ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಕಸಸ್ (೪೫೮೦ಮೀ.).ಪರ್ವತಾರೋಹಿಗಳು ಹೆಚ್ಚಾಗಿ ಹತ್ತುವ ಶಿಖರಗಳು ಕಾಸ್ಬೆಕ್ ಮತ್ತು ಎಲ್ ಬುರ್ಜಿ. ಪ್ರಧಾನ ಪರ್ವತಶ್ರೇಣಿಯ ತುದಿ ೩೦೩೦ ಮೀಗಳಿಗೆ ಎರಿದರೂ ಅದರ ಉಪಶ್ರೇಣಿಯಾದ ಬೊಕೊವೊಯ್ ಖ್ರಿಬೆಟ್ ಅದಕಿಂತಲೂ ಎತ್ತರವಾಗಿದೆ. ಬೊಕೊವೊಯ್ ಪರ್ವತಸಾಲಿನಲ್ಲಿ ಬೆಟ್ಟಗಳು ಅಂತಸ್ತು-ಅಂತಸ್ತುಗಳಾಗಿ ರಚಿತವಾಗಿ ಅನೇಕ ಚಾಚುಗಳಿಂದ ಕೂಡಿವೆ.ನಡುವೆ ಕಡಿದಾಗಿರುವ ಕಂದರಗಳಲ್ಲಿ ಹಿಮನದಿಗಳು ಇಳಿದು,ಸುಲಭವಾಗಿ ಹರಿಯಲು ಅವಕಾಶವುಂಟಾದ ಕೂಡಲೆ ಆಳವಾದ ಕಮರಿಗಳಲ್ಲಿ ಪ್ರವಹಿಸಿ,ಉತ್ತರದ ಇಳುಕುಗಳಲ್ಲಿ ಸರಿದು,ಟೆರಿಕ್ ಅಥವಾ ಕೂಬ್ಯಾನ್ ನದಿಯನ್ನು ಸೇರುತ್ತವೆ;ಕೆಲವು ಹಿಮನದಿಗಳು ದಕ್ಷಿಣದ ಇಳಿಮೇಡಿನಲ್ಲಿ ಹರಿದು,ರಿಯಾನ್ ಅಥವಾ ಕೂರಾನದಿ ಸೆರುತ್ತವೆ.ಮೇಲ್ಮಟ್ಟದ ಒತ್ತಾದ ಕಣಿವೆಗಳಲ್ಲಿ ಸರೋವರಗಳಾಗಲಿ,ಜಲಪಾತಗಳಾಗಲಿ ಕಾಣಬರುವುದಿಲ್ಲ.ತಳಭಾಗದ ಕಣಿವೆಗಳಲ್ಲಿ ಸಹ ಸ್ವಿಟ್ಜರ್ಲೆಂಡಿನಲ್ಲಿರುವಂತೆ ಯಾವ ಸರೋವರಗಳೂ ಇಲ್ಲ.ಈ ಭಾಗದ ಅತ್ಯುನ್ನತ ಶಿಖರಗಳು ಪ್ರಧಾನ ಪಂಕ್ತಿಯನ್ನು ಸೇರಿಸುವ ಕಿರಿಯ ಪರ್ವತಚಾಚುಗಳಲ್ಲಿವೆ. ಮಧ್ಯ ಕಾಕಸಸ್ ಪರ್ವತದ ಪಶ್ಚಿಮಭಾಗದಲ್ಲಿ ೨೮೭೯-೩೦೩೦ಮೀ ಎತ್ತರದಲ್ಲಿ ನಿರಂತರ ಹಿಮಕವಚವುಂಟು.ದಕ್ಷಿಣಮುಖದಲ್ಲೊ ಹಿಮರೇಖೆ ಇರುವುದು. ಇನ್ನೂ ಎತ್ತರದ ಈ ಭಾಗದಲ್ಲಿ ೯೦೦ ಹಿಮನದಿಗಳು ಸರಿದು ಬರುತ್ತವೆ. ಅವು ಸಮುದ್ರಮಟ್ಟಕ್ಕೆ ನಿರ್ದಿಷ್ಟವಾದೊಂದು ಎತ್ತರದ ವರೆಗೆ ಹೆಪ್ಪುಗಟ್ಟಿದ್ದು ಅಲ್ಲಿಂದ ಕೆಳಕ್ಕೆ ಬಂದಾಗ ಕರಗಿ ಹರಿಯುತ್ತವೆ.ಇಲ್ಲಿಯ ಹಿಮನದಿಗಳ ಪೈಕಿ ಬೆಂಜಿಂಗ್ ಅಥವಾ ಉಲ್ಲುವಿನ ಉದ್ದ ೧೭ ಕಿಮೀ; ಸಮುದ್ರಮಟ್ಟಕ್ಕೆ ೧೯೮೧ ಮೀವರೆಗೆ ಇಳಿಯುತ್ತದೆ.ಲೆಕ್ಸೈರ್ ೧೨ಕಿಮೀ;೧೭೨೪ ಮೀ ಮಟ್ಟಕ್ಕಿ ಇಳಿಯುತ್ತದೆ.ಸೈಯ ಅಧವಾ ಜೆ ೧೦ಕಿಮೀ; ೨೦೩೯ ಮೀ ಮಟ್ಟಕ್ಕೆ ಇಳಿಯುತ್ತದೆ.ಕಾರಗೊಂ ೧೫ ಕಿಮೀ; ೧೭೫೪ ಮೀ ಮಟ್ಟಕ್ಕೆ ಇಳಿಯುತ್ತದೆ.ಡೈವಡೋರಕ್ ೪ಕಿಮೀ;೨೨೮೨ ಮೀ ಮಟ್ಟಕ್ಕೆ ಸರಿದುಬರುತ್ತದೆ. ಬಾಲ್ಡ್ ಅಥವಾ ಗೆರೆಷೋ ೭ ಕಿಮೀ; ಟುಯ್ಬರ್ ೧೦ ಕಿಮೀ; ೧೯೮೯ಮೀ ಮಟ್ಟಕ್ಕೆ ಇಳಿಯುತ್ತದೆ.ಸನ್ಸರ್ ಅಥವಾ ಜನ್ನೆರ್ ೧೦ ಕಿಮೀ; ೨೦೬೨ ಕಿಮೀ ಎತ್ತರದ ವರೆಗೆ ಇಳಿಯುತ್ತದೆ ಆಡಿಷ್ ಅಥವಾ ಲರ್ಡಖಟ್ ಹಿಮನದಿ ೮ ಕಿಮೀ; ೨೨೫೭ ಮೀ ಮಟ್ಟಕೆ ಇಳಿಯುತ್ತದೆ. ಪರ್ವತದ ಈ ಭಾಗದಲ್ಲಿ ಹಿಮನದಿಗಳು ಆವರಿಸಿರುವ ಪ್ರದೇಶ ಸುಮಾರು ೧೬೮.೫ ‍ಚ ಕಿಮೀ. ಇವುಗಳಲ್ಲಿ ಅತ್ಯಂತ ಉದ್ದವಾದ ಮಾಲಿವ್ ೫೮ ಕಿಮೀ ದೂರ ಹಿಮಗಡ್ಡೆಗಳಿಂದ ಕೂಡಿದೆ. ಕೆಲವು ಹಿಮನದಿಗಳು ಹಿಂದಕ್ಕೆ ಸರಿಯುತ್ತಿವೆಯೆಂಬ ಅಭಿಪ್ರಾಯವುಂಟು. ಮಧ್ಯ ಕಾಕಸಸಿನ ಪಶ್ಚಿಮ ಭಾಗದ ಪರ್ವತಪುಂಜ ಬಹಳ ಕಡಿಮೆ. ಅಲ್ಲಿ ದಕ್ಷಿಣ ರಷ್ಯಕ್ಕೂ ಅರ್ಮೇನಿಯ ಮತ್ತು ಏಷ್ಯ ಮೈನರ್ ಭಾಗಗಳಿಗೂ ಸಂಪರ್ಕ ಕಲ್ಪಿಸುವ ಡೇರಿಯಲ್ ಮತ್ತು ಮಾಮಿಸನ್ ಕಣಿವೆ ಮಾರ್ಗಗಳಿವೆ. ಕಾಸ್ಬೆಕ್ ಶಿಖರಕ್ಕೆ ಪೂರ್ವದಲ್ಲಿರುವ ಡೇರಿಯಲ್ ಘಾಟಿನಲ್ಲಿ ೧೮೧೧- ೬೪ರ ಕಾಲಾವಧಿಯಲ್ಲಿ ನಿರ್ಮಿಸಿದ ಜಾರ್ಜಿಯನ್ ಮಿಲಿಟರಿ ರಸ್ತೆ ವ್ಲಾಡೆಕಾವ್ ಕಜ್ ನಿಂದ ಟಿಪ್ಲಿಸ್ ವರೆಗೆ ಹೋಗುತ್ತದೆ.ಇಬ್ಬದಿಯಲ್ಲು ಹಬ್ಬಿದ ಬೃಹದಾಕಾರದ ಪರ್ವತಗಳ ಮಧ್ಯೆ ೧೧ ಕಿಮೀ ಉದ್ದದ ಸುಂದರ ಕಣಿವೆಯಲ್ಲಿ ರಸ್ತೆಗೂ ಅದರ ಪಕ್ಕದಲ್ಲಿ ಹರಿಯುವ ಟೆರೆಕ್ ನದಿಗೂ ಮಾತ್ರವೇ ಸ್ತಳವುಂಟು. ರಸ್ತೆ ಇನ್ನೂ ಮುಂದೆ ದಕ್ಷಿಣದಲ್ಲಿ ಪ್ರಧಾನಶ್ರೇಣಿಗೆ ಅಡ್ಡಲಾಗಿ ಹಾದು ಹೋಗಲು ಸಾಧನವಾಗುವಂತೆ ಇರುವ ಕೆಸ್ಜೊವಾಯ ಗೋರಾ ಘಾಟ್ ಸಮುದ್ರಮಟ್ಟಕ್ಕೆ ೨೩೬೫ ಮೀ ಎತ್ತರದಲ್ಲಿದೆ ಟೆರೆಕ್ ನದಿಯ ಭಾಗದಿಂದ ರಿಯಾನ್ ನದಿಯ ಕಂದರದ ಕುಟಾಯಿಸ್ ವರೆಗೆ ಹೋಗುವ ಒಸ್ಸೆಟಿಕ್ ಮಿಲಿಟರಿ ರಸ್ತೆ ಮಾಮಿಸನ್ ಕಣಿವೆಯ ಮೂಲಕವೇ ಸಾಗುತ್ತದೆ. ಅದನ್ನು ೧೮೮೯ರಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರಚಿಸಲಾಯಿತು. ಈ ಪರ್ವತಭಾಗದ ಇತರ ಕಣಿವೆ ಮಾರ್ಗಗಳಲ್ಲಿ ಕುದುರೆಯ ಮೇಲೆ ಕುಳಿತು ಬೇಸಿಗೆಯ ಕಲವು ದಿನಗಳಲ್ಲಿ ಮಾತ್ರ ಸಂಚರಿಸಬಹುದು.ಅವುಗಳಲ್ಲಿ ಹೆಚ್ಚಾಗಿ ಉಪಯೋಗದಲ್ಲಿರುವುದು ದಕ್ಷಿಣದ ಉಪಶ್ರೇಣಿಯಲ್ಲಿರುವ ಲಾಟ್ಪರಿ ಕಣಿವೆ ಮಾರ್ಗ. ಕಾಕಸಸ್ ಪರ್ವತದ ಈ ಭಾಗದ ದಕ್ಷಿಣದ ಇಳಿಮೇಡುಗಳಲ್ಲಿ,ವಿಶೇಷವಾಗಿ ಸ್ವನೇಟಿಯ ಪ್ರದೇಶದಲ್ಲಿ,ಗಿಡಮರಗಳು ಒತ್ತಾಗಿರುವುದಲ್ಲದೆ ಅಲ್ಲಿ ಬೆಳೆಯುವ ಪುಷ್ಪಗಳು ಅಲ್ಪ್ಸ್ ಪರ್ವತಗಳಲ್ಲಿ ಬೆಳೆಯುವವಕ್ಕಿಂತ ಹೆಚ್ಚು ವೈವಿಧ್ಯಪೂರಿತ. ಹಿರಿಯ ಜಾತಿಯ ಫ಼ರ್ನ್ ಸಸ್ಯಗಳು,ಬಳ್ಳಿಗಳು ಮತ್ತು ಗಗನಚುಂಬಿ ವೃಕ್ಷಗಳು ಈ ಪ್ರದೇಶವನ್ನು ರಮ್ಯಗೊಳಿಸಿವೆ. ಇಂಗ್ಲೆಂಡಿನ ತೋಟಗಳಲ್ಲಿ ಬೆಳೆಯುವ ಜಾತಿಯ ಹೂ ಗಿಡಗಳು ಇಲ್ಲಿ ಸ್ವಾಭಾವಿಕ ಪರಿಸರದಲ್ಲಿ ಹುಲುಸಾಗಿ ಬೆಳೆದಿವೆ. ಸುಂದರವಾದ ವನಸುಮಗಳು ೩೯೩೯ ಮೀ ಎತ್ತರದ ಮೇಡುಗಳಲ್ಲಿ ಯಥೇಚ್ಛವಾಗಿ ಉಂಟು.ವಾಲ್ ನಟ್ ಮರಗಳು ೧೬೩೬ ಮೀ ಮಟ್ಟದವರೆಗಿನ ಪ್ರದೇಶಗಳಲ್ಲ್ಲಿಯೂ ದ್ರಾಕ್ಷಿ ಮತ್ತು ಉಪ್ಪುನೇರಳೆ ೯೮೫ ಮೀ. ಮಟ್ಟದಲ್ಲಿಯೂ ಬೆಳೆಯುತ್ತವೆ. ಮೂಲಿಕೆಗಳೂ ಪುಷ್ಪಸಿಂ‍ಇತ ನಿತ್ಯಹಸಿರು ಗಿಡಗಳೂ ಹುಲ್ಲುಗಾವಲುಗಳೂ ೨೭೨೭ ಮೀ ಮಟ್ಟದವರೆಗೆ ಹರಡಿಕೋಂಡಿವೆ. ಪರ್ವತದ