ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ

ನಿರ್ಗಮನ ವರ್ತನೆ (ಔಟ್ ಪುಟ್ ಬಿಹೇವಿಯರ್) ನಿವೇಶಗಳ ಒಂದು ಉತ್ಪನ್ನವೆಂದೂ (ಎ ಫಂಕ್ಷನ್ ಆಫ್ ದಿ ಇನ್ ಪುಟ್ಸ್) ಭಾವಿಸುವುದರಿಂದ ಇದು ಸಾಧ್ಯವಾಗುತ್ತದೆ.

ಚಿತ್ರದಲ್ಲಿ ಒಂದು ಸರಳ, ಸಾರ್ವತ್ರಿಕೋದ್ದೇಶದ ಗಣಕವನ್ನು ತೋರಿಸಿದೆ. ಇಲ್ಲಿ ನಿವೇಶಾಂಗ (ಇನ್ ಪುಟ್ ಯೂನಿಟ್) ಸಾಮಾನ್ಯವಾಗಿ ಸ್ಪಂದನ (ಪಲ್ಸ್) ಹಾಗೂ ಉತ್ಪನ್ನಜನಕಗಳ (ಫಂಕ್ಷನ್ ಜನರೇಟರ್ಸ್) ಗಣ. ಈಗಣ (ಸೆಟ್) ಯಾವುದೇ ಇಚ್ಛಿತ ಅವಧಿಯುತ ಅಲೆರೂಪವನ್ನು ಉತ್ಪಾದಿಸಬಲ್ಲುದು. ಪ್ರಧಾನ ಗಣನ ಘಟಕದಲ್ಲಿ ಪರಿಕರ್ಮ ಪ್ರವರ್ಧಕಗಳ (ಆಪರೇಷನಲ್ ಆಂಪ್ಲಿಫೈಯರ್ಸ್) ಒಂದು ತಂಡ (OA), ರೇಖೀಯ ವಿಭವ ಮಾಪಕಗಳ (ಲೀನಿಯರ್ ಪೊಟೆನ್ಷಿಯೋಮೀಟರ್ಸ್) ಒಂದು ತಂಡ (PM) ಮತ್ತು ಗುಣಿಸುವ/ಭಾಗಿಸುವ (ಮಲ್ಟಿಪ್ಲೈಯೆರ್/ಡಿವೈಡರ್) ಅಂಗಗಳ ಒಂದು ತಂಡ (M/D)ಇವೆ. ಘಟಕಗಳ ನಿವೇಶ ಹಾಗೂ ನಿರ್ಗಮ ಅಂತಿಮಗಳನ್ನು (ಇನ್ ಪುಟ್ ಅಂಡ್ ಔಟ್ ಪುಟ್ ಟರ್ಮಿನಲ್ಸ್) ಒಂದು ಸರ್ವಸಾಮಾನ್ಯ ಘಟಕಕ್ಕೆ ತರೆದ ಕೊನೆಗಳಿರುವ ಕುಳಿಗಳಾಗಿ (ಓಪನ್ ಎಂಡೆದ್ ಸಾಕೆಟ್ಸ್) ರೂಪಿಸಲಾಗಿದೆ. ಘಟಕಗಳ ನಿವೇಶ ಮತ್ತು ನಿರ್ಗಮ ಅಂತಿಮಗಳನ್ನು, ಚಿತ್ರದಲ್ಲಿ ತೋರಿಸಿರುವ ಪ್ರಕಾರ ನಮ್ಯ (ಫ್ಲೆಕ್ಸಿಬಲ್) ರಬ್ಬರೀಕೃತ ತಂತಿ ಸಂಯೋಜಕಗಳಿಂದ ಜೋಡಿಸಲ್ಪಟ್ಟಿರುವ ಬೆಣೆಗಳನ್ನು ಇಷ್ಟಬಂದಂತೆ ಯಾವುದೇ ರೀತಿಯಲ್ಲಿ ಪೋಣಿಸುವುದರ ಮೂಲಕ, ಜೋಡಿಸಬಹುದು.

ನಿರ್ಗಮ ಏಕಮಾನವು ಕ್ಯಾಥೋಡ್ ಕಿರಣ ಆಂದೋಳನಲೇಖಕ (ಆಸಿಲೋ ಸ್ಕೋಪ್) ಆಗಿರಬಹುದು ಇಲ್ಲವೇ ಒಂದು X-Y ಅಲೇಖಕ (ಪ್ಲಾಟರ್) ಆಗಿರಬಹುದು. ಬೆಣೆಗಳಿಗೆ ಒಂದು ಪಾರ್ಶ್ವಾರಂಧ್ರ ಸಹ ಉಂಟು. ಇದಕ್ಕೆ ಇತರ ಸಂಯೋಜಕಗಳನ್ನು ಪೋಣಿಸಬಹುದು. ಈ ಘಟಕಗಳ ಗುಣಗಳನ್ನು ಮುಂದೆ ಬರೆದಿದೆ.

ಈ ಮೊದಲೇ ತಿಳಿಸಿರುವಂತೆ ಪರಿಕ್ರಮ ಪ್ರವರ್ಧಕವೇ (ಆಪರೇಷನಲ್ ಆಂಪ್ಲಿಫೈಯರ್) ಪ್ರಧಾನ ಘಟಕ. ಇದೊಂದು ಅತ್ಯುಚ್ಚ ಲಾಭಾವಿರುವ (ಗೇನ್) ಎಲೆಕ್ಟ್ರಾನಿಕ್ ಪ್ರವರ್ಧಕ. ಇದನ್ನು ಚಿತ್ರ 6ರಲ್ಲಿ ತೋರಿಸಿರುವಂತೆ F ಎಂದು ಗುರುತಿಸಿರುವ ಇದರ ಪುನರ್ನಿವಿಷ್ಟ ಪಥ (ಫೀಡ್ ಬ್ಯಾಕ್ ಪಾತ್) ಮತ್ತು l ಎಂದು ಗುರುತಿಸಿರುವ ನಿವೇಶಪಥ (ಇನ್ ಪುಟ್ ಪಾತ್)-ಇವುಗಳಲ್ಲಿ ಸಮರ್ಪಕ ಪ್ರತಿಬಾಧೆಗಳ ಬಗೆಗಳನ್ನು (ಟೈಮ್ಸ್ ಆಫ್ ಇಂಪೆಡೆನ್ಸಸ್) ಪೋಣಿಸುವುದರ ಮೂಲಕ ಹಲವಾರು ವಿಧಾನಗಳನ್ನು ಉಪಯೋಗಿಸಬಹುದು. F ಮತ್ತು l ಎರಡೂ ಸಮನಿರೋಧಕಗಳಾಗಿದ್ದರೆ (ಈಕ್ವಲ್ ರೆಸಿಸ್ಟರ್ಸ್) ಇದೊಂದು ಚಿಹ್ನಾಪರಿವರ್ತಕವಾಗಿ (ಸೈನ್ ಚೇಂಜರ್) ವರ್ತಿಸುತ್ತದೆ. ಅಸಮವಾಗಿದ್ದರೆ ಇದೊಂದು ಚಿಹ್ನಾಮಾನಕ ಪರಿವರ್ತವಾಗಿ (ಸೈನ್ ಸ್ಕೇಲ್ ಚೇಂಜರ್) ವರ್ತಿಸುತ್ತದೆ. F ಒಂದು ಏಕಮಾನಮೌಲ್ಯದ ನಿರೋಧಕವಾಗಿದ್ದು ಅಲ್ಲಿ ಏಕಮಾನ ಮೌಲ್ಯದ n ನಿವೇಶ ನಿರೋಧಕಗಳಿದ್ದರೆ ಈ n ಅಂತಿಮಗಳಲ್ಲಿ ನಿರಗಮ ನಿವೇಶಗಳ ಒಂದು ಸಂಕಲನವಾಗುತ್ತದೆ. ನಿವೇಶ ನಿರೋಧಕಗಳು ಅಸಮವಾಗಿದ್ದರೆ ನಿರ್ಗಮವು ನಿವೇಶಗಳನ್ನು ಅನುಪಾತೀಯವಾಗಿ ಕೂಡಿರುತ್ತದೆ. ನಿವೇಶ ಪ್ರತಿಬಾಧೆ (ಇನ್ ಪುಟ್ ಇಂಪೆಡೆನ್ಸ್) ಒಂದು ನಿರೋಧಕವೂ ಪುನರ್ನಿವಿಷ್ಟ ಪ್ರತಿಬಾಧೆ ಒಂದು ಸಂಧಾರಿತ್ರವೂ (ಕೆಪಾಸಿಟರ್) ಆಗಿದ್ದರೆ ಆಗ ನಿರ್ಗಮವು ನಿವೇಶ ಅಲೆರೂಪದ ಕಾಲಾನುಕಲ(ಟೈಮ್ ಇಂಟೆಗ್ರಲ್) ಆಗಿರುತ್ತದೆ.

ನಿವೇಶವನ್ನು ಒಂದು ಪ್ರಮಾಣದಷ್ಟು ಕುಗ್ಗಿಸಲೆಂದು ಒಂದು ರೇಖೀಯ ವಿಭವಮಾಪಕವನ್ನು(ಲೀನಿಯರ್ ಪೊಟೆನ್ಷಿಯೋಮೀಟರ್) ಉಪಯೋಗಿಸಲಾಗುತ್ತದೆ. ಇದಕ್ಕೆ ಲಗತ್ತಿಸದ ಒಂದು ಸೂಚಕದಲ್ಲಿ (ಇಂಡಿಕೇಟರ್) ಈ ಪ್ರಮಾಣವನ್ನು ಅಳವಡಿಸಬಹುದು. ಕಾಲದ ಪ್ರತಿಯೊಂದು ಕ್ಷಣದಲ್ಲೂ ಗುಣಾಕಾರಿ (ಮಲ್ಟಿಪ್ಲೈಯರ್) ಎರಡು ನಿವೇಶ ಅಲೆರೂಪಗಳ ಮೌಲ್ಯಗಳನ್ನು ಗುಣಿಸುತ್ತದೆ.