ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52

                 ಗಣಿಗಾರಿಕೆಯ ಅರ್ಥಶಾಸ್ತ್ರ

ಕ್ರಮ,ಕೊಡಬೇಕಾದ ಸ್ವಾಮಿಸ್ವ ಮುಂತಾದವುಗಳ ಬಗ್ಗೆ ಕಾಯಿದೆಯಲ್ಲಿ ಸೂಕ್ತ ವಿಧಿಗಳಿವೆ.ಅನುಜ್ಞೆ ಮತ್ತು ಗುತ್ತಿಗೆಗಳನ್ನು ಈ ಕಾಯಿದೆಗೆ ವಿರೋಧವಾಗಿ ಕೊಟ್ಟಲ್ಲಿ ಅವು ಸಂಪೂರ್ಣವಾಗಿ ಶೂನ್ಯವಾಗುತ್ತದೆ.ರಾಜ್ಯ ಸರ್ಕಾರದ ಅಭಿಪ್ರಾಯ ಪದದುಕೊಂಡು ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವೇ ಸ್ವತಃ ಗಣಿ ಕಾರ್ಯ ಕೈಗೊಳ್ಳಬಹುದು.ಆದರೆ ಆ ಸಂದರ್ಭಗಳಲ್ಲಿ ಅದು ಕೊಡಬೇಕಾದ ಸ್ವಾಮಿಸ್ವ ಇತ್ಯಾದಿಗಳನ್ನು ಖಾಸಗಿ ವ್ಯಕ್ತಿಗಳಂತೆಯೇ ಕೊಡಬೇಕಾಗುತ್ತದೆ.

  ೧೯೫೨ರಲ್ಲಿ ಭಾರತದಲ್ಲಿ ಜಾರಿಗೆ ಬಂದ ಗಣಿಗಳ ಕಾಯಿದೆ ಗನಿನಿರ್ವಹನೆ,ಕಾರ್ಮಿಕರ ಹಿತರಕ್ಷಣೆ ಮುಂತಾದವುಗಳ ದೃಷ್ಟಿಯಿಂದ ಅತ್ಯಂತ ಮುಖ್ಯವಾದ್ದು.ಗಣಿ ಎಂಬ ಶಬ್ದಕ್ಕೆ ಕಾನೂನಿನ ದೃಷ್ಟಿಯಿಂದ ಇಲ್ಲಿ ವ್ಯಕ್ಯಾನ ನೀಡಲಾಗಿದೆ.ಈ ಕಾಯಿದೆಯ ಉದ್ದೇಶಕ್ಕಾಗಿ ಯಾವ ಉದ್ಯಮವನ್ನು ಗಣಿಗಾರಿಕೆ ಎನ್ನಬೇಕು ಎಂಬುದರ ಬಗ್ಗೆ ನಿರ್ಣಯಾಧಿಕಾರ ಸರ್ಕಾರದ್ದು. 
  ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯವನ್ನು ಕಾಪಾಡಲು,ಗಣಿಗಳಲ್ಲಿ ಬರಬಹುದಾದ ಅಪಾಯಗಳನ್ನು ತಡೆಯಲು ಅನೇಕ ನಿಬಂಧನೆಗಳಿವೆ. ಈ ಉದ್ದೇಶದ ಸಾಧನೆಗಾಗಿ ಗಣಿಗಳ ಮೇಲ್ವಿಚಾರಣೆ ನಡೆಯಿಸಲು ನಿರೀಕ್ಷಕರು,ಪ್ರಾಮಾಣ ಪತ್ರ ನೀಡಬಲ್ಲ ವೈದ್ಯರು,ಗಣಿ ಮಂಡಳಿ,ಸಮಿತಿ ಮುಂತಾದವುಗಳ ನೇಮಕಕ್ಕೆ ಸೂಕ್ತ ವಿಧಿಗಳಿದ್ದು ಅವರ ಮತ್ತು ಅವುಗಳ ಅಧಿಕಾರ ವ್ಯಾಪ್ತಿಯ ನಿರ್ದೆಶವಿದೆ. 
  ಗಣಿಗಳ ಕಾಯಿದೆಯ ನಿಭಂದನೆಗಳು,ನಿಯಮಗಳು ಉಪನಿಯಮಗಳು ಸರಿಯಾಗಿ ಪರಿಪಾಲಿಸಪದುಲ್ವವೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಅಗತ್ಯವಾದ ನಿರೀಕ್ಷಣ ಮತ್ತು ತನಿಖೆ ಮಾಡುವ ಅಧಿಕಾರ ಮುಖ್ಯ ನಿರೀಕ್ಷಕ,ಅವನ ಕೈ ಕೆಳಗೆ ಕೆಲಸ ಮಾಡುವ ನಿರೀಕ್ಷಕರು ಇವರಿಗೆ ಇದೆ.ಹಗಲೇ ಆಗಲಿ,ರಾತ್ರಿಯೇ ಆಗಲಿ ಗಣಿಯ ಕೆಲಸಕ್ಕೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಸಹಾಯಕರೊಂದಿಗೆ ಗಣಿಯನ್ನು ಪ್ರವೇಶಿಸಲು ಅವರಿಗೆ ಹಕ್ಕಿದೆ.ಗಣಿಗಳ ಪರಿಸ್ಥಿತಿ,ಗಾಳಿಯ ಕಿಂಡಿ,ಉಪನಿಯಮಗಳ ಪರ್ಯಾಪ್ತತೆ,ಕೆಲಸಗಾರರ ಸುರಕ್ಷತೆ,ನೆಮ್ಮದಿ,ಆರೋಗ್ಯ ಈ ದ್ರುಷ್ಟಿಂದ ಅವರು ಪರಿಶೀಲನೆ ಅಥವಾ ತನಿಖೆ ನಡೆಸಬಹುದು.ತತ್ಸಂಬಂದವಾಗಿ ಹೇಳಿಕೆಗಳನ್ನು ಪಡೆದುಕೊಳ್ಳಬಹುದು.ಕಾಯಿದೆಯ ಉಲ್ಲಂಘನೆಯಾಗಿದೆಯೆಮ್ಬುದು ಸಿದ್ದ ಪಟ್ಟರೆ ಅದಕ್ಕೆ ಸ೦ಬ೦ಧಿಸಿದ೦ತೆ ಯಾವುದೆ ಸ್ಥಳವನ್ನು ಶೊಧಿಸುವ,ಸ್ವತ್ತನು ಸ್ವಾಧಿನಪಡಿಸಿ ಕೊಳ್ಳುವ ಅಧಿಕಾರ ಅವರಿಗಿರುತ್ತದೆ.
  ಗಣಿಗೆ ಸಂಬಧಿಸಿದ ಕಾರ್ಯಗಳಲ್ಲಿ ನಿರತರಾದವರ, ಅಪಾಯಕಾರಿ ಉದೋಗ ಅಥವಾ ಕೆಲಸಗಳಲ್ಲಿ ತೊಡಗಿಸಲಾದವರ ಪರೀಕ್ಷೆ,ಕೆಲಸದಿಂದ ಅಥವಾ ಕೆಲಸದ ಸ್ವರೂಪದಿಂದ ಅಸ್ವಸ್ಥತೆ ಬಂದುದಾಗಿ ಶಂಕೆ ಇದ್ದವರ ಪರೀಕ್ಷೆ,ಪ್ರಮಾಣಪತ್ರ ನೀಡಿಕೆ ಮುಂತಾದ ಉದ್ದೇಶಗಳಿಗಾಗಿ ವೈದ್ಯರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ.ಕಾಯಿದೆಗೆ ಸಂಬಂದಿಸಿದಂತೆ ಯಾವುದೇ ಪ್ರದೇಶಕ್ಕೆ ಅಥವಾ ಗಣಿಗಳ ಸಮುದಾಯಕ್ಕೆ ಅಥವಾ ಒಂದೇ ತೆರೆನಾದ ಹಲವು ಗಣಿಗಳಿಗೆ ಒಂದು ಗಣಿ ಮ೦ಡಳಿಯನ್ನು ಸರ್ಕಾರ ರಚಿಸಬಹುದು.ಸರ್ಕಾರ,ಮಾಲಿಕರು,ಕಾರ್ಮಿಕರು-ಇವರ ಪರತಿನಿಧಿಗಳನೊಳಗೊ೦ಡ ಮ೦ಡಲಿಯೊನ೦ದು ಗಣಿ ಸ೦ಬನ್ದವಾದ ವಿಚಾರಗಳ ಪರಿಶೀಲನೆ ನಡೆಸಿ ಸಕಾರಕ್ಕೆ ವರದಿ ಒಪ್ಪಿಸಬಹುದು.ಆ ವರಧಿಗೆ ಅನುಗುಣವಾಗಿ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ.
   ಕೆಲಸಗಾರರ ಆರ್ರೋಗ್ಯ ಮತ್ತು ಸುರಕ್ಷಣೆಗಾಗಿ ಕಾಯಿದೆಯಲ್ಲಿ ಅನೇಕ ವಿಧಿಗಳಿವೆ.ಕುಡಿಯುವ ನೀರಿನ ಸರಭಾರಾಯಿ,ಶೌಚಗೃಹಗಳ ನಿರ್ಮಾಣ,ಶುಚಿತ್ವ,ಪ್ರಥಮ ಚಿಕಿತ್ಸೆಯ ವ್ಯವಸ್ಥೆ -ಇವನ್ನು ಒದಗಿಸುವ ಬಗ್ಗೆ ವಿಶೇಷ ವಿಧಿಗಳುಂಟು.ಅನುಚಿತವಾದ ಅಥವಾ ಅಪಾಯಕಾರಿ ಗಣಿ ಕೆಲಸದಲ್ಲಿ ಕಾರ್ಮಿಕರನ್ನು ತೊಡಗಿಸಿರುವುದು ಕಂಡು ಬಂದರೆ ತಕ್ಕ ಕ್ರಮವನ್ನು ಕೈಗೊಂಡು ಗಣಿ ವ್ಯವಸ್ಥಾಪಕರಿಗೆ ಸೂಕ್ತ ಆದೇಶವನ್ನು ಕೊಡುವ ಹಕ್ಕು ಮುಖ್ಯ ನಿರೀಕ್ಷಕನಿಗೆ ಅಥವಾ ನೆರೇಕ್ಷಕರಿಗೆ ಇರುತ್ತದೆ.ನಿರೀಕ್ಷಕನ ಆದೇಶಗಳ ಮೇಲೆ ಆಕ್ಜ್ಷೆಪನೆಯನ್ನು ಗಣಿಯ ಆಡಳಿತದವರು ತಂಡದಲ್ಲಿ ಅದನ್ನು ವಿಚಾರಿಸಲು ಪ್ರತ್ಯೇಕವಾಗಿ ಗಣಿ ಸಮಿತಿಯಿದೆ .ಸುತ್ತಮುತ್ತ ಮರಣ ಅಥವಾ ಬೇರೆ ಯಾವುದಾದರು ವಿಪರೀತಗಳು ಸಂಬವಿಸದಲ್ಲಿ ಅವನ್ನು ಗಣಿ ವ್ಯವಸ್ತಾಪಕರು ಸೂಕ್ತ ಅಧಿಕಾರಿಗಳಿಗೆ ತಿಲಿಸಬೇಕಲ್ಲದೆ ಪ್ರಕಟಣೆ ಹಲಗೆಯ ಮೇಲೆ ಅದನ್ನು ಪ್ರಕಟಿಸಬೇಕು.ಕಾಯಿದೆಯಲ್ಲಿ ಹೇಳಲಾದ  ಅಪಘಾತಗಳು ಸಂಭವಿಸದರೆ ಕೇಂದ್ರ ಸರ್ಕಾರ ಅದರ ತನಿಖೆಯ ಬಗ್ಗೆ ವಿಚಾರಣಾ ನ್ಯಾಯಾಲಯವನ್ನು ನೇಮಿಸಬಹುದು.ಕೆಲೊಂದು ಕಾಯಿಲೆಗಳು ಗನಿಸಂಬಂದವುಗಳೆಂದು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.ಅಂತ ಕಾಯಿಲೆ ಬಂದದ್ದು ಕಂಡು ಬಂದರೆ ಗಣಿ ವ್ಯವಷ್ಟಪಕರು ಮತ್ತು ರೋಗಿಗೆ ಚಿಕಿತ್ಸೆ ಮಾಡುತಿರುವ ವೈದ್ಯರು ಅದರ ವಿವರಗಳನ್ನು ಮುಖ್ಯ ನಿರೀಕ್ಷಕನಿಗೆ ಕಳುಹಿಸಬೇಕು. 
 ಆ ಕಾಯಿಲೆ ಗನಿಸಂಬಂಧಿಯಾದ್ದು ಎಂಬುದು ಮುಖ್ಯ ನಿರೀಕ್ಷಕನಿಗೆ ಮನವರಿಕೆಯಾದಲ್ಲಿ ಆಟ ಅದರ ವೈದ್ಯಕೀಯ ಖರ್ಚನ್ನು ಕ್ಪ್ದುತ್ತಾನೆ ಮತ್ತು ಆ ಹಣವನ್ನು ಮಾಲಿಕನಿಂದ ಬಳಿಕ ವಸ್ಸುಳು ಮಾಡಲಾಗುವುದು.ಗನಿಯಿಂದಾಗಿ ಬಂಡ ಕಾಯಿಲೆಯಾಗಿದ್ದರೆ ಅಥವಾ ಹಾಗೆಂದು ಊಹಿಸಲು ಆಸ್ಪದವಿದ್ದರೆ ಕೇಂದ್ರ ಸರ್ಕಾರ ಅದರ ತನಿಖೆಗೆ ಏರ್ಪಾಡು ಮಾಡಬಹುದು.ಸಮಿತಿಯ ಮತ್ತು ರೋಗದ ತನಿಖೆಯ ವರದಿಯನ್ನು ಸರ್ಕಾರ ಪ್ರಕಟಿಸಬಹುದು.ವಿಚಾರಣ ನ್ಯಾಯಾಲಯದ ವರದಿಯನ್ನು ಅದು ಪ್ರಕಟಿಸಬೇಕು.
  ಕೆಲಸಗಾರರ ಸ್ವಾಸ್ಥ್ಯ ದೃಷ್ಟಿಯಿಂದ,ಅವರು ಕೆಲಸ ಮಾಡಬೇಕಾದ ಸಮಯದ ಪರಿಮಿತಿಯನ್ನು ಕಾಯಿದೆಯಲ್ಲಿ ನಿಗದಿಗೊಳಿಸಲಾಗಿದೆ.ವಾರಕ್ಕೆ ಆರು ದಿನಗಳಿಗಿಂತ ಹೆಚ್ಚು ಯಾರು ಕೆಲಸ ಮಾದಕೂದದು.ಕಾರ್ಮಿಕರಿಗೆ ಕೊಡಬೇಕಾದ ವಿಶ್ರಾಂತಿಯ ದಿನ,ವೇಳೆ,ನೆಲದ ಮೇಲೆ ಮತ್ತು ಗಣಿಯ ಒಳಗೆ ಕೆಲಸ ಮಾಡುವ ಸಮಯದ ನಿಗದಿ ,ನಿಗದಿಯಾದ ಸಮಯದಿಂದ ಹೆಚ್ಚು ಸಮಯ ಕೆಲಸ ಮಾಡಿದರೆ ಅದಕ್ಕೆ ವೇತನ ಕ್ರಮ ,ತುರ್ತು ಪರೀಸ್ಥಿತಿಯಲ್ಲಿ ಕೈಗೊಲ್ಲಬೀಕಾದ ಕ್ರ್ಲಾಸ,ಅಪ್ರಾಪ್ತ ವಯಸ್ಕರನ್ನು ಗಣಿಯಲ್ಲಿ ತೊಡಗಿಸುವುದು,ಅವರಿಗೆ ಇರಬೇಕಾದ ಪ್ರಮಾಣ ಪತ್ರ ,ಕೆಲಸ ಗಾರರ ರಜೆ , ಸಂಬಳ,ಮುಂಗಡ-ಇತ್ಯಾದಿಗಳನ್ನು ಕ್ರಮ ಪಡಿಸಲು ವಿವಿದ ವಿಧಿಗಳನ್ನು ಗಣಿ ಕಾಯಿದೆಯಲ್ಲಿ ಅಳವಡಿಸಲ್ಲಗಿದೆ.ಈ ಕಾಯಿದೆಯನ್ನು ಅನ್ವೈಸಿ ಸೂಕ್ತ ನಿಬಂದನೆಯನ್ನು ಮಾಸ್ಡುವ ಅಧಿಕಾರವು ಕೇಂದ್ರ ಸರ್ಕಾರಕ್ಕಿದೆ.
  ಅಪಘಾತಗಳನ್ನು ತಡೆದು,ಗಣಿಯಲ್ಲಿ ಕೆಲಸ ಮಾಡುವವರ ಭದ್ರತೆ,ಸೌಕರ್ಯ ಮತ್ತು ಶಿಸ್ತು ರಕ್ಷಣೆಗಾಗಿ ಗಣಿಯನ್ನು ನಡಇಸುವವರಿಗೆ ಮತ್ತು ಕೆಲಸ ಮಾಡುವವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಅಗತ್ಯವಾದ ಉಪನಿಬಂದನೆಗಳನ್ನು ಮಾಡಲು ಗಣಿಗಳ ಮಾಲೀಕರು ,ನಿಯೋಗಿಗಳು ಅಥವಾ ವ್ಯವಶಪಕರಿಗೆ ಅಧಿಕಾರವುಂಟು.ಅವರು ಇಂಥ ಉಪನಿಬಂಧನೆಗಳನ್ನು ಎರಡು ತಿಂಗಳುಗಳ ಒಳಗೆ ರಚಿಸದಿದ್ದಲ್ಲಿ ಅಥವಾ ಅಂತ ಉಪನಿಭಂದನೆಗಳು ಮುಖ್ಯ ನಿರೀಕ್ಷಕನ ದೃಷ್ಟಿಯಿಂದ ಸರಿಎನಿಸದಿದ್ದಲ್ಲಿ ಆತ ಅಗತ್ಯವಾದ  ಉಪನಿಬಂಧನೆಗಳನ್ನು ರಚಿಸಿ ಅಥವಾ ಅದಕ್ಕೆ ಸೂಕ್ತ ತಿದ್ದು ಪಡಿ ಮಾಡಿ ಗಣಿಗಳ ನಿರ್ವಾಹಕರಿಗೆ ಕಳುಹಿಸಿಕೊಡಬೇಕು.ಇವು ಗಣಿ ನಿರ್ವಾಹಕರಿಗೆ ಒಪ್ಪಿಗೆಯಾಗದಿದ್ದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ಸರ್ಕಾರದ್ದು.ಗಣಿ ಕಾಯಿದೆಯಲ್ಲಿ ಕಾರ್ಮಿಕರಿಗೆ ಅನ್ವಯವಾಗುವ ಭಾಗಗಳನ್ನು ನಿಬಂಧನೆ ಉಪನಿಭನ್ಧನೆಗಲನ್ನೂ ಕಾರ್ಮಿಕರಿಗೆ ತಿಳಿಯುವಂತೆ ಗಣಿ ಪ್ರಕಟಿಸಬೇಕು .ಕಾಯಿದೆಯ ಪಾಲನೆ ಮಾಡದಿದ್ದರೆ ಸೂಕ್ತ ಶಿಕ್ಷೆಗಳು ಸೋಚೀತವಾಗಿವೆ.
  ಕಾಯಿದೆಯ ವಿಧಿಗಳ ಮತ್ತು ನಿಯಮಗಳ ಪರಿಪಾಲನೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂದು ಪರಿಶೀಲಿಸುವ ಬಗ್ಗೆ ಯಾವುದೇ ಗಣಿಯ ತನಿಖೆಯ ವ್ಯವಸ್ಥೆ  ,ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.
  ಸ್ತ್ರೀ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾಯಿದೆಯಿದೆ.ಹೆರಿಗೆ,ಶಿಶು ಪೋಷಣೆ  ಮುಂತಾದವುಗಳಿಗಾಗಿ ಸ್ತ್ರೀ ಕಾರ್ಮಿಕರಿಗೆ ರಾಜ ಮತ್ತು ಇತರ ಸೌಲಭ್ಯಗಳು ಕಡ್ಡಾಯ.ದುಡಿಮೆಗಾರ್ತಿಯರನ್ನು ಹೆರಿಗೆಯ ಸಮಯದಲ್ಲಿ ಕೆಲಸದಿಂದ ತೆಗೆಯುವುದಕ್ಕೆ ನಿಷೆಧವುಂಟು.
   ಭಾರತದ ಕಾರ್ಖಾನೆ ಕಾಯಿದೆಯ ೩ ಮತ್ತು ೪ ನೆಯ ಪರಿಚ್ಚೆದಗಳನ್ನು ಗಣಿಗಳಿಗೆ ವಿಸ್ತರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.ರಾಜ್ಯ ಸರ್ಕಾರದ ಗಣಿಗಳನ್ನು ವಶಪಡಿಸಿಕೊಳ್ಳುವ ಅಧಿಕಾರವು ಕೇಂದ್ರಕ್ಕೆ ಉಂಟು(ನೋಡಿ-ಗಣಿಕಾರ್ಮಿಕರು).
  ಗಣಿಗಾರಿಕೆಯ ಅರ್ಥಶಾಸ್ತ್ರ :ಗಣಿಗಳು  ನೈಸರ್ಗಿಕ ಸಂಪಲ್ಮೂಲಗಳು.ಪ್ರತಿಯೊಂದೂ ರಾಷ್ಟ್ರದ ಆರ್ಥಿಕ ಬೆಳವಣಿಗೆಯೂ ನೈಸರ್ಗಿಕ ಸಮ್ಪಲ್ಮೂಲಗಳನ್ನೆ ಬಹಳಮಟ್ಟಿಗೆ ಅವಲಂಬಿಸಿದೆ.ಆರ್ಥಿಕ ಅಭಿವೃದ್ದಿಗೆ ಗಣಿಗಾರಿಕೆ ನಾನಾ ಬಗೆಯಲ್ಲಿ ಉಪಯುಕ್ತವಾಗಿದೆ : ೧.ರಾಷ್ಟ್ರದ ಬೆಳೆವಣಿಗೆಗೆ ಉಪಯುಕ್ತವಾದ ಅನೇಕ ವಷ್ಟುಗಳು ಒದಗುವುದು ಗಣಿಗಳಿಂದ. ೨. ಗಣಿಗಾರಿಕೆಯಿಂದ ಸ್ಥಾಲಿಯ ಕಾರ್ಮಿಕರಿಗೆ ಉದೋಗವಕಾಶ ಒದಗುವುದಲ್ಲದೆ ಅವರು ಕಾರ್ಯ ಕುಶಳರಾಗಿ ತರಬೇತು ಪಡೆಯುತ್ತಾರೆ. ೩.ಇದರಿಂದ ನಾನಾ ಬಗೆಯ ಸೌಲಭ್ಯಗಳು ಲಭ್ಯವಾಗುವುದಲ್ಲದೆ ಮಾರುಕಟ್ಟೆಗಳು ಬೆಳೆದು ರಾಷ್ಟ್ರದ ಅಥವಾ ನಿರ್ಧಿಷ್ಟ ಪ್ರದೇಶಗಳ ಅಭಿವೃದ್ಧಿ ಸಾಧಿಸುತ್ತದೆ.೪. ಉತ್ಪನ್ನ,ಉದ್ಯೋದ,ವಾಣಿಜ್ಯ ವರ್ಧಿಸುವುದರಿಂದ ರಾಷ್ಟ್ರದ ಸರ್ವತೋಮುಖ ಅಭಿವೃಧಿ ಸಾಧಿತವಗುತ್ತದೆ.೫. ಉದ್ಯಮದಿಂದ ನಿರ್ಯಾತ ಸಾಮಗ್ರಿ ಅಧಿಕ ವಾಗುವುದರಿಂದ ವಿದೇಶಿ ವಿನಿಮಯ ಸಂಪಾದನ್ ಸಾಧ್ಯ.ಆರ್ಥಿಕ ಅಭ್ವ್ರುದ್ದಿಗೆ