ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ


ಈ ಬಿಂದುವನ್ನು ನಿರ್ಗಮಾಂಗಕ್ಕೆ ಸಂಯೋಜಿಸಲಾಗಿದೆ. ಇದೋಂದು ಆಂದೋಳನ ಲೇಖಕ ಆಗಿರಬಹುದು ಇಲ್ಲವೇ X-Y ನಿರ್ದೇಶಕಗಳಲ್ಲಿ ವಕ್ರರೇಖೆಯನ್ನು ರೇಖಿಸುವ ಒಂದು ಆಲೇಖಕ (ಪ್ಲಾಟರ್) ಆಗಿರಬಹುದು. 
             ಮೇಲಿನ ವಿವರಣೆಯಿಂದ ತಿಳಿಯುವುದಿಷ್ಟು, ಜಟಿಲವಾದ ಒಂದು ಆರೇಖೀಯ ಅವಕಲ ಸಮೀಕರಣವನ್ನು ಗಣಕದ ನೆರವಿನಿಂದ ಬಿಡಿಸಲು ಒಬ್ಬಾತನಿಗೆ ಎಲೆಕ್ಟ್ರಾನಿಕ್ಸ್ ವಿಷಯವೂ ತಿಳಿಯಬೇಕಾಗಿಲ್ಲ, ಅವಕಲಸಮೀಕರಣಗಳ ಸಿದ್ಧಾಂತವೂ ತಿಳಿಯಬೇಕಾಗಿಲ್ಲ. ಹೀಗಾಗಿ, ಭೌತ ಸಮಸ್ಯೆಗಳ ಅನುರೂಪ ಅವಕಲಸಮೀಕರಣಗಳನ್ನು ರಚಿಸಿರುವಲ್ಲೆಲ್ಲ ಪರಿಹಾರದಲ್ಲಿ ಸಾದೃಶ್ಯ ಗಣಕಗಳ ಉಪಯೋಗ ನ್ತ್ಯಗಟ್ಟಲೆಯ ವ್ಯ್ವಹಾರವಾಗಿದೆ.
              ಸಾದೃಶ್ಯ ಗಣಕಗಳಲ್ಲಿ ಸಾಕಷ್ಟುಅಸೌಕರ್ಯಗಳಿವೆ-ಕಡಿಮೆ ಮಟ್ಟದ ನಿಷ್ಕೃಷ್ಟತೆ, ವೋಲ್ಟೇಜ್ ಸೆಳೆತ ಇತ್ಯಾದಿ. ಹೀಗಿದ್ದರೂ ರೇಡಾರ್ ನಿಯಂತ್ರಣ ಮತ್ತು ಮರಳಿಕೆಯ ಸಾಧನಗಳು (ಹೋಮಿಂಗ್ ಡಿವೈಸಸ್) ಇವೇ ಮುಂತಾದ ಆನ್-ಲೈನ್ (ಸಂಪರ್ಕಸಹಿತ)ಪರಿಕರ್ಮಗಳಲ್ಲಿ ಸಾದೃಶ್ಯ ಗಣಕಗಳ ಉಪಯೋಗ ಉಂಟು. ಇದು ಹೇಗಿದ್ದರೂ ಆಂಕಗಣಕಗಳು ಇವುಗಳು ಪ್ರಾಮುಖ್ಯವನ್ನು ಕ್ರಮೇಣ ತಗ್ಗಿಸುತ್ತವೆ. 1980ರ ವೇಳೆಗೆ ಸಾದೃಶ್ಯಗಣಕಗಳು ಪೂರ್ಣವಾಗಿ ಅಂತರ್ಧಾನವಾಗುವ ನಿರೀಕ್ಷೆ ಇತ್ತು.
               ಅಂಕಗಣನೆಯ ತಳಹದಿ: ಘಟಕಗಳ ಕೆಲವು ಮೂಲಭೂತ ಮಾದರಿಗಳನ್ನು ಉಪಯೋಗಿಸಿಕೋಡು ರಚಿಸಬಹುದಾದ ಯಂತ್ರವೇ ಆಂಕಗಣಕ (ಡಿಜಿಟಲ್ ಕಂಪ್ಯೂಟರ್). ಹೋಲಿಕೆಯಿಂದ ಸರಳವಾಗಿರುವ ಒಂದು ಯಂತ್ರ ಬಲು ಸಂಕೀರ್ಣ ಗಣನೆಗಳನ್ನು ಮಾಡಬಲ್ಲುದೆಂಬುದೇ ಆಂಕಗಣನೆಯ ತತ್ತ್ವವನ್ನು ನಿದರ್ಶಿಸಬಲ್ಲ ಒಂದು ಅಂಕಯಂತ್ರವನ್ನು (ಡಿಜಿಟಲ್ ಮಶೀನ್) ಬ್ರಿಟಿಷ್ ಗಣಿತವಿಗ್ನ್ಯಾನಿ ಎ.ಎಂ ಟ್ಯೂರಿಂಗ್ ಪ್ರಸ್ತಾಪಿಸಿದ. ಟ್ಯೂರಿಂಗ್ ಯಂತ್ರವೆಂದೇ ಇದರ ಹೆಸರು. ಎದನ್ನು ಎಲ್ಲಿ ವಿವರಿಸಿದೆ.

ಟ್ಯೂರಿಂಗ್ ಯಂತ್ರದ ಬಿಡಿ ಭಾಗಗಳು:

        1. ಒಂದು ಪಟ್ಟಿಕೆ (ಟೇಪ್). ಇದನ್ನು ಚೌಕಗಳಾಗಿ ವಿಭಾಗಿಸಿದೆ.
        2. ಪಟ್ಟಿಕೆಯನ್ನು ಚಲಿಸಲು ಒಂದು ಮೋಟಾರ್.
        3. ಪಟ್ಟಿಕೆಯ ಮೇಲೆ ಏನು ಬರೆದಿದೆ ಎನ್ನುವುದನ್ನು ಓದಲು ಒಂದು ಕ್ರಮವೀಕ್ಷಣ (ಸ್ಕ್ಯಾನಿಂಗ್) ಸಾಧನ.
        4.X ‍‍‍‍‍‍‍‌‍ಗಳನ್ನು ಅಥವಾ 1 ಗಳನ್ನು ಬರೆಯಬಲ್ಲ ಎಲ್ಲವೇ ಆಳಿಸಬಲ್ಲ ಒಂದು ಲೇಖನಿ.
        5. ಯಂತ್ರ ಏನು ಮಾಡಬೇಕೆಂಬುದನ್ನು ವಿಧಿಸುವ ಒಂದು ನಿಯಂತ್ರಣಾಂಗ (ಕಂಟ್ರೋಲ್ ಯೂನಿಟ್).

ಈ ಕೆಳಗಿನ ಸರಳಕ್ರಿಯೆಗಳನ್ನು ಮಾತ್ರ ಯಂತ್ರ ನಿರ್ವಹಿಸಬಲ್ಲುದು:

   1. ಒಂದು ಖಾಲಿ ಚೌಕದಲ್ಲಿ ಅದು ಒಂದು X ನ್ನು ಇಲ್ಲವೇ ಒಮ್ದು 1 ನ್ನು ಬರೆಯಬಲ್ಲುದು.
   2.ಆಗಲೆ ಇರುವ ಒಂದು X ನ್ನು ಇಲ್ಲವೇ ಒಂದು 1 ನ್ನು ಇಲ್ಲವೇ ಒಂದು ನ್ನು ಅದು ಆಳಿಸಬಲ್ಲುದು.
   3. ಅದು ಪಟ್ಟಿಕೆಯನ್ನು ಒಂದು ಚೌಕದಷ್ಟು ಎಡಕ್ಕೋ ಬಲಕ್ಕೋ ಸರಿಸಬಲ್ಲುದು.
   4. ತನ್ನ ಕಾರ್ಯವಾದ ಬಳಿಕ ಅದು ಒಂದು ಸಂಜ್ಗೆಯನ್ನು ಮಿನುಗಿಸಿ ನಿಲ್ಲಬಲ್ಲುದು.

ನಿಯಂತ್ರಣಾಂಗ ಒಂದು ಕೋಷ್ಟಕದಂತೆ ಇದೆ. ಎದನ್ನು ಓದಿ ಯಂತ್ರ ನೀಡುವ ನಿರ್ದೇಶನವನ್ನು ಪಡೆಯಬಹುದು.

       ಪ್ರಯೋಗಕ್ಕೋಸ್ಲರ, ಒಂದು ಟ್ಯೂರಿಗ್ ಯಂತ್ರವನ್ನು ಚಿತ್ರ 10ರಲ್ಲಿ ಇರುವಂತೆ ರಚಿಸಬಹುದು. ಅದರಲ್ಲಿ ಒಂದು ಪೆನ್ಸಿಲ್, ಒಂದು ಆಳಿಸುವ ರಬ್ಬರ್, ಚೌಕಗಳಾಗಿ ವಿಭಾಗಿಸಲ್ಪಟ್ಟ ಕಾಗದದ ಒಂದು ಕಿರಿಯಗಲದ ಹಾಳೆ, ಮುಖಫಲಕವಾಗಿ (ಡಯಲ್) ವರ್ತಿಸಲು ಕಾಗದದ ಒಂದು ಖಾಲಿ ಹಾಳೆ ಮತ್ತು ಒಂದು ಸೂಚಕ (ಇಂಡಿಕೇಟರ್) ಇವಿಷ್ಟು ಇರುತ್ತವೆ. ಕ್ರಮವೀಕ್ಷಕದ (ಸ್ಕ್ಯಾನರ್) ನೆಲೆಯನ್ನು ಭದ್ರಗೊಳಿಸಲು ಸೂಚಕ ನೆರವಾಗುತ್ತದೆ. ಸೂಚಕದ ಕೆಳೆಗೆ ಇರುವ ಚೌಕವೇ ಕ್ರಮವೀಕ್ಷಿಸಲ್ಪಡುವ ಚೌಕವಾಗುವಂತೆ ಸೂಚಕವನ್ನು ಪಟ್ಟಿಕೆಯ ಮೇಲೆ ನೆಲೆಗೂಳಿಸಬೇಕು.
    ಸಂಖ್ಯೆಗಳನ್ನು 1ಗಳ ಒಂದು ಸರಣೆ ಆಗುವಂತೆ ಅತ್ಯಂತ ಸರಳವಿಧಾನದಲ್ಲಿ ಸೂಚಿಸಲಾಗುವುದು. ಸಂಖ್ಯೆಯ ಪ್ರಾರಂಭ ಮತ್ತು ಕೊನೆಯನ್ನು ಸೂಚಿಸಲು ಆದರ ಎರಡು ಕೊನೆಗಳಲ್ಲೂ X ಎಂದು ಬರೆಯುತ್ತೇವೆ. 4 ಮತ್ತು 2 ಸಂಖ್ಯೆಗಳನ್ನು ಚಿತ್ರ 10 ರಲ್ಲಿ ತೋರಿಸಿರುವಂತೆ ಬರೆಯುತ್ತೇವೆ. ಪ್ರಾರಂಭದಲ್ಲಿ ಸೂಚಕವನ್ನು ಪಟ್ಟಿಕೆಯ ಮೇಲೆ ಬಲಕೊನೆಯಲ್ಲಿರುವ 1ನ್ನು ಕ್ರಮವೀಕ್ಷಿಸುವಂತೆ ಎಡುತ್ತೇವೆ.
        ಟ್ಯೂರಿಂಗ್ ಯಂತ್ರಬಲ್ಲಿ ಯಾವುದೇ ಎರಡು ಸಂಖ್ಯೆಗಳನ್ನು ಕೂಡಿಸಲು ಬೇಕಾಗುವ ಕ್ರಮವಿಧಿಯನ್ನು (ಪ್ರೋಗ್ರಾಂ)  ಮುಂದಿನ ಪುಟದ ಕೋಷ್ಟಕ 1 ರಲ್ಲಿ ಕೊಟ್ಟಿದೆ, ಮೊದಲನೆಯ ನೀಟಸಾಲ ಯಂತ್ರದ ಮುಖಫಲಕ ಅಳವಡಿಕೆಗಳನ್ನು (ಡಯಲ್ ಸೆಟ್ಟಿಂಗ್ಸ್) ಪ್ರತಿನಿಧಿಸುತ್ತದೆ [], 1 ಮತ್ತು X ಪ್ರತೀಕಗಳು ಕ್ರಮವೀಕ್ಷಕ ನೋಡಬಹುದಾದ್ದನ್ನು ಆನುಸರಿಸಿ ಇವೆ. ಈ ಕ್ರಮವಿಧಿಯ ಒಂದು ನಿರ್ದಶನವನ್ನು ಕಾರ್ಯಗತ ಮಾಡಲು ಮುಖಫಲಕ ಅಳವಡಿಕೆ ಸೂಚಿಸುವ ಅಡ್ಡ ಸಾಲಿನಲ್ಲಿ ಮತ್ತು ಗಣಕ ನೋಡುವ ನೀಟಸಾಲು ಸೂಚಿಕೆಯಲ್ಲಿ ಕೋಷ್ಟಕವನ್ನು ಪ್ರವೇಶಿಸಬೇಕು. ಪ್ರಾರಂಭದ ಸ್ಥಾನದಲ್ಲಿ ಮುಖಫಲಕ ಅಳವಡಿಕೆ 1 ಆಗಿದೆ. ಕ್ರಮವೀಕ್ಷಕ ನೋಡುವುದು ಒಂದು 1ನ್ನು ಅಡ್ಡಸಾಲು 1 ಮತ್ತು ನೀಟಸಾಲು 1 ಎಂದು ಗುರುತು ಮಾಡಿರುವಲ್ಲಿ ನಿರ್ದೇಶನಗಳನ್ನು ಗಮನಿಸಬೇಕು. ಪಟ್ಟಿಯನ್ನು ಬಲಕ್ಕೆ ಚಲಿಸು ಮತ್ತು ಫಲಕವನ್ನು  1 ರಲ್ಲಿ ಅಳವಿಡುಸು' ಎಂಬುದಾಗಿ ಅಲ್ಲಿ ನಿರ್ದೇಶನ ಉಂಟು. ಈಗ ನಮ್ಮ ಫಲಕಾ ಅಳವಡಿಕೆ ಪುನ್ 1 ಮತ್ತು ಕ್ರಮವೀಕ್ಷಕ ನೋಡುವುದು ಎನೊಂದು 1 ನ್ನು. ನಿರ್ದೇಶನ ಪುನಮ್ ಬಲಕ್ಕೆ ಚಲಿಸು 1 ನ್ನು ಅಳವಡಿಸು' ಎಂಬುದಾಗಿ ಅಲ್ಲಿ ನಿರ್ದೇಶನ ಉಂಟು. ಈಗ ನಮ್ಮ ಫಲಕ ಅಳವಡಿ ಪುನ್ಂ 1 ಮತ್ತು ಕ್ರಮವೀಕ್ಷಕ ನೋಡುವುದು ಇನ್ನೊಂದು 1 ನ್ನು.ನಿರ್ದೇಶನ ಪುನ್ಂ ಬಲಕ್ಕೆ ಚಲಿಸು 1 ನ್ನು ಅಳವಡಿಸು' ಎಂಬುದಾಗಿ ಇದೆ. ಮುಂದಿನ ನಡೆಯಲ್ಲಿ ಫಲಕ ಅಳವದಿಕೆ 1 ಆಗಿದ್ದರೆ ಕ್ರಮವೀಕ್ಷಕ ನೋಡುವುದು ಒಂದು X ನ್ನು, ಹೊಸ ನಿರ್ದೇಶನ X ನ್ನು ಅಳವಡಿಸು' ಎಂದಿದೆ. ಮೂಂದಿನ ನಡೆಯಲ್ಲಿ ಕ್ರಮವೀಕ್ಷಕ ನೋಡುವುದು ಒಂದು ಖಾಲಿ ಚೌಕವನ್ನು. ಇಲ್ಲಿನ ಅನುರೂಪ ನಿರ್ದೇಶನ  ಬಲಕ್ಕೆ ಚಲಿಸು 2 ನ್ನು ಅಳವಡಿಸು ಎಂದಿದೆ. ಈ ಮುನ್ನಡೆಯನ್ನು ನಿಲ್ಲಿಸು ನ್ರ್ದೇಶನ ಬರುವವರೆಗೂ ಮುಂದುವರಿಸಿದರೆ ಆಗ ಪಟ್ಟಿಕೆಯ ಮೇಲೆ ಉತ್ತರವನ್ನು ಕಾಣಬಹುದು. ಎಲ್ಲಾದರು ಒಂದು ತಪ್ಪಾದ ನಡೆಯಾಗಿ ಇದ್ದರೆ ಆಗ 'ದೋಷ-ಪುನ್ಂ ಮಾಡು' ಎಂಬ ನ್ರ್ದೇಶನದಲ್ಲಿ ನಮ್ಮ ನಡೆ ನಿಲ್ಲುತ್ತದೆ.
            ಈ ಮೇಲಿನದು ಯಾವುದೇ ಎರಡು ಸಂಖ್ಯೆಗಳನ್ನು ಯಾಂತ್ರಿಕವಾಗಿ ಕೂಡಿಸುವ ಒಂದು ವಿಧಾನ. ಟ್ಯೂರಿಂಗ್ ಯಂತ್ರವನ್ನು ಗುಣಾಕಾರ, ಭಾಗಾಕಾರ ಘಾತಾರೋಪಣ (ಎಕ್ಸ್ ಪೊನೆನ್ನಿಯೇಷನ್) ಇವೇ ಮುಂತಾದ ಕೈವಾಡ ಪರಿರ್ಕಮಗಳಲ್ಲಿ (ಮೆನಿಪ್ಯುಲೇಷನ್ ಆಪರೇಷನ್) ಬಳಸಬಹುದು. ಎದು ಹೊಗೂ ಇರಲಿ. ಟ್ಯೂರಿಂಗ್ ಯಂತ್ರ ಆರ್ಥಿಕವಾಗಿ ಸಾಧುವಾಗಿ ರಚನೆ ಅಲ್ಲ. ಅಲ್ಲದೇ ಇದು ಬಲು ಕಾಲಾವಕಾಶವನ್ನು ಕಬಳಿಸುವಂಥೆದು. ಗಣಿತದ ಲೆಕ್ಕಾಚಾರಗಳನ್ನು ನಡೆಸಲು ಹೇಗೆ