ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೆಂಟ್ಸ್, ಫ಼್ರೀಡ್ರಿಕ್

    ಗೆಂಟ್ಸ್, ಫ಼್ರೀದ್ರಿಕ್   :೧೭೬೪-೧೮೩೨ ಜರ್ಮನ್ ರಾಜಕೀಯ ಪತ್ರಿಕೋದ್ಯಮಿ; ನೆಪೋಲಿಯನನ ಮತ್ತು ಫ಼್ರೆಂಚ್ ಕ್ರಾಂತಿ ತತ್ತ್ವಗಳ ವಿರುದ್ಧ ಬರೆದ ಲೇಖನಗಳಿಂದಾಗಿಯೂ ಆಸ್ಟಿಯದ ರಾಜಕಾರಣೈ ಮೆಟರ್ನಿಕನ ಆಪ್ತಸಲಹೆಗಾರನೆಂದಾಗಿಯೂ ಪ್ರಸಿಧಾನಾಗಿದ್ದವ. ಜನನ ೧೭೬೪ ಮೇ ೨ ರಂದು, ಬ್ರೆಸ್ಲೌದಲ್ಲಿ. ೧೭೭೯ರಲ್ಲಿ ಇವನ ತಂದೆ ಪ್ರಷ್ಯದ ಟಂಕಸಾಲೆಯ ಮಹಾನಿರ್ದೇಶಕನಾಗಿ ನೇಮಕನವಾದ್ದರಿಂದ ತಂದೆತಾಯಿ ಯರೊಂದಿಗೆ ಗೆಂಟ್ಸನೂ ಬರ್ಲಿನಿಗೆ ಹೋದ. ಶಾಲೆಯಲ್ಲಿ ಅಭ್ಯಾಸ ಮುಗಿಸಿದ ಮೇಲೆ  ಕೋನಿಗ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಅಭ್ಯಸಿಸಿದ. ಅಲ್ಲಿ ಇವನು ಇಮಾನ್ಯುಯೆಲ್ ಕ್ಯಾಂಟನಿಂದ ಪ್ರಭಾವಿತನಾದ. ೧೭೮೫ರಲ್ಲಿ ಇವನು ಬರ್ಲಿನ್ ನಲ್ಲಿ ಪ್ರಷ್ಯನ್ ಸರ್ಕಾರದ ಸೇವೆಗೆ ಸೇರಿ ೧೭೯೩ ರ ವೇಳೆಗೆ ಯುದ್ಧದ ಇಲಾಖೆಯಲ್ಲಿ ಸಲಹೆಗಾರನಾದ.
    ಫ಼್ರೆಂಚ್ ಕ್ರಾಂತಿಯಮನ್ನು ಸಮರ್ಥಿಸಿ ಗ್ರಂಥ ಬರೆದವರಲ್ಲಿ ಗೆಂಟ್ಸನೂ ಒಬ್ಬ. ಆದರೆ ಕ್ರಮೇಣ ಇವನ ನಿಲುವು ಬದಲಾಯಿತು. ಕ್ಯಾಂಟನ ನ್ಯಾಯ ಸಿದ್ಧಾಂತಗಳು, ಇಂಗ್ಲೀಷ್ ನ್ಯಾಯಶಾಸ್ತ್ರ - ಇವು ಇವನ ಮನಸ್ಸನ್ನು ಪರಿವರ್ತಿಸಿದವು. ಬರ್ಕನ ರಿಫ಼್ಲೆಕ್ಷನ್ಸ್ ಆನ್ ದಿ ರೆವಲ್ಯೂಷನ್ ಇನ್ ಫ಼್ರಾನ್ಸ್ (೧೭೯೩) ಎಂಬ ಕೃತಿಯನ್ನು ಇವನು ಅನುವಾದಿಸಿ ವ್ಯಾಖ್ಯಾನದೊಂದಿಗೆ ಪ್ರಕಟಿಸಿದ. ಇದರಿಂದ ಯುರೋಪಿನಲ್ಲಿ ಇವನ ಹೆಸರು ಪ್ರಸಿದ್ಧವಾಯಿತಲ್ಲದೆ ಇವನ ಜೀವನಗತಿ ಮಾರ್ಪಟ್ಟಿತು. ತದನಂತರ ಇವನು ರಾಜಕೀಯ ವಿಚಾರಗಳ ಬಗ್ಗೆಯೇ ಬರೆಯಲು ತೀರ್ಮಾನಿಸಿದ. ಕ್ರಾಂತಿಕಾರಿ ಸಿದ್ಧಾಂತಗಳ ವಿರುದ್ಧ ಹೋರಾಟ ಮುಂದುವರೆಸಿದ . ಕ್ರಮೇಣ ತನ್ನದೇ ಆದ, ಅತಿ ಸಂಪ್ರದಾಯಬದ್ಧವಾದ ರಾಷ್ಟ್ರ ಪರಿಕಲ್ಪನೆಯಒಂದಿಗೆ ಸತ್ಕರಿಸಿ. ( ೧೭೯೮-೯೯), ಪ್ರಜಾಸಾರ್ವಭೌಮತ್ವ, ಮಾನವ ಹಕ್ಕುಗಳ, ರಾಜಕೀಯ ಸಮತೆ, ಸ್ವಾತಂತ್ರ್ಯ, ಮುಂತಾದ ಪರಿಕಲ್ಪನೆಗಳನ್ನು ವಿರೋದಿಸಿದ.  
     ೧೭೯೪- ೯೭ರ ನಡುವೆ ಗೆಂಟ್ಸ್ ಅನೇಕ ಕ್ರಾಂತಿವಿರೋಧಿ ಕೃತಿಗಳನ್ನು ಭಾಷಾಂತರಿಸಿ ವ್ಯಾಖ್ಯಾನಗಳೊಂದಿಗೆ ಪ್ರಕಟಿಸಿದ. ಈತ ಆರಂಭಿಸಿದ ನೊಮೆಡಾಯಿಷೆ ಮೋನಾಟ್ ಶ್ರಿಫ಼್ಟ್ ಏಂಬ ಪತ್ರಿಕೆ ಒಂದು ವರ್ಷದಲ್ಲಿ ಕೊನೆಗೊಂಡಿತು  
     ೧೭೯೯- ೧೮೦೦ ರ ರಲ್ಲಿ ಪ್ರಷ್ಯನ್ ಸರ್ಕಾರದ ಧನಸಹಾಯದಿಂದ ಎರಡು ವರ್ಷಕಾಲ ಪ್ರಕಟವಾದ ಹಿಸ್ಟೋರಿಶೆಸ್ ಜರ್ನಲ್ ನ ಸಂಚಿಕೆಗಳಲ್ಲಿ ಗೆಂಟ್ಸ್ ಜರ್ಮನ್ ರಾಕೀಯ ಕುರಿತು ಬರೆದ ರಾಜಕೀಯ ಪತ್ರಿಕೋದ್ಯಮವನ್ನು ಪರಾಕಾಷ್ಟೆಗೆ ಒಯ್ದು. 
    ಕ್ರಾಂತಿಯ ಪ್ರೇರಣೆಗಳು, ಅದರ ವಿವಿಧ ಹಂತಗಳು, ಕ್ಷಿಪ್ರಾಕ್ರಾಮಣ ಮತ್ತು ಅದರ ಪರ್ಯವಸಾನ, ಅದರ ಸಮಾಜಿಕ ಮುಖಗಳು_ ಇವನ್ನೆಲ್ಲ ವಿಶ್ಲೇಷಿಸುವುದರೊದಿಂಗೆ ಕ್ರಾಂತಿಯನ್ನು ಇವನು ಬಲವಾಗಿ ವಿರೋಧಿಸಿದ. ಕ್ರಾಂತಿವಾದಿ ಫ಼್ರಾನ್ಸಿನ ವಿರುದ್ಧವಾಗಿ ಯುದ್ಧ ಮಾಡುವುದು ಕೂಡ ಸರಿಯೆಂದು ಇವನು ವಾದಿಸಿದ. ಇವನ ಈ ನಿಲುವಿನಿಂದಾಗಿ ಅನೇಕ ವಾದವಿವಾದಗಳುಂಟಾದುವು. ಪ್ರಷ್ಯದ ತಟಸ್ಥ ನಿಲುವನ್ನು ಇವನು ಟೀಕಿಸಿದ. ಪ್ರಷ್ಯ- ಆಸ್ಟ್ರಿಯಗಳು ಪರಸ್ಪರವಾಗಿ ವಿರೋದಿಸುವ ಬದಲು ಒಂದಾಗಿ ಫ಼್ರಾನ್ಸನ್ನೆದುರಿಸಬೇಕೆಂಬುದು ಇವನ ವಾದವಾಗಿತ್ತು. ಇಂಗ್ಲೆಂಡು ಯುರೋಪಿನ ಸ್ವಾತಂತ್ರ್ಯರಕ್ಷಕ ದೇಶವೆಂದು ಹೊಗಳಿದ. ಇವನ ಈ ಎಲ್ಲ ಭಾವನೆಗಳೀಂದಾಗಿ ಪ್ರಷ್ಯದಲ್ಲಿ ಇವನಿಗಿದ್ದ ಪ್ರಭಾವಯುತ ಸ್ಥಾನ ನಷ್ಟವಾಯಿತು.ತಾನಾಗಿ ಆರಿಸಿಕೊಂಡ ರಾಜಕೀಯ ಪತ್ರಿಕೋಧ್ಯಮವನ್ಬ್ನು ಇವನು ಬಿಡಲು ಸಿದ್ದನಿರಲಿಲ್ಲ. ಆದುದರಿಂದ ಜೀವನದಲ್ಲಿ ಇವನು ಬಿಕ್ಕಟ್ಟನ್ನೆದುರಿಸಬೇಕಾಯಿತು. ವೈಮಾರಿನಲ್ಲಿ ನೆಲೆಸಲು ಈತ ಮಾಡಿದ ಯತ್ನ ವಿಫಲವಾಯಿತು. ಆಸ್ಟ್ರಿಯದಿಂದ ಇವನಿಗೆ ಒಂದು ಔಪಚಾರಿಕ ಸ್ಥಾನ ಲಭ್ಯವಾಯಿತು. ಇದರಿಂದ ಇವನಿಗೆ ಸಾಮಾಜಿಕ ಮರ್ಯಾದೆಯೂ ಆರ್ಥಿಕ ಭದ್ರೆತೆಯೂ ಲಭ್ಯವಾಯಿತು. ರಾಜಕೀಯ ಲೇಖಕನಾಗಿ ಸ್ವತಂತ್ರನಾಗಿ ಮೊಂದುವರಿಯುವುದು ಸಾಧ್ಯವಾಯಿತು.
     ಇದೆ. ವಿವಾಹ ಕೇವಲ ದೈಹಿಕ ಸಂಭದ ಮಾತ್ರವೇ ಆಗಿರದೆ , ಶಾಶ್ವತವಾದ ಧಾರ್ಮಿಕ ಸಂಬಂಧವೆಂದನ್ನು ಕನ್ಯಾದಾನ, ಪಾಣಿಗ್ರಹಣ, ಸಪ್ತಪದಿ ಎಂಬ ವಿವಾಹ ಸಂಸ್ಕಾರಗಳ ಕಾಲದಲ್ಲಿ ವಧೂವರರು ಉಚ್ಚರಿಸ್ವೌವ ಮಂತ್ರಗಳು ಸ್ಪಷ್ಟಪಡಿಸುತ್ತವೆ. ಸತ್ಪುತ್ರರನ್ನು ಪಡೆದು ಕುಲಗೌರವವನ್ನು ವೃದ್ಧಿಸುವುದೇ ವಿವಾಹದ ಮುಖ್ಯಧ್ಯೇಯವೆಂದು ಗೃಹ್ಯಸೂತ್ರಗಳು ಹೇಳಿವೆ. ಸ್ತ್ರೀಯರಿಗೆ ಉನ್ನತವಾದ ಸ್ಥಾನಮಾನಗಳನ್ನುಕೊಡಲಾ ಗಿದ್ದರೂ ಪುತ್ರನನ್ನು ಪಡೆಯಬೇಕೆಂಬುವುದೇ ವಿವಾಹ , ಪುಂಸವನ, ಸೀಮಂತ ಕಾಲಗಳಲ್ಲಿ ಉಚ್ಚರಿಸಲಾಗುವ ಮಂತ್ರಗಳ ಉದ್ದೇಶವಾಗಿದೆ. ಆರ್ಯಸಮಾಜ ಕೃಷಿಪ್ರಧಾನವಾಗಿದ್ದುದರಿಂದ ಗಂಡು ಸಂತತಿಗೆ ಪ್ರಾಧಾನ್ಯವಿತ್ತು. 
     ಕೌಟುಂಬಿಕ ಜೀವನ: ಗೃಹಸ್ಥಾಶ್ರಮ ಸಾಮಾಜಿಕ ಜೀವನದಲ್ಲಿ ಅತ್ಯಂತ ಮಹತ್ತ್ವದ ಸ್ಥಾನವನ್ನು ಪಡೆದಿತ್ತು. ಗೃಹ್ಯಸೂತ್ರಗಳಲ್ಲಿ ಇದರ ಪ್ರಾಮುಖ್ಯವನ್ನು ವಿವರಿಸಲಾಗಿದೆ. ಗೃಹಸ್ಥ ದೇವಋಣ, ಪಿತೃಋಣಗಳನ್ನು ತೀರಿಸುವುದಲ್ಲದೆ ಮನುಷ್ಯ ಋಣವನ್ನು ನಾನಾ ರೀತಿಯಲ್ಲಿ ಸಲ್ಲಿಸಬೇಕು. ಅತಿಥಿಗಳನ್ನು ದೇವರಂತೆ ಕಾಣಬೇಕು. ಅವನ ಕುಟುಂಬ ಸತ್ಪುತ್ರರೈಂದಲೂ ಗೋಧಾನ್ಯಗಳಿಂದಲೂ ಸಮೃದ್ಧನವಾಗಿದ್ದು, ಸ್ತ್ರೀಯರು ಗೃಹದೇವತೆಗಳಂತೆ ಅಲ್ಲಿ ಶೋಭಿಸುತ್ತಿರಬೇಕು. ಅವನು ಸಾಮಾಜಿಕ ಉನ್ನತಿಗೆ ಯಾವ ದೋಷವೂ ಬಾರದಂತೆ ಯಥೋಚಿತವಾಗಿ ನಡೆದುಕೊಳ್ಳಬೇಕು ಮತ್ತು ಸೇವಾನಿರತನಾಗಿರಬೇಕು. ಗೃಹ್ಯಸೂತ್ರಗಳ ನಿಬಂಧನೆಗಳು ಅವಿಭಕ್ತ ಕುಟುಂಬಕ್ಕೆ ಅನ್ಚವಯಿಸುವಥವು. 
     ಗೃಹ್ಯಸೂತ್ರಗಳು ಗೃಹನಿರ್ಮಾಣಕ್ಕೆ ಹೆಚ್ಚಿನ ಗಮನವನ್ನು ಕೊಟ್ಟಿವೆ. ಮುಖ್ಯ ದ್ವಾರ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಬೇಕು. ಪಶ್ಚಿಮಾಭಿಮುಖವಾಗಿರಕೂಡದು. ಭೂಮಿ ಸಮನಾಗಿರಬೇಕು. ಭದ್ರವಾಗಿರಬೇಕು. ಹೊರಗೆ ಸಂಚರಿಸುವವರಿಗೆ ಗೃಹಸ್ತ ಮಾಡುವ ಹೋಮಾದಿಕಾರ್ಯಗಳಾಗಲೀ ಅವನ ಆಹಾರ ಸೇವನೆಯಾಗಲಿ ಕಾಣೂವಂತಿರಬಾರದು. ಗೃಹಪ್ರವೇಶಕಾಲದಲ್ಲಿ ಮಾಡಬೇಕಾದ ವಾಸ್ತುಶಮನ ಎಂಬ ಹೋಮವನ್ನುವಿವರವಾಗಿ ಹೇಳಲಾಗಿದೆ. ಗೃಹಸ್ಥನ ನೆಲೆಯಾದ ಗೃಹವನ್ನು ಅತ್ಯಂತ ಪ್ರೀತಿಯಿಂದ ಕಾಪಾಡಬೇಕೆಂದು ಗೃಹ್ಯಸೂತ್ರಗಳು ನಿಬಂಧಿಸಿವೆ. 
    ಶಿಕ್ಷಣ ಕ್ರಮ : ಗುರುಕುಲವಾಸದಲ್ಲಿ ವಿದ್ಯಾರ್ಜನೆ ಮಾಡಿ ನೈತಿಕ ಜೀವನವನ್ನು ನಡೆಸಿಕೊಂದು ಹೋಗುವುದೇ ಬ್ರಹ್ಮಚರ್ಯಾಶ್ರಮದ ಮುಖ್ಯ ದ್ಯೇಯವಾಗಿತ್ತು. ಇದರಲ್ಲಿ ಸಂಬಂಧ ನಿಕಟವಾಗಿರಬೇಕೆಂದು ಗುರುಕುಲವಾಸದ ಉದ್ದೇಶ. ಗುರುಕುಲವಾಸ ಉಪನಯನ ಸಂಸ್ಕಾರದ ಅನಂತರ ಪ್ರಾರಂಭವಾಗುತ್ತದೆ. ಉಪನಯನ ಸಂಸ್ಕ್ರಾರದ ಮಹತ್ತ್ವಗಳನ್ನು ಈ ಸೂತ್ರಗಳು ವಿಶದಪಡಿಸಿವೆ. ವ್ಯಾಸಂಗದ ಅವಧಿಯನ್ನು ಹನ್ನೇರಡರಿಂದ ನಲವತ್ತೆಂಟು ವರ್ಷಗಳವರೆಗೆಂದು ನಿಯಮಿಸಲಾಗಿದೆ. ಅಂದರೆ ವೇದಾಧ್ಯಯನಕ್ಕೆ ದೀರ್ಘಕಾಲದ ಅವಧಿ ಅವಶ್ಯಕವಾಗಿತ್ತು. ಅಧ್ಯಯನದೊಂದಿಗೆ ಉಪವಾಸಾದಿ ವ್ರತಗಳನ್ನು ನಿಬಂಧಿಸಲಾಗಿದ್ದಿತು. ದೊಡ್ಡ ದೊಡ್ಡ ಸಭೆಗಳಲ್ಲಿ ಚರ್ಚಾಕೂಟಗಳನ್ನು ಏಎಪಡಿಸುವ ಪದ್ದತಿಯೂ ಇತ್ತು. ಸ್ನಾತಕವಾಗಿ ಮನೆಗೆ ಹಿಂದಿರುಗಿದ ಮೇಲೆ ಗೃಹಸ್ಥಾಶ್ರಮಕ್ಕೆ ಪ್ರವೇಶ. ಸ್ನಾತಕನಾದ ಅನಂತರವೂ ಅವನು ವೇದಾಧ್ಯಯನ ಮತ್ತು ನೈತಿಕ ನಿಯಮಗಳನ್ನು ತ್ಯಜಿಸಕೂಡದೆಂದು ವಿಧಿಸಲ್ಲಗಿದೆ.ಶಿಕ್ಷಣದಲ್ಲಿ ವ್ಯಾಯಾಮ ಮತ್ತು ಅಂಗಸಾಧನೆಗೂ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಾಣಾಯಮವನ್ನು ಸಂಧ್ಯಾಕ್ರಮದಲ್ಲಿ ಸೇರಿಸಲಾಗಿದೆ.ಗೃಹ್ಯಸೂತ್ರಗಳಲ್ಲಿ ಸಂಗೀತ ನಾಟ್ಯ ಮತ್ತು ಕ್ರೀಡೆಗಳು - ಇಂಥ ಮನರಂಜನ ಕಾರ್ಯಕ್ರಮಗಳ ನಿರೂಪಣೆಯೂ ಇದೆ.ಇವುಗಳಲ್ಲಿ ಕಾಣುವ ಜೀವನದೃಷ್ಟಿ ಆಶಾದಾಯಕವಾದುದು, ಸುಭದ್ರವಾದುದು. ಆದರೆ ಹಿಂದೂ ಧರ್ಮಕ್ಕನುಸಾರವಾಗಿ ಮಾನವನ ಜೀವನ ಮುಖ್ಯವಾಗಿ ಆಧ್ಯಾತ್ಮಿಕ ರೀತಿಯದು. ಅವನ ಕರ್ಮಗಳು ಕೇವಲ ಲೌಕಿಕ ಹಿತಕ್ಕೋಸ್ಕರ ಮಾಡುವಂಥವಾಗಿರದೆ ಪ್ರೇಯಸ್ಸಿಗಿಂತಲೂ ಶ್ರೇಯಸ್ಸಿಗೆ ಹೆಚ್ಚು ಗಮನ ಕೊಡುವಂಥವುಗಳಾಗಿವೆ. ಪ್ರತಿಯೊಂದು ಕ್ರಿಯೆಯನ್ನು ಒಂದು ಆರಾಧನೆಯಂತೆ ಭಾವಿಸಲಾಗಿದೆ. ಮಂತ್ರಗಳ ಸಹಿತವೇ ಅವನು ನಿತ್ಯಕರ್ಮಗಳನ್ನು ಆಚರಿಸಬೇಕು. ಮಂತ್ರಬಲದಿಂದ ಶತ್ರುಗಳನ್ನು ಕೂಡ ಗೆಲ್ಲಬಹುದೆಂದು ಗೃಹಸೂತ್ರಗಳು ಹೇಳಿವೆ ಜೀವನದಹೋರಾಟದ ಜಯಿಸಿ ಧನಕನಕ ವಸ್ತುಗಳನ್ನು ಸಮೃದ್ಧವಾಗಿ ಪಡೆದು ಸುಖಶಾಂತಿಗಳಿಂದ ಬಾಳಬೇಕೆಂದು ಪ್ರಾರ್ಥಿಸುವ ಮಓತ್ರಗಳಿವೆ. ಗೋಸಂಪತ್ತಿಗಾಗಿ ಪ್ರಾರ್ಥಿಸುವ ಮಂತ್ರಗಳೂ ಇವೆ.ಧರ್ಮ, ಅರ್ಥ, ಕಾಮ ಎಂಬ ಪುರುಷಾರ್ಥಗಳು ಅಂತಿಮವಾಗಿ ಮೋಕ್ಷವೆಂಬ ಪರಮಗತಿಗೆ ಸಾಧನಗಳೇ ಹೊರತು ಅವುಗಳೀಗಾಗಿಯೇ ಅವು ಅಪೇಕ್ಷಿತವಲ್ಲ ಎಂದು ಗೃಹ್ಯಸೂತ್ರಗಳು ಎಲ್ಲ ನಿಬಂಧನೆಗಳ ಒಟ್ಟು ಸಾರಾಂಶವಾಗಿದೆ. ನೋಡಿ - ಆಪಸ್ತಂಭ, ಆಶ್ವಲಾಯನ, ಗಾರ್ಹಸ್ಥ್ಯ