ ಕೂಡಿರುತ್ತದೆ. ಇದರ ಜೊತೆಗೆ ಕುಂಕುಮ ಕೇಸರಿಗಳನ್ನೂ ಇನ್ನೂ ಅನೇಕ ಔಷಧ ವಸ್ತುಗಳನ್ನೂ ಹಾಕಿ ಆರೋಗ್ಯದಾಯಕವನ್ನಾಗಿ ಮಾಡಿರುತ್ತಾರೆ. ಅಲ್ಲದೆ ಈ ಮಣ್ಣು ಪೂತಿನಾಶಕವಾಗಿರುತ್ತದೆ. (ಆಂಟಿಸೆಪ್ಟಿಕ್). ಕುಸ್ತಿ ಮಾಡುವಾಗ, ಯಾವ ಪೈಲ್ವಾನನಿಗಾದರೂ ಕೈ, ಕಾಲು, ಮಂಡಿ ಗಾಯವಾಗಿರುವ ಸ್ಥಳಕ್ಕೆ ಮೆತ್ತುತ್ತಾನೆ. ಕುಸ್ತಿಮಾಡಿದ ಮೇಲೆ ಕುಸ್ತಿಪಟು ಮಟ್ಟಿಯನ್ನು ಆಳವಾಗಿ ತೋಡಿ, ಅದರೊಳಕ್ಕೆ ಮಲಗಿ ಕತ್ತಿನವರೆಗೆ ಮಣ್ಣು ಮುಚ್ಚಿಕೊಂಡು ಮುಖಭಾಗವನ್ನು ಮಾತ್ರ ಹೊರಗೆ ಬಿಟ್ಟು ಸ್ವಲ್ಪ ಕಾಲ ಕಳೆಯುತ್ತಾನೆ.