ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊಬ್ಬರ

ಸಾವಯವ ಗೊಬ್ಬರಗಳಿಂದ ಹಲವು ಪೋಷಕಾಂಶಗಳು ಸಸ್ಯಗಳಿಗೆ ದೊರೆಯುತ್ತವೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳಲ್ಲದೇ ಇನ್ನಿತರ ಲಘು ಪೋಷಕಾಂಶಗಳೂ ತಕ್ಕಮಟ್ಟಿಗೆ ದೊರೆಯುತ್ತವೆ. ಮುಖ್ಯವಾಗಿ ಈ ಗೊಬ್ಬರಗಳು ಮಣ್ಣಿನಲ್ಲಿ ಸತ್ವ ಉಳಿಯುವಂತೆ ಮಾಡಿ ಮಣ್ಣಿನ ರಚನೆಯನ್ನು ಉತ್ತಮಗೊಳಿಸುವುವು. ಇವಲ್ಲದೇ ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಹೀಗಾಗಿ ಸಸ್ಯಗಳಿಗೆ ಸಾವಯವ ಗೊಬ್ಬರಗಳ ಪೂರೈಕೆ ಬಹು ಉಪಯೋಗವೆಂದೇ ಹೇಳಬಹುದು. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ, ಬೇಸಿಕ್ ಸ್ಲ್ಯಾಗ್, ಮೂಳೆ, ಮೀನಿನ ಪುಡಿ ಇತ್ಯಾದಿ ಗೊಬ್ಬರಗಳು ಸಾವಯವ ಗೊಬ್ಬರಗಳಾಗಿವೆ. ಇತ್ತೀಚಿಗೆ ಈ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದೆ. ಇವುಗಳ ಬಳಕೆಯಿಂದ ಮಣ್ಣೀನ ಮೇಲೆ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ ಮತ್ತು ಅವು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಹೋಗುತ್ತವೆ. ೧. ಕೊಟ್ಟಿಗೆ ಗೊಬ್ಬರ: ತೋಟಗಾರಿಕೆ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಹೆಚ್ಚು ಉಪಯುಕ್ತ. ಇದನ್ನು ’ಹಟ್ಟಿ ಗೊಬ್ಬರ’, ’ತಿಪ್ಪೆ ಗೊಬ್ಬರ’ ಮುಂತಾಗಿ ಕರೆಯುವರು. ತಯಾರಿಸುವ ವಿಧಾನ : ಕೊಟ್ಟಿಗೆ ಗೊಬ್ಬರ ತಯಾರಿಸುವುದು ತುಂಬಾ ಸುಲಭ. ಆದರೆ ಯಾವುದಕ್ಕೂ ಒಂದು ನಿರ್ದಿಷ್ಟ ಪದ್ಧತಿ ಅನುಸರಿಸಬೇಕಾಗುವುದು. ಸುಮಾರು ಆರು ಮೀ, ಉದ್ದ, ಎರಡು ಮೀ. ಅಗಲ ಮತ್ತು ಒಂದು ಮೀ. ಆಳ ಇರುವಂತೆ ಗುಂಡಿ ತಯಾರಿಸಬೇಕು. ಅವಶ್ಯಕತೆಗನುಗುಣವಾಗಿ ಉದ್ದವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಗುಂಡಿ ಸ್ವಲ್ಪ ಎತ್ತರವಾಗಿರುವ ಪ್ರದೇಶದಲ್ಲಿದ್ದರೆ ಒಳ್ಳೆಯದು. ನೆಲ ಸಮತಟ್ಟಗಿದ್ದಲ್ಲಿ ಗುಂಡಿ ತೋಡುವಾಗ ಹೊರಗಿನ ನೀರು ಒಳ ಸೇರದಂತೆ ವ್ಯವಸ್ಥೆಗೊಳಿಸಬೇಕು. ನಂತರ ಗುಂಡಿಯಲ್ಲಿ ೩೦ ಸೆಂ.ಮೀ. ಎತ್ತರದವರೆಗೆ ಹುಲ್ಲು-ಕೂಳೆಗಳು, ಕಸಕಡ್ಡಿ ಮತ್ತು ದನದ ಸಗಣಿಯ ಮಿಶ್ರಣವನ್ನು ತುಂಬಬೇಕು. ಆಮೇಲೆ ಮಣ್ಣನ್ನು ತೆಳು ರಾಡಿ ಮಾಡಿ ಮಿಶ್ರಣದ ಮೇಲೆ ಸುರಿಯಬೇಕು. ಹೀಗೆ ಒಂದೊಂದೇ ಪದರವನ್ನು ತುಂಬಿಸುತ್ತಾ ಭೂಮಿಯ ಸಮಪಾತಳಿಯಿಂದ ಮೇಲಕ್ಕೆ ೬೦ ಸೆಂ.ಮೀ. ಎತ್ತರದವರೆಗೆ ತುಂಬಬಹುದು. ಭೂಮಿಯಿಂದ ಮೇಲೆ ಬರುವ ಪದರಗಳನ್ನು ಗೋಪುರದ ರೀತಿಯಲ್ಲಿ ತುಂಬುವುದು ಸೂಕ್ತ. ಇದಾದ ಮೇಲೆ ಮಣ್ಣು ಮತ್ತು ಸಗಣಿ ರಾಡಿ ತಯಾರಿಸಿ ಗೋಪುರವನ್ನು ಮೆತ್ತಬೇಕು. ಒಳಗಿನ ಮಿಶ್ರಣ ಹಸಿಗೊಳಿಸಲು ನೀರು ಹನಿಸುವ ಡಬ್ಬಿಯಿಂದ ನೀರು ಪೂರೈಸಬೇಕು. ಈ ಕೆಲಸ ಪೂರ್ತಿಯಾದ ಮೇಲೆ ತುಂಬಿದ ಮಿಶ್ರಣದ ಪದರಗಳು ಕೆಳಕ್ಕೆ ಕುಸಿಯಬಹುದು. ಆಗ ಮೊದಲಿನಂತೆ ಪದರು ತುಂಬಿ ರಾಡಿ ಬಳಿಯುವ ಕ್ರಮವನ್ನೇ ಅನುಸರಿಸಬೇಕು. ಸುಮಾರು ಆರು ತಿಂಗಳಲ್ಲಿ ಚೆನ್ನಾಗಿ ಕಳಿತು ಉತ್ತಮ ಕೊಟ್ಟಿಗೆ ಗೊಬ್ಬರ ಸಿದ್ಧವಾಗುತ್ತದೆ. ೨. ಕಾಂಪೋಸ್ಟ್‌: ಕೈತೋಟದಲ್ಲಿ ಸುಲಭವಾಗಿ ಕಾಂಪೋಸ್ಟ್ ತಯಾರಿಸಬಹುದು. ಕಾಂಪೋಸ್ಟ್ ಗೊಬ್ಬರದಿಂದ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಸಾವಯವ ಗೊಬ್ಬರಗಳ ಪೈಕಿ ಇದೊಂದು ಉತ್ತಮ ಗುಣಮಟ್ಟದ ಗೊಬ್ಬರವಾಗಿದೆ. ತಯಾರಿಸುವ ವಿಧಾನ : ಸುಮಾರು ೨ ಮೀ. ಉದ್ದ, ೭೫ ಸೆಂ.ಮೀ. ಅಗಲ ಮತ್ತು ೪೫ ಸೆಂ.ಮೀ. ಆಳದ ಗುಣಿ ತೆಗೆದರೆ ಅನುಕೂಲ. ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಮುಖ್ಯವಾಗಿ ಹಣ್ಣು, ತರಕಾರಿಗಳ ತ್ಯಾಜ್ಯ ವಸ್ತುಗಳು, ಸಸ್ಯಗಳ ವಿವಿಧ ಭಾಗಗಳು, ಹುಲ್ಲು, ಸಗಣಿ ಇತ್ಯಾದಿಗಳನ್ನು ಉಪಯೋಗಿಸಬಹುದಾಗಿದೆ. ಈ ರೀತಿಯಾಗಿ ನಮಗೆ ದೊರೆಯುವ ನಿರುಪಯೋಗಿ ವಸ್ತುಗಳನ್ನು ತೋಟದ ಎಲ್ಲ ಕಡೆ ಬಿಸಾಡುವುದರ ಬದಲು ಪ್ರತಿನಿತ್ಯ ಒಂದೆಡೆ ಸೇರಿಸಿ ಸಣ್ಣದಾಗಿ ಕತ್ತರಿಸಿ ತೋಡಿದ ಗುಂಡಿಯಲ್ಲಿ ಹರಡಬೇಕು. ಒಂದು ಪದರವಾದ ಮೇಲೆ ಸಗಣಿ ರಾಡಿಯನ್ನು ಅದರ ಮೇಲೆ ಹರಡಬೇಕು ಹಾಗೂ ಪದರಗಳು ತೇವ ಅಥವಾ ಹಸಿಯಾಗಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿಯಾಗಿ ಭೂಮಿಯ ಸಮಪಾತಳಿಯಿಂದ ಸುಮಾರು ೪೫ ಸೆಂ.ಮೀ. ಮೇಲೆ ಪದರಗಳನ್ನು ಹಾಕುತ್ತಾ ಹೋಗಬೇಕು. ನಂತರ ಮಣ್ಣಿನ ರಾಡಿಯಿಂದ ಮೇಲೆ ಮೆತ್ತಬೇಕು. ಹೀಗೆ ತಯಾರಿಸುವ ಕಾಂಪೋಸ್ಟ್ ಗೊಬ್ಬರ ಸುಮಾರು ನಾಲ್ಕು ತಿಂಗಳಲ್ಲಿ ಸಿದ್ದವಾಗುವುದು. ಅದೇ ಗುಂಡಿಯನ್ನು ಮತ್ತೆ ಮತ್ತೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಬಳಸಬಹುದು. ಒಂದು ವರ್ಷದಲ್ಲಿ ಮೂರು ಬಾರಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬೆಳೆಗಳಿಗೆ ಪೂರೈಸಬಹುದು. ನಮ್ಮ ಕೈತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಪ್ರಮಾಣ ತಿಳಿದು ನಾವೇ ಅದನ್ನು ತಯಾರಿಸಿಕೊಳ್ಳಬಹುದು. ೩. ಎರೆಹುಳು ಗೊಬ್ಬರ : ಎರೆಹುಳು ಗೊಬ್ಬರವನ್ನು ಸುಲಭವಾಗಿ ಕೈತೋಟದಲ್ಲಿ ತಯಾರಿಸಬಹುದು. ಕೈತೋಟದ ಬೆಳೆಗಳಿಗೆ ತುಂಬಾ ಉಪಯುಕ್ತ ಗೊಬ್ಬರ ಇದಾಗಿದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಗುಣಮಟ್ಟದ ಫಸಲು ನೀಡಲು ಸಹಕಾರಿಯಾಗುತ್ತದೆ. ಎರೆಹುಳುಗಳಿಂದ ಈ ಗೊಬ್ಬರ ತಯಾರಾಗುವುದು. ಈ ಹುಳುಗಳು ಸಾವಯವ ವಸ್ತುಗಳನ್ನು ತಿಂದು ಜೀರ್ಣಿಸಿಕೊಂಡು ಅನಗತ್ಯ ವಸ್ತುವನ್ನು ವಿಸರ್ಜಿಸುತ್ತವೆ. ಹಿಕ್ಕೆಗಳ ರೂಪದಲ್ಲಿರುವ ಎರೆ ಗೊಬ್ಬರದ ಕೆಲವು ಮುಖ್ಯ ಪ್ರಯೋಜನಗಳೆಂದರೆ: ಮಣ್ಣಿನಲ್ಲಿ ಹ್ಯೂಮಸ್ ಪ್ರಮಾಣ ಹೆಚ್ಚಾಗುವುದು. ಇದರಿಂದ ಬೆಳೆಗಳಿಗೆ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ. ಭೂಮಿಯ ರಚನೆ ಸುಧಾರಣೆಯಾಗುವುದು ಮತ್ತು ಭೂಸವಕಳಿ ನಿಲ್ಲುವುದು. ಎರೆ ಗೊಬ್ಬರದಲ್ಲಿ ಪ್ರಮುಖವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಹಾಗೂ ಕೆಲವು ಲಘು ಪೋಷಕಾಂಶಗಳೂ ದೊರೆಯುತ್ತವೆ. ಎರೆ ಗೊಬ್ಬರ ಪೂರೈಸಿದ ಬೆಳೆಗಳಿಗೆ ಕೀಟ-ರೋಗಗಳ ಬಾಧೆ ಕಡಿಮೆ. ಎರೆ ಗೊಬ್ಬರ ಪೂರೈಕೆಯಿಂದ ಖರ್ಚು ಕಡಿಮೆ. ಅಧಿಕ ಇಳುವರಿ ಪಡೆಯಲು ಸಾಧ್ಯ. ಎರೆ ಗೊಬ್ಬರದಲ್ಲಿ ಕಳೆಗಳ ಬೀಜವಿರುವುದಿಲ್ಲ. ತಯಾರಿಸುವ ವಿಧಾನ : ಗೊಬ್ಬರ ತಯಾರಿಕೆಗೆ ಹುಳು ಸಾಕಣೆ ಮಾಡಬೇಕಾಗುವುದು. ಪ್ಲಾಸ್ಟಿಕ್ ಅಥವಾ ಸಿಮೆಂಟ್ ತೊಟ್ಟಿಗಳಲ್ಲಿ ಸಾಕಣೆ ಮಾಡಬಹುದು.ಸಾವಯವ ಗೊಬ್ಬರಗಳಿಂದ ಹಲವು ಪೋಷಕಾಂಶಗಳು ಸಸ್ಯಗಳಿಗೆ ದೊರೆಯುತ್ತವೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳಲ್ಲದೇ ಇನ್ನಿತರ ಲಘು ಪೋಷಕಾಂಶಗಳೂ ತಕ್ಕಮಟ್ಟಿಗೆ ದೊರೆಯುತ್ತವೆ. ಮುಖ್ಯವಾಗಿ ಈ ಗೊಬ್ಬರಗಳು ಮಣ್ಣಿನಲ್ಲಿ ಸತ್ವ ಉಳಿಯುವಂತೆ ಮಾಡಿ ಮಣ್ಣಿನ ರಚನೆಯನ್ನು ಉತ್ತಮಗೊಳಿಸುವುವು. ಇವಲ್ಲದೇ ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಹೀಗಾಗಿ ಸಸ್ಯಗಳಿಗೆ ಸಾವಯವ ಗೊಬ್ಬರಗಳ ಪೂರೈಕೆ ಬಹು ಉಪಯೋಗವೆಂದೇ ಹೇಳಬಹುದು. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ, ಬೇಸಿಕ್ ಸ್ಲ್ಯಾಗ್, ಮೂಳೆ, ಮೀನಿನ ಪುಡಿ ಇತ್ಯಾದಿ ಗೊಬ್ಬರಗಳು ಸಾವಯವ ಗೊಬ್ಬರಗಳಾಗಿವೆ. ಇತ್ತೀಚಿಗೆ ಈ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದೆ. ಇವುಗಳ ಬಳಕೆಯಿಂದ ಮಣ್ಣೀನ ಮೇಲೆ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ ಮತ್ತು ಅವು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಹೋಗುತ್ತವೆ. ೧. ಕೊಟ್ಟಿಗೆ ಗೊಬ್ಬರ: ತೋಟಗಾರಿಕೆ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಹೆಚ್ಚು ಉಪಯುಕ್ತ. ಇದನ್ನು ’ಹಟ್ಟಿ ಗೊಬ್ಬರ’, ’ತಿಪ್ಪೆ ಗೊಬ್ಬರ’ ಮುಂತಾಗಿ ಕರೆಯುವರು. ತಯಾರಿಸುವ ವಿಧಾನ : ಕೊಟ್ಟಿಗೆ ಗೊಬ್ಬರ ತಯಾರಿಸುವುದು ತುಂಬಾ ಸುಲಭ. ಆದರೆ ಯಾವುದಕ್ಕೂ ಒಂದು ನಿರ್ದಿಷ್ಟ ಪದ್ಧತಿ ಅನುಸರಿಸಬೇಕಾಗುವುದು. ಸುಮಾರು ಆರು ಮೀ, ಉದ್ದ, ಎರಡು ಮೀ. ಅಗಲ ಮತ್ತು ಒಂದು ಮೀ. ಆಳ ಇರುವಂತೆ ಗುಂಡಿ ತಯಾರಿಸಬೇಕು. ಅವಶ್ಯಕತೆಗನುಗುಣವಾಗಿ ಉದ್ದವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಗುಂಡಿ ಸ್ವಲ್ಪ ಎತ್ತರವಾಗಿರುವ ಪ್ರದೇಶದಲ್ಲಿದ್ದರೆ ಒಳ್ಳೆಯದು. ನೆಲ ಸಮತಟ್ಟಗಿದ್ದಲ್ಲಿ ಗುಂಡಿ ತೋಡುವಾಗ ಹೊರಗಿನ ನೀರು ಒಳ ಸೇರದಂತೆ ವ್ಯವಸ್ಥೆಗೊಳಿಸಬೇಕು. ನಂತರ ಗುಂಡಿಯಲ್ಲಿ ೩೦ ಸೆಂ.ಮೀ. ಎತ್ತರದವರೆಗೆ ಹುಲ್ಲು-ಕೂಳೆಗಳು, ಕಸಕಡ್ಡಿ ಮತ್ತು ದನದ ಸಗಣಿಯ ಮಿಶ್ರಣವನ್ನು ತುಂಬಬೇಕು. ಆಮೇಲೆ ಮಣ್ಣನ್ನು ತೆಳು ರಾಡಿ ಮಾಡಿ ಮಿಶ್ರಣದ ಮೇಲೆ ಸುರಿಯಬೇಕು. ಹೀಗೆ ಒಂದೊಂದೇ ಪದರವನ್ನು ತುಂಬಿಸುತ್ತಾ ಭೂಮಿಯ ಸಮಪಾತಳಿಯಿಂದ ಮೇಲಕ್ಕೆ ೬೦ ಸೆಂ.ಮೀ. ಎತ್ತರದವರೆಗೆ ತುಂಬಬಹುದು. ಭೂಮಿಯಿಂದ ಮೇಲೆ ಬರುವ ಪದರಗಳನ್ನು ಗೋಪುರದ ರೀತಿಯಲ್ಲಿ ತುಂಬುವುದು ಸೂಕ್ತ. ಇದಾದ ಮೇಲೆ ಮಣ್ಣು ಮತ್ತು ಸಗಣಿ ರಾಡಿ ತಯಾರಿಸಿ ಗೋಪುರವನ್ನು ಮೆತ್ತಬೇಕು. ಒಳಗಿನ ಮಿಶ್ರಣ ಹಸಿಗೊಳಿಸಲು ನೀರು ಹನಿಸುವ ಡಬ್ಬಿಯಿಂದ ನೀರು ಪೂರೈಸಬೇಕು. ಈ ಕೆಲಸ ಪೂರ್ತಿಯಾದ ಮೇಲೆ ತುಂಬಿದ ಮಿಶ್ರಣದ ಪದರಗಳು ಕೆಳಕ್ಕೆ ಕುಸಿಯಬಹುದು. ಆಗ ಮೊದಲಿನಂತೆ ಪದರು ತುಂಬಿ ರಾಡಿ ಬಳಿಯುವ ಕ್ರಮವನ್ನೇ ಅನುಸರಿಸಬೇಕು. ಸುಮಾರು ಆರು ತಿಂಗಳಲ್ಲಿ ಚೆನ್ನಾಗಿ ಕಳಿತು ಉತ್ತಮ ಕೊಟ್ಟಿಗೆ ಗೊಬ್ಬರ ಸಿದ್ಧವಾಗುತ್ತದೆ. ೨. ಕಾಂಪೋಸ್ಟ್‌: ಕೈತೋಟದಲ್ಲಿ ಸುಲಭವಾಗಿ ಕಾಂಪೋಸ್ಟ್ ತಯಾರಿಸಬಹುದು. ಕಾಂಪೋಸ್ಟ್ ಗೊಬ್ಬರದಿಂದ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಸಾವಯವ ಗೊಬ್ಬರಗಳ ಪೈಕಿ ಇದೊಂದು ಉತ್ತಮ ಗುಣಮಟ್ಟದ ಗೊಬ್ಬರವಾಗಿದೆ. ತಯಾರಿಸುವ ವಿಧಾನ : ಸುಮಾರು ೨ ಮೀ. ಉದ್ದ, ೭೫ ಸೆಂ.ಮೀ. ಅಗಲ ಮತ್ತು ೪೫ ಸೆಂ.ಮೀ. ಆಳದ ಗುಣಿ ತೆಗೆದರೆ ಅನುಕೂಲ. ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಮುಖ್ಯವಾಗಿ ಹಣ್ಣು, ತರಕಾರಿಗಳ ತ್ಯಾಜ್ಯ ವಸ್ತುಗಳು, ಸಸ್ಯಗಳ ವಿವಿಧ ಭಾಗಗಳು, ಹುಲ್ಲು, ಸಗಣಿ ಇತ್ಯಾದಿಗಳನ್ನು ಉಪಯೋಗಿಸಬಹುದಾಗಿದೆ. ಈ ರೀತಿಯಾಗಿ ನಮಗೆ ದೊರೆಯುವ ನಿರುಪಯೋಗಿ ವಸ್ತುಗಳನ್ನು ತೋಟದ ಎಲ್ಲ ಕಡೆ ಬಿಸಾಡುವುದರ ಬದಲು ಪ್ರತಿನಿತ್ಯ ಒಂದೆಡೆ ಸೇರಿಸಿ ಸಣ್ಣದಾಗಿ ಕತ್ತರಿಸಿ ತೋಡಿದ ಗುಂಡಿಯಲ್ಲಿ ಹರಡಬೇಕು. ಒಂದು ಪದರವಾದ ಮೇಲೆ ಸಗಣಿ ರಾಡಿಯನ್ನು ಅದರ ಮೇಲೆ ಹರಡಬೇಕು ಹಾಗೂ ಪದರಗಳು ತೇವ ಅಥವಾ ಹಸಿಯಾಗಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿಯಾಗಿ ಭೂಮಿಯ ಸಮಪಾತಳಿಯಿಂದ ಸುಮಾರು ೪೫ ಸೆಂ.ಮೀ. ಮೇಲೆ ಪದರಗಳನ್ನು ಹಾಕುತ್ತಾ ಹೋಗಬೇಕು. ನಂತರ ಮಣ್ಣಿನ ರಾಡಿಯಿಂದ ಮೇಲೆ ಮೆತ್ತಬೇಕು. ಹೀಗೆ ತಯಾರಿಸುವ ಕಾಂಪೋಸ್ಟ್ ಗೊಬ್ಬರ ಸುಮಾರು ನಾಲ್ಕು ತಿಂಗಳಲ್ಲಿ ಸಿದ್ದವಾಗುವುದು. ಅದೇ ಗುಂಡಿಯನ್ನು ಮತ್ತೆ ಮತ್ತೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಬಳಸಬಹುದು. ಒಂದು ವರ್ಷದಲ್ಲಿ ಮೂರು ಬಾರಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬೆಳೆಗಳಿಗೆ ಪೂರೈಸಬಹುದು. ನಮ್ಮ ಕೈತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಪ್ರಮಾಣ ತಿಳಿದು ನಾವೇ ಅದನ್ನು ತಯಾರಿಸಿಕೊಳ್ಳಬಹುದು. ೩. ಎರೆಹುಳು ಗೊಬ್ಬರ : ಎರೆಹುಳು ಗೊಬ್ಬರವನ್ನು ಸುಲಭವಾಗಿ ಕೈತೋಟದಲ್ಲಿ ತಯಾರಿಸಬಹುದು. ಕೈತೋಟದ ಬೆಳೆಗಳಿಗೆ ತುಂಬಾ ಉಪಯುಕ್ತ ಗೊಬ್ಬರ ಇದಾಗಿದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಗುಣಮಟ್ಟದ ಫಸಲು ನೀಡಲು ಸಹಕಾರಿಯಾಗುತ್ತದೆ. ಎರೆಹುಳುಗಳಿಂದ ಈ ಗೊಬ್ಬರ ತಯಾರಾಗುವುದು. ಈ ಹುಳುಗಳು ಸಾವಯವ ವಸ್ತುಗಳನ್ನು ತಿಂದು ಜೀರ್ಣಿಸಿಕೊಂಡು ಅನಗತ್ಯ ವಸ್ತುವನ್ನು ವಿಸರ್ಜಿಸುತ್ತವೆ. ಹಿಕ್ಕೆಗಳ ರೂಪದಲ್ಲಿರುವ ಎರೆ ಗೊಬ್ಬರದ ಕೆಲವು ಮುಖ್ಯ ಪ್ರಯೋಜನಗಳೆಂದರೆ: ಮಣ್ಣಿನಲ್ಲಿ ಹ್ಯೂಮಸ್ ಪ್ರಮಾಣ ಹೆಚ್ಚಾಗುವುದು. ಇದರಿಂದ ಬೆಳೆಗಳಿಗೆ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ. ಭೂಮಿಯ ರಚನೆ ಸುಧಾರಣೆಯಾಗುವುದು ಮತ್ತು ಭೂಸವಕಳಿ ನಿಲ್ಲುವುದು. ಎರೆ ಗೊಬ್ಬರದಲ್ಲಿ ಪ್ರಮುಖವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಹಾಗೂ ಕೆಲವು ಲಘು ಪೋಷಕಾಂಶಗಳೂ ದೊರೆಯುತ್ತವೆ. ಎರೆ ಗೊಬ್ಬರ ಪೂರೈಸಿದ ಬೆಳೆಗಳಿಗೆ ಕೀಟ-ರೋಗಗಳ ಬಾಧೆ ಕಡಿಮೆ. ಎರೆ ಗೊಬ್ಬರ ಪೂರೈಕೆಯಿಂದ ಖರ್ಚು ಕಡಿಮೆ. ಅಧಿಕ ಇಳುವರಿ ಪಡೆಯಲು ಸಾಧ್ಯ. ಎರೆ ಗೊಬ್ಬರದಲ್ಲಿ ಕಳೆಗಳ ಬೀಜವಿರುವುದಿಲ್ಲ. ತಯಾರಿಸುವ ವಿಧಾನ : ಗೊಬ್ಬರ ತಯಾರಿಕೆಗೆ ಹುಳು ಸಾಕಣೆ ಮಾಡಬೇಕಾಗುವುದು. ಪ್ಲಾಸ್ಟಿಕ್ ಅಥವಾ ಸಿಮೆಂಟ್ ತೊಟ್ಟಿಗಳಲ್ಲಿ ಸಾಕಣೆ ಮಾಡಬಹುದು.ಸಾವಯವ ಗೊಬ್ಬರಗಳಿಂದ ಹಲವು ಪೋಷಕಾಂಶಗಳು ಸಸ್ಯಗಳಿಗೆ ದೊರೆಯುತ್ತವೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳಲ್ಲದೇ ಇನ್ನಿತರ ಲಘು ಪೋಷಕಾಂಶಗಳೂ ತಕ್ಕಮಟ್ಟಿಗೆ ದೊರೆಯುತ್ತವೆ. ಮುಖ್ಯವಾಗಿ ಈ ಗೊಬ್ಬರಗಳು ಮಣ್ಣಿನಲ್ಲಿ ಸತ್ವ ಉಳಿಯುವಂತೆ ಮಾಡಿ ಮಣ್ಣಿನ ರಚನೆಯನ್ನು ಉತ್ತಮಗೊಳಿಸುವುವು. ಇವಲ್ಲದೇ ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಹೀಗಾಗಿ ಸಸ್ಯಗಳಿಗೆ ಸಾವಯವ ಗೊಬ್ಬರಗಳ ಪೂರೈಕೆ ಬಹು ಉಪಯೋಗವೆಂದೇ ಹೇಳಬಹುದು. ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಹಸಿರೆಲೆ, ಬೇಸಿಕ್ ಸ್ಲ್ಯಾಗ್, ಮೂಳೆ, ಮೀನಿನ ಪುಡಿ ಇತ್ಯಾದಿ ಗೊಬ್ಬರಗಳು ಸಾವಯವ ಗೊಬ್ಬರಗಳಾಗಿವೆ. ಇತ್ತೀಚಿಗೆ ಈ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದೆ. ಇವುಗಳ ಬಳಕೆಯಿಂದ ಮಣ್ಣೀನ ಮೇಲೆ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ ಮತ್ತು ಅವು ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಹೋಗುತ್ತವೆ. ೧. ಕೊಟ್ಟಿಗೆ ಗೊಬ್ಬರ: ತೋಟಗಾರಿಕೆ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಹೆಚ್ಚು ಉಪಯುಕ್ತ. ಇದನ್ನು ’ಹಟ್ಟಿ ಗೊಬ್ಬರ’, ’ತಿಪ್ಪೆ ಗೊಬ್ಬರ’ ಮುಂತಾಗಿ ಕರೆಯುವರು. ತಯಾರಿಸುವ ವಿಧಾನ : ಕೊಟ್ಟಿಗೆ ಗೊಬ್ಬರ ತಯಾರಿಸುವುದು ತುಂಬಾ ಸುಲಭ. ಆದರೆ ಯಾವುದಕ್ಕೂ ಒಂದು ನಿರ್ದಿಷ್ಟ ಪದ್ಧತಿ ಅನುಸರಿಸಬೇಕಾಗುವುದು. ಸುಮಾರು ಆರು ಮೀ, ಉದ್ದ, ಎರಡು ಮೀ. ಅಗಲ ಮತ್ತು ಒಂದು ಮೀ. ಆಳ ಇರುವಂತೆ ಗುಂಡಿ ತಯಾರಿಸಬೇಕು. ಅವಶ್ಯಕತೆಗನುಗುಣವಾಗಿ ಉದ್ದವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಗುಂಡಿ ಸ್ವಲ್ಪ ಎತ್ತರವಾಗಿರುವ ಪ್ರದೇಶದಲ್ಲಿದ್ದರೆ ಒಳ್ಳೆಯದು. ನೆಲ ಸಮತಟ್ಟಗಿದ್ದಲ್ಲಿ ಗುಂಡಿ ತೋಡುವಾಗ ಹೊರಗಿನ ನೀರು ಒಳ ಸೇರದಂತೆ ವ್ಯವಸ್ಥೆಗೊಳಿಸಬೇಕು. ನಂತರ ಗುಂಡಿಯಲ್ಲಿ ೩೦ ಸೆಂ.ಮೀ. ಎತ್ತರದವರೆಗೆ ಹುಲ್ಲು-ಕೂಳೆಗಳು, ಕಸಕಡ್ಡಿ ಮತ್ತು ದನದ ಸಗಣಿಯ ಮಿಶ್ರಣವನ್ನು ತುಂಬಬೇಕು. ಆಮೇಲೆ ಮಣ್ಣನ್ನು ತೆಳು ರಾಡಿ ಮಾಡಿ ಮಿಶ್ರಣದ ಮೇಲೆ ಸುರಿಯಬೇಕು. ಹೀಗೆ ಒಂದೊಂದೇ ಪದರವನ್ನು ತುಂಬಿಸುತ್ತಾ ಭೂಮಿಯ ಸಮಪಾತಳಿಯಿಂದ ಮೇಲಕ್ಕೆ ೬೦ ಸೆಂ.ಮೀ. ಎತ್ತರದವರೆಗೆ ತುಂಬಬಹುದು. ಭೂಮಿಯಿಂದ ಮೇಲೆ ಬರುವ ಪದರಗಳನ್ನು ಗೋಪುರದ ರೀತಿಯಲ್ಲಿ ತುಂಬುವುದು ಸೂಕ್ತ. ಇದಾದ ಮೇಲೆ ಮಣ್ಣು ಮತ್ತು ಸಗಣಿ ರಾಡಿ ತಯಾರಿಸಿ ಗೋಪುರವನ್ನು ಮೆತ್ತಬೇಕು. ಒಳಗಿನ ಮಿಶ್ರಣ ಹಸಿಗೊಳಿಸಲು ನೀರು ಹನಿಸುವ ಡಬ್ಬಿಯಿಂದ ನೀರು ಪೂರೈಸಬೇಕು. ಈ ಕೆಲಸ ಪೂರ್ತಿಯಾದ ಮೇಲೆ ತುಂಬಿದ ಮಿಶ್ರಣದ ಪದರಗಳು ಕೆಳಕ್ಕೆ ಕುಸಿಯಬಹುದು. ಆಗ ಮೊದಲಿನಂತೆ ಪದರು ತುಂಬಿ ರಾಡಿ ಬಳಿಯುವ ಕ್ರಮವನ್ನೇ ಅನುಸರಿಸಬೇಕು. ಸುಮಾರು ಆರು ತಿಂಗಳಲ್ಲಿ ಚೆನ್ನಾಗಿ ಕಳಿತು ಉತ್ತಮ ಕೊಟ್ಟಿಗೆ ಗೊಬ್ಬರ ಸಿದ್ಧವಾಗುತ್ತದೆ. ೨. ಕಾಂಪೋಸ್ಟ್‌: ಕೈತೋಟದಲ್ಲಿ ಸುಲಭವಾಗಿ ಕಾಂಪೋಸ್ಟ್ ತಯಾರಿಸಬಹುದು. ಕಾಂಪೋಸ್ಟ್ ಗೊಬ್ಬರದಿಂದ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಸಾವಯವ ಗೊಬ್ಬರಗಳ ಪೈಕಿ ಇದೊಂದು ಉತ್ತಮ ಗುಣಮಟ್ಟದ ಗೊಬ್ಬರವಾಗಿದೆ. ತಯಾರಿಸುವ ವಿಧಾನ : ಸುಮಾರು ೨ ಮೀ. ಉದ್ದ, ೭೫ ಸೆಂ.ಮೀ. ಅಗಲ ಮತ್ತು ೪೫ ಸೆಂ.ಮೀ. ಆಳದ ಗುಣಿ ತೆಗೆದರೆ ಅನುಕೂಲ. ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಮುಖ್ಯವಾಗಿ ಹಣ್ಣು, ತರಕಾರಿಗಳ ತ್ಯಾಜ್ಯ ವಸ್ತುಗಳು, ಸಸ್ಯಗಳ ವಿವಿಧ ಭಾಗಗಳು, ಹುಲ್ಲು, ಸಗಣಿ ಇತ್ಯಾದಿಗಳನ್ನು ಉಪಯೋಗಿಸಬಹುದಾಗಿದೆ. ಈ ರೀತಿಯಾಗಿ ನಮಗೆ ದೊರೆಯುವ ನಿರುಪಯೋಗಿ ವಸ್ತುಗಳನ್ನು ತೋಟದ ಎಲ್ಲ ಕಡೆ ಬಿಸಾಡುವುದರ ಬದಲು ಪ್ರತಿನಿತ್ಯ ಒಂದೆಡೆ ಸೇರಿಸಿ ಸಣ್ಣದಾಗಿ ಕತ್ತರಿಸಿ ತೋಡಿದ ಗುಂಡಿಯಲ್ಲಿ ಹರಡಬೇಕು. ಒಂದು ಪದರವಾದ ಮೇಲೆ ಸಗಣಿ ರಾಡಿಯನ್ನು ಅದರ ಮೇಲೆ ಹರಡಬೇಕು ಹಾಗೂ ಪದರಗಳು ತೇವ ಅಥವಾ ಹಸಿಯಾಗಿರುವಂತೆ ನೋಡಿಕೊಳ್ಳಬೇಕು. ಇದೇ ರೀತಿಯಾಗಿ ಭೂಮಿಯ ಸಮಪಾತಳಿಯಿಂದ ಸುಮಾರು ೪೫ ಸೆಂ.ಮೀ. ಮೇಲೆ ಪದರಗಳನ್ನು ಹಾಕುತ್ತಾ ಹೋಗಬೇಕು. ನಂತರ ಮಣ್ಣಿನ ರಾಡಿಯಿಂದ ಮೇಲೆ ಮೆತ್ತಬೇಕು. ಹೀಗೆ ತಯಾರಿಸುವ ಕಾಂಪೋಸ್ಟ್ ಗೊಬ್ಬರ ಸುಮಾರು ನಾಲ್ಕು ತಿಂಗಳಲ್ಲಿ ಸಿದ್ದವಾಗುವುದು. ಅದೇ ಗುಂಡಿಯನ್ನು ಮತ್ತೆ ಮತ್ತೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಬಳಸಬಹುದು. ಒಂದು ವರ್ಷದಲ್ಲಿ ಮೂರು ಬಾರಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬೆಳೆಗಳಿಗೆ ಪೂರೈಸಬಹುದು. ನಮ್ಮ ಕೈತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಪ್ರಮಾಣ ತಿಳಿದು ನಾವೇ ಅದನ್ನು ತಯಾರಿಸಿಕೊಳ್ಳಬಹುದು. ೩. ಎರೆಹುಳು ಗೊಬ್ಬರ : ಎರೆಹುಳು ಗೊಬ್ಬರವನ್ನು ಸುಲಭವಾಗಿ ಕೈತೋಟದಲ್ಲಿ ತಯಾರಿಸಬಹುದು. ಕೈತೋಟದ ಬೆಳೆಗಳಿಗೆ ತುಂಬಾ ಉಪಯುಕ್ತ ಗೊಬ್ಬರ ಇದಾಗಿದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಗುಣಮಟ್ಟದ ಫಸಲು ನೀಡಲು ಸಹಕಾರಿಯಾಗುತ್ತದೆ. ಎರೆಹುಳುಗಳಿಂದ ಈ ಗೊಬ್ಬರ ತಯಾರಾಗುವುದು. ಈ ಹುಳುಗಳು ಸಾವಯವ ವಸ್ತುಗಳನ್ನು ತಿಂದು ಜೀರ್ಣಿಸಿಕೊಂಡು ಅನಗತ್ಯ ವಸ್ತುವನ್ನು ವಿಸರ್ಜಿಸುತ್ತವೆ. ಹಿಕ್ಕೆಗಳ ರೂಪದಲ್ಲಿರುವ ಎರೆ ಗೊಬ್ಬರದ ಕೆಲವು ಮುಖ್ಯ ಪ್ರಯೋಜನಗಳೆಂದರೆ: ಮಣ್ಣಿನಲ್ಲಿ ಹ್ಯೂಮಸ್ ಪ್ರಮಾಣ ಹೆಚ್ಚಾಗುವುದು. ಇದರಿಂದ ಬೆಳೆಗಳಿಗೆ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ. ಭೂಮಿಯ ರಚನೆ ಸುಧಾರಣೆಯಾಗುವುದು ಮತ್ತು ಭೂಸವಕಳಿ ನಿಲ್ಲುವುದು. ಎರೆ ಗೊಬ್ಬರದಲ್ಲಿ ಪ್ರಮುಖವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಹಾಗೂ ಕೆಲವು ಲಘು ಪೋಷಕಾಂಶಗಳೂ ದೊರೆಯುತ್ತವೆ. ಎರೆ ಗೊಬ್ಬರ ಪೂರೈಸಿದ ಬೆಳೆಗಳಿಗೆ ಕೀಟ-ರೋಗಗಳ ಬಾಧೆ ಕಡಿಮೆ. ಎರೆ ಗೊಬ್ಬರ ಪೂರೈಕೆಯಿಂದ ಖರ್ಚು ಕಡಿಮೆ. ಅಧಿಕ ಇಳುವರಿ ಪಡೆಯಲು ಸಾಧ್ಯ. ಎರೆ ಗೊಬ್ಬರದಲ್ಲಿ ಕಳೆಗಳ ಬೀಜವಿರುವುದಿಲ್ಲ. ತಯಾರಿಸುವ ವಿಧಾನ : ಗೊಬ್ಬರ ತಯಾರಿಕೆಗೆ ಹುಳು ಸಾಕಣೆ ಮಾಡಬೇಕಾಗುವುದು. ಪ್ಲಾಸ್ಟಿಕ್ ಅಥವಾ ಸಿಮೆಂಟ್ ತೊಟ್ಟಿಗಳಲ್ಲಿ ಸಾಕಣೆ ಮಾಡಬಹುದು.